ಪ್ರಚಲಿತ

ದೇಶ ವಿರೋಧಿಗಳಿಗೆ ಮಣೆ ಹಾಕುತ್ತಿರುವ ಕಾಂಗ್ರೆಸ್

ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ತಾನು ಪಾಕ್ ಪ್ರೇಮಿ ಎಂಬುದನ್ನು ಸಾಬೀತು ಮಾಡಿದೆ. ಭಾರತದ ಆಜನ್ಮ ಶತ್ರು ಪಾಕಿಸ್ತಾನ ನಮ್ಮ ದೇಶಕ್ಕೆ ನೀಡುವ ಕಾಟ, ಉಪಟಳ ಅಷ್ಟಿಷ್ಟಲ್ಲ. ಅಂತಹ ರಾಷ್ಟ್ರದ ಪರವಾಗಿ ಮಾತನಾಡುವ, ಪಾಕ್ ಪರ ನಿಲುವು ಹೊಂದಿರುವ ಲೇಖಕಿಯನ್ನು ತನ್ನ ಸಂವಿಧಾನ ಸಮಾವೇಶಕ್ಕೆ ಆಹ್ವಾನಿಸಿ, ವಿರೋಧ ಪಕ್ಷಗಳ ಮತ್ತು ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ.

ಭಾರತ‌ ವಿರೋಧಿ ಮನಸ್ಥಿತಿ ಹೊಂದಿರುವ ಲಂಡನ್‌ನ ಪ್ರೊ‌. ನಿತಾಶ ಕೌಲ್ ಎಂಬಾಕೆಯನ್ನು ಕಾಂಗ್ರೆಸ್ ತನ್ನ ಸಂವಿಧಾನ ಸಮಾವೇಶಕ್ಕೆ ಆಹ್ವಾನಿಸಿದ್ದು, ಈಕೆಗೆ ಬೆಂಗಳೂರು ವಿಮಾನ ನಿಲ್ದಾಣದಲ್ಲೇ ರಾಜ್ಯದೊಳಗೆ ಪ್ರವೇಶ ನಿರಾಕರಿಸಿ, ಲಂಡನ್‌ಗೆ ವಾಪಸ್ಸು ಅಟ್ಟಲಾಗಿದೆ. ವಿಶೇಷ ಉಪನ್ಯಾಸ ನೀಡಲು ಅಲ್ಲಿಂದ ಇಲ್ಲಿಗೆ ಬಂದ ಭಾರತ ವಿರೋಧಿಯನ್ನು ಒಂದು ದಿನ ಜೈಲಿನಲ್ಲಿಟ್ಟು, ಕೇಂದ್ರ ಸರ್ಕಾರ ಅಲ್ಲಿಂದಲೇ ಮರಳಿ ಗೂಡಿಗೆ ಕಳುಹಿಸಿದೆ. ಆ ಮೂಲಕ ಕೈ ಸರ್ಕಾರಕ್ಕೆ ಮತ್ತು ಭಾರತ ವಿರೋಧಿ ನಿತಾಶ ಳಿಗೆ ದೊಡ್ಡ ಮುಖಭಂಗವಾಗುವ ಹಾಗೆ ಮಾಡಿದೆ.

ಈಕೆ ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ಜನಿಸಿದ್ದಳು. ಕಾಶ್ಮೀರಿ ಮೂಲದ ಪಂಡಿತರ ಕುಟುಂಬಕ್ಕೆ ಸೇರಿದ್ದ ಈಕೆ, ಸದ್ಯ ಲಂಡನ್‌ನಲ್ಲಿ ನೆಲೆಸಿದ್ದಳು. ಈಕೆ ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಕಾಶ್ಮೀರದ ಅಭಿವೃದ್ಧಿಯ ದೃಷ್ಟಿಯಿಂದ ಜಾರಿಗೆ ತಂದ ಯೋಜನೆಗಳನ್ನು ವ್ಯಾಪಕವಾಗಿ ಟೀಕಿಸಿ, ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದಳು.

ಈ ಬಗ್ಗೆ ಬಿಜೆಪಿ ಕಾಂಗ್ರೆಸ್ ಅನ್ನು ತರಾಟೆಗೆ ತೆಗೆದುಕೊಂಡಿದೆ. ರಾಜ್ಯ ಸರ್ಕಾರದ ಈ ನಡೆಗೆ ಆಕ್ರೋಶ ವ್ಯಕ್ತಪಡಿಸಿದೆ. ಭಾರತದ ಅಖಂಡತೆಯ ವಿರುದ್ಧ ಮತ್ತು ಶತ್ರು ರಾಷ್ಟ್ರ ಪಾಕಿಸ್ತಾನದ ಪರ ಇರುವವರಿಗೆ ರಾಜ್ಯ ಸರ್ಕಾರ ಮಣೆ ಹಾಕುತ್ತದೆ. ಜನರ ತೆರಿಗೆ ಹಣ ಬಳಸಿ ದೇಶ ವಿರೋಧಿಗಳನ್ನು ಕರೆಸಿ ಸಂವಿಧಾನಕ್ಕೆ ಅಪಚಾರ ಮಾಡುತ್ತಿದೆ ಕಾಂಗ್ರೆಸ್. ಉಗ್ರ ಪರವಾಗಿರುವವರಿಗೆ, ನಗರ‌ ನಕ್ಸಲರು, ದೇಶದ್ರೋಹಿಗಳನ್ನು ಕರೆಸಿಕೊಂಡು ಲೋಕ ಸಭಾ ಚುನಾವಣಾ ಸಮಯದಲ್ಲಿ ಅಶಾಂತಿ ಮೂಡಿಸುವ ಪ್ರಯತ್ನ ಕಾಂಗ್ರೆಸ್‌ನದ್ದು ಎಂದು ಕೈ ನಾಯಕರನ್ನು ತರಾಟೆಗೊ ತೆಗೆದುಕೊಂಡಿದೆ.

ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು, ಬರ ಪರಿಹಾರಕ್ಕೆ ವ್ಯಯ ಮಾಡಲು ಸರ್ಕಾರದ ಬಳಿ ಹಣವಿಲ್ಲ. ಆದರೆ ದೇಶದ್ರೋಹಿಗಳನ್ನು ಕರೆಸಿಕೊಳ್ಳಲು ಹಣವಿದೆ. ರಾಹುಲ್ ಗಾಂಧಿ ಯನ್ನು ಸಮಾಧಾನಿಸಲೂ ಸಿದ್ದವಾಗಿದ್ದಾರೆ‌ ಸಿದ್ದರಾಮಯ್ಯ ಎಂದು ಬಿಜೆಪಿ ಕಾಂಗ್ರೆಸ್ ಅನ್ನು ವ್ಯಂಗ್ಯವಾಡಿದೆ.

ಒಟ್ಟಿನಲ್ಲಿ ಬಿಜೆಪಿ, ಪ್ರಧಾನಿ ಮೋದಿ ಅವರನ್ನು ದ್ವೇಷಿಸುವವರು ದೇಶ‌ ವಿರೋಧಿಗಳೇ ಆಗಿದ್ದರು, ಕಾಂಗ್ರೆಸ್ ಅವರಿಗೆ ರಾಜ ಮರ್ಯಾದೆ ನೀಡುತ್ತಿರುವುದು ನಾಚಿಗೇಡಿನ ಸಂಗತಿ. ಇದು ಕೈ ಸರ್ಕಾರ ದೇಶಕ್ಕೆ ಮಾಡಿದ ಅಪಮಾನ. ಜೊತೆಗೆ ಕಾಂಗ್ರೆಸ್ ಸರ್ಕಾರದ ಲಜ್ಜೆಗೇಡಿತನಕ್ಕೆ ಸ್ಪಷ್ಟ ನಿದರ್ಶನ.

Tags

Related Articles

Close