ಪ್ರಚಲಿತ

ನೆಹರೂ ಅವರಿಗೆ ಚೀನಾ ಭಾರತಕ್ಕಿಂತ ಮೊದಲ ಆದ್ಯತೆಯಾಗಿತ್ತು: ಎಸ್. ಜೈಶಂಕರ್

ದೇಶಕ್ಕೆ ಸ್ವಾತಂತ್ರ್ಯ ದೊರೆತ ಬಳಿಕ ಕಾಂಗ್ರೆಸ್ ಪಕ್ಷ ಭಾರತಕ್ಕಿಂತ ವಿದೇಶಗಳ ಬಗ್ಗೆ ಚಿಂತೆ, ಕಾಳಜಿ ವಹಿಸಿದ್ದೇ ಹೆಚ್ಚು. ಇದನ್ನು ನಮ್ಮ ಇತಿಹಾಸ ಎಂದಿಗೂ ಮರೆಯಲು ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷದ ಭಾರತ ವಿರೋಧಿ ಮನಸ್ಥಿತಿಯೇ ದೇಶಕ್ಕೆ ಸ್ವಾತಂತ್ರ್ಯ ದೊರೆತ ಬಳಿಕ ಅಖಂಡ ಭಾರತವನ್ನು ತುಂಡು ಮಾಡಿದ್ದು ಎನ್ನುವುದರಲ್ಲಿ ಸಂದೇಹವಿಲ್ಲ.

ಭಾರತದ ವಿದೇಶಾಂಗ ಸಚಿವ ಎಸ್. ಜೈ ಶಂಕರ್ ಅವರು ಗುಜರಾತ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿಯಲ್ಲಿ ಮಾತನಾಡಿ, ಭಾರತದ ಮೊದಲ ಪ್ರಧಾನಿ ಜವಹರಲಾಲ್ ನೆಹರು ಅವರು ಭಾರತದ ಪರವಾಗಿ ಇರುವುದಕ್ಕಿಂತ ಹೆಚ್ಚು ಚೀನಾದ ಪರವಾದ ನಿಲುವು ಹೊಂದಿದ್ದರು ಎಂದು ತಿಳಿಸಿದ್ದಾರೆ.

ಈ ವಿಚಾರವಾಗಿ ಮಾತನಾಡುತ್ತಾ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಖಾಯಂ ಸ್ಥಾನ ಪಡೆಯಲು ಭಾರತದ ನಿಲುವಿನ ಸಂದರ್ಭವನ್ನು ಈ ವೇಳೆ ಮುಖ್ಯವಾದ ವಿಷಯವಾಗಿ ತೆಗೆದುಕೊಂಡ ಅವರು, ಈ ದೇಶದ ಮೊದಲ ಪ್ರಧಾನಿ ನೆಹರೂ ಅವರು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ ಸ್ಥಾನ ಪಡೆಯಲು ಸರತಿ ಸಾಲಿನಲ್ಲಿ ನಿಲ್ಲಬೇಕು ಎಂದು ಹೇಳಿದ ಸಮಯವಿತ್ತು ಎಂದು ಅವರು ತಿಳಿಸಿದ್ದಾರೆ.

ಈಗ ನಾವು ಭಾರತ ಮೊದಲು ಎನ್ನುವ ನೀತಿಯನ್ನು ಅನುಸರಿಸುತ್ತಿದ್ದೇವೆ. ಆದರೆ ನೆಹರೂ ಚೀನಾ ಮೊದಲು, ಭಾರತ ಎರಡನೇಯ ಸ್ಥಾನ ಎಂದು ಹೇಳಿದ್ದರು ಎಂಬುದಾಗಿ ತಿಳಿಸಿದ್ದಾರೆ. ಇಂದು ನಾವು ಚೀನಾದಿಂದ ಅಥವಾ ಇನ್ಯಾವುದೇ ರಾಷ್ಟ್ರದಿಂದ ಸಮಸ್ಯೆ ಅನುಭವಿಸುತ್ತಿದ್ದರೆ, ಅದು ನಮ್ಮ ಹಿಂದ್ನ ತಪ್ಪುಗಳ ಕಾರಣದಿಂದ. ನೆಹರೂ ಮಾಡಿದ ತಪ್ಪುಗಳು ಕಾಶ್ಮೀರದ ಮೇಲೆ ಪಾಕ್ ಆಕ್ರಮಣಕ್ಕೆ, ಚೀನಾವು ಭಾರತದ ಕೆಲ ಭೂಪ್ರದೇಶಗಳನ್ನು ವಶಕ್ಕೆ ಪಡೆದುಕೊಳ್ಳುವುದಕ್ಕೆ ಕಾರಣವಾಯಿತು ಎಂದು ಅವರು ಹೇಳಿದ್ದಾರೆ.

1950 ರ ಸಮಯದಲ್ಲೇ ಸರ್ದಾರ್ ಪಟೇಲ್ ಅವರು ನೆಹರೂ ಅವರಿಗೆ ಎಚ್ಚರಿಸಿದ್ದರು. ಭಾರತವು ಪಾಕಿಸ್ತಾನ ಮತ್ತು ಚೀನಾ ಎಂಬ ಎರಡು ದೇಶಗಳಿಂದ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದಿದ್ದರು. ಆದರೆ ನೆಹರೂ ಹಿಮಾಲಯದಿಂದ ಭಾರತದ ಮೇಲೆ ದಾಳಿ ಅಸಾಧ್ಯ. ಚೀನಾದ ಬೆದರಿಕೆಯ ವಿಷಯವನ್ನೂ ಅವರು ತಿರಸಿಕರಿಸಿದ್ದರು. ಆದರೆ, ನಾವು ಇಂದು ಅದೇ ಪರಿಸ್ಥಿತಿಯನ್ನು ಎದುರಿಸಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.

Tags

Related Articles

Close