ಅಂಕಣಪ್ರಚಲಿತ

ಬಿಜೆಪಿ ಅಧಿಕಾರಕ್ಕೆ ಬರಲು ಬಿಡಬೇಡಿ, “ಮುಸ್ಲಿಮರು ಕಾಂಗ್ರೆಸ್ಸಿಗೆ” ಮತ ನೀಡಿ ಎಂದು ಗುಲಾಮ್ ನಬಿ ಆಜಾದ್ ಕರೆ ನೀಡ ಬಹುದಾದರೆ “ಹಿಂದೂಗಳು ಬಿಜೆಪಿಗೆ” ಮತ ನೀಡಿ ಎಂದು ಏಕೆ ಹೇಳಬಾರದು?

ಅಧಿಕಾರಕ್ಕೆ ಬರಲು ಕಾಂಗ್ರೆಸ್ ಏನು ಬೇಕಾದರೂ ಮಾಡಬಲ್ಲದು ಎನ್ನುವುದನ್ನು ಕಳೆದ ಎಪ್ಪತ್ತು ವರ್ಷಗಳಿಂದಲೂ ನೋಡುತ್ತಿದ್ದೇವೆ. ನೀಚತನದ ಪರಮಾವಧಿಯನ್ನು ತೋರ್ಪಡಿಸುವ ಕಾಂಗ್ರೆಸ್ ಅಧಿಕಾರದ ದಾಹ ಎಷ್ಟಿದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಎಪ್ಪತ್ತು ವರ್ಷಗಳ ಹಿಂದೆ ಧರ್ಮದ ಆಧಾರದ ಮೇಲೆ ದೇಶವನ್ನೆ ಎರಡು ತುಂಡು ಮಾಡಿದ ಕಾಂಗ್ರೆಸ್ ಕರ್ನಾಟಕದ ಗದ್ದುಗೆ ಏರಲು ಮತ್ತೊಮ್ಮೆ ಧರ್ಮ ವಿಭಾಜಿಸುವ ಕೆಲಸ ಮಾಡಿರುವುದು ಗೊತ್ತಿರುವ ವಿಚಾರ. ಇಡಿಯ ದೇಶದ ಭೂಪಟದಿಂದಲೇ ನಿರ್ನಾಮವಾಗಿರುವ ಕಾಂಗ್ರೆಸಿಗೆ ಈಗ ಕರ್ನಾಟಕವೆ ಗತಿ. ಇಲ್ಲಿಯೂ ಕಾಂಗ್ರೆಸ್ ಸೋತರೆ ಮುಂದೆ ದೇಶದ ಚುಕ್ಕಾಣಿ ಹಿಡಿಯುವುದು ಕನಸಿನ ಮಾತು.

ಕರ್ನಾಟಕವನ್ನು ಶತಾಯಗತಾಯ ಉಳಿಸಿಕೊಳ್ಳಲು ಪ್ರಯತ್ನ ಪಡುತ್ತಿರುವ ಕಾಂಗ್ರೆಸ್ ಮತ್ತೊಮ್ಮೆ ತನ್ನ ವಿಭಾಜನಕಾರಿ ಬುದ್ದಿಯನ್ನು ತೋರಿಸಿದೆ. ರಾಜ್ಯಸಭೆಯಲ್ಲಿ ಪ್ರತಿಪಕ್ಷ ನಾಯಕ ಮತ್ತು ಹಿರಿಯ ಕಾಂಗ್ರೆಸ್ ಮುಖಂಡ ಗುಲಾಮ್ ನಬಿ ಆಜಾದ್ ಕರ್ನಾಟಕ ವಿಧಾನಸಭಾ ಚುನಾವಣೆ ಫಲಿತಾಂಶಗಳು 2019 ಲೋಕಸಭಾ ಚುನಾವಣೆಯ ಫಲಿತಾಂಶದ ಸೂಚಕ ಎಂದು ಹೇಳುತ್ತಾ, “ಯಾವುದೇ ಕಾರಣಕ್ಕೂ ಬಿಜೆಪಿ ಅಧಿಕಾರಕ್ಕೆ ಬರಲು ಬಿಡಬಾರದು. ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಮುಸ್ಲಿಮರು ತಮ್ಮ ಮತಗಳನ್ನು ಚಲಾಯಿಸಬೇಕು ” ಎಂದು ಕರೆ ಕೊಟ್ಟಿದ್ದಾರೆ. ಧರ್ಮದ ಆಧಾರದ ಮೇಲೆ ಮತ ಕೇಳುವುದು ಚುನಾವಣಾ ಸಂಹಿತೆಯ ಉಲ್ಲಂಘನೆಯಾಗುವುದಿಲ್ಲವೆ? ಮುಸ್ಲಿಮರು ಯಾರಿಗೆ ಮತ ನೀಡಬೇಕೆನ್ನುವುದು ಅವರ ವೈಯಕ್ತಿಕ ವಿಚಾರ. ಭಾಜಪಕ್ಕೆ ಮತ ನೀಡಬೇಡಿ ನಮಗೆ ನೀಡಿ ಎನ್ನಲು ಗುಲಾಮ್ ನಬಿ ಯಾರು?

ಕಳೆದ ಎಪ್ಪತ್ತು ವರ್ಷಗಳಲ್ಲಿ ಕಾಂಗ್ರೆಸ್ ಮುಸ್ಲಿಮರಿಗೆ ಕೊಟ್ಟದ್ದಾದರೂ ಏನು? ಕನಿಷ್ಠ ‘ತ್ರಿವಳಿ ತಲಾಖ್’ ಅನ್ನೂ ನಿಷೇಧಿಸಲಾಗದ ಕಾಂಗ್ರೆಸಿಗೆ ಮುಸ್ಲಿಮರ ಬಳಿ ಮತ ಕೇಳುವ ಹಕ್ಕಿದೆಯೆ? ಕಾಂಗ್ರೆಸಿನ ನಾಯಕ ಸಂಜಯ್ ಗಾಂಧಿ ತುರ್ಕಮಾನ್ ಗೇಟಿನಲ್ಲಿ ನಿರುಪದ್ರವಿ ಮಸ್ಲಿಮರ ಮೇಲೆ ಬುಲ್ಡೋಜ಼ರ್ ಚಲಾಯಿಸಿ ಮಾರಣಹೋಮ ಮಾಡಿದ ಕಥೆ ಮುಸ್ಲಿಮರಿಗೆ ಗೊತ್ತಿಲ್ಲವೆ? ತನ್ನ ವೋಟ್ ಬ್ಯಾಂಕ್ ರಾಜನೀತಿಗಾಗಿ “ಬಿಟ್ಟಿ ಭಾಗ್ಯ”ಗಳನ್ನು ಕೊಟ್ಟದ್ದಲ್ಲದೆ ಮುಸ್ಲಿಮರ ಅಮೂಲಾಗ್ರ ಬೆಳವಣಿಗೆಗೆ ಕಾಂಗ್ರೆಸ್ ಈ ವರೆಗೆ ತೆಗೆದುಕೊಂಡ ಯೋಜನೆಗಳೇನು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕೊಡುವವರು ಯಾರು?

ಗುಲ್ಬರ್ಗಾ ದಕ್ಷಿಣ ವಿಧಾಸಭಾ ಕ್ಷೇತ್ರದಲ್ಲಿ ಚುನಾವಣಾ ಕ್ಯಾನವಾಸಿನಲ್ಲಿ ಮಾತನಾಡುತ್ತಾ “ನೀವು ಹಿಂದೂಗಳನ್ನು ಟೀಕಿಸಿದರೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಹಿಂದೂಗಳನ್ನು ಟೀಕಿಸುವ ಬದಲು, ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ನಿಮ್ಮ ಮತವನ್ನು ಚಲಾಯಿಸಿ” ಎಂದು ಮುಸ್ಲಿಮರಿಗೆ ಕರೆ ಕೊಟ್ಟರು ಆಜಾದ್. ಹಾಗಾದರೆ ಭಾಜಪ ನಾಯಕರು ಹಿಂದೂಗಳನ್ನು ಉದ್ದೇಶಿಸಿ ” ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹಿಂದೂಗಳೆ ನಿಮ್ಮ ಮಾರಣ ಹೋಮ ನಡೆಯುತ್ತದೆ, ಅಲ್ಪ ಸಂಖ್ಯಾತರ ಓಲೈಕೆ ನಡೆಯುತ್ತದೆ, ಆದ್ದರಿಂದ ಹಿಂದೂಗಳು ಸಂಘಟಿತರಾಗಿ ನಿಮ್ಮ ಮತವನ್ನು ಭಾಜಪಕ್ಕೆ ನೀಡಿ” ಎಂದು ಮತ ಯಾಚನೆ ಮಾಡಿದರೆ ತಪ್ಪೇನು? ಒಂದು ವೇಳೆ ಭಾಜಪದ ರಾಜಕಾರಣಿ ಹೀಗೆ ಮತ ಯಾಚನೆ ಮಾಡಿದ್ದರೆ “ಜಾತ್ಯಾತೀತ ಬ್ರಿಗೇಡ್” ಇಷ್ಟು ಹೊತ್ತಿಗೆ ಲೈಟ್, ಅಕ್ಷನ್, ಕ್ಯಾಮರಾ ಮೋಡಿಗೆ ಬಂದು ದೇಶದಾದ್ಯಂತ “ಅಯ್ಯಯ್ಯಪ್ಪೋ ಭಾಜಪದವರು ದೇಶ ಒಡೆಯುತ್ತಿದ್ದಾರೆ” ಎಂದು ಎದೆ ಒಡೆದುಕೊಂಡು ಅಳುತ್ತಿದ್ದರು!! ಹೇಳಿದ್ದು ಕಾಂಗ್ರೆಸಿನ ರಾಜಕಾರಣಿ ಅಲ್ಲವೆ ಹಾಗೆ ಗಪ್ ಚುಪ್! “ಸೂಟ್ ಕೇಸ್” ತಲುಪುವ ಜಾಗಕ್ಕೆ ತಲುಪಿದೆ ಬಿಡಿ.

ಒಬ್ಬ ರಾಜಕಾರಣಿ ಗದ್ದುಗೆ ಏರಲು ಸಮಾಜದ ಎಲ್ಲಾ ಸಮುದಾಯದವರ ಮತಗಳು ಬೇಕಾಗುತ್ತಾದೆ. ಕಾಂಗ್ರೆಸ್ ಕೇವಲ ಮುಸ್ಲಿಮರಿಂದಾಗಿ ಮತ್ತು ಭಾಜಪ ಕೇವಲ ಹಿಂದೂಗಳಿಂದಾಗಿ ಅಧಿಕಾರಕ್ಕೆ ಬಂದದ್ದಲ್ಲ. ಭಾಜಪವನ್ನು “ಕೋಮುವಾದಿ” ಪಕ್ಷ ಎಂದು ಜರೆದಿರುವ ಗುಲಾಂ ನಬಿಗೆ ತಾನು ಒಂದು “ಕೋಮಿನ” ಮತದಾರರಲ್ಲಿ ಮತಯಾಚಿಸುತ್ತಿದ್ದೇನೆ ಎನ್ನುವ ಪರಿವೆ ಇಲ್ಲವೆ? ಇಂಥಹ ಕೋಮುವಾದಿಗಳ ವಿರುದ್ದ ಮೊಕದ್ದಮೆ ಹೂಡಲಾಗುವುದಿಲ್ಲವೆ? 60 ದಶಲಕ್ಷ ಜನಸಂಖ್ಯೆಯ ಹಿಂದೂ-ಬಹುಮತದ ರಾಜ್ಯದಲ್ಲಿ 13 ಪ್ರತಿಶತದಷ್ಟಿರುವ ಮುಸ್ಲಿಮರು ಒಗ್ಗಟ್ಟಾಗಿ ಮತಚಲಾಯಿಸಿದರೆ ಚುನಾವಣೆಯಲ್ಲಿ ತಾವು ಗೆಲ್ಲಬಹುದು ಎನ್ನವ ಲೆಕ್ಕಾಚಾರ ಕಾಂಗ್ರೆಸಿನದು. ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ಮುಸ್ಲಿಂ ಸಮುದಾಯದ ಜನಸಂಖ್ಯೆ 20 ಪ್ರತಿಶತದಷ್ಟು ಇದೆ ಅಂತಹ ಕ್ಷೇತ್ರಗಳನ್ನು ಗುರಿಯಾಗಿಸಿಕೊಂಡು ಇಂತಹ ಹೇಳಿಕೆ ನೀಡುತ್ತಿದೆ ಕಾಂಗ್ರೆಸ್.

ಮಾನ್ಯ ಸರ್ವೋಚ್ಚ ನ್ಯಾಯಲಯ ಮತ್ತು ಚುನಾವಣಾ ಆಯೋಗವು ರಾಜಕೀಯ ಪಕ್ಷಗಳು ಧರ್ಮದ ಹೆಸರಿನಲ್ಲಿ ಮತ ಯಾಚನೆ ಮಾಡುವುದನ್ನು ಕಾನೂನು ಬಾಹಿರ ಎಂದು ಉಲ್ಲೇಖಿಸಿವೆ. ಆದರೂ ಕಾಂಗ್ರೆಸ್ ಕಾನೂನು ಬಾಹಿರವಾಗಿ ಧರ್ಮದ ಆಧಾರದಲ್ಲಿ ಮತ ಯಾಚಿಸುತ್ತಿದೆ. ಈಗ ಹೇಳಿ ಲೋಕತಂತ್ರದ ಕಗ್ಗೊಲೆ ನಡೆಸುತ್ತಿರುವುದು ಯಾರು? ಕಾಂಗ್ರೆಸ್ ಮುಸ್ಲಿಮರಲ್ಲಿ ಭಾಜಪಕ್ಕೆ ಮತ ನೀಡಬೇಡಿ ಎಂದು ಹೇಳಿದ ಮೇಲೂ ಹಿಂದೂಗಳು ಕಾಂಗ್ರೆಸಿಗೆ ಮತ ನೀಡುವಿರಾ? ಇಲ್ಲ ಧರ್ಮದ ಆಧಾರದ ಮೇಲೆ ದೇಶ ಒಡೆಯುವರಿಗೆ ಬುದ್ದಿ ಕಲಿಸುವಿರಾ? “ಸಬ್ ಕಾ ಸಾಥ್ ಸಬ್ ಕಾ ವಿಕಾಸ್” ಸಾಧಿಸಿ ತೋರಿಸಿದವರಿಗೆ ಮತ ನೀಡುವಿರಾ?

-ಶಾರ್ವರಿ

Source
zeenews
Tags

Related Articles

Close