ಪ್ರಚಲಿತ

ಶ್ರೀರಾಮನ ಹೆಸರು ಹೇಳುವುದು ಕಾಂಗ್ರೆಸ್‌ಗೆ ‘ಪಕ್ಷ ವಿರೋಧಿ’ ಚಟುವಟಿಕೆ

ಕಾಂಗ್ರೆಸ್ ಪಕ್ಷ ಈ ದೇಶಕ್ಕೆ ನೀಡಿದ ಕೊಡುಗೆಗಳು ಶೂನ್ಯ. ಅವರಿಗೆ ಸತ್ಯವನ್ನು, ಸತ್ವವಿರುವ ವಿಷಯವನ್ನು ಪಕ್ಷಾತೀತವಾಗಿ ಪ್ರಶಂಸೆ ಮಾಡಿವುದು, ಅದಕ್ಕೆ ಕೈಜೋಡಿಸುವುದು ಹಿಡಿ ಕೊನೇ ಪಕ್ಷ ಒಪ್ಪಿಕೊಳ್ಳಲೂ ಸಹ ಸಾಧ್ಯವಿಲ್ಲ ಎಂಬಂತಹ ಸ್ಥಿತಿ. ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ದೇಶ ವಿರೋಧಿ ಚಟುವಟಿಕೆಗಳು, ಅಭಿವೃದ್ಧಿ ವಿರೋಧಿ ಮನಸ್ಥಿತಿ ಪ್ರದರ್ಶನಕ್ಕೂ ‌ಸಿದ್ಧ.

ಕಾಂಗ್ರೆಸ್ ನಾಯಕರಿಗೆ ಪ್ರಧಾನಿ ಮೋದಿ ಅವರನ್ನು, ಈ ದೇಶವನ್ನು ಪ್ರೀತಿಸುವ ಎಲ್ಲರ ಮೇಲೆಯೂ ದ್ವೇಷ. ಪ್ರಧಾನಿ ಮೋದಿ ಅವರನ್ನು ಕಂಡರೆ ಉರಿವಲ್ಲಿಗೆ ಉಪ್ಪು ಇಟ್ಟ ಹಾಗೆ ಆಡುವ ಕಾಂಗ್ರೆಸ್, ಅಪ್ಪಿ ತಪ್ಪಿ ಆ ಪಕ್ಷದ ಯಾರಾದರೂ ಮೋದಿ ಅವರ ಕೆಲಸಕ್ಕೆ ಮೆಚ್ಚುಗೆ ಸೂಚಿಸಿದರೆ ಅವರನ್ನು ತಮ್ಮ ಪಕ್ಷದಿಂದಲೇ ಸಂಸ್ಪೆಂಡ್ ಮಾಡಿ ಬಿಡುತ್ತಾರೆ. ಪ್ರಧಾನಿ ಮೋದಿ ಅವರು ದೇಶಕ್ಕೆ ನೀಡಿದ ಕೊಡುಗೆಗಳಿಗೆ ಮೆಚ್ಚಿ ನುಡಿದ ಕಾಂಗ್ರೆಸ್ ನಾಯಕರಿಗೆ ಆ ಪಕ್ಷದಲ್ಲಿ ಸ್ಥಾನ ಇಲ್ಲ. ಅಂತಹ ನಾಯಕರನ್ನು ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ ಎಂಬ ಕಾರಣ ನೀಡಿ ಪಕ್ಷದಿಂದ ಉಚ್ಛಾಟನೆ ಮಾಡುತ್ತಾರೆ. ಇದು ಹಾಸ್ಯಾಸ್ಪದ ಸಂಗತಿಯಾದರೂ ಸತ್ಯ.

ಪ್ರಧಾನಿ ಮೋದಿ ಅವರು ತಮ್ಮ ಆಡಳಿತಾವಧಿಯಲ್ಲಿ ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮ ಮಂದಿರ ನಿರ್ಮಾಣದ ವಿಚಾರದಲ್ಲಿ ಮಾಡಿದ ಕೆಲಸ ಅಷ್ಟಿಷ್ಟಲ್ಲ. ಅವರ ಮತ್ತು ಅವರ ಸರ್ಕಾರದ ಪ್ರಯತ್ನದ ಕಾರಣದಿಂದಲೇ ಪ್ರಭು ಶ್ರೀರಾಮನಿಗೆ ಮತ್ತೆ ಜನ್ಮಸ್ಥಾನ ಅಯೋಧ್ಯೆ ದೊರಕುವುದು ಸಾಧ್ಯವಾದದ್ದು. ಈ ಸಂಗತಿಯನ್ನು ಮನಸಾರೆ ಮೆಚ್ಚಿ ಉತ್ತರ ಪ್ರದೇಶದ ಕಾಂಗ್ರೆಸ್‌ನ ನಾಯಕರಾಗಿದ್ದ ಆಚಾರ್ಯ ಪ್ರಮೋದ ಕೃಷ್ಣಂ ಅವರು ಪ್ರಶಂಸಿಸಿದ್ದರು.

ಆಚಾರ್ಯರ ಈ ನಡೆ‌ ಕಾಂಗ್ರೆಸ್‌ಗೆ ಬಿಸಿ ತುಪ್ಪವಾಗಿ ಕಂಡಿತ್ತು. ಪಕ್ಷ ವಿರೋಧಿ ಚಟುವಟಿಕೆಯ ಕಾರಣ ನೀಡಿ ಅವರನ್ನು ಪಕ್ಷದಿಂದ ಆರು ವರ್ಷಗಳ ಅವಧಿಗೆ ಗೇಟ್‌ಪಾಸ್ ನೀಡಿ, ಗೆಟೌಟ್ ಎಂದಿತ್ತು ಕಾಂಗ್ರೆಸ್. ಈ ಉಚ್ಛಾಟನೆಯನ್ನು ಆರು ವರ್ಷಗಳ ಅವಧಿಗೆ ಮಾಡಲಾಗಿತ್ತು.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಆಚಾರ್ಯರು, ಕಾಂಗ್ರೆಸ್ ತನ್ನನ್ನು ಬಿಡುಗಡೆ ಮಾಡಿದ್ದಕ್ಕೆ ಧನ್ಯವಾದ ಸಲ್ಲಿಸಿದ್ದಾರೆ. ಹಾಗೆಯೇ ಪಕ್ಷ ವಿರೋಧಿ ಚಟುವಟಿಕೆಯ ಕಾರಣ ನೀಡಿ ಆರು ವರ್ಷಗಳ ಅವಧಿಗೆ ನನ್ನನ್ನು ಉಚ್ಛಾಟನೆ ಮಾಡಲಾಗಿದೆ. ಹಾಗಾದರೆ ಪಕ್ಷ ವಿರೋಧಿ ಚಟುವಟಿಕೆ ಯಾವುದು?, ಪ್ರಭು ಶ್ರೀರಾಮನ ಹೆಸರು ಹೇಳುವುದು ಪಕ್ಷ ವಿರೋಧಿ ಚಟುವಟಿಕೆಯೇ? ಎಂಬುದನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆ.ಸಿ. ವೇಣುಗೋಪಾಲ್ ಹೇಳಬೇಕು ಎಂದು ತಿಳಿಸಿದ್ದಾರೆ.

ನಾನು ರಾಮನ ಭಕ್ತ.‌ ಶ್ರೀರಾಮ ಹದಿನಾಲ್ಕು ವರ್ಷಗಳ ಕಾಲ ವನವಾಸಕ್ಕೆ ತೆರಳಿದ್ದ. ಹಾಗಾಗಿ ಕಾಂಗ್ರೆಸ್ ಪಕ್ಷ ನನ್ನನ್ನು ಆರು ವರ್ಷಗಳ ಅವಧಿಗೆ ಅಲ್ಲ ಹದಿನಾಲ್ಕು ವರ್ಷಗಳ ಅವಧಿಗೆ ಪಕ್ಷದಿಂದ ಉಚ್ಛಾಟಿಸಲಿ ಎಂದು ತಿರುಗೇಟು ನೀಡಿದ್ದಾರೆ.

ಹಾಗೆಯೇ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ನನಗೆ ಹಿತವಾಗದ ಅನೇಕ ನಿರ್ಣಯಗಳನ್ನು ಕಾಂಗ್ರೆಸ್ ತೆಗೆದುಕೊಂಡಿದೆ. ಆರ್ಟಿಕಲ್ 370 ರದ್ಧತಿಯನ್ನು ಕಾಂಗ್ರೆಸ್ ವಿರೋಧ ಮಾಡಿದೆ. ಸನಾತನ ಧರ್ಮವನ್ನು ಡೆಂಗ್ಯೂ, ಮಲೇರಿಯಾಗೆ ಹೋಲಿಕೆ ಮಾಡಿದ ಡಿ ಎಂ ಕೆ ನಾಯಕನನ್ನು ಕಾಂಗ್ರೆಸ್ ಬೆಂಬಲಿಸಿದೆ. ಇವೆಲ್ಲವೂ ಕಾಂಗ್ರೆಸ್ ತೆಗೆದುಕೊಂಡ ತಪ್ಪು ಹೆಜ್ಜೆಯಾಗಿದೆ. ಇವೆಲ್ಲವನ್ನೂ ಸಹಿಸಲಾಗಿದೆ. ಆದರೆ ಪ್ರಭು ಶ್ರೀರಾಮ ಮತ್ತು ಭಾರತಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದು ಸಾಧ್ಯವಿಲ್ಲ ಎಂದು ಅವರು ತಮ್ಮ ನಿರ್ಧಾರ ತಿಳಿಸಿದ್ದಾರೆ.

ಕಾಂಗ್ರೆಸ್ ಪಕ್ಷ ರಾಮ ಮಂದಿರ ಲೋಕಾರ್ಪಣೆಗೆ ದೈರಾಗುವ ನಿರ್ಧಾರ ತೆಗೆದುಕೊಂಡಿತ್ತು. ಇದು ತಪ್ಪು ನಿರ್ಧಾರ. ಇದನ್ನು ಧಾರ್ಮಿಕ ಕಾರ್ಯಕ್ರಮ ಎಂದು ಕಾಂಗ್ರೆಸ್ ಭಾವಿಸಿಲ್ಲ. ಬದಲಾಗಿ ಇದನ್ನು ಆರ್.ಎಸ್.ಎಸ್. ಮತ್ತು ಬಿ ಜೆ ಪಿ ಕಾರ್ಯಕ್ರಮ ಎಂದು ತಿಳಿದಿತ್ತು ಎಂದು ಟೀಕಿಸಿದ್ದಾರೆ.

ಒಟ್ಟಿನಲ್ಲಿ ಬಿಜೆಪಿ ಯಾವುದೇ ಉತ್ತಮ ಕಾರ್ಯ ನಡೆಸಿದರೂ ಅದನ್ನು ವಿರೋಧಿಸುವ ಕಾಂಗ್ರೆಸ್, ಅದಕ್ಕೆ ಬೆಂಬಲ‌ ನೀಡಿದವರನ್ನೂ ವಿರೋಧಿಸುವ ಕೆಲಸ ಮಾಡುತ್ತದೆ. ಅವರಿಗೆ ದೇಶ, ದೇಶದ ಜನರಿಗಿಂತ ತಮ್ಮ ದ್ವೇಷ ರಾಜಕಾರಣವೇ ಹಿತ. ಭಯೋತ್ಪಾದಕರಿಗೆ, ಭಾರತ ವಿರೋಧಿ ರಾಷ್ಚ್ರಗಳನ್ನಾದರೂ ಕೆಲ ಕಾಂಗ್ರೆಸ್ ನಾಯಕರು ಒಪ್ಪಿಕೊಂಡಾರು, ಆದರೆ ಪ್ರಧಾನಿ ಮೋದಿ ಮತ್ತು ಅವರ ದೇಶಾಭಿವೃದ್ಧಿ ಕಾರ್ಯಗಳನ್ನು ಒಪ್ಪಿಕೊಳ್ಳಲಾರರು ಎನ್ನುವುದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇರೆ ಬೇಕಿಲ್ಲ.

Tags

Related Articles

Close