ಪ್ರಚಲಿತ

ಭಾರತೀಯ ಮೀನುಗಾರರ ಹಿತ ಬಲಿಕೊಟ್ಟ ಕಾಂಗ್ರೆಸ್

ಕಾಂಗ್ರೆಸ್‌ ತನ್ನ ಅಧಿಕಾರಾವಧಿಯಲ್ಲಿ ದೇಶದ ಅಭಿವೃದ್ಧಿಯ ದೃಷ್ಟಿಯಿಂದ ಮಾಡಿದ ಕೆಲಸಕ್ಕಿಂತ, ದೇಶವನ್ನು ದುರವಸ್ಥೆಗೆ ತಳ್ಳಿದ್ದೇ ಹೆಚ್ಚು. ಹಾಗೆಯೇ, ಅಖಂಡ ಭಾರತವನ್ನು ತುಂಡರಿಸಿದ್ದರ ಜೊತೆಗೆ, ಕಚತೀವು ದ್ವೀಪವನ್ನು ನೆರೆಯ ಶ್ರೀಲಂಕಾ ದೇಶಕ್ಕೆ ಬಿಟ್ಟು ಕೊಡುವ ಮೂಲಕವೂ ಭಾರತವನ್ನು ಹುರಿದು ಮುಕ್ಕಿ ತಿಂದಿದೆ ಎನ್ನುವುದು ಸರ್ವ ಸಮ್ಮತ.

ನೆಹರು – ಇಂದಿರಾಗಾಂಧಿ ಕಾಲದಲ್ಲಿ ನಡೆದ ಕಚತೀವು ದ್ವೀಪದ ದಳ್ಳುರಿ ದೇಶದಲ್ಲಿ ಸದ್ಯ ಹೊತ್ತುರಿಯಲು ಆರಂಭವಾಗಿದ್ದು, ಕಾಂಗ್ರೆಸ್ ಪಕ್ಷದ ಈ ಅಹಿತಕರ ನಕಡೆಯ ವಿರುದ್ಧ ಬಿಜೆಪಿ ತನ್ನ ಅಸಮಾಧಾನ ಹೊರಹಾಕಲಾರಂಭಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಮಾಡಿರುವ ಈ ವಿವಾದಕ್ಕೆ ಸಂಬಂಧಿಸಿದ ಹಾಗೆ ಎರಡನೇ ದಿನವೂ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಈ ವಿವಾದ ಬಿಜೆಪಿ ಮತ್ತು ಕಾಂಗ್ರೆಸ್-ಡಿಎಂಕೆ ನಡುವಿನ ವಾಗ್ವಾದಕ್ಕೂ ಕಾರಣವಾಗಿದೆ.

ನೆಹರು ಮತ್ತು ಇಂದಿರಾ ಗಾಂಧಿ ಸರ್ಕಾರಗಳು ಕಚತೀವು ದ್ವೀಪವನ್ನು ಶ್ರೀಲಂಕೆಗೆ ಬಿಟ್ಟು ಕೊಟ್ಟು, ಭಾರತೀಯ ಮೀನುಗಾರರ ಹಿತವನ್ನು ಬಲಿ ಕೊಟ್ಟಿದೆ ಎಂಬುದಾಗಿ ಪ್ರಧಾನಿ ಮೋದಿ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಹಾಗೆಯೇ ಈ‌ ವಿವಾದಕ್ಕೆ ಸಂಬಂಧಿಸಿದ ಹಾಗೆ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಸಹ ಕಿಡಿ ಕಾರಿದ್ದು, 1974 ರಲ್ಲಿ ಏರ್ಪಟ್ಟ ಒಪ್ಪಂದದ ಪ್ರಕಾರ ಕಚತೀವು ದ್ವೀಪದ ಹಕ್ಕು ಭಾರತೀಯ ಮೀನುಗಾರರಿಗೆ ಸಿಕ್ಕಿತ್ತು. 1976 ರಲ್ಲಿ ಏರ್ಪಟ್ಟ ಒಪ್ಪಂದ ಈ ಹಕ್ಕನ್ನು ಭಾರತೀಯ ಮೀನುಗಾರರಿಂದ ಕಸಿಯಿತು. ಇದಕ್ಕೆ ಕಾರಣವಾದದ್ದು ಇಂದಿರಾ ಗಾಂಧಿ ಅವರ ಬದಲಾದ ನಿಲುವು. ಅವರ ತಪ್ಪು ನಿಲುವು ಭಾರತೀಯ ಬೆಸ್ತರ ಹಿತವನ್ನು ಬಲಿ ಪಡೆಯಿತು ಎಂದು ಹೇಳಿದ್ದಾರೆ.

ಅಂದಿನ ಕಾಂಗ್ರೆಸ್ ಸರ್ಕಾರಕ್ಕೆ ಕಾನೂನಾತ್ಮಕ ಅಭಿಪ್ರಾಯಗಳ ಹೊರತಾಗಿಯೂ ಕಚತೀವು ದ್ವೀಪದ ಬಗ್ಗೆ ಅಸಡ್ಡೆ ಇತ್ತು. ಅಂದಿನ ಸರ್ಕಾರ ಆ ದ್ವೀಪವನ್ನು ಚಿಕ್ಕ ಬಂಡೆ ಎಂದು ಪರಿಗಣನೆಗೆ ತೆಗೆದುಕೊಂಡಿದ್ದರು. ಇಂದಿನ ತಮಿಳುನಾಡು ಪ್ರಧಾನಿ ಡಿ ಎಂ ಕೆ ಪಕ್ಷದ ಕರುಣಾನಿಧಿ ಅವರಿಗೂ ಈ ಬಗ್ಗೆ ಮಾಹಿತಿ ಇತ್ತು. ಆದರೂ ಕಾಂಗ್ರೆಸ್ ಅಥವಾ ಡಿ ಎಂ ಕೆ ಈ ಸಂಬಂಧ ಯಾವುದೇ ಹೊಣೆಗಾರಿಕೆ ಹೊತ್ತಿಲ್ಲ. ಬದಲಾಗಿ ಆಗಿನ ಕಾಂಗ್ರೆಸ್ ಸರ್ಕಾರ ಈ ದ್ವೀಪವನ್ನು ಶ್ರೀಲಂಕಾಗೆ ನೀಡಿತು ಎಂದು ಅವರು ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Tags

Related Articles

Close