ಪ್ರಚಲಿತ

ಗೋಹತ್ಯೆ, ಮತಾಂತರ ನಿಷೇಧ ಕಾಯ್ದೆ ವಾಪಸ್ಸು: ರಾಜ್ಯ ಸರ್ಕಾರಕ್ಕೆ ಪೇಜಾವರ ಶ್ರೀಗಳ ಕಿವಿಮಾತೇನು?

ಈ ಹಿಂದಿನ ಬಿಜೆಪಿ ಸರ್ಕಾರ ಅನುಷ್ಠಾನಕ್ಕೆ ತಂದಿದ್ದ ಮತಾಂತರ ನಿಷೇಧ ಕಾಯ್ದೆ ಮತ್ತು ಗೋಹತ್ಯೆ ನಿಷೇಧ ಕಾಯ್ದೆಯ ಮೇಲೆಯೂ ಕಾಂಗ್ರೆಸ್ ಸರ್ಕಾರದ ಕೆಂಗಣ್ಣು ಬಿದ್ದಿದೆ. ಇದರ ಪರಿಣಾಮ ಸೊನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕಾಯ್ದೆಗಳನ್ನು ಹಿಂಪಡೆಯುವುದಕ್ಕೂ ಅನುಮೋದನೆ ನೀಡಲಾದ ವಿಚಾರ ಎಲ್ಲರಿಗೂ ಗೊತ್ತು.

ರಾಜ್ಯದಲ್ಲಿ ಲವ್ ಜಿಹಾದ್‌ನಂತಹ ಪ್ರಕರಣಗಳು ಹೆಚ್ಚುತ್ತಿದ್ದು, ಪರಿಣಾಮ ಮತಾಂತರವಾಗುತ್ತಿರುವವರ ಸಂಖ್ಯೆಯೂ ಏರಿಕೆಯಾಗುತ್ತಿತ್ತು. ಅದಲ್ಲದೆ ಹಿಂದೂ ಧರ್ಮದವರನ್ನು ಅನ್ಯ ಧರ್ಮದ ಮತಾಂಧರು ಬ್ರೈನ್ ವಾಷ್ ಮಾಡುವ ಮೂಲಕವೂ ಬೇರೆ ಧರ್ಮಕ್ಕೆ ಮತಾಂತರವಾಗುವಂತೆ ಮಾಡುವ ಕೆಲಸ ಎಗ್ಗಿಲ್ಲದೆ ನಡೆಯುತ್ತಿತ್ತು. ಇದರ ಜೊತೆ ಜೊತೆಯಲ್ಲಿಯೇ ಬಲವಂತದ ಮತಾಂತರ ಕಾರ್ಯ ಸಹ ಕಂಡುಬರುತ್ತಿತ್ತು. ತಮಗೆ ಇಷ್ಟವಿಲ್ಲದೆ ಹೋದರೂ ಮತಾಂಧರ ಮೇಲಿನ ಭಯದಿಂದ ಮತಾಂತರವಾಗುವವರ ಸಂಖ್ಯೆಯೂ ಸಾಕಷ್ಟು ಪ್ರಮಾಣದಲ್ಲಿತ್ತು. ಇವೆಲ್ಲ ಸಮಸ್ಯೆಗಳನ್ನು ಮನಗಂಡ ಈ ಹಿಂದೆ ರಾಜ್ಯದಲ್ಲಿ ಆಡಳಿತ ಚುಕ್ಕಾಣಿ ಹಿಡಿದಿದ್ದ ಬಿಜೆಪಿ ಸರ್ಕಾರ ‘ಮತಾಂತರ ನಿಷೇಧ ಕಾಯ್ದೆ’ ಯನ್ನು ಅನುಷ್ಠಾನಕ್ಕೆ ತಂದಿತ್ತು.

ಆದರೆ ಸದ್ಯ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷ ಬಿಜೆಪಿ ಮೇಲಿನ ದ್ವೇಷದಿಂದ, ಬಿಜೆಪಿ ಸರ್ಕಾರ ಅನುಷ್ಠಾನಕ್ಕೆ ತಂದಿದ್ದ ಹಲವಾರು ಸಮಾಜಮುಖಿ, ಜನಪರ ಕಾಯ್ದೆಗಳಿಗೆ ಕತ್ತರಿ ಹಾಕುವ ಕೆಲಸವನ್ನು ಮಾಡುತ್ತಿದೆ. ಅದರಲ್ಲಿ ಮತಾಂತರ ನಿಷೇಧ ಕಾಯ್ದೆ, ಗೋ ಹತ್ಯೆ ನಿಷೇಧ ಕಾಯ್ದೆಗಳಿಗೂ ಕತ್ತರಿ ಹಾಕುವ ಮೂಲಕ ರಾಜ್ಯದ ಬಹುಸಂಖ್ಯಾತ ವರ್ಗಕ್ಕೆ ನೋವುಂಟು ಮಾಡುವ, ಅನ್ಯಾಯ ಎಸಗುವ ಕೆಲಸಕ್ಕೆ ಕೈ ಹಾಕಿರುವುದು ಮೇಲ್ನೋಟಕ್ಕೆ ಸ್ಪಷ್ಟ.

ಭಾರತದಲ್ಲಿ ಗೋವಿಗೆ ದೇವರ ಸ್ಥಾನ, ತಾಯಿಯ ಸ್ಥಾನ ನೀಡಿ ಗೌರವಿಸಲಾಗುತ್ತದೆ. ಪೂಜಿಸಲಾಗುತ್ತಿದೆ. ಅಂತಹ ಗೋವುಗಳನ್ನು ಕದಿಯುವುದು, ಅಕ್ರಮ ಸಾಗಾಟ, ಹತ್ಯೆ ಮೊದಲಾದ ದುಷ್ಕೃತ್ಯ‌ಗಳು ರಾಜ್ಯದಲ್ಲಿ ಸಾರಾಸಗಟಾಗಿ, ಯಾವುದೇ ಭಯವಿಲ್ಲದೆ ನಡೆಯುತ್ತಿತ್ತು. ಕಟುಕರ ಕೈಯಿಂದ ಗೋವುಗಳನ್ನು ರಕ್ಷಣೆ ಮಾಡುವ ದೃಷ್ಟಿಯಿಂದ ಈ ಹಿಂದಿನ ಬಿಜೆಪಿ ಸರ್ಕಾರ ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತಂದಿತ್ತು. ಆ ಮೂಲಕ ಗೋ ಸಂರಕ್ಷಣೆಗೆ ಬಿಜೆಪಿ ತನ್ನದೇ ಆದ ಕೊಡುಗೆ ನೀಡಿತ್ತು.

ಆದರೆ ಕಾಂಗ್ರೆಸ್ ಅಧಿಕಾರಕ್ಕೇರಿದ ತಕ್ಷಣವೇ ಈ ಎರಡೂ ಮಹತ್ವದ ಕಾಯ್ದೆಗಳನ್ನು ಹಿ ಪಡೆಯುವ ಮೂಲಕ ರಾಜ್ಯದ ಜನರ ಕೆಂಗಣ್ಣಿಗೆ ತುತ್ತಾಗಿರುವುದಂತೂ ಸುಳ್ಳಲ್ಲ.

ರಾಜ್ಯ ಕಾಂಗ್ರೆಸ್ ಸರ್ಕಾರದ ಈ ನಿಲುವನ್ನು ಹಲವಾರು ಜನರು ವಿರೋಧಿಸಿದ್ದಾರೆ. ಹಿಂದೂ ಸಂಘಟನೆಗಳು ಸಹ ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಧ್ವನಿ ಎತ್ತಿವೆ. ಉಡುಪಿ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿಗಳು ಸಹ ಕಾಂಗ್ರೆಸ್ ಸರ್ಕಾರದ ಈ ನಿಲುವಿನ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪೇಜಾವರ ಶ್ರೀಗಳು ಈ ಎರಡೂ ಪ್ರಮುಖ ಕಾಯ್ದೆಗಳನ್ನು ಹಿಂಪಡೆಯಲು ಹೊರಟ ಸರಕಾರದ ನಿಲುವು ಆತಂಕಕಾರಿಯಾಗಿದೆ. ಮತಾಂತರದ ಕಪಿಮುಷ್ಟಿಗೆ ನಲುಗಿ ಕೌಟುಂಬಿಕ ಚೌಕಟ್ಟು ಛಿದ್ರವಾಗುತ್ತಿತ್ತು. ಇದನ್ನು ಮನಗಂಡ ಬಿಜೆಪಿ ಸರ್ಕಾರ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತಂದಿತ್ತು. ಹಾಗೆಯೇ, ರಾಜ್ಯದಲ್ಲಿ ಅವ್ಯಾಹತವಾಗಿ ನಡೆಯುತ್ತಿದ್ದ ಗೋಹತ್ಯೆಯನ್ನು ತಡೆಯುವ ನಿಟ್ಟಿನಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಲಾಗಿತ್ತು. ಈ ಎರಡು ಕಾನೂನುಗಳನ್ನು ಹಿಂಪಡೆಯಲು ಹೊರ ಟಿ ಇರುವ ರಾಜ್ಯ ಕಾಂಗ್ರೆಸ್ ಸರ್ಕಾರದ ನಿಲುವು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹಾಗೆಯೇ ಕಾನೂನುಗಳನ್ನು ವಾಪಾಸ್ಸು ಪಡೆಯುವ ದುಸ್ಸಾಹಸ ಮಾಡುವ ಮುನ್ನ, ಸರ್ಕಾರ ಜನಾಭಿಪ್ರಾಯ ಪಡೆದು ಬಳಿಕ ನಿರ್ಧಾರ ಕೈಗೊಳ್ಳುವಂತೆಯೂ ಸಿ ಎಂ ಸಿದ್ದರಾಮಯ್ಯ ಸರ್ಕಾರಕ್ಕೆ ಕಿವಿಮಾತು ಹೇಳಿದ್ದಾರೆ.

Tags

Related Articles

Close