ಪ್ರಚಲಿತ

ವೀರಶೈವ ಶಾಸಕರನ್ನು ಕಾಂಗ್ರೆಸ್ ನಿಂದ ಕಿತ್ತೆಸೆಯಿರಿ ಎಂದ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟಗಾರ! ಕಾಂಗ್ರೆಸ್ ಸಖ್ಯ ಮುರಿಯುವರೇ ಹಿರಿಯ ನಾಯಕ?

ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಬೇಕೆಂಬ ಜಿದ್ದಿಗೆ ಬಿದ್ದಿದ್ದ ಕಾಂಗ್ರೆಸ್ ಪಕ್ಷ ರಾಜ್ಯದ ಅತಿದೊಡ್ಡ ಜಾತಿಯಾದ ಲಿಂಗಾಯತ ಜಾತಿಯ ಮೇಲೆ ಕಣ್ಣು ಹಾಕಿ ಅದನ್ನು ವಿಭಜನೆ ಮಾಡುವ ಹುನ್ನಾರವನ್ನು ನಡೆಸಿತ್ತು. ಇದರ ಫಲಶ್ರುತಿಯೇ ಕಾಂಗ್ರೆಸ್ ಪಕ್ಷ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೀನಾಯ ಸೋಲನ್ನು ಅನುಭವಿಸಿತ್ತು. ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕಾಂಗ್ರೆಸ್ ಪಕ್ಷದ ಘಟಾನುಘಟಿಗಳೇ ಸೋತು ಸುಣ್ಣವಾಗಿ ಹೋಗಿದ್ದಾರೆ. ನಂತರ ಸುಮ್ಮನಾಗಿದ್ದ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ಇದೀಗ ಮತ್ತೆ ಚಿಗುರಿದೆ.

ಇದೀಗ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಹಾಗೂ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಶ್ಯಾಮನೂರು ಶಿವಶಂಕರಪ್ಪ ಅವರನ್ನು ಟಾರ್ಗೆಟ್ ಮಾಡುತ್ತಿದೆ. ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ಹಿನ್ನೆಡೆಯಾಗಲು ಕಾರಣವೇ ಶ್ಯಾಮನೂರು ಶಿವಶಂಕರಪ್ಪ ಎಂದು ಆರೋಪ ಮಾಡಿದೆ. ಈ ಬಗ್ಗೆ ಇಂದು ಸುದ್ದಿ ವಾಹಿನಿಯೊಂದರಲ್ಲಿ ಮಾತನಾಡಿದ ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟಗಾರ ನಿವೃತ್ತ ಐಎಎಸ್ ಅಧಿಕಾರಿ ಜಮಾದಾರ್ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಹಾಗೂ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಶ್ಯಾಮನೂರು ಶಿವಶಂಕರಪ್ಪ ನವರ ವಿರುದ್ದ ಕೆಂಡಾಮಂಡಲವಾಗಿದ್ದಾರೆ.

Image result for shamanur shivashankarappa

“ಕಾಂಗ್ರೆಸ್ ಪಕ್ಷದ ಮುಖಂಡ ಹಾಗೂ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಶ್ಯಾಮನೂರು ಶಿವಶಂಕರಪ್ಪ ನವರು ನಮ್ಮ ಹೋರಾಟಕ್ಕೆ ಅಡ್ಡಿಯುಂಟುಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಎಲ್ಲಾ ಲಿಂಗಾಯತ ನಾಯಕರು ನಮ್ಮ ಹೋರಾಟಕ್ಕೆ ಬೆಂಬಲವನ್ನು ನೀಡುತ್ತಿದ್ದಾರೆ. ಆದರೆ ಶ್ಯಾಮನೂರು ಶಿವಶಂಕರಪ್ಪ ನವರು ಹೋರಾಟದ ಧಿಕ್ಕುತಪ್ಪಿಸುತ್ತಿದ್ದಾರೆ. ನಮ್ಮಲ್ಲೇ ಒಡಕು ಮೂಡುವಂತೆ ಮಾಡುತ್ತಿದ್ದಾರೆ. ಈ ಕೂಡಲೇ ಅವರನ್ನು ಕಾಂಗ್ರೆಸ್ ಪಕ್ಷದಿಂದ ಕಿತ್ತೆಸೆಯಬೇಕು. ಕಾಂಗ್ರೆಸ್ ಪಕ್ಷಕ್ಕೆ ಅವರು ಸೂಕ್ತ ಅಲ್ಲ” ಮಾತನ್ನು ಜಮಾದಾರ್ ಹೇಳಿದ್ದಾರೆ.

ಇದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ಷೇಪಗಳನ್ನು ಹುಟ್ಟುಹಾಕುವಂತೆ ಮಾಡಿದೆ. “ಅವರ ಕೆಲಸ ಧರ್ಮದ ಬಗೆಗಿನ ಹೋರಾಟ. ಅದನ್ನು ಸರಿಯಾಗಿ ಮಾಡಲಿ. ಅದನ್ನು ಬಿಟ್ಟು ರಾಜಕೀಯ ದ ಮಾತ್ಯಾಕೆ? ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ಮಾಡುವುದು ಕೇವಲ ಕಾಂಗ್ರೆಸ್ ಪಕ್ಷ ಮಾತ್ರ ಎಂಬ ಭಾವನೆಯಿಂದ ಹೇಳಿದರೂ ಇದು ರಾಜಕೀಯೇತರರಾಗಿ ಇರುವವರಿಗೆ ಸಖ್ಯವಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೆಲ ಕಾಂಗ್ರೆಸ್ ನಾಯಕರೂ ಇದಕ್ಗೆ ಸೂಚಿಸಿಲ್ಲ.

ಒಟ್ಟಾರೆ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟಗಾರ ಜಮಾದಾರ್ ಹೇಳಿಕೆ ಕಾಂಗ್ರೆಸ್ ಪಾಳಯದಲ್ಲಿ ಸ್ಪೋಟದಂತೆ ಸಂಭವಿಸಿದ್ದು ಶಮನವಾಗುವ ಲಕ್ಷಗಳು ಕಾಣಿಸುತ್ತಿಲ್ಲ. ಸಚಿವರ ಸರ್ಕಸ್ ಮುಗಿದಿಲ್ಲ. ಅದರ ಮಧ್ಯೆಯೇ ಇಂತಹಾ ಒಂದು ಶಾಕ್ ಎದುರಾಗಿದೆ…

– ಏಕಲವ್ಯ

Tags

Related Articles

Close