ಪ್ರಚಲಿತ

ಬಡ ಕಾರ್ಮಿಕ ಮಕ್ಕಳ ಶಿಕ್ಷಣ ಸಹಾಯಧನದ ಮೇಲೆಯೂ ಕೈ ಸರ್ಕಾರದ ವಕ್ರದೃಷ್ಟಿ

ಕಾಂಗ್ರೆಸ್ ಪಕ್ಷದ ಉಚಿತಗಳಿಗೆ ‌ಮಾರು ಹೋದ ಜನರು, ಪಂಗನಾಮ ‌ಹಾಕಿಸಿಕೊಳ್ಳುತ್ತಿದ್ದಾರೆ ಎನ್ನುವುದು ಖಚಿತವಾಗುತ್ತಿದೆ. ತಾನು ಚುನಾವಣಾ ಪೂರ್ವದಲ್ಲಿ ನೀಡಿದ್ದ ಭರವಸೆಗಳ ಈಡೇರಿಕೆಗೆ ಜನರಿಗೆಯೇ ಬರೆ ಹಾಕುತ್ತಿರುವುದು ದುರಂತವೂ ಹೌದು. ಜನರ ದುರಾದೃಷ್ಟವೂ ಹೌದು.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತ ವಹಿಸಿಕೊಂಡ ಬಳಿಕ ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ನಡೆಸುತ್ತಿದ್ದ ಅವಧಿಯಲ್ಲಿ ಕಾರ್ಮಿಕರ ಮಕ್ಕಳಿಗೆ ನೀಡುತ್ತಿದ್ದ ಸಹಾಯ ಧನವನ್ನು ಶೇ. 40 ರಿಂದ ಶೇ. 80 ರ ವರೆಗೆ ಕಡಿತಗೊಳಿಸಿದ್ದು, ಆ ಮೂಲಕ ಕಾರ್ಮಿಕರ ಮಕ್ಕಳ ಮೇಲೆಯೂ ತನ್ನ ದರ್ಪ ಪ್ರದರ್ಶನ ಮಾಡಿದೆ.

ಉಚಿತ ಭರವಸೆಗಳನ್ನು ಈಡೇರಿಸಲು ರಾಜ್ಯದ ಜನರ ಜೇಬಿಗೆ ಹಲವಾರು ವಿಧದಲ್ಲಿ ಸರ್ಕಾರ ಕತ್ತರಿ ಹಾಕಿದೆ. ಸಾಮಾನ್ಯವಾಗಿ ದಿನ ಬಳಕೆಯ ಅಗತ್ಯ ವಸ್ತುಗಳ ಬೆಲೆ ಹೆಚ್ಚಿಸಿ, ಆ ಮೂಲಕವೂ ಕಾಂಗ್ರೆಸ್ ಸರ್ಕಾರ ತನ್ನ ಉಚಿತಗಳ ಭರವಸೆ ಈಡೇರಿಸಲು ಜನರ ಜೇಬಿನೊಳಕ್ಕೆ ಕೈ ಹಾಕಿರುವುದು ಸ್ಪಷ್ಟ. ಇದೀಗ ಕಟ್ಟಡ ಕಾರ್ಮಿಕರ ಮಕ್ಕಳ ಸಹಾಯ ಧನವನ್ನು ಕಡಿತಗೊಳಿಸಿ, ಆ ಬಡ ವಿದ್ಯಾರ್ಥಿಗಳ ಜೊತೆಗೂ ಚೆಲ್ಲಾಟವಾಡಲು ಮುಂದಾಗಿರುವುದು ಅನ್ಯಾಯವಲ್ಲದೆ ಮತ್ತಿನ್ನೇನಲ್ಲ.

ಹಿಂದಿನ ಸರ್ಕಾರ ಕಟ್ಟಡ ಕಾರ್ಮಿಕರ ಮಕ್ಕಳಿಗೆ ನೀಡುತ್ತಿದ್ದ ಶೈಕ್ಷಣಿಕ ವಾರ್ಷಿಕ ಸಹಾಯಧನವನ್ನು ಕಡಿತಗೊಳಿಸಿ ಕೈ ಸರ್ಕಾರ ಫಲಾನುಭವಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಕೊಳ್ಳಿ ಇಡಲು ಮುಂದಾಗಿದ್ದು, ಈ ವಿಚಾರ ಸಾರ್ವಜನಿಕ ವಲಯದಲ್ಲಿ ಸರ್ಕಾರದ ವಿರುದ್ಧ ಆಕ್ರೋಶಕ್ಕೂ ಕಾರಣವಾಗಿದೆ. ಮಕ್ಕಳಿಂದ ಕಿತ್ತು ತಮ್ಮ ಬೇಳೆ ಬೇಯಿಸಿಕೊಳ್ಳಲು ಹೊರಟ ಕೈ ಸರ್ಕಾರದ ನಿಲುವಿಗೆ ಖಂಡನೆ ವ್ಯಕ್ತವಾಗುತ್ತಿದೆ.

ಒಟ್ಟಿನಲ್ಲಿ ತಮ್ಮ ಲಾಭಕ್ಕಾಗಿ ರಾಜ್ಯದ ಜನರ ಶಿಕ್ಷಣ, ವೇತನ, ದಿನ ನಿತ್ಯದ ಅಗತ್ಯ ವಸ್ತುಗಳ ಮೇಲೆ ಬೆಲೆ ಏರಿಸುವುದರ ಮೂಲಕ ರಾಜ್ಯದ ಕಾಂಗ್ರೆಸ್ ಸರ್ಕಾರ ಜನರನ್ನು ಸಂಕಷ್ಟಕ್ಕೆ ‌ತಳ್ಳುತ್ತಿದೆ. ಅಲ್ಪಸಂಖ್ಯಾತರ ಅಭಿವೃದ್ಧಿಗೆ ಕೋಟಿ ಕೋಟಿ ವ್ಯಯಿಸುವ ಕಾಂಗ್ರೆಸಿಗರಿಗೆ ಬಡ ಕಾರ್ಮಿಕ ಮಕ್ಕಳ ನೋವು, ಆರ್ಥಿಕ ದುರ್ಬಲತೆ ಅರಿವಾಗದೇ ಇರುವುದು ನಾಚಿಗೇಡಿನ ವಿಷಯವೇ ಸರಿ.

Tags

Related Articles

Close