ಪ್ರಚಲಿತ

ದೆಹಲಿಗೆ ಹೋಗಿ ಬಿಜೆಪಿ ಬಾಗಿಲು ತಟ್ಟಿದ ಕಾಂಗ್ರೆಸ್ ಸಚಿವರು.! ಬಾಗಿಲು ತೆರೆದಿತೇ ಬಿಜೆಪಿ.?!

ರಾಜಕೀಯ ಬದಲಾವಣೆ ಯಾವ ರೀತಿಯಲ್ಲೂ ಬದಲಾಗಬಹುದು ಎಂಬುವುದಕ್ಕೆ ಸದ್ಯ ಕರ್ನಾಟಕದಲ್ಲಿ ನಡೆಯುತ್ತಿರುವ ಮಹತ್ತರವಾದ ಬದಲಾವಣೆಗಳೇ ಸಾಕ್ಷಿ. ಯಾಕೆಂದರೆ ಸಿದ್ದರಾಮಯ್ಯನವರ ಆಡಳಿತಕ್ಕೆ ಬೇಸತ್ತ ರಾಜ್ಯದ ಜನತೆ ಹೊಸ ಆಡಳಿತಕ್ಕೆ ಹಾತೊರೆಯುತ್ತಿದ್ದರೆ, ಇತ್ತ ಸ್ವತಃ ಕಾಂಗ್ರೆಸ್ ಸಚಿವರುಗಳೇ ಮೋದಿ ಆಡಳಿತಕ್ಕೆ ಬೆಂಬಲ ಸೂಚಿಸಿ ಬಿಜೆಪಿ ಸೇರಲು ಮುಂದಾಗಿದ್ದಾರೆ. ಚುನಾವಣೆ ಸಮೀಪಿಸುತ್ತಿದ್ದಂತೆ ಪಕ್ಷಾಂತರದ ಬಿಸಿ ಹೆಚ್ಚಾಗಿದ್ದು , ಈಗಾಗಲೇ ಕಾಂಗ್ರೆಸ್ ನ ಹಲವಾರು ಮುಖಂಡರು ಮುಖಂಡರು ಬಿಜೆಪಿ ಸೇರ್ಪಡೆಯಾಗಿದ್ದು, ಇದೀಗ ಮತ್ತೆ ಕೆಲ ಸಚಿವರು ಬಿಜೆಪಿ ಸೇರಲು ತುದಿಕಾಲಲ್ಲಿ ನಿಂತು ಕಾಯುತ್ತಿದ್ದಾರೆ.!

ಸಿದ್ದರಾಮಯ್ಯನವರ ಪುಷ್ಟೀಕರಣದ ಆಡಳಿತಕ್ಕೆ ಬೇಸತ್ತ ಕಾಂಗ್ರೆಸ್ ನಾಯಕರು ಪಕ್ಷ ತೊರೆದು ಬೇರೆ ಪಕ್ಷಗಳ ಕಡೆ ಒಲವು ತೋರಿಸುತ್ತಿದ್ದು, ಸಿದ್ದರಾಮಯ್ಯನವರಿಗೆ ಭಾರೀ ತಲೆನೋವಾಗಿದೆ. ಚುನಾವಣಾ ಹೊಸ್ತಿಲಲ್ಲೇ ಈ ರೀತಿಯ ಬದಲಾವಣೆ ಆಗುತ್ತಿರುವುದು ಕಾಂಗ್ರೆಸ್ ಗೆ ಭಾರೀ ಹಿನ್ನಡೆಯಾಗುವ ಮುನ್ಸೂಚನೆ ದೊರಕಿದೆ.

ರಾಜ್ಯ ಸಚಿವರು ಬಿಜೆಪಿಗೆ..!

ರಾಜ್ಯ ರಾಜಕಾರಣದಲ್ಲಿ ಭಾರೀ ಬದಲಾವಣೆಗಳು ಕಂಡುಬರುತ್ತಿದ್ದು, ಇದೀಗ ರಾಜ್ಯ ಕಾಂಗ್ರೆಸ್ ನ ವಸತಿ ಸಚಿವರು ಬಿಜೆಪಿ ಸೇರುವ ಮುನ್ಸೂಚನೆ ನೀಡಿದ್ದಾರೆ. ಈಗಾಗಲೇ ಬಿಜೆಪಿ ಚಾಣಾಕ್ಯ ಅಮಿತ್ ಷಾ ಕರ್ನಾಟಕವನ್ನು ಗೆಲ್ಲಲು ಎಲ್ಲಾ ರೀತಿಯ ತಂತ್ರ ರೂಪಿಸಿದ್ದು, ಕಾಂಗ್ರೆಸ್ ನಿಂದ ಬಿಜೆಪಿಗೆ ಸೇರಲು ಒಲವು ತೋರಿಸುವವರಿಗೆ ಗಾಳ ಹಾಕಲು ಮುಂದಾಗಿದ್ದಾರೆ. ಕರ್ನಾಟಕದಲ್ಲಿ ಆಡಳಿತ ವಿರೋಧಿ ಅಲೆ ಎದ್ದು ಕಾಣುತ್ತಿರುವುದರಿಂದ ಕಾಂಗ್ರೆಸ್ ಗೆ ಸೋಲಿನ ಭೀತಿ ಹೆಚ್ಚಾಗಿದೆ. ಆದ್ದರಿಂದಲೇ ಇದೀಗ ಕಾಂಗ್ರೆಸ್ ನ ಪ್ರಭಾವಿ ನಾಯಕರುಗಳು ಪಕ್ಷ ತೊರೆಯುತ್ತಿದ್ದು, ಬಿಜೆಪಿ ಪಾಲಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ.!

ರಾಜ್ಯ ವಸತಿ ಸಚಿವರಾದ ಎಂ ಕೃಷ್ಣಪ್ಪ ಹಾಗೂ ಅವರ ಪುತ್ರ ಶಾಸಕ ಪ್ರಿಯಕೃಷ್ಣ ಸದ್ಯದಲ್ಲೇ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂಬ ಮಾತು ಈ ಹಿಂದೆಯೇ ಬಹಳ ಜೋರಾಗಿ ಕೇಳಿಬರುತ್ತಿತ್ತು. ಆದರೆ ಇದಕ್ಕೆ ಪೂರಕವಾಗಿ ನಡೆದುಕೊಂಡ ಸಚಿವರು, ಇತ್ತೀಚೆಗೆ ಕರ್ನಾಟಕಕ್ಕೆ ರಾಹುಲ್ ಗಾಂಧಿ ಆಗಮಿಸಿದ ವೇಳೆಯಲ್ಲೂ ಎಲ್ಲೂ ಕಾಣಸಿಕ್ಕಿರಲಿಲ್ಲ. ರಾಜ್ಯ ಸರ್ಕಾರದ ಸಚಿವರಾಗಿದ್ದರೂ ಪಕ್ಷದ ಅಧ್ಯಕ್ಷ ನ ಆಗಮನದ ವೇಳೆ ಎಲ್ಲಾ ಕಾರ್ಯಕ್ರಮಗಳಿಂದಲೂ ದೂರ ಸರಿದ ಸಚಿವರ ಈ ನಡೆ ಕಾಂಗ್ರೆಸ್ ವಿರುದ್ಧದ ಅಸಮಧಾನಕ್ಕೆ ಮತ್ತಷ್ಟು ಬಲ ಕಂಡುಕೊಂಡಿದೆ.

ಬಿಜೆಪಿ ಹೈಕಮಾಂಡ್ ಜೊತೆ ಕರಾವಳಿ ಪ್ರಭಾವಿ ಸಚಿವನ ಮಾತುಕತೆ..!

ಕಾಂಗ್ರೆಸ್ ಪಕ್ಷ ತೊರೆಯುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕರಾವಳಿಯ ಕಾಂಗ್ರೆಸ್ ನ ಪ್ರಭಾವಿ ಸಚಿವ , ರಾಜ್ಯ ಯುವಜನಾ ಕ್ರೀಡಾ ಸಚಿವರಾದ ಪ್ರಮೋದ್ ಮಧ್ವರಾಜ್ ಈ ಹಿಂದಿನಿಂದಲೂ ಬಿಜೆಪಿ ಸೇರುತ್ತಾರೆ ಎಂಬ ಮಾತು ಭಾರೀ ಸದ್ದು ಮಾಡಿತ್ತು. ಆದರೆ ತಾನು ಕಾಂಗ್ರೆಸ್ ಬಿಟ್ಟು ಬೇರೆ ಪಕ್ಷ ಸೇರುವುದಿಲ್ಲ ಎಂದಿದ್ದ ಮಧ್ವರಾಜ್ ಎಲ್ಲಾ ಊಹಾಪೋಹಗಳಿಗೂ ತೆರೆ ಎಳೆದಿದ್ದರು. ಆದರೆ ಇದೀಗ ಯಾರಿಗೂ ತಿಳಿಯದಂತೆ ನೇರವಾಗಿ ದೆಹಲಿಯ ಬಿಜೆಪಿ ಹೈಕಮಾಂಡ್ ಜೊತೆ ಮಾತನಾಡಿದ್ದಾರೆ ಎಂಬ ಮಾತು ಹೊರಬೀಳುತ್ತಿದ್ದಂತೆ , ಮಧ್ವರಾಜ್ ಬಿಜೆಪಿ ಸೇರ್ಪಡೆಯಾಗುವ ವಿಚಾರಕ್ಕೆ ಮತ್ತಷ್ಟು ಬಲ ಸಿಕ್ಕಿದೆ. ರಾಜ್ಯ ಸರಕಾರದ ಸಚಿವರಾಗಿದ್ದರೂ ಕೂಡ ಚುನಾವಣಾ ಹೊಸ್ತಿಲಲ್ಲೇ ಈ ರೀತಿ ನಡೆದುಕೊಂಡಿದ್ದು ಭಾರೀ ಕುತೂಹಲ ಕೆರಳಿಸಿದೆ.!

ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯದಲ್ಲಿ ಪಕ್ಷಾಂತರ ಪರ್ವ ಬಹಳ ಜೋರಾಗಿ ನಡೆಯುತ್ತಿದ್ದು , ಕಾಂಗ್ರೆಸ್ ನ ಮುಖಂಡರ ನಡೆ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಈಗಾಗಲೇ ಆಡಳಿತದಲ್ಲಿ ಇರುವ ಕಾಂಗ್ರೆಸ್ ನ ಹಲವಾರು ಸಚಿವರು, ಶಾಸಕರು ಬಿಜೆಪಿ ಪಾಲಾಗಿದ್ದು , ಇನ್ನಷ್ಟು ನಾಯಕರು ಪಕ್ಷ ತೊರೆಯಲು ಸಿದ್ದರಾಗಿದ್ದಾರೆ , ಈ ವಿಚಾರದಿಂದ ಸಿದ್ದರಾಮಯ್ಯನವರು ದಂಗಾಗಿರುವುದಂತೂ ಸತ್ಯ.!

source: public tv

–ಅರ್ಜುನ್

Tags

Related Articles

Close