ಪ್ರಚಲಿತ

ಮೋದಿಜೀಯ ಆಡಳಿತದ ಕಾರ್ಯವೈಖರಿಗೆ ತಲೆಬಾಗಿದ ವಿಶ್ವ ಸಂಸ್ಥೆಯ ಮುಖ್ಯಸ್ಥ!! ಭಾರತದ ಮುಕುಟಕ್ಕೆ ಮತ್ತೊಂದು ಗರಿ!! ಬದಲಾಗುತ್ತಿದೆ ಭಾರತ….

ಇಡೀ ವಿಶ್ವವೇ ಬೆರಗಾಗುತ್ತಿದೆ ಎಂದರೆ…. ಭಾರತದ ಪ್ರಧಾನಿ ನರೇಂದ್ರ ಮೋದೀಜೀಯವರ ಆಡಳಿತ ಎಂತಹದ್ದು?! ಇದುವರೆಗೆ ಕಂಡು ಕೇಳರಿಯದ ರೀತಿ ಭಾರತದ ಬದಲಾವಣೆಯಾಗುತ್ತಿದೆ ಎಂದರೆ ಮೋದೀಜೀ ಒಬ್ಬ ದೇವ ಮಾನವನೇ ಸರಿ!! ಹೇಗೋ ಇದ್ದ ಭಾರತ ಹೀಗಾಗಿದೆ ಎಂದರೆ ಅದು ಕೇವಲ ನರೇಂದ್ರ ಮೋದಿಯಂತಹ ಪ್ರಧಾನಿ ನರೇಂದ್ರ ಮೋದಿಯಿಂದ ಮಾತ್ರ ಸಾಧ್ಯ!!

Image result for modi with antonio guterres

ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ಷಮತೆಯ ಬಗ್ಗೆ ಎಷ್ಟು ಹೇಳಿದರೂ ಸಾಲದು. ಯಾಕೆಂದರೆ ನರೇಂದ್ರ ಮೋದಿ ಒಬ್ಬ ಮಹಾನ್ ಕನಸುಗಾರ. ಕನಸನ್ನು ನನಸಾಗಿ ಪರಿವರ್ತಿಸುವ ಸಾಮಥ್ರ್ಯವುಳ್ಳ ಧೀಮಂತ!! ಇಡೀ ಭಾರತವನ್ನಲ್ಲದೆ ಇಡೀ ಜಗತ್ತನ್ನೆ ಬದಲಾಯಿಸಿದ ಮಹಾನ್ ವೀರ!! ಅವರೋರ್ವ ವಿಶ್ವನಾಯಕ, ವಿಶ್ವವನ್ನೇ ಭಾರತದತ್ತ ಮುಖ ಮಾಡಿ ನೋಡುವಂತೆ ಮಾಡಿದ ಅಭಿನವ ಸ್ವಾಮಿ ವಿವೇಕಾನಂದ ನಮ್ಮ ಪ್ರಧಾನಿ ನರೇಂದ್ರ ಮೋದಿ!! ಮೋದೀಜೀ ಯಾವಾಗ ಅಧಿಕಾರ ಸ್ವೀಕರಿಸಿಕೊಂಡರೋ ಅಂದಿನಿಂದ ಇಡೀ ವಿಶ್ವವವೇ ಮೋದೀಜೀಯನ್ನು ಗೌರವದಿಂದ ಕಾಣುತ್ತಿದೆ!! ಇದೀಗ ಮೋದಿಜೀಯಿಂದ ಭಾರತಕ್ಕೆ ಮತ್ತೊಂದು ಗೌರವ ಸಲ್ಲುತ್ತಿದೆ!! ಸ್ವತಃ ವಿಶ್ವಸಂಸ್ಥೆಯ ಮುಖ್ಯಸ್ಥನೇ ಮೋದಿಜೀಗೆ ನಮೋ ಅಂದಿದ್ದಾರೆ ಎಂದರೆ ಮೋದೀಜೀ ಯಾವ ರೀತಿ ದೇಶವನ್ನು ಆಳ್ವಿಕೆ ಮಾಡುತ್ತಿದ್ದಾರೆ ಎಂಬುವುದು ತಿಳಿಯುತ್ತದೆ!!

Image result for modi with antonio guterres

ಭಾರತವೇ ಸ್ಫೂರ್ತಿ ಎಂದ ವಿಶ್ವಸಂಸ್ಥೆಯ ಮುಖ್ಯಸ್ಥ!!

ಪ್ರಧಾನಿ ನರೇಂದ್ರ ಮೋದೀಜೀಯ ಆಡಳಿತದ ಕಾರ್ಯವೈಖರಿಯನ್ನು ಎಷ್ಟು ಹೊಗಳಿದರೂ ಸಾಲದು!! ಮೋದಿಜೀ ಅಧಿಕಾರ ಚುಕ್ಕಾಣಿಯನ್ನು ಹಿಡಿದ ದಿನವೇ ಭಾರತಕ್ಕೆ ಸಂಪೂರ್ಣ ಬದಲಾವಣೆಯ ಸ್ಪರ್ಶ ಹತ್ತಿದೆ ಅಂತಾನೇ ಹೇಳಬಹುದು!! ಅವರು ಜನರಿಗೆ ತರುವ ಒಂದೊಂದು ಯೋಜನೆಯೂ ವಿರೋಧಿಗಳನ್ನು ಬಾಯಿಮುಚ್ಚಿಸುವಂತೆ ಮಾಡುತ್ತದೆ!! ಒಂದು ಬಾರಿ ಮಾತು ಕೊಟ್ಟರೆ ಅದನ್ನು ಸಂಪೂರ್ಣವಾಗಿ ಮುಗಿಸುವವರೆಗೆ ಸರಿಯಾರಿ ನಿದ್ದೆಯೂ ಮಾಡಲ್ಲ!! ದಿನದಲ್ಲಿ ಹದಿನೆಂಟು ಗಂಟೆಗಳ ಕಾಲ ದುಡಿಯುವ ಮೋದಿಜೀ ಕೇವಲ ದೇಶಕ್ಕಾಗಿ ಮಾತ್ರ!! ಮೋದೀಜೀ ತಂದ ಯೋಜನೆಗಳಲ್ಲಿ ಸಂಪೂರ್ಣವಾಗಿ ವಿರೋಧಿಗಳನ್ನು ನಡುಗಿಸಿದ್ದು ನೋಟ್‍ಬ್ಯಾನ್ ಮತ್ತು ಜಿಎಸ್‍ಟಿ!! ಇದರಿಂದ ಇಡೀ ವಿರೋಧಿಗಳು ತತ್ತರಿಸಿ ಹೋಗಿದ್ದರು!! ಮೋದಿಜೀ ಅಧಿಕಾರ ವಹಿಸುವ ಮೊದಲೇ ಇವರ ಜನ್ಮ ಕುಂಡಲಿಯನ್ನು ನೋಡಿ ಜೋತಿಷಿಯೊಬ್ಬರು ಭಾರತದ ಭವಿಷ್ಯವನ್ನೇ ಬದಲಾಯಿಸುತ್ತಾರೆ ಎಂದಿದ್ದರಂತೆ !! ಅದೇ ರೀತಿ ಭಾರತ ಬದಲಾಗುತ್ತಿದೆ…..

Related image

ಇದೀಗ ವಿಶ್ವಸಂಸ್ಥೆಯ ಮುಖ್ಯಸ್ಥನೇ ಮೋದೀಜೀಯನ್ನು ಹಾಡಿ ಕೊಂಡಾಡಿದ್ದಾರೆ!! ಅಂತಾರಾಷ್ಟ್ರೀಯ ಸಮುದಾಯಕ್ಕೆ `ಭಾರತವೇ ಸ್ಫೂರ್ತಿ ಎಂದು ವಿಶ್ವಸಂಸ್ಥೆ ಮುಖ್ಯಸ್ಥ ಅಂಟೋನಿಯೋ ಗುಟೆರೆಸ್ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ವಿಶ್ವಸಂಸ್ಥೆ ರಾಯಭಾರಿಗಳು ಹಾಗೂ ಅಕಾರಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತದ ನಾಯಕತ್ವ, ಅಭಿವೃದ್ಧಿಗಾಗಿ ವಿಶ್ವಸಂಸ್ಥೆ ಜತೆ ಹೊಂದಿರುವ ಸಹಭಾಗಿತ್ವ ಹಾಗೂ ದಕ್ಷಿಣ ಸಹಕಾರ ಸೇರಿ ಹಲವು ವಿಷಯಗಳಲ್ಲಿ ಭಾರತ ಹೊಂದಿರುವ ಬದ್ಧತೆ ಅಂತಾರಾಷ್ಟ್ರೀಯ ಸಮುದಾಯಕ್ಕೆ ಪ್ರೇರಣಾದಾಯಕ ಎಂದು ವರ್ಣಿಸಿದ್ದಾರೆ.

Related image

ಭಾರತ ವಿಶ್ವಸಂಸ್ಥೆ ಜತೆ ಹೊಂದಿರುವ ಸಹಭಾಗಿತ್ವ ಹಾಗೂ ಬಹುಪಕ್ಷೀಯತೆ ಕುರಿತು `ಭಾರತಕ್ಕಿರುವ ಬದ್ಧತೆ ಅಪಾರವಾದುದು. ಜಾಗತಿಕ ವಿಷಯಗಳಲ್ಲಿ ಭಾರತ ತೋರಿಸುತ್ತಿರುವ ಚಟುವಟಿಕೆ ಹಾಗೂ ಬದ್ಧತೆ ಉತ್ತಮವಾಗಿದೆ ಎಂದು ವಿಶ್ಲೇಷಿಸಿದ್ದಾರೆ. ಸ್ಥಿರ ಅಭಿವೃದ್ಧಿ ಗುರಿ ಮುಟ್ಟುವಲ್ಲಿ ಭಾರತ ವಹಿಸಿದ ಪಾತ್ರ ಪ್ರಮುಖವಾದುದು. ಆರಂಭದಲ್ಲಿ ಈ ಗುರಿಗೆ ತಕ್ಕ ಪ್ರಯತ್ನ ನಡೆಯುತ್ತಿರಲಿಲ್ಲ. ಆದರೆ ಭಾರತ ಅಭಿವೃದ್ಧಿಗಾಗಿ ನಡೆಸುತ್ತಿರುವ ಪ್ರಯತ್ನ, ಶ್ರಮ ಹಾಗೂ ಅದರ ಮುಂದಾಲೋಚನೆಯು ಗುರಿ ಮುಟ್ಟಲು ಸೂರ್ತಿಯಾಯಿತು. ಹಾಗಾಗಿ ಭಾರತ ನಮಗೆಲ್ಲ ಪ್ರಮುಖ ಪ್ರೇರಣೆ ಎಂದು ಬಣ್ಣಿಸಿದ್ದಾರೆ.

Related image

ಈ ಮೊದಲು ಕೂಡಾ ವಿಶ್ವಸಂಸ್ಥೆ ಮೋದೀಯನ್ನು ಕೊಂಡಾಡಿತ್ತು!! ವಿದ್ಯುತ್ ವಂಚಿತರಾಗಿದ್ದ ಸುಮಾರು ನಾಲ್ಕು ಕೋಟಿ ಮನೆಗಳು ಸುಮಾರು 25 ಕೋಟಿ ಜನರು ಪ್ರಧಾನ ಮಂತ್ರಿ ಗ್ರಾಮೀಣ ವಿದ್ಯುತ್ ಯೋಜನೆಯಡಿಯಲ್ಲಿ ಮೊದಲ ಬಾರಿಗೆ ವಿದ್ಯುತ್ ಬೆಳಕನ್ನು ಉಪಯೋಗಿಸುವಂತಾಗಿದ್ದು!! 18452 ಹಳ್ಳಿಗಳಲ್ಲಿ 1235 ಹಳ್ಳಿಗಳು ಜನವಸತಿ ರಹಿತ ಪ್ರದೇಶಗಳಾಗಿರುವ ಕಾರಣ ಅಲ್ಲಿಗೆ ವಿದ್ಯುತ್ ಸಂಪರ್ಕದ ಅವಶ್ಯಕತೆ ಇಲ್ಲದ ಕಾರಣ ಅಲ್ಲಿಗೆ ವಿದ್ಯುತ್ ಸಂಪರ್ಕವನ್ನು ಮಾಡಲಾಗಲಿಲ್ಲ!! ಉಳಿದಿರುವ 17181 ಹಳ್ಳಿಗಳಿಗೆ ವಿದ್ಯುತ್ ಸಂಪರ್ಕವನ್ನು ಕಲ್ಪಿಸಿಕೊಟ್ಟಿದ್ದರು ಮೋದೀಜೀ!! ಇಂತಹದ್ದೊಂದು ಸಾಧನೆಯನ್ನು ಮಾಡಬೇಕಾದರೆ ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರವನ್ನು ಸ್ವೀಕರಿಸಬೇಕಾಯಿತು!! ಕಾಂಗ್ರೆಸ್ ಅಧಿಕಾರ ವಹಿಸಿ ಇಷ್ಟು ವರ್ಷಗಳ ಕಾಲ ಆಳಿದರೂ ತಾನು ಮಾಡಲಾಗದ ಸಾಹಸವನ್ನು ಕೇವಲ ನಾಲ್ಕೇ ನಾಲ್ಕು ವರ್ಷದಲ್ಲಿ ಮಾಡಿದ್ದು ಮಾತ್ರ ಪ್ರಧಾನಿ ನರೆಂದ್ರ ಮೋದಿ ಸರಕಾರ!! ಇಂತಹ ಮಹತ್ವದ ಕಾರ್ಯ ಮಾಡಿದ್ದಕ್ಕಾಗಿ ವಿಶ್ವ ಸಂಸ್ಥೆಯೇ ಶ್ಲಾಘಿಸಿತ್ತು!! ಇದಾದ ನಂತರ ಇದೀಗ ಮತ್ತೆ ನಮಗೆಲ್ಲಾ ಭಾರತವೇ ಸ್ಫೂರ್ತಿ ಎಂದು ಹಾಡಿ ಕೊಂಡಾಡಿದ್ದು ಭಾರತೀಯರಯ ಮನದಲ್ಲಿ ಸಂತಸ ಮೂಡಿದ್ದು ಇದಕ್ಕೆಲ್ಲಾ ಕಾರಣ ಮೋದೀಜೀ ಎಂಬುವುದನ್ನು ನಾವು ಮರೆಯಬಾರದು!!

  • ಪವಿತ್ರ
Tags

Related Articles

Close