ಪ್ರಚಲಿತ

ಅಯ್ಯಪ್ಪ ಮಾಲಾಧಾರಿಗಳ ಯಾತ್ರೆಗೂ ಕುತ್ತು ತಂದ ಕೇರಳ ಕಮ್ಯುನಿಸ್ಟ್ ಸರಕಾರ!

ಹಿಂದೂಗಳ ವಿರುದ್ಧ ಆಕ್ರಮಣಕಾರಿ ನೀತಿಗಳನ್ನೇ ಅಳವಡಿಸಿಕೊಂಡು ಅಧಿಕಾರ ನಡೆಸುತ್ತಿರುವ ಕೇರಳದ ಪಿಣರಾಯಿ ವಿಜಯನ್ ನೇತೃತ್ವದ ಕಮ್ಯುನಿಸ್ಟ್ ಸರ್ಕಾರ ಶಬರಿಮಲೆ ಯಾತ್ರೆಗೆ ತೆರಳುತ್ತಿರುವ ವ್ರತದಾರಿ ಅಯ್ಯಪ್ಪ ಭಕ್ತರ ಮೇಲೆಯೂ ತನ್ನ ದೌರ್ಜನ್ಯ ಮೆರೆಯುತ್ತಿದೆ.

ಶಬರಿಮಲೆ ಸನ್ನಿಧಾನಕ್ಕೆ ಮಂಡಲ ವ್ರತ ಮಾಡಿ, ಅಯ್ಯನನ್ನು ಕಣ್ತುಂಬಿಕೊಂಡು ಪಾವನರಾಗಲು ‌ಹಲವಾರು ಮಂದಿ ಭಕ್ತರು ಆಗನಿಸುತ್ತಿದ್ದಾರೆ. ಶಬರಿಮಲೆಯಲ್ಲಿ ಸಂಗ್ರಹವಾದ ಹಣಕ್ಕೆ ಕನ್ನ ಹಾಕುವ ಪಿಣರಾಯಿ ಸರ್ಕಾರ, ಅಲ್ಲಿಗೆ ತೆರಳುವ ಭಕ್ತರ ವಿಷಯದಲ್ಲಿ ಮಾತ್ರ ಅತ್ಯಂತ ಹೀನಾಯವಾಗಿ ನಡೆದುಕೊಳ್ಳುತ್ತಿದೆ. ದೂರದೂರದಿಂದ ಶಬರೀಶನ ದರ್ಶನಕ್ಕೆ ಬರುವ ಭಕ್ತರಿಗೆ ಯಾವುದೇ ರೀತಿಯ ಸುವ್ಯವಸ್ಥೆ ಕಲ್ಪಿಸದೆ, ಮಲೆಯನ್ನು ಅವ್ಯವಸ್ಥೆಯ ಆಗರವಾಗಿಸಿದೆ.

ಬಹಳ ಮುಖ್ಯವಾಗಿ ಈ ಬಾರಿ ಶಬರಿ ಮಲೆಗೆ ಮಾಲೆ ತೊಟ್ಟು ಬರುವ ಭಕ್ತರ ಸಂಖ್ಯೆ ಹೆಚ್ಚಾಗಿದ್ದು, ದೇವರ ದರ್ಶನಕ್ಕೆ ನೂಕುನುಗ್ಗಲು, ಬಹಳಷ್ಟು ದೂರದ ವರೆಗೆ ಕ್ಯೂ, ವ್ರತದಾರಿಗಳು ಆಗಮಿಸುವ ವಾಹನಗಳ ಸಾಲು ಕಂಡು ಬರುತ್ತಿದೆ. ಇದು ಅಯ್ಯಪ್ಪ ವ್ರತದಾರಿಗಳಿಗೆ ದೇವರನ್ನು ಕಾಣುವುದಕ್ಕೂ ತೊಂದರೆಯಾಗುವಂತೆ ಮಾಡಿದೆ. ಜೊತೆಯಾಗಿ ಹೋದವರು ಕಳೆದು ಹೋಗುವ, ತಪ್ಪಿ ಹೋಗುವ ಸನ್ನಿವೇಶಗಳು ಸಹ ಕಂಡು ಬರುತ್ತಿದ್ದು, ಜನರು ಕೇರಳದ ಕಮ್ಯುನಿಸ್ಟ್ ಸರ್ಕಾರದ ವಿರುದ್ಧ ರೊಚ್ಚಿಗೇಳುವಂತೆ ಮಾಡಿದೆ. ಶಬರಿಮಲೆಯಲ್ಲಿ ಭಕ್ತರ ಕಾಣಿಕೆಯಿಂದ ತುಂಬುವ ಹುಂಡಿಯ ಮೇಲೆ ಕಣ್ಣು ಹಾಕುವ ಪಿಣರಾಯಿ ಸರ್ಕಾರ, ಅಲ್ಲಿಗೆ ಬರುವ ಭಕ್ತರಿಗೆ ಸರಿಯಾದ ವ್ಯವಸ್ಥೆ ಕಲ್ಪಿಸದೆ ತನ್ನ ದಾರ್ಷ್ಟ್ಯ ತೋರುತ್ತಿರುವುದರ ಬಗ್ಗೆ ಜನತೆ ಆಕ್ರೋಶ ಹೊರ ಹಾಕುತ್ತಿದ್ದಾರೆ.

ಹಾಗೆಯೇ, ದೇವರ ದರ್ಶನಕ್ಕೂ ಮಾಲಾಧಾರಿಗಳಿಗೆ ಸರಿಯಾಗಿ ಅವಕಾಶ ನೀಡದೆ, ದೇವರ ಮುಂದೆ ನಿಂತಾಕ್ಷಣವೇ, ಅಯ್ಯಪ್ಪನನ್ನು ಸರಿಯಾಗಿ ನೋಡುವುದಕ್ಕೂ ಬಿಡದೆ ಮುಂದೆ ತಳ್ಳುವ ಕೆಲಸವನ್ನು ಅಲ್ಲಿ ನಿಯೋಜನೆಗೊಂಡ ಕೇರಳ ಸರ್ಕಾರದ ಉದ್ಯೋಗಿಗಳು ಮಾಡುತ್ತಿದ್ದು, ಇದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ಇದಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸುವುದು ಬಿಟ್ಟು, ಭಕ್ತರ ಮೇಲೆ ದರ್ಪ ಮೆರೆಯುತ್ತಿರುವ ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ.

ಬಸ್ಸುಗಳಲ್ಲಿ ತೆರಳಿ ಕಾಲ್ನಡಿಗೆಯಲ್ಲಿ ಸನ್ನಿದಾನಕ್ಕೆ ಹೋಗುವವರಿಗೆ ದಾರಿಯಲ್ಲಿ ತಂಗುವುದಕ್ಕೂ ಸೂಕ್ತ ವ್ಯವಸ್ಥೆಗಳಿಲ್ಲ. ಮಕ್ಕಳು, ವೃದ್ಧರು, ಮಹಿಳಾ ವೃದ್ಧ ಭಕ್ತರು ಸಹ ಅರಣ್ಯದಲ್ಲೇ ತಂಗುವ ಸ್ಥಿತಿ ಇದೆ. ಆನ್ಲೈನ್ ದರ್ಶನಕ್ಕೆ ಬುಕ್ ಮಾಡಿದವರ ಜೊತೆ ಐದು ಲಕ್ಷ ಜನರಿಗೆ ನಿತ್ಯ ಸನ್ನಿಧಾನಕ್ಕೆ ತೆರಳುವ ಅವಕಾಶ ನೀಡಲಾಗಿದೆ. ಆದರೆ ಇದಕ್ಕೆ ಬೇಕಾದ ವ್ಯವಸ್ಥೆಗಳನ್ನು ಕಲ್ಪಿಸುವಲ್ಲಿ ಮಾತ್ರ ಅಲ್ಲಿನ ಸರ್ಕಾರ ವಿಫಲವಾಗಿದೆ. ಇದರಿಂದ ತೊಂದರೆ ಅನುಭವಿಸುತ್ತಿರುವವರು ಮಾತ್ರ ಭಕ್ತರು.

ಕೇರಳದ ಪಿಣರಾಯಿ ನೇತೃತ್ವದ ಕಮ್ಯುನಿಸ್ಟ್ ಸರ್ಕಾರಕ್ಕೆ ಶಬರಿಮಲೆ ಶ್ರೀ ಅಯ್ಯಪ್ಪ ಸನ್ನಿಧಾನದಿಂದ ಸುಮಾರು ಮುನ್ನೂರ ಹತ್ತು ಕೋಟಿಗೂ ಅಧಿಕ ಆದಾಯ ಬರುತ್ತದೆ. ಆದರೂ ಅಲ್ಲಿಗೆ ಸೂಕ್ತ ಮೂಲಸೌಕರ್ಯ ಒದಗಿಸುವಲ್ಲಿ ಯಾವುದೇ ಒಲವು ತೋರದೆ ಸಂಪೂರ್ಣ ವಿಫಲವಾಗಿದೆ. ರಸ್ತೆ, ಬಸ್ಸು, ಶೌಚಾಲಯ ಸೌಲಭ್ಯಗಳು ಸಹ ಇಲ್ಲದೆ ಭಕ್ತರು ಕಂಗೆಡುವಂತಾಗಿದೆ. ಶಬರಿಮಲೆಗೆ ಹೋಗುವ ಭಕ್ತರು ಹಸಿವು, ದಣಿವು, ನೀರಡಿಕೆಯಿಂದ ಬಳಲುವ ಸ್ಥಿತಿಯನ್ನು ಪಿಣರಾಯಿ ಸರ್ಕಾರ ನಿರ್ಮಾಣ ಮಾಡಿದೆ.

ಶಬರಿಮಲೆಯಲ್ಲಿ ಸಂಗ್ರಹವಾಗುವ ಕಾಣಿಕೆಯನ್ನು ತಿಂದು ತೇಗಿ, ಅಲ್ಲಿಗೆ ತೆರಳುವ ಭಕ್ತರನ್ನು ಮೂಲೆಗುಂಪು ಮಾಡಿರುವ ಪಿಣರಾಯಿಯ ಕಮ್ಯುನಿಸ್ಟ್ ಸರ್ಕಾರಕ್ಕೆ ಅಯ್ಯಪ್ಪನೇ ತಕ್ಕ ಪಾಠ ಕಲಿಸುವಂತಾಗಲಿ.

Tags

Related Articles

Close