ಪ್ರಚಲಿತ

ಪ್ರಧಾನಿ ಮೋದಿ ಅವರ ಕಾಲೆಳೆದ ಪ್ರಕಾಶ್ ರಾಜ್‌ಗೆ ನೆಟ್ಟಿಗರ ತರಾಟೆ

ಜನಪ್ರಿಯ ನಟ ಪ್ರಕಾಶ್ ರಾಜ್ ಕಾಂಟ್ರವರ್ಸಿ ನಾಯಕ ಸಹ ಹೌದು. ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕೆ ಮಾಡುವ ಮೂಲಕ, ಭಾರತಕ್ಕೆ ಹೆಮ್ಮೆ ತಂದುಕೊಟ್ಟ ಹಲವು ವಿಷಯಗಳನ್ನು, ಹಿಂದೂ ಧರ್ಮ, ಧಾರ್ಮಿಕ ನಂಬಿಕೆಗಳ ವಿರುದ್ಧ ಅನಗತ್ಯ ವಿವಾದಗಳನ್ನೆಬ್ಬಿಸುತ್ತಾ ಕಾಂಟ್ರವರ್ಸಿ ಮೂಲಕ ದೇಶದ ಜನರ ಪಾಲಿಗೆ ಖಳ ನಾಯಕರಾದವರೂ ಹೌದು. ಇದಕ್ಕೆ ಪೂರಕ ಎನಿಸುವಂತಹ ಎಲ್ಲಾ ಅಂಶಗಳನ್ನು ನೀವು ಈಗಾಗಲೇ ಮಾದ್ಯಮಗಳಲ್ಲಿ ಗಮನಿಸಿರಲೂ ಬಹುದು.

ಪ್ರಧಾನಿ ಮೋದಿ ಅವರು, ಬಿಜೆಪಿ ಏನೇ ಹೇಳಿಕೆಗಳನ್ನು ನೀಡಲಿ ಅದಕ್ಕೆ ವಿರೋಧ ಹೇಳಿಕೆಗಳನ್ನು ನೀಡಿ ವಿವಾದ ಎಬ್ಬಿಸುವುದೆಂದರೆ ಪ್ರಕಾಶ್ ರಾಜ್ ಅವರಿಗೆ ಖುಷಿಯೋ ಖುಷಿ. ಸಾಮಾಜಿಕ ಜಾಲತಾಣದಲ್ಲಿ ಈ ಹಿಂದೆ ಇಸ್ರೋ ಚಂದ್ರಯಾನದ ಬಗೆಗೂ ಅಪಹಾಸ್ಯ ಮಾಡುವ ಮೂಲಕ ಜನರ ಕೆಂಗಣ್ಣಿಗೆ ಗುರಿಯಾದ ವ್ಯಕ್ತಿ ಪ್ರಕಾಶ್ ರಾಜ್. ಇವರ ಇಂತಹ ನಡೆನುಡಿಯಿಂದಲೇ ಜನರು ಈ ವ್ಯಕ್ತಿಯನ್ನು ದ್ವೇಷಿಸುವಂತಾಗಿದೆ ಎಂದರೂ ಅದನ್ನು ಅಲ್ಲಗಳೆಯುವ ಹಾಗಿಲ್ಲ.

ಮೊನ್ನೆಯಷ್ಟೇ ಪ್ರಧಾನಿ ಮೋದಿ ಅವರು ದೇಶದ ಹೆಮ್ಮೆಯ ಯೋಧರ ಜೊತೆಗೆ ದೀಪಾವಳಿ ಆಚರಿಸಿಕೊಂಡರು. ಪ್ರಧಾನಿಗಳ ಈ ನಡೆಗೆ ದೇಶದೆಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ. ಆದರೆ ಪ್ರಕಾಶ್ ರಾಜ್ ಮಾತ್ರ ಈ ವಿಚಾರದಲ್ಲಿ ನಮೋ ಅವರ ಕಾಲೆಳೆಯಲು ಹೋಗಿ ಮತ್ತೆ ಟ್ರೋಲ್‌ಗೆ ತುತ್ತಾಗಿದ್ದಾರೆ.‌

ಕಳೆದ ಹಲವು ವರ್ಷಗಳಿಂದ ದೀಪಾವಳಿ ಹಬ್ಬವನ್ನು ಯೋಧರ ಜೊತೆಗೆ ಆಚರಣೆ ಮಾಡುವ ಕಾರ್ಯವನ್ನು ಪ್ರಧಾನಿ ನಮೋ ಮಾಡುತ್ತಿದ್ದಾರೆ. ಈ ಬಗ್ಗೆ ಪ್ರಧಾನಿ ಅವರು ಸಂತಸ ವ್ಯಕ್ತಪಡಿಸಿದ್ದು, ಕಳೆದ ಮೂವತ್ತು ಮೂವತ್ತೈದು ವರ್ಷಗಳಿಂದ ತಾವು ಯೋಧರ ಜೊತೆಗೆ ದೀಪಾವಳಿ ಆಚರಿಸುತ್ತಿರುವುದಾಗಿ ತಿಳಿಸಿದ್ದಾರೆ. ಹಾಗೆಯೇ ತಾವು ಗುಜರಾತ್‌ನ ಮುಖ್ಯಮಂತ್ರಿ ಆದಾಗಿಂದಲೂ ದೀಪಾವಳಿ ಯೋಧರ ಜೊತೆಗೇ ಆಚರಿಸಿಕೊಂಡು ಬರುತ್ತಿರುವುದಾಗಿ ಹೇಳಿದ್ದಾರೆ. ಇದಕ್ಕೆ ಪ್ರಕಾಶ್ ರಾಜ್ ಲೇವಡಿ ಮಾಡಿದ್ದಾರೆ.

ಪ್ರಧಾನಿ ಮೋದಿ ಅವರು ಈ ಹಿಂದೆ ತಾವು ಕಾಡಿನಲ್ಲಿ ದೀಪಾವಳಿ ಆಚರಿಸುವುದಾಗಿ ಹೇಳಿದ್ದರು. ಈಗ ಕಳೆದ ಹಲವು ವರ್ಷಗಳಿಂದ ಯೋಧರ ಜೊತೆ ದೀಪಾವಳಿ ಆಚರಿಸುತ್ತೇನೆ ಎಂದು ಹೇಳಿದ್ದಾರೆ. ಇದರಲ್ಲಿ ಯಾವುದು ಸರಿ. ಪ್ರಧಾನಿ ಮೋದಿ ಓರ್ವ ಸುಳ್ಳುಗಾರ ಎಂದು ಹೇಳಿ, ಮೋದಿ ಅಭಿಮಾನಿಗಳಿಂದ ಉಗಿಸಿಕೊಂಡಿದ್ದಾರೆ.

ಅವರು ಯೋಧರ ಜೊತೆ ದೀಪಾವಳಿ ಆಚರಿಸುವುದಕ್ಕೂ ಮೊದಲು ಕಾಡಿನಲ್ಲಿ ದೀಪಾವಳಿ ಸಂದರ್ಭದಲ್ಲಿ ಒಬ್ಬಂಟಿಯಾಗಿ ಕಳೆಯುತ್ತಿದ್ದರು ಎಂದು ಹೇಳಿರುವುದು‌. ಇದನ್ನು ಅರ್ಥ ಮಾಡಿಕೊಳ್ಳದೆ ಸದಾ ಪ್ರಧಾನಿ ಯವರನ್ನು ಟೀಕಿಸುವ ಮೂಲಕ ಅವರ ಜಪ ಮಾಡುತ್ತೀರಲ್ಲಾ. ಅದನ್ನು ಬಿಟ್ಟು ಬಿಡಿ ಎಂದು ಎಚ್ಚರಿಕೆ ನೀಡಿದ್ದಾರೆ.

ಯೋಧರು ನಿಮ್ಮ ಹಾಗೆ ಐಷಾರಾಮಿ ಜೀವನ ಸಾಗಿಸುತ್ತಿಲ್ಲ. ಅವರೂ ಸಹ ದುರ್ಗಮ ಕಾಡಿನಲ್ಲಿ ದೇಶ ಸೇವೆ ಮಾಡುತ್ತಿದ್ದಾರೆ. ನಿಮಗೆ ಪ್ರಧಾನಿ ಮೋದಿ ಅವರ ನಾಮ ಜಪ ಮಾಡದಿದ್ದರೆ ತಿಂದದ್ದು ಜೀರ್ಣವಾಗುವುದಿಲ್ಲವೇ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ಸುಮ್ಮನೆ ಮೋದಿ ಅವರ ಬಗ್ಗೆ ಲೆಕ್ಕಾಚಾರ ಹಾಕುವ ಬದಲು, ನಿಮ್ಮ ಜೀವನ ಸರಿ ಇದೆಯೋ ಲೆಕ್ಕಾಚಾರ ಹಾಕಿ ಎಂದು ತಿಳಿಸಿದ್ದಾರೆ.

Tags

Related Articles

Close