ಪ್ರಚಲಿತ

ಪ್ರಧಾನಿಯವರನ್ನು ವಿರೋಧಿಸುವ ಭರದಲ್ಲಿ ಭಾರತವನ್ನೇ ವಿರೋಧಿಸಲಾರಂಭಿಸಿದೆ ಕಾಂಗ್ರೆಸ್: ಸ್ವಪಕ್ಷದ ಬಗ್ಗೆ ಕಿಡಿ ಕಾರಿದ ವ್ಯಕ್ತಿ ಯಾರು ಗೊತ್ತೇ?

ಕಾಂಗ್ರೆಸ್ ಪಕ್ಷ ಹಿಂದೂಗಳ ವಿರೋಧಿ ಎಂಬುದನ್ನು ಕಾಂಗ್ರೆಸ್ ನಾಯಕರೇ ಹೇಳುವ ಮೂಲಕ ಸಾಬೀತು ಮಾಡುತ್ತಿದ್ದಾರೆ.

ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷ ಚುನಾವಣಾ ಪ್ರಚಾರ ಸಭೆಯಲ್ಲಿ ತಮ್ಮನ್ನು ಸೇರಿಸಿಕೊಳ್ಳದೇ ಇರುವುದಕ್ಕೆ ಕಾಂಗ್ರೆಸ್ ಪಕ್ಷದ ಹಿಂದೂ ವಿರೋಧಿ ನಿಲುವು ಸಹ ಕಾರಣ ಎಂದು ಕಾಂಗ್ರೆಸ್‌ನ ನಾಯಕ ಪ್ರಮೋದ್ ಕೃಷ್ಣಂ ಅವರು ಸ್ವ ಪಕ್ಷದ ವಿರುದ್ಧವೇ ಕಿಡಿ ಕಾರಿದ್ದಾರೆ.

ಮಧ್ಯಪ್ರದೇಶದ ಕಳೆದ ಎರಡು ಚುನಾವಣೆಗಳು ಅಂದರೆ 2014 ಮತ್ತು 2019 ರ ಲೋಕಸಭಾ ಚುನಾವಣೆಯಲ್ಲಿ ಪ್ರಮೋದ್ ಕೃಷ್ಣಂ ಅವರು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದರು. ಆದರೆ ಅವರನ್ನು ಈ ಬಾರಿ ಚುನಾವಣಾ ಪ್ರಚಾರದಿಂದಲೇ ಪಕ್ಷ ದೂರವಿರಿಸಿದೆ.

ಪಕ್ಷದ ಈ ವರ್ತನೆಯಿಂದ ಕುಪಿತರಾಗಿರುವ ಅವರು, ಕಾಂಗ್ರೆಸ್ ವಿರುದ್ಧವೇ ವಾಗ್ದಾಳಿ ನಡೆಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಭಗವಾನ್ ರಾಮನನ್ನು ದ್ವೇಷಿಸುತ್ತದೆ. ಶ್ರೀರಾಮನನ್ನು ದ್ವೇಷ ಮಾಡುವವರು ಹಿಂದೂಗಳಾಗಲು ಸಾಧ್ಯವಿಲ್ಲ. ಕಾಂಗ್ರೆಸ್ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗುವುದನ್ನು ತಡೆಯಲು ಪ್ರಯತ್ನ ನಡೆಸಿತ್ತು. ಈ ವಿಷಯ ಇಡೀ ಜಗತ್ತಿಗೆ ತಿಳಿದಿದೆ. ಯಾರು ರಾಮನನ್ನು ದ್ವೇಷ ಮಾಡುತ್ತಾರೆ, ಯಾರು ದೇವರ ಮೇಲೆ ನಿಷ್ಠೆ ಹೊಂದಿದ್ದಾರೆ ಎನ್ನುವ ಸತ್ಯ ಈಗ ಎಲ್ಲರಿಗೂ ಅರಿವಾಗಿದೆ. ಕಾಂಗ್ರೆಸ್ ಪಕ್ಷದಲ್ಲಿ ರಾಮ ಮತ್ತು ರಾಮ ಮಂದಿರ ಈ ಎರಡನ್ನೂ ದ್ವೇಷಿಸುವ ಜನರು ಇರುವುದು ಎಲ್ಲರಿಗೂ ತಿಳಿದ ಸಂಗತಿ ಎಂದು ಅವರು ಕಾಂಗ್ರೆಸ್ ವಿರುದ್ಧ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.

ಹಾಗೆಯೇ ಇಂಡಿಯಾ ಒಕ್ಕೂಟದ ಪ್ರಮುಖ ಗುರಿ ಪ್ರಧಾನಿ ಮೋದಿ ಅವರನ್ನು ಸೋಲಿಸುವುದು, ಬಿಜೆಪಿ ಸರ್ಕಾರವನ್ನು ಕೆಳಗಿಳಿಸುವುದಾಗಿದೆ. ವಿರೋಧ ಪಕ್ಷಗಳು ಪ್ರಧಾನಿ ಮೋದಿ ಅವರನ್ನು ದ್ವೇಷಿಸುವ ಭರದಲ್ಲಿ ದೇಶವನ್ನೇ ದ್ವೇಷಿಸಲು ಆರಂಭಿಸಿವೆ. ತಾವು ದೇಶವನ್ನು ವಿರೋಧಿ ಸುತ್ತಿ ದಿ ದೇ ವೆ ಎಂಬ ಸತ್ಯವನ್ನು ಸಹ ವಿಪಕ್ಷಗಳು ಮರೆತಿರುವುದಾಗಿ ಅವರು ನುಡಿದಿದ್ದಾರೆ.

ಪ್ರಧಾನಿ ಅವರು ಹೊಸ ಸಂಸತ್ತು ಉದ್ಘಾಟಿಸಿದರೆ ವಿರೋಧಿಗಳು ಅದನ್ನು ವಿರೋಧಿಸುತ್ತಾರೆ. ರೈಲು ಗಳಿಗೆ ವಂದೇ ಭಾರತ್ ಹೆಸರಿಟ್ಟರೆ, ವಿಪಕ್ಷಗಳು ಆ ರೈಲಿನ ವಿರುದ್ಧವೂ ತಮ್ಮ ಆಕ್ರೋಶ ಹೊರಹಾಕುತ್ತಾರೆ. ಪ್ರಧಾನಿ ಅವರನ್ನು ಟೀಕೆ ಮಾಡುವುದು ತಪ್ಪಲ್ಲ. ಆದರೆ ಅವರನ್ನು ದ್ವೇಷಿಸುವುದು ತಪ್ಪು ಎಂದು ಪ್ರಮೋದ್ ಕೃಷ್ಣಂ ತಮ್ಮ ಪಕ್ಷದ ಹಣೆಬರಹವನ್ನು ಜಗಜ್ಜಾಹೀರು ಮಾಡಿದ್ದಾರೆ. ಒಟ್ಟಿನಲ್ಲಿ ಎಲ್ಲವನ್ನೂ ಮರೆತು ವಿರೋಧ ಪಕ್ಷಗಳು ಗೊಂದಲದ ಗೂಡಾಗಿರುವುದಾಗಿಯೂ ಅವರು ಕಾಂಗ್ರೆಸಿಗರನ್ನು ವ್ಯಂಗ್ಯವಾಡಿದ್ದಾರೆ.

ಇನ್ನು ಇದೇ ವಿಚಾರಕ್ಕೆ ಸಂಬಂಧಿಸಿದ ಹಾಗೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ, ಕಾಂಗ್ಕೆಸಿಗರನ್ನು ಕಟು ಶಬ್ದ ಗಳಿಂದ ಟೀಕಿಸಿದ್ದಾರೆ. ಕಾಂಗ್ರೆಸ್ ಪಕ್ಷದವರು ಹನುಮ ಭಕ್ತರು ಎಲ್ಲಾ ದೇಗುಲಗಳಿಗೆ ಭೇಟಿ ನೀಡುತ್ತಾರೆ. ಆದರೆ ರಾಮನ ಜನ್ಮಭೂಮಿಗೆ ಮಾತ್ರ ಅವರು ಭೇಟಿ ನೀಡುವುದಿಲ್ಲ. ಪ್ರಮೋದ ಕೃಷ್ಣಂ ಅವರು ಶ್ರೀರಾಮನ ಪರ ಮಾತನಾಡಿದ ಕಾರಣಕ್ಕೆ ಕಾಂಗ್ರೆಸ್ ಅವರನ್ನು ನಿಂದಿಸುತ್ತಿದೆ, ದೂರವಿಟ್ಟಿದೆ ಎಂದು ತಿಳಿಸಿದ್ದಾರೆ.

Tags

Related Articles

Close