ಪ್ರಚಲಿತ

ದೇವರ ನಾಡಲ್ಲಿ ಕಮ್ಯುನಿಸ್ಟರ ಶ್ರೀರಾಮ ದ್ವೇಷ!

ಪ್ರಧಾನಿ ಮೋದಿ, ಬಿಜೆಪಿ, ಆರ್ ಎಸ್ ಎಸ್, ದೇವರು – ದಿಂಡಿರು ಎಂದರೆ ಕೇರಳದ ಬಹುಪಾಲು ಕಮ್ಯುನಿಸ್ಟರಿಗೆ ಅದೇನೋ ದ್ವೇಷ. ಈ ಮೇಲೆ ಹೇಳಿದ ವಿಷಯಗಳಿಗೆ ಬೆಂಬಲ ನೀಡುವವರು, ನಂಬಿಕೆ ಇರಿಸಿದವರ ಮೇಲೆಯೂ ಕೇರಳಿಗರಲ್ಲಿ ಕೆಲವರು ತೆರಳುತ್ತಾರೆ. ದೇವರ ನಾಡಿನ ದಾನವರ ಕಥೆ-ವ್ಯಥೆ ಇದು.

ಈಗ ಪ್ರಸಿದ್ಧ ಗಾಯಕಿ ಚಿತ್ರಾ ಅವರ ವಿರುದ್ಧ ಕೇರಳದ ಎಡಪಂಥೀಯರು, ಕಮ್ಯುನಿಸ್ಟರ ಅಪಸ್ವರ ಕೇಳಿ ಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ಗಾಯಕಿ ಚಿತ್ರಾ ವಿರುದ್ಧ ಟೀಕೆಗಳು ಕೇಳಿ ಬಂದಿವೆ. ಯಾಕೆ?, ಕಾರಣ ಏನು? ಎಂದೆಲ್ಲಾ ತಿಳಿಸದರೆ ದೇವರ ನಾಡಿನ ದುರುಳರ ಬಗ್ಗೆ ಹೇಸಿಗೆ ಹುಟ್ಟುವುದು ಸಹಜವೇ.

ಚಿತ್ರಾ ಅವರು ಶ್ರೀರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠೆಯ ದಿನದಂದು ಮನೆ ಮನೆಗಳಲ್ಲಿ ದೀಪ ಬೆಳಗುವಂತೆ, ರಾಮ ಮಂತ್ರವನ್ನು ಜಪಿಸುವಂತೆ ಹೇಳಿದ್ದೇ ಅವರಿಗೆ ವೈರಿಗಳು ಹುಟ್ಟಿಕೊಳ್ಳುವ ಹಾಗೆ ಮಾಡಿದೆ. ಚಿತ್ರಾ ಅವರ ಈ ಹೇಳಿಕೆಯ ಪೋಸ್ಟ್‌ಗೆ ಸಾಕಷ್ಟು ಬೆಂಬಲ ಸಹ ವ್ಯಕ್ತವಾಗಿದೆ. ಆದರೂ ಕಮ್ಯುನಿಸ್ಟರ ಕೋಟೆ ಕೇರಳದ ಎಡಪಂಥೀಯರು ಮಾತ್ರ ಹಿರಿಯ ಗಾಯಕಿಯ ವಿರುದ್ಧ ಕ್ರೋಧ ವ್ಯಕ್ತಪಡಿಸಿದ್ದು, ಈ ನಡೆ ದೇವರ ನಾಡಿನ ದೈವ ಭಕ್ತರಲ್ಲಿ ಗಾಬರಿ ಹುಟ್ಟಿಸಿರುವುದಂತೂ ಸುಳ್ಳಲ್ಲ.

ತಮ್ಮ ಪೋಸ್ಟ್‌ಗೆ ವಿರೋಧ, ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ ಚಿತ್ರಾ ಅವರು ತಾವು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ವಿಡಿಯೋ ಡಿಲಿಟ್ ಮಾಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರಾ ವಿರುದ್ಧ ಕೆರಳಿದವರ ನಡೆ ಯನ್ನು ಕೇಂದ್ರ ಸಚಿವ ಮುರಳೀಧರ ಅವರು ವಿರೋಧಿಸಿದ್ದಾರೆ. ಈ ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ. ಕೇರಳವನ್ನು ಮತ್ತೊಂದು ತಾಲೀಬಾನ್ ಆಗಲು ಬಿಡುವುದಿಲ್ಲ. ಹಿರಿಯ ಗಾಯಕಿಯ ವಿಷಯದಲ್ಲಿ ಈ ರೀತಿಯ ಭಯ ಹುಟ್ಟಿಸುವ ನಡೆ ಸಹ್ಯವಲ್ಲ ಎಂದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹಿರಿಯ ಗಾಯಕಿ ಚಿತ್ರಾ ಅವರ ಪೋಸ್ಟ್‌ಗೆ ಬೆದರಿಕೆ ಒಡ್ಡುವಂತಹ ಕಾಮೆಂಟ್‌ಗಳನ್ನು ಗಮನಿಸಿದ್ದೇನೆ. ಆಕೆಗೆ ಮಾನಸಿಕ ಹಿಂಸೆ ನೀಡಲಾಗಿದೆ. ಕೇರಳದಲ್ಲಿ ರಾಮ ನಾಮ ಜಪಿಸುವುದೂ ತಪ್ಪೇ? ಎಂದು ಪ್ರಶ್ನೆ ಮಾಡಿದ್ದಾರೆ. 

ಅಷ್ಟಕ್ಕೂ ಚಿತ್ರ ಅವರು ಹೇಳಿದ್ದೇನು. ಮನೆಗಳಲ್ಲಿ ದೀಪ ಹಚ್ಚಿ, ರಾಮ ನಾಮ ಜಪಿಸಲು ಹೇಳಿದ್ದಾರೆ ಅಷ್ಟೇ. ಚಿತ್ರಾ ಮೇಲಿನ ಸೈಬರ್ ದಾಳಿ ಸರಿಯಲ್ಲ. ಹೀಗೆ ತಪ್ಪುಗಳು ನಡೆಯುತ್ತಿದ್ದರೂ ಕೇರಳ ಪೊಲೀಸರು ಸುಮ್ಮನಿರುವುದೇಕೆ ಎಂದು ಪ್ರಶ್ನೆ ಮಾಡಿದ್ದಾರೆ. ಕೆಲ ಸಮಯದ ಹಿಂದೆ ಶಬರಿಮಲೆಯನ್ನು ಅಪವಿತ್ರಗೊಳಿಸುವ ಕೆಲಸ ನಡೆಯಿತು. ಇಂತಹ ಎಲ್ಲಾ ವಿಷಯಕ್ಕೂ ಅಲ್ಲಿನ ಸರ್ಕಾರದ ಪ್ರೋತ್ಸಾಹ ಇದೆ. ಕೇರಳ ಸರ್ಕಾರದ ಇಂತಹ ನಡೆ ಅಕ್ಷಮ್ಯ. ಕೇರಳವನ್ನು ಮತ್ತೊಂದು ತಾಲೀಬಾನ್ ಆಗಲು ಬಿಡುವುದಿಲ್ಲ ಎಂದು ತಿಳಿಸಿದ್ದಾರೆ.

ಒಟ್ಟಿನಲ್ಲಿ ದೇವರ ನಾಡಿನಲ್ಲಿ ಎಡಪಂಥೀಯ ಕಮ್ಯುನಿಸ್ಟ್ ದೆವ್ವಗಳ ಅಬ್ಬರ ಜಾಸ್ತಿಯಾಗಿದ್ದು, ಇದು ಅಪಾಯಕಾರಿ ಎನ್ನಬಹುದು.  ಅಲ್ಲಿನ ಸರ್ಕಾರ ಇನ್ನಾದರೂ ಎಚ್ಚೆತುಕೊಂಡು ಅಲ್ಲಿನ ದೈವ ಭಕ್ತರಿಗೆ ರಕ್ಷಣೆ ನೀಡುವುದೋ ಕಾದು ನೋಡಬೇಕಿದೆ.

Tags

Related Articles

Close