ಪ್ರಚಲಿತ

ಸಿಎಂ ತವರು ಜಿಲ್ಲೆಯಲ್ಲೇ ಬಿಜೆಪಿಯ ವಿಜಯ ಪತಾಕೆ..! ಚಾಣಕ್ಯ ಹೂಡಿರುವ ತಂತ್ರ ಏನು ಗೊತ್ತಾ..?!

ಕರ್ನಾಟಕದಲ್ಲಿ ಚುನಾವಣಾ ರಂಗು ಹೆಚ್ಚುತ್ತಿದ್ದಂತೆ ರಾಜಕೀಯ ಪಕ್ಷಗಳು ರಣರಂಗಕ್ಕೆ ಹೊರಡಲು ಸಜ್ಜಾಗಿದೆ. ಭಾರೀ ಕುತೂಹಲ ಕೆರಳಿಸಿದ ಕರ್ನಾಟಕ ವಿಧಾನಸಭಾ ಚುನಾವಣೆಗೆ ಇದೀಗ ದಿನ ನಿಗಧಿಯಾಗಿದೆ. ಇದರ ಹಿನ್ನೆಲೆಯಲ್ಲಿ ಭಾರೀ ಪ್ರಚಾರಕ್ಕಿಳಿದ ರಾಜಕೀಯ ನಾಯಕರು ಭಾರೀ ಪೈಪೋಟಿಗೆ ಇಳಿದಿದ್ದಾರೆ. ಇಡೀ ದೇಶದಲ್ಲಿ ವಿಜಯ ಪತಾಕೆ ಹಾರಿಸಿರುವ ಬಿಜೆಪಿ ಕರ್ನಾಟಕವನ್ನೂ ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ತಯಾರಿ ನಡೆಸಿದೆ. ಇತ್ತ ದೇಶಾದ್ಯಂತ ಮಖಾಡೆ ಮಲಗಿರುವ ಕಾಂಗ್ರೆಸ್ ಗೆ ಕರ್ನಾಟಕ ಪ್ರತಿಷ್ಠೆಯ ಕಣವಾಗಿದೆ.‌ ಸಿದ್ದರಾಮಯ್ಯನವರು ಈಗಾಗಲೇ ನಾನೇ ಮುಖ್ಯಮಂತ್ರಿ ಎಂದು ಬಹಿರಂಗವಾಗಿ ಹೇಳಿಕೊಂಡಿರುವುದರಿಂದ , ಸಿದ್ದರಾಮಯ್ಯನವರಿಗೆ ಬ್ರೇಕ್ ಹಾಕಲು ಬಿಜೆಪಿ ಚಾಣಕ್ಯ ಅಮಿತ್ ಷಾ ತಂತ್ರ ರೂಪಿಸಿದ್ದಾರೆ.!

ಸಿಎಂ ತವರು ಕ್ಷೇತ್ರದ ಮೇಲೆ ಚಾಣಕ್ಯನ ಕಣ್ಣು..!

ಈಗಾಗಲೇ ಕರ್ನಾಟಕದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ , ಇದೀಗ ಮತ್ತೆ ಕರ್ನಾಟಕ ಪ್ರವಾಸ ಆರಂಭಿಸಿದ್ದಾರೆ. ಇಂದು ಬೆಳಿಗ್ಗೆ ಸಿದ್ದರಾಮಯ್ಯನವರ ತವರು ಜಿಲ್ಲೆಯಾದ ಮೈಸೂರಿನಲ್ಲಿ ರೋಡ್ ಶೋ ಮಾಡಲಿರುವ ಅಮಿತ್ ಷಾ , ಸುತ್ತೂರು ಮಠಕ್ಕೆ ಭೇಟಿ ನೀಡಿ, ಶ್ರೀ ಗಳ ಜೊತೆ ಮಾತುಕತೆ ನಡೆಸಲಿದ್ದಾರೆ. ಸಿದ್ದರಾಮಯ್ಯನವರು ಈಗಾಗಲೇ ಮೈಸೂರಿನಲ್ಲಿ ನಾನೇ ಸ್ಪರ್ಧಿಸುತ್ತೇನೆ ಎಂದು ಹೇಳಿಕಿಂಡಿರುವುದರಿಂದ , ತವರು ಜಿಲ್ಲೆಯಲ್ಲೇ ಸಿಎಂ ನ್ನು ಸೋಲಿಸಲು ಅಮಿತ್ ಷಾ ಸಜ್ಜಾಗಿದ್ದಾರೆ. ಇದೇ ಕಾರಣಕ್ಕಾಗಿ ಇಂದು ಮೈಸೂರಿನಲ್ಲಿ ವಿಶೇಷ ಸಭೆ ಏರ್ಪಡಿಸಿದ ಚಾಣಕ್ಯ, ಚುನಾವಣೆಯಲ್ಲಿ ಯಾವ ರೀತಿ ಗೆಲ್ಲಬಹುದು ಎಂಬುದರ ಬಗ್ಗೆ ಮಾಹಿತಿ ನೀಡಲಿದ್ದಾರೆ.

ಮೈಸೂರು ಮತ್ತು ಚಾಮರಾಜಪೇಟೆ ಕಾಂಗ್ರೆಸ್ ನ‌ ಭದ್ರಕೋಟೆ ಎಂದೇ ಭಾವಿಸಲಾಗಿದೆ. ಯಾಕೆಂದರೆ ಕಾಂಗ್ರೆಸ್ ನ‌ ಘಟಾನುಘಟಿ ನಾಯಕರ ಮುಂದೆ ಇತರ ಪಕ್ಷಗಳು ಸುಮ್ಮನಿರುವಂತಾಗಿತ್ತಯ. ಆದರೆ ಇದೀಗ ಇಂತಹ ಕ್ಷೇತ್ರಗಳ ಮೇಲೆಯೇ ಕಣ್ಣಿಟ್ಟಿರುವ ಅಮಿತ್ ಷಾ , ಕಾಂಗ್ರೆಸ್ ಭದ್ರ ಕೋಟೆಯನ್ನು ಛಿದ್ರಗೊಳಿಸಲು ತಂತ್ರ ರೂಪಿಸಿದ್ದಾರೆ.!

ಮೈಸೂರು ಅರಮನೆಗೆ ಚಾಣಕ್ಯನ ಎಂಟ್ರಿ..!

ನಿನ್ನೆ ರಾತ್ರಿಯೇ ಮೈಸೂರಿಗೆ ಆಗಮಿಸಿದ ಷಾ , ಪಕ್ಷದ ಮುಖಂಡರೊಂದಿಗೆ ಮಾತುಕತೆ ನಡೆಸಿದ್ದರು. ಇದೀಗ ಇಂದು ಸುತ್ತೂರು ಮಠಕ್ಕೆ ಭೇಟಿ ನೀಡಿ ನಂತರದಲ್ಲಿ ಅರಮನೆಗೆ ಭೇಟಿ ನೀಡಿ ಪ್ರಮೋದಾದೇವಿ ಜೊತೆ ಮಾತುಕತೆ ನಡೆಸಲಿದ್ದಾರೆ. ಈಗಾಗಲೇ ಮೈಸೂರು ರಾಜ ಯಧುವೀರ್, ಬಿಜೆಪಿ ಸೇರುವ ಸುದ್ದಿ ಹಬ್ಬಿದ್ದರೂ ಕೂಡ ಸ್ವತಃ ಯಧುವೀರ್ ಇದನ್ನು ಅಲ್ಲಗಳೆದಿದ್ದರು. ಸಾಮಾಜಿಕ ಸೇವೆ ಮಾಡುತ್ತೇನೆ , ಆದರೆ ರಾಜಕೀಯ ಸೇರುವುದಿಲ್ಲ , ನನಗೆ ರಾಜಕೀಯದಲ್ಲಿ ಆಸಕ್ತಿಯೂ ಇಲ್ಲ ಎಂದಿದ್ದರು. ಅದಕ್ಕಾಗಿಯೇ ಇದೀಗ ಪ್ರಮೋಧಾದೇವಿ ಮೇಲೆ ಕಣ್ಣಿಟ್ಟಿರುವ ಬಿಜೆಪಿ , ಇಂದು ಅಧ್ಯಕ್ಷನ ಮಾತುಕತೆ ನಂತರ ಬಿಜೆಪಿ ಸೇರುವ ಮುನ್ಸೂಚನೆಯೂ ದೊರಕಿದೆ.‌

ರಾಜ್ಯ ಸರಕಾರದ ವಿರುದ್ಧ ಸೆಟೆದುನಿಂತಿರುವ ಪ್ರಮೋಧಾದೇವಿ , ಈ ಹಿಂದೆ ಸಿದ್ದರಾಮಯ್ಯ ಸರಕಾರದ ಜನವಿರೋಧಿ ನೀತಿಗೆ ವಿರೋಧ ವ್ಯಕ್ತಪಡಿಸಿದ್ದರು. ಈ ವಿಚಾರದಿಂದ ಕಾಂಗ್ರೆಸ್ ಗೂ ತೀವ್ರ ಮುಖಭಂಗವಾಗಿತ್ತು. ಇದೀಗ ಇಂತಹ ಪರಿಸ್ಥಿತಿಯಲ್ಲೇ ಅಮಿತ್ ಷಾ ಅರಮನೆಗೆ ಭೇಟಿ ನೀಡುತ್ತಿದ್ದು , ಕಾಂಗ್ರೆಸ್ ಗೆ ಭಾರೀ ತಲೆನೋವಾಗಿದೆ.

ಕರ್ನಾಟಕವನ್ನು ಹೇಗಾದರೂ ಉಳಿಸಿಕೊಳ್ಳಬೇಕು ಎಂದು ಇತ್ತ ಕಾಂಗ್ರೆಸ್ ಪರದಾಡುತ್ತಿದ್ದರೆ, ದೇಶಾದ್ಯಂತ ಗೆದ್ದು ಕೇಸರಿ ಪತಾಕೆ ಹಾರಿಸುವ ಮೂಲಕ ವಿಜಯೋತ್ಸವ ಆಚರಿಸಿರುವ ಬಿಜೆಪಿ ಕರ್ನಾಟಕವನ್ನೂ ತನ್ನ ಬತ್ತಳಿಕೆಗೆ ಸೇರಿಸಿಕೊಳ್ಳಲು ತಯಾರಿ ನಡೆಸಿದೆ. ಅದೇನೇ ಆಗಲಿ, ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆ ಇಡೀ ದೇಶದ ಜನರ ಕುತೂಹಲ ಕೆರಳಿಸಿರುವುದಂತೂ ಸತ್ಯ..!

–ಅರ್ಜುನ್

 

Tags

Related Articles

Close