ಪ್ರಚಲಿತ

ಭಾರತವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿಸಲು ಯತ್ನಿಸುತ್ತಿದೆಯೇ ಕಾಂಗ್ರೆಸ್

ಕಾಂಗ್ರೆಸ್ ನೇತೃತ್ವದ ಇಂಡಿ ಒಕ್ಕೂಟದ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ.

ಇಂಡಿ ಒಕ್ಕೂಟಕ್ಕೆ ದೇಶಕ್ಕಾಗಿ, ದೇಶವಾಸಿಗಳಿಗಾಗಿ ದುಡಿಯುವ ಯಾವುದೇ ಇರಾದೆ ಇಲ್ಲ. ಅವರು ಪ್ರಧಾನಿ ಸ್ಥಾನದ ಖುರ್ಚಿಯನ್ನು ಹರಾಜು ಹಾಕಲು ಬಳಸುತ್ತಿದ್ದಾರೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

ಬಿಜೆಪಿ ಪರ ಮಾತನಾಡಿರುವ‌ ಶೆಹಜಾದ್ ಪೂನಾವಾಲಾ, ಭಾರತದ ಅಭಿವೃದ್ಧಿಗಾಗಿ ಇಂಡಿ ಒಕ್ಕೂಟ ಯವುದೇ ಗುರಿಯನ್ನು ಇರಿಸಿಕೊಂಡಿಲ್ಲ. ಇಂಡಿ ಒಕ್ಕೂಟದ ಸದಸ್ಯ ರಾಷ್ಟ್ರಗಳು ತಮ್ಮದೇ ಆದ ಕುಟುಂಬ ರಾಜಕಾರಣ, ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದ್ದಾರೆ. ಆ ಒಕ್ಕೂಟಕ್ಕೆ ಯಾವುದೇ ಮಹತ್ವಾಕಾಂಕ್ಷೆ ಇಲ್ಲ. ಜೊತೆಗೆ ಸಂಪೂರ್ಣ ಗೊಂದಲದಲ್ಲಿ ಮುಳುಗಿ ಹೋಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಇಂಡಿ ಒಕ್ಕೂಟ‌ ದೇಶದ ಪ್ರಧಾನಿ ಸ್ಥಾನವನ್ನು ಹರಾಜು ಹಾಕುವ ಉದ್ದೇಶ ಹೊಂದಿದೆ‌. ಈ ವರೆಗೂ ಇಂಡಿ ಒಕ್ಕೂಟದಿಂದ ಒಮ್ಮತದ ಪ್ರಧಾನಿ ಅಭ್ಯರ್ಥಿ ಘೋಷಣೆ ಅಸಾಧ್ಯವಾಗಿದ್ದು, ಅವರು ತಕ್ಷಣವೇ ತಮ್ಮ ಪ್ರಧಾನಿ ಅಭ್ಯರ್ಥಿಯನ್ನು ಘೋಷಣೆ ಮಾಡುವ ಕೆಲಸ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಇನ್ನು ಕಾಂಗ್ರೆಸ್ ಪಕ್ಷದ ಪಿತ್ರಾರ್ಜಿತ ಆಸ್ತಿ ತೆರಿಗೆ ವಿಷಯಕ್ಕೆ ಸಂಬಂಧಿಸಿದ ಹಾಗೆಯೂ ಬಿಜೆಪಿ ವಾಗ್ದಾಳಿ ಮುಂದುವರೆಸಿದೆ.

ಗುಜರಾತ್ ಸಿ ಎಂ ಯೋಗಿ ಆದಿತ್ಯನಾಥ್ ಅವರು, ದೇಶದ ಸಾಮಾನ್ಯ ಜನರ ಸಂಪತ್ತನ್ನು ದೋಚುವ ಸಲುವಾಗಿ ಕಾಂಗ್ರೆಸ್ ಪಕ್ಷ ಪ್ರಯತ್ನ ನಡೆಸುತ್ತಿದೆ. ತಮ್ಮ ಓಟ್‌ಬ್ಯಾಂಕ್ ರಾಜಕಾರಣದ ಉದ್ದೇಶದಿಂದ ಜನರ ಸಂಪತ್ತನ್ನು ದೋಚಿ ಅದನ್ನು ರೊಹಿಂಗ್ಯಾ‌ಗಳಿಗೆ ಹಂಚಿಕೆ ಮಾಡಲು ಕಾಂಗ್ರೆಸ್ ಇಂತಹ ನೀತಿಯನ್ನು ಅಳವಡಿಸುವ ಪ್ರಯತ್ನ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ.

ಭಾರತ ಮತ್ತು ಇಲ್ಲಿನ ಸಾಮಾನ್ಯ ಜನರ ಬಗ್ಗೆ ಕಾಂಗ್ರೆಸ್ ಪಕ್ಷ ಹೊಂದಿರುವ ಮನಸ್ಥಿತಿ ಏನು ಎಂಬುದು ನಿನ್ನೆ ಬಹಿರಂಗವಾಗಿದೆ. ಈ ಸುಳಿವುಗಳನ್ನು ನಾವು ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿಯೂ ಕಾಣಬಹುದಾಗಿದೆ. ಸ್ಯಾಮ್ ಪಿತ್ರೋಡಾ ಹೇಳಿದ್ದನ್ನು ಆಗಿನ ಗೃಹ ಸಚಿವ ಪಿ ಚಿದಂಬರಂ ಅವರು ಪ್ರತಿಪಾದಿಸಿದ್ದಾರೆ. ಸುಮಾರು ಅರವತ್ತು ದಶಕಗಳ ಕಾಲ ಭಾರತದ ಸಂಪತ್ತು ಕೊಳ್ಳೆ ಹೊಡೆದ ಕಾಂಗ್ರೆಸ್ ಈಗ ದೇಶದ ಜನರ ಸಂಪತ್ತಿನ ಮೇಲೆ ವಕ್ರದೃಷ್ಟಿ ಹಾಯಿಸಿದೆ ಎಂದು ಅವರು ಹೇಳಿದ್ದಾರೆ.

ಕರ್ನಾಟಕ ಸರ್ಕಾರ ಮುಸ್ಲಿಂ ಮತದ ಎಲ್ಲಾ ಜಾತಿಗಳನ್ನು, ಸಮುದಾಯಗಳನ್ನು ಇತರೆ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರ್ಪಡೆ ಮಾಡಿರುವುದನ್ನು ಟೀಕಿಸಿರುವ ಅವರು ಇದು ಭಾರತವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿಸುವ, ದೇಶವನ್ನು ವಿಭಜನೆ ಮಾಡುವ ಹುನ್ನಾರ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Tags

Related Articles

Close