ಪ್ರಚಲಿತ

ಸಿ.ಟಿ ರವಿಯನ್ನು ಕೊಲೆ ಮಾಡುತ್ತೇವೆ ಎಂದು ಸದನದಲ್ಲೇ ಹೇಳಿದ ಕಾಂಗ್ರೆಸ್ ಸಚಿವ!! ಸಿಡಿದೆದ್ದ ಕಮಲ ಪಡೆಗಳು…

ರಾಜ್ಯದಲ್ಲಿ ಕೊಲೆಗಳ ಸದ್ದು, ಸಂಸತ್‍ನಲ್ಲಿ ಕೊಲೆಗಳ ಸದ್ದು, ಕರಾವಳಿಯಲ್ಲಿ ಕೊಲೆಗಳ ಸದ್ದು, ಈಗ ವಿಧಾನ ಮಂಡಲದಲ್ಲಿಯೂ ಕೊಲೆಗಳದ್ದೇ ಸದ್ದು. ಯಾವ ಸರ್ಕಾರ ತನ್ನ ನಿಸ್ವಾರ್ಥ ಹಾಗೂ ದಕ್ಷ ಆಡಳಿತದಿಂದ ಹೆಸರಾಗಬೇಕೆಂದು ಹಿರಿಯರು ಬಯಸಿದ್ದರೋ ಅದೇ ಸರ್ಕಾರದ ಕಾರ್ಯವೈಖರಿ ಕೊಲೆಗಳ ಸದ್ದುಗಳ ಮೂಲಕ ಅಲೆಯುತ್ತಿರುವುದು ಮಾತ್ರ ಖೇದಕರ.

ಎತ್ತ ನೋಡಿದರತ್ತ ಕೊಲೆಗಳದ್ದೇ ಸದ್ದು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದ ಗದ್ದುಗೆಗೆ ಏರಿದ ನಂತರ ಬರೋಬ್ಬರಿ 25 ಹಿಂದೂ ಕಾರ್ಯಕರ್ತರ ಹಾಗೂ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರ ಕೊಲೆಗಳು ನಡೆದಿವೆ ಎಂದರೆ ಕರ್ನಾಟಕವೋ ಅಥವಾ ಇದು ಕೇರಳದ ಸುದ್ಧಿಯೋ ಎಂಬ ಅನುಮಾನ ಮೂಡದೇ ಇರದು. ಬಿಡಿ… ಇದು ಕೇವಲ ಬಲಪಂಥೀಯ ರಾಜಕೀಯ ಧ್ವೇಷದ ಕೊಲೆಗಳ ಲೆಕ್ಕ. ಆದರೆ ರಾಜ್ಯದಲ್ಲಿ ಇನ್ನಿತರ ಕಾರಣಗಳಿಂದಾಗಿ ನಡೆದ ಕೊಲೆಗಳು ಹಾಗೂ ಅಸಹಜ ಸಾವುಗಳು ಅದೆಷ್ಟೋ..!!!

ಯಾವುದೇ ಕೊಲೆಗಳು ಅಥವಾ ಅಸಹಜ ಸಾವುಗಳು ನಡೆದರೆ ಮೊದಲಾಗಿ ಹೋಗುವ ಸರ್ಕಾರ ಇದು ಸಹಜ ಸಾವು ಎಂದು ಅದೇನೋ ಕಾರಣ ನೀಡಿ ಕೈತೊಳೆದುಕೊಂಡು ಪೋಸ್ಟ್ ಮಾರ್ಟಮ್ ಆಗುವುದಕ್ಕೂ ಮುಂಚೆನೇ ಸರ್ಟಿಫಿಕೇಟ್ ಕೊಟ್ಟುಬಿಡುತ್ತದೆ. ಅದೆಷ್ಟೋ ಕೊಲೆಗಳಿಗೆ ನ್ಯಾಯ ನೀಡದೆ ಈ ರೀತಿಯೇ ಮಾಡಿ ತನ್ನ ಕೆಲಸವನ್ನು ಪೂರೈಸಿಬಿಟ್ಟಿತ್ತು ರಾಜ್ಯ ಕಾಂಗ್ರೆಸ್ ಸರ್ಕಾರ.

ವಿಧಾನ ಸಭೆಯಲ್ಲಿ ನಡೆಯಿತು ಬಿಸಿಬಿಸಿ ಚರ್ಚೆ…

ನಿನ್ನೆ ರಾಜ್ಯ ವಿಧಾನ ಸಭೆಯಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ಕೊಲೆಗಳ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿದ್ದವು. ಮೊನ್ನೆ ತಾನೇ ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬಲಿಯಾದ ಭಾರತೀಯ ಜನತಾ ಪಕ್ಷದ ಕಾರ್ಯಕರ್ತ ಕದಿರೇಶ್ ಎಂಬವರ ಹತ್ಯೆಯಾದ ವಿಚಾರವನ್ನು ಭಾರತೀಯ ಜನತ ಪಕ್ಷದ ನಾಯಕರು ಪ್ರಸ್ತಾಪಿಸುತ್ತಾರೆ. ಭಾರತೀಯ ಜನತಾ ಪಕ್ಷದ ನಾಯಕ ಹಾಗೂ ಶಾಸಕ ಆರ್.ಅಶೋಕ್ ಕದಿರೇಶ್ ಕೊಲೆಯ ವಿಚಾರ ಪ್ರಸ್ತಾಪಿಸಿ ಕಾಂಗ್ರೆಸ್ ಪಕ್ಷವನ್ನು ಟಾರ್ಗೆಟ್ ಮಾಡುತ್ತಿದ್ದರು. ರಾಜ್ಯದಲ್ಲಿ ಇನ್ನೆಷ್ಟು ಕೊಲೆಗಳು ನಡೆಯಬೇಕು. ಇನ್ನೆಷ್ಟು ಬಲಿ ಬೇಕು ನಿಮಗೆ. ನಿಮ್ಮ ಮುಂದಿನ ಟಾರ್ಗೆಟ್ ಯಾರು ಎಂದು ಹೇಳಿ ಎಂದು ಆಕ್ರೋಶಭರಿತವಾಗಿ ಪ್ರಶ್ನಿಸಿದರು.

ಸಿ.ಟಿ.ರವಿ ಮುಂದಿನ ಟಾರ್ಗೆಟ್ ಅಂತೆ…!!!

“ರಾಜ್ಯದಲ್ಲಿ ಇನ್ನೆಷ್ಟು ಕೊಲೆಗಳು ನಡೆಯಬೇಕು. ಇನ್ನೆಷ್ಟು ಬಲಿ ಬೇಕು ನಿಮಗೆ. ನಿಮ್ಮ ಮುಂದಿನ ಟಾರ್ಗೆಟ್ ಯಾರು ಎಂದು ಹೇಳಿ” ಎಂದು ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ವಾಗ್ದಾಳಿ ನಡೆಸುತ್ತಲೇ ಸದನದ ಆಡಳಿತ ಪಕ್ಷದ ಕಡೆಯಿಂದ ಒಂದು ಧ್ವನಿ ಮೂಡಿ ಬರುತ್ತದೆ. ಕಾಂಗ್ರೆಸ್‍ನ ಮುಂದಿನ ಟಾರ್ಗೆಟ್ ಯಾರು ಎಂದು ಕೇಳುತ್ತಿದ್ದಂತೆಯೇ “ಸಿ.ಟಿ.ರವಿ” ಎಂದು ಚಿಕ್ಕಮಗಳೂರಿನ ಭಾರತೀಯ ಜನತಾ ಪಕ್ಷದ ಶಾಸಕರ ಹೆಸರು ಕೇಳಿ ಬರುತ್ತೆ. ಇಡೀ ಸದನವೇ ದಂಗಾಗಿ ಹೋಗಿತ್ತು.

ಕೆಂಡಾಮಂಡಲವಾದ ಸಿಟಿ ರವಿ…

ಆಡಳಿತ ಪಕ್ಷದ ಕಡೆಯಿಂದ ನಮ್ಮ ಮುಂದಿನ ಟಾರ್ಗೆಟ್ ಸಿಟಿ ರವಿ ಎನ್ನುವಾಗ ಎದ್ದುನಿಂತ ಶಾಸಕ ಸಿಟಿ ರವಿ ಅಬ್ಬರಿಸಿದರು. “ನಾನು ಸಾವಿಗೆ ಹೆದರೋದಿಲ್ಲ. ತಾಕತ್ತಿದ್ದರೆ ನನ್ನನ್ನು ಮುಟ್ಟಿ ನೋಡಲಿ” ಎಂದರು. ಸಿಟಿ ರವಿ ಮಾತನಾಡುತ್ತಿದ್ದಂತೆ ಎದ್ದುನಿಂತ ಪ್ರತಿಪಕ್ಷ ನಾಯಕ ಜಗಧೀಶ್ ಶೆಟ್ಟರ್, ವಿಶ್ವೇಶ್ವರ ಹೆಗಡೆ ಕಾಗೇರಿ, ಅರವಿಂದ ಲಿಂಬಾವಳಿ, ಜೀವರಾಜ್ ಸಹಿತ ಭಾರತೀಯ ಜನತಾ ಪಕ್ಷದ ನಾಯಕರು ಸಿಡಿದೆದ್ದಿದ್ದರು. ಸಿಟಿ ರವಿ ಎಂದು ಹೆಸರು ಹೇಳಿದ್ದು ಯಾರು ಎಂದು ಆರ್ಭಟಿಸಿದರು.

ಕೊಲೆಗಾರ ಕುಲಕರ್ಣಿಯಿಂದ ಸಿಟಿ ರವಿ ಹೆಸರು…!

ಸಿಟಿ ರವಿ ಅವರ ಹೆಸರು ಹೇಳಿದ್ದು ಯಾರು ಎಂಬ ಭಾರತೀಯ ಜನತಾ ಪಕ್ಷದ ನಾಯಕರ ಆರ್ಭಟಕ್ಕೆ ಕಾಂಗ್ರೆಸ್, ಸಚಿವ ಕುಲಕರ್ಣಿಯ ಹೆಸರನ್ನು ಹೇಳಿತ್ತು. ಸಚಿವ ಕುಲಕರ್ಣಿಯವರು ಈ ರೀತಿ ಹೇಳಿದ್ದಾರೆ ಎಂದು ಸಮಜಾಯಿಷಿ ನೀಡಿತ್ತು. ಕುಲಕರ್ಣಿ ಹೆಸರು ಹೇಳುತ್ತಿದ್ದಂತೆಯೇ ಬಿಜೆಪಿಗರ ಸಿಟ್ಟು ನೆತ್ತಿಗೇರಿತ್ತು.

ಸಚಿವ ವಿನಯ ಕುಲಕರ್ಣಿಗೆ ಕೊಲೆ ಮಾಡಿ ಅಭ್ಯಾಸವಿದೆ. ಈಗಾಗಲೇ ನಮ್ಮ ಭಾರತೀಯ ಜನತಾ ಪಕ್ಷದ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡರನ್ನು ಕೊಲೆ ಮಾಡಿಸಿದ್ದಾರಲ್ಲ ಎಂದು ಭಾರತೀಯ ಜನತಾ ಪಕ್ಷದ ಸದಸ್ಯರು ಆಕ್ರೋಶರಾದರು.

ಮಧ್ಯಪ್ರವೇಶಿಸಿದ ಕಾಂಗ್ರೆಸ್ ಸದಸ್ಯರು…

ಈ ವೇಳೆ ಮಧ್ಯೆ ಪ್ರವೇಶಿಸಿದ ಕಾಂಗ್ರೆಸ್ ಸಚಿವರಾದ ಕಾಗೋಡು ತಿಮ್ಮಪ್ಪ ಹಾಗೂ ಇತರರು, ಕುಲಕರ್ಣಿ ಆ ಉದ್ಧೇಶದಿಂದ ಈ ರೀತಿ ಹೇಳಿಕೆ ನೀಡಿಲ್ಲ. ಸಾಮಾನ್ಯವಾಗಿ ಹೇಳಿ ಬಿಟ್ಟರು. ಅವರ ಹೇಳಿಕೆಗೆ ತಾನು ವಿಷಾಧಿಸುತ್ತೇನೆ ಎಂದು ಹೇಳಿದರು. ಆದರೆ ಸಚಿವರ ಮಾತಿಗೆ ಬೆಲೆ ನೀಡದ ಬಿಜೆಪಿಗರು ಆಡಳಿತ ಪಕ್ಷದ ಶಾಸಕರಿಗೆ ಎಚ್ಚರಿಕೆ ನೀಡಿದರು.

ಈಗಾಗಲೇ ಚಿಕ್ಕಮಗಳೂರು ಶಾಸಕ ಸಿಟಿ ರವಿ ಮತಾಂಧರ ಕೊಲೆ ಬೆದರಿಕೆಗಳನ್ನು ಎದುರಿಸುತ್ತಿದ್ದಾರೆ. ಈ ಸಮಯದಲ್ಲಿ ನಿಮ್ಮ ಇಂತಹ ಹೇಳಿಕೆಗಳು ಸದನದಿಂದ ಯಾವ ಸಂದೇಶವನ್ನು ನೀಡುತ್ತದೆ ಎಂಬುದನ್ನು ನೀವು ಯೋಚಿಸಬೇಕೆ ಎಂದು ಆಕ್ರೋಶಿತರಾದರು.

ಒಟ್ಟಿನಲ್ಲಿ ಕೊಲೆಗಳ ಪಟ್ಟಿಯಲ್ಲಿ ಕಾಂಗ್ರೆಸ್‍ನ ಮುಂದಿನ ಟಾರ್ಗೆಟ್ ಸಿಟಿ ರವಿ ಎಂದು ಹೇಳಿಕೆ ನೀಡಿದ ಸಚಿವ ವಿನಯ್ ಕುಲಕರ್ಣಿಗೆ ಸದನದಲ್ಲಿ ಭಾರತೀಯ ಜನತಾ ಪಕ್ಷದ ಶಾಸಕರು ಬೆವರಿಳಿಸಿದ್ದಾರೆ. ಇದರಿಂದಾಗಿ ಪೇಚಿಗೆ ಸಿಲುಕಿದ ಸಚಿವರು ಮೌನಕ್ಕೆ ಶರಣಾಗಿದ್ದಾರೆ…

source:
http://suddi24x7.in/congress-members-controversy-statement/

https://m.facebook.com/story.php?story_fbid=1686154044779177&id=100001537948203

-ಸುನಿಲ್ ಪಣಪಿಲ

Tags

Related Articles

Close