ಪ್ರಚಲಿತ

ಸಂವಿಧಾನವನ್ನು ದ್ವೇಷಿಸುತ್ತಿದೆ ಕಾಂಗ್ರೆಸ್ ಪಕ್ಷ: ಪ್ರಧಾನಿ ಮೋದಿ

ದೇಶದ ಸಂಪತ್ತನ್ನು ಕೊಳ್ಳೆ ಹೊಡೆದು ಭಾರತೀಯರಿಗೆ ಅನ್ಯಾಯ ಎಸಗಿದ ಕಾಂಗ್ರೆಸ್ ಪಕ್ಷದ ವಿರುದ್ಧ ಮಧ್ಯಪ್ರದೇಶದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಿಡಿ ಕಾರಿದ್ದಾರೆ.

ಕಾಂಗ್ರೆಸ್ ಪಕ್ಷವು ಭಾರತದ ಸಂವಿಧಾನವನ್ನು ದ್ವೇಷಿಸುತ್ತದೆ. ಭಾರತದ ಗುರುತನ್ನು ದ್ವೇಷ ಮಾಡುತ್ತದೆ. ಎಸ್‌ಸಿ, ಎಸ್‌ಟಿ, ಎಬಿಸಿ ಕೋಟಾಗಳನ್ನು ಕಡಿತ ಮಾಡಲು ಪ್ರಯತ್ನ ನಡೆಸುತ್ತಿದೆ. ಅದರೊಂದಿಗೆ ಧಾರ್ಮಿಕ ಆಧಾರದಲ್ಲಿ ದೇಶದಲ್ಲಿ ಮೀಸಲಾತಿ ಜಾರಿಗೆ ತರಲು ಹುನ್ನಾರ ನಡೆಸುತ್ತಿದೆ ಎಂದು ಪ್ರಧಾನಿ ಮೋದಿ ಆರೋಪಿಸಿದ್ದಾರೆ.

ಕಾಂಗ್ರೆಸ್ ಪಕ್ಷಕ್ಕೆ ಪಿತ್ರಾರ್ಜಿತ ತೆರಿಗೆ ಎನ್ನುವ ಹಿಡನ್ ಅಜೆಂಡಾ ಒಂದಿದೆ. ದೇಶದ ಜನರ ಆಸ್ತಿಯನ್ನು, ಸಂಪತ್ತನ್ನು ಲಪಾಟಾಯಿಸಲು ಕಾಂಗ್ರೆಸ್ ಪಕ್ಷ ಯೋಜನೆ ರೂಪಿಸುತ್ತಿದೆ ಎಂದು ಅವರು ಹೇಳಿದ್ದಾರೆ. ಸಂವಿಧಾನದ ವಿರುದ್ಧ ಕಾಂಗ್ರೆಸ್ ಪಕ್ಷ ಕೆಲಸ ಮಾಡುತ್ತಿದ್ದು, ಧರ್ಮದ ಆಧಾರದಲ್ಲಿ ಮೀಸಲಾತಿ ವ್ಯವಸ್ಥೆಯನ್ನು ಜಾರಿಗೆ ತರಲು ಬಯಸುತ್ತದೆ ಎಂದು ಆವರು ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೇಶಕ್ಕೆ ದೇಶವೇ ಬೆಚ್ಚುವಂತಹ ಕಾಂಗ್ರೆಸ್ ಪಕ್ಷದ ಮುಚ್ಚಿಟ್ಚಿದ್ದ ಸತ್ಯವೊಂದು ಬಯಲಾಗಿದೆ. ಈ ವಿಷಯ ದೇಶದ ಜನರನ್ನು ದಂಗು ಬಡಿಸಿದೆ. ಭಾರತದ ಸಂವಿಧಾನ ಧರ್ಮದ ಆಧಾರದಲ್ಲಿ ಮೀಸಲಾತಿ ನೀಡುವುದನ್ನು ನಿಷೇಧಿಸಿದೆ. ಈ ಅಂಶವನ್ನು ಸ್ವತಃ ಡಾ. ಬಿ. ಆರ್. ಅಂಬೇಡ್ಕರ್ ಅವರೇ ವಿರೋಧಿಸಿದ್ದರು. ಆದರೆ ಇಂದು ಕಾಂಗ್ರೆಸ್ ಪಕ್ಷ ಧರ್ಮದ ಆಧಾರದಲ್ಲಿ ಮೀಸಲಾತಿ ತರುವ ಪ್ರಯತ್ನಕ್ಕೆ ಕೈ ಹಾಕಿರುವುದಾಗಿ ಅವರು ಹೇಳಿದ್ದಾರೆ.

ಈ ವಿಷಯ ಕಾಂಗ್ರೆಸ್ ಪಕ್ಷದ ಅಪಾಯಕಾರಿ ನಿರ್ಣಯವಾಗಿದ್ದು, ಇದನ್ನು ಜಾರಿಗೆ ತರಲು ಅವರು ನಿರಂತರವಾಗಿ ಜನರನ್ನು ಮರುಳು ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ. 2004 ರಲ್ಲಿ ಕಾಂಗ್ರೆಸ್ ಆಂಧ್ರ ಪ್ರದೇಶದಲ್ಲಿ ಧರ್ಮಧಾರಿತ ಮೀಸಲಾತಿ ಜಾರಿಗೆ ತಂದಿತು. 2009 ಮತ್ತು 2014 ರ ಚುನಾವಣಾ ಸಂದರ್ಭದಲ್ಲಿ ಸಹ ಧರ್ಮಾಧಾರಿತ ಮೀಸಲಾತಿ ನೀಡುವುದಾಗಿ ಹೇಳಿತ್ತು. ಧರ್ಮದ ಆಧಾರದಲ್ಲಿ ಕಾಂಗ್ರೆಸ್ ದೇಶವನ್ನು ವಿಭಜನೆ ಮಾಡುವ ಹುನ್ನಾರ ನಡೆಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

Tags

Related Articles

Close