ಪ್ರಚಲಿತ

ದೇಶ ವಿಭಜನೆಯ ಕರಾಳತೆಗೆ ಬಲಿಪಶುವಾದದ್ದು ಸಿಂಧಿ ಸಮುದಾಯ: ಮುಖ್ಯಮಂತ್ರಿ ಯೋಗೀಜಿ

ಪ್ರಭು ಶ್ರೀರಾಮ ಜನ್ಮ ಭೂಮಿಯ ಹಕ್ಕನ್ನು ಪಡೆಯಬಹುದಾದರೆ, ಸಿಂಧ್ ಪ್ರಾಂತ್ಯವನ್ನೂ ಹಿಂಪಡೆಯಬಹುದು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಅವರು ಹೇಳಿದ್ದಾರೆ.

ಸುಮಾರು ಐನೂರು ವರ್ಷಗಳ ನಂತರ ಅಯೋಧ್ಯೆಯ ಶ್ರೀರಾಮ ಜನ್ಮ ಭೂಮಿಯ ಹಕ್ಕನ್ನು ಸಾಧಿಸಲು ಸಾಧ್ಯವಾಗಿದೆ. ಹೀಗಿರುವಾಗ ಈಗ ನಾವು ಪಾಕಿಸ್ತಾನದಲ್ಲಿ ಇರುವ ಸಿಂಧ್ ಪ್ರಾಂತ್ಯವನ್ನು ಸಹ ಹಿಂದಕ್ಕೆ ಪಡೆಯಬಹುದು. ಲಕ್ನೋದಲ್ಲಿ ನಡೆದ ಎರಡು ದಿನಗಳ ಸಿಂಧಿ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು ಲಕ್ನೋ‌ದಿಂದ ಸಿಂಧ್ ಪ್ರಾಂತ್ಯ ಹೆಚ್ಚು ದೂರವಿಲ್ಲ ಎಂದು ತಿಳಿಸಿದ್ದಾರೆ.

ಐನೂರು ವರ್ಷಗಳ ನಂತರ ಈಗ ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮನ ಭವ್ಯ ದೇವಾಲಯ ನಿರ್ಮಾಣವಾಗುತ್ತಿದೆ. ಅಲ್ಲಿಂದ ವಿಶ್ವನಾಥ ಧಾಮಕ್ಕೆ ಇರುವುದು ಕೇವಲ ಎರಡೂವರೆ ಗಂಟೆಗಳ ಪ್ರಯಾಣ. ಆರು ವರ್ಷಗಳ ಹಿಂದೆ ಏನಾಗಿತ್ತು?, ಆದರೆ ಕಳೆದ ಆರು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ದೇವಾಲಯವು ಅಭಿವೃದ್ಧಿ ಆಗುತ್ತಿದೆ. ಐನೂರು ವರ್ಷಗಳ ಬಳಿಕ ರಾಮ ಜನ್ಮಭೂಮಿ ಮತ್ತೆ ಪ್ರಭು ಶ್ರೀರಾಮನಿಗೆ ದೊರೆಯಲು ಸಾಧ್ಯವಾಗಿರುವಾಗ, ಸಿಂಧ್ ಪ್ರಾಂತ್ಯವನ್ನು ನಾವು ಮರಳಿ ಪಡೆಯಲು ಸಾಧ್ಯವಿಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ.

ಹಾಗೆಯೇ ಸಿಂಧ್ ಸಮಾಜದವರು ಇಂದಿನ ಪೀಳಿಗೆಯವರಿಗೆ ತಮ್ಮ ಇತಿಹಾಸವನ್ನು ಮನವರಿಕೆ ಮಾಡಿಕೊಡುವ ಅಗತ್ಯತೆ ಇದೆ ಎಂದು ಅವರು ಒತ್ತಿ ಹೇಳಿದ್ದಾರೆ. ದೇಶದ ಸ್ವಾತಂತ್ರ್ಯಾ ಸಂದರ್ಭದಲ್ಲಿ ನಡೆದ ಅಖಂಡ ಭಾರತದ ವಿಭಜನೆ ಅತ್ಯಂತ ದೊಡ್ಡ ದುರಂತವಾಗಿತ್ತು. ಆ ದುರಂತವನ್ನು ನಿಲ್ಲಿಸುವ ಸಾಧ್ಯತೆ ಇತ್ತು. ಆದರೆ ಓರ್ವ ವ್ಯಕ್ತಿಗಾಗಿ, ಅವರ ಹಠಮಾರಿ ಮನಸ್ಥಿತಿಯಿಂದಾಗಿ ದೇಶ ವಿಭಜನೆಯ ದುರಂತಕ್ಕೆ ಭಾರತ ಸಾಕ್ಷಿಯಾಗಬೇಕಾಯಿತು. ಇದು ಹಲವಾರು ಜನರ ಸಾವಿಗೆ ಕಾರಣವಾಯಿತು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಾಗೆಯೇ ಈ ವಿಭಜನೆಯಿಂದ ಭಾರತದ ಅತಿ ದೊಡ್ಡ ಭೂಭಾಗ ಪಾಕಿಸ್ತಾನವಾಗಿ ಬದಲಾಯಿತು ಎಂದು ಅವರು ತಿಳಿಸಿದ್ದಾರೆ. ಸಿಂಧಿ ಸಮುದಾಯ ಭಾರತದ ಭಾಗವಾಗಿದೆ. ಅಖಂಡ ಭಾರತದಲ್ಲಿ ಅದು ದೇಶದೊಳಗೆಯೇ ಇತ್ತು. ಆದರೆ ವಿಭಜನೆಯ ಕಾರಣಕ್ಕೆ ಸಿಂಧಿ ಸಮುದಾಯ ಬಲಿಪಶುವಾಗಿದೆ.‌ ಆದರೆ ಈ ವಿಷಯ ಸುದ್ದಿಯಾಗಲೇ ಇಲ್ಲ ಎಂದು ಯೋಗೀಜಿ ದೇಶ ವಿಭಜನೆಯ ಕರಾಳತೆಯ ಕಹಿ ಸತ್ಯವನ್ನು ಬಿಚ್ಚಿಟ್ಟರು.

Tags

Related Articles

Close