ಪ್ರಚಲಿತ

ರಾಹುಲ್ ಮುಗ್ದತೆಯನ್ನು ಒಪ್ಪಿಕೊಂಡ ರಮ್ಯಾ.! ಪಕ್ಷದ ಕಾರ್ಯಕ್ರಮಕ್ಕೆ ಮಾಧ್ಯಮಗಳಿಗೆ ನಿಷೇಧ ಹೇರಿದ್ದು ಏಕೆ.?!

ತಮ್ಮ ಹಗರಣಗಳನ್ನು ಬಯಲಿಗೆಳೆಯುವವರ ವಿರುದ್ಧ ಸರಕಾರ ಅಧಿಕಾರ ಬಳಸಿ ಜೈಲಿಗಟ್ಟುತ್ತಿದೆ. ತಮ್ಮ ಅಸಂಗತ ನಾಟಕಗಳನ್ನು ದೇಶದ ಜನರ ಮುಂದೆ ಬಿಚ್ಚಿಡುವ ಮಾಧ್ಯಮ ಮುಖ್ಯಸ್ಥರಿಗೆ ಬಂಧನ ವಿಧಿಸಿ, ಬಾಯಿ ಮುಚ್ಚಿಸಲು ಕಾಂಗ್ರೆಸ್ ಸರಕಾರ ಪ್ರಯತ್ನಿಸುತ್ತಿರಯವುದು ಇದೇ ಮೊದಲೇನಲ್ಲಾ. ತಾವು ಏನೇ ಮಾಡಿದರೂ ಅದು ಸರಿ, ಇತರರು ಏನೇ ಮಾಡಿದರು ತಪ್ಪು ಎಂಬ ಧೋರಣೆಯನ್ನು ಹೊಂದಿರುವ ಕಾಂಗ್ರೆಸ್ ಮಾಧ್ಯಮಗಳ ಮೇಲೂ ತಮ್ಮ ಅಧಿಕಾರ ಚಲಾಯಿಸುತ್ತಿದೆ ಎಂದರೆ ನಮ್ಮ ರಾಜ್ಯದ ಸ್ಥಿತಿ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದು ಅರಿವಾಗುತ್ತದೆ.!

ಫೇಕ್ ಸುದ್ದಿಗಳಿಂದಲೇ ಖ್ಯಾತಿ ಗಳಿಸಿರುವ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಮುಖ್ಯಸ್ಥೆ, ಮೋಹಕ ತಾರೆ ನಟಿ ರಮ್ಯಾ ಇದೀಗ ಮತ್ತೊಂದು ವಿವಾದಕ್ಕೀಡಾಗಿದ್ದಾರೆ. ಇತ್ತೀಚೆಗೆ ತಮ್ಮ ಐಟಿ ಸೆಲ್ ಕಾರ್ಯಕರ್ತರಿಗೆ ಫೇಕ್ ಅಕೌಂಟ್ ಮಾಡಿ , ಬಿಜೆಪಿಗೆ ವಿರೋಧವಾಗಿ ಬರೆಯಿರಿ ಎಂದು ಸೂಚನೆ ನೀಡಿದ್ದ ರಮ್ಯಾ ಇದೀಗ ತಮ್ಮ ಇನ್ನಷ್ಟು ಅವಾಂತಾರ ಬಯಲಾಗಬಹುದು ಎಂಬ ಕಾರಣಕ್ಕಾಗಿ ಪಕ್ಷದ ಕಾರ್ಯಕ್ರಮಕ್ಕೆ ಮಾಧ್ಯಮ ಪ್ರತಿನಿಧಿಗಳಿಗೆ ನಿಷೇಧ ಹೇರಿದ್ದಾಳೆ.!

ಮಾಧ್ಯಮ ಪ್ರತಿನಿಧಿಗಳ ಮೇಲೆ ದರ್ಪ ಮೆರೆದ ರಮ್ಯಾ..!

ಸದ್ಯ ಕರ್ನಾಟಕ ಪ್ರವಾಸದಲ್ಲಿರುವ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಬೆಂಗಳೂರಿನಲ್ಲಿ ಇಂದು ಆಯೋಜಿಸಿದ್ದ ಸಂವಾದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮಕ್ಕೆ ಸಾಮಾನ್ಯವಾಗಿಯೇ ಬಂದಿದ್ದ ಮಾಧ್ಯಮಗಳಿಗೆ ನಿಷೇಧ ಹೇರುವ ಮೂಲಕ ದರ್ಪ ಮೆರೆದಿದ್ದಾಳೆ.

ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಮಹಿಳಾ ಸಾಧಕರ ಜೊತೆ ರಾಹುಲ್ ಗಾಂಧಿ ಸಂವಾದ ಕಾರ್ಯಕ್ರಮ ಇಂದು ನಿಗಧಿಯಾಗಿತ್ತು. ಆದರೆ ಸ್ಥಳಕ್ಕೆ ಆಗಮಿಸಿದ ಪತ್ರಕರ್ತರಿಗೆ ಕಾರ್ಯಕ್ರಮಕ್ಕೆ ಪ್ರವೇಶಿಸಲು ಬಿಡದ ರಮ್ಯಾ, ಮಾಧ್ಯಮ ಪ್ರತಿನಿಧಿಗಳನ್ನು ಹೊರ ನಡೆಯುವಂತೆ ಸೂಚಿಸಿದ್ದಾಳೆ.!

ಮುಜುಗರದಿಂದ ತಪ್ಪಿಸಿಕೊಳ್ಳಲು ಪ್ರಯತ್ನ..!

ರಾಹುಲ್ ಗಾಂಧಿ ಪಾಲ್ಗೊಂಡ ಸಮಾರಂಭಗಳಲ್ಲೆಲ್ಲಾ ಒಂದಲ್ಲಾ ಒಂದು ಎಡವಟ್ಟು ಮಾಡಿ , ಪಕ್ಷಕ್ಕೆ ಮುಜುಗರ ಪಡುವಂತೆ ಮಾಡುತ್ತಿದ್ದರು. ಸರಿಯಾಗಿ ಮಾತನಾಡಲೂ ಬಾರದ ರಾಹುಲ್ ,ಮುಂದಿನ ಪ್ರಧಾನಿ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ತನ್ನ ಭಾಷಣಗಳನ್ನು ಬೇಕಾಬಿಟ್ಟಿ ಹೇಳಿಕೊಂಡು ಟೀಕೆಗೆ ಒಳಗಾಗುತ್ತಿದ್ದ ರಾಹುಲ್ ಕಾರ್ಯಕ್ರಮಕ್ಕೆ ಮಾಧ್ಯಮಗಳಿಗೆ ನಿಷೇಧ ಹೇರಿದ ರಮ್ಯಾ, ರಾಹುಲ್ ನಿಂದ ಪಕ್ಕಕ್ಕೆ ಆಗುವ ಅವಮಾನವನ್ನು ತಪ್ಪಿಸಿದ್ದಾಳೆ.

ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುವ ಕಾಂಗ್ರೆಸಿಗರು, ಪೊಲೀಸರನ್ನು ಬಳಸಿ ಸಾಮಾನ್ಯ ಜನರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ.‌ ಇದನ್ನು ಪ್ರಶ್ನಿಸಲು ಇರುವ ಮಾಧ್ಯಮಗಳ ಮೇಲೆಯೇ ಇದೀಗ ಕಾಂಗ್ರೆಸ್ ದಬ್ಬಾಳಿಕೆ ಮಾಡಿದ್ದು, ರಾಜ್ಯದ ಆಳ್ವಿಕೆ ಯಾವ ರೀತಿಯಲ್ಲಿ ಸಾಗುತ್ತಿದೆ ಎಂಬೂದೇ ಸಾಮಾನ್ಯ ಜನರ ಪ್ರಶ್ನೆ..!

source: public tv

– ಅರ್ಜುನ್

Tags

Related Articles

Close