ಪ್ರಚಲಿತ

2013 ರಲ್ಲಿ ದಾವೂದ್ ನನ್ನು ಕೊಲ್ಲಬೇಕೆಂದು ಭಾರತದ ಸೂಪರ್ ಬಾಯ್ಸ್ ತಯಾರಾದಾಗ, ಆತನನ್ನು ರಕ್ಷಿಸಿದ್ದು ಯಾರು ಗೊತ್ತೇ?!

ಭಾರತ ಎಷ್ಟು ಬಲಶಾಲಿಯಾಗಿದೆ ಎಂಬುದು ಪ್ರತಿ ಭಾರತೀಯನಿಗೂ ಗೊತ್ತಿದೆ! ಜಗತ್ತಿನ ಘಟಾನುಘಟಿ ನಾಯಕರುಗಳೆಲ್ಲ ಭಾರತದೆದುರು ತಲೆಬಾಗುತ್ತಿದ್ದಾರೆ! ಅಷ್ಟಾದರೂ ಸಹ, ಇನ್ನೂ ಕೂಡ ದಾವೂದ್ ಇಬ್ರಾಹಿಂ ಎಂಬ ಭೂಗತ ಪಾತಕಿಯನ್ನು ಯಮಸದನಕ್ಕಟ್ಟಲು ಯಾಕಾಗುತ್ತಿಲ್ಲ ಎಂಬುದೊಂದು ಅಚ್ಚರಿಯಷ್ಟೇ! 25 ವರ್ಷಗಳ ನಂತರವೂ ಸಹ, ದಾವೂದ್ ನನ್ನು ಯಾಕಿನ್ನೂ ಬಂಧಿಸಲಾಗುತ್ತಿಲ್ಲ ಎಂಬುದೊಂದು ಪ್ರಶ್ನೆಯಾದರೆ,ಜೊತೆಗೇ RAW ಮತ್ತು ಇಂಟೆಲಿಜೆನ್ಸ್ ಅಧಿಕಾರಿಗಳನ್ನು ಹೀಗಳೆದುಕೊಂಡು ಕೂರುವುದಕ್ಕಿನ್ನ ಮುನ್ನ ಒಂದಷ್ಟು ವಾಸ್ತವಗಳು ಅರಿವಾಗಲೇ ಬೇಕು!

ಮೊದಲನೆಯದಾಗಿ, ಯಾವತ್ತಿಗೂ ಅಷ್ಟೇ! ಯಾವ ದೇಶವೇ ಆಗಲಿ, ಪರಕೀಯರ ಆಕ್ರಮಣಕ್ಕಿಂತ ದೇಶದೊಳಗಿನ ಹಿತಶತ್ರುಗಳ ಆಕ್ರಮಣ ಬಹಳ ಅಪಾಯಕಾರಿ! ದೇಶದೊಳಗೇ ಕೂತು, ಅದೇ ದೇಶವನ್ನು ಕೊರೆಯುವ ಶತ್ರುಗಳು ಇಡೀ ದೇಶವನ್ನೇ ಮಕಾಡೆ ಮಲಗಿಸಬಲ್ಲರು! ಅದೇ ಆಗಿದ್ದು ಭಾರತಕ್ಕೂ! ಅನಾದಿಕಾಲದಿಂದಲೂ ಅಷ್ಟೇ! ಭಾರತವನ್ನು ಕೊರೆದು ಇಬ್ಭಾಗವಾಗಿಸಿದ್ದು ದೇಶದೊಳಗಿನ ಹೆಗ್ಗಣಗಳೇ ಹೊರತು, ಪರಕೀಯರಲ್ಲವೇ ಅಲ್ಲ! ಇಲ್ಲಿಯ ಜನರ ಸಹಾಯದಿಂದ ಭಾರತವನ್ನಾಕ್ರಮಿಸಿದಂತಹ ಪರಕೀಯರಿಗೆ ಭಾರತವನ್ನು ಬಹಳ ಸುಲಭವಾಗಿ ಆಕ್ರಮಿಸಲು ಸಾಧ್ಯವಾಗಿದ್ದು ಮತ್ತದೇ ದೇಶದ ಪ್ರಜೆಗಳಿಂದಲೇ! ಆ ಸ್ಥಿತಿ ಇಂದಿಗೂ ಬದಲಾಗಿಲ್ಲ!

ನೇರವಾಗಿ ಹೇಳಬೇಕೆಂದರೆ, ದಾವೂದ್ ನನ್ನು ಇವತ್ತು 10 ಜನ ಕೊಲ್ಲಬೇಕೆಂದುಕೊಂಡರೆ, ನಮ್ಮದೇ ದೇಶದಲ್ಲಿ ದಾವೂದ್ ನನ್ನು ಉಳಿಸಲು 100 ಜನ ಸಿಗಬಲ್ಲರು ನಿಮಗೆ! ದುರಂತವೆಂದರೆ, ಜಗತ್ತಿನ ಮೋಸ್ಟ್ ವಾಂಟೆಡ್ ಉಗ್ರರನ್ನು ಉಳಿಸುವಲ್ಲಿ ಶ್ರಮಿಸುತ್ತಿರುವವರು, ಇವತ್ತು ದೇಶದಲ್ಲಿ ಉನ್ನರ ಸರಕಾರೀ ಹುದ್ದೆಯಲ್ಲಿದ್ದಾರೆ! ವ್ಯವಸ್ಥೆಯ ಅಧಿಕಾರವನ್ನು ತೆಗೆದುಕೊಂಡಂಯಹ ಕೆಲವರಿಂದ ಇವತ್ತು ಉಗ್ರರನ್ನು ಉಳಿಸಬೇಕೆಂಬ ಹರಸಾಹಸ ನಡೆಯುತ್ತಿದ್ದ ಕಾರಣವೊಂದಕ್ಕೇ, ಏಳು ಬಾರಿಯೂ ಕೂಡ ಕ್ಷಣಾರ್ಧದಲ್ಲಿ ತಪ್ಪಿ ಹೋದ ದಾವೂದ್! ಹಾ! 1994 ರಿಂದಲೂ ಸಹ ದಾವೂದ್ ನನ್ನು ಮುಗಿಸಿಬಿಡಬೇಕೆಂದು ನಮ್ಮ ಭಾರತದ ಅಧಿಕಾರಿಗಳನ್ನು, ಸ್ವತಃ ಉನ್ನತ ಹುದ್ದೆಯಲ್ಲಿದ್ದವರ ಕೈಗಳು ತಡೆ ಹಿಡಿದಿತ್ತು! ಇಲ್ಲದಿದ್ದರೆ, ಇಷ್ಟೊತ್ತಿಗೆ ದಾವೂದ್ ನ ದೇಹ, ನಾಯಿ ನರಿಗಳಿಗೆ ಆಹಾರವಾಗಿ ಹೋಗಿರುತ್ತಿತ್ತು!

1994 ರಲ್ಲಿ ನಾಲ್ಕು ಸಲ ದಾವೂದ್ ನ ಬೆನ್ನು ಬಿದ್ದಿದ್ದರು ನಮ್ಮ ಅಧಿಕಾರಿಗಳು! ಆದರೆ, ಅಷ್ಟೂ ಸಲವೂ ಸಹ, ಆಂತರಿಕ ಕುತಂತ್ರದಿಂದ ಅಧಿಕಾರಿಗಳ ದಿಕ್ಕು ತಪ್ಪಿಸಲಾಗಿತ್ತು! ಆದರೆ, 2004 ರಲ್ಲಿ ವಾಜಪೇಯಿ ಸರಕಾರದಿಂದ ದಾವೂದ್ ನನ್ನು ಕೊಲ್ಲಲೇಬೇಕೆಂದು ಯೋಜನೆ ರೂಪಿಸಿ, 20೦5 ರಲ್ಲಿ ಕಾರ್ಯಗತಗೊಳಿಸಲು ತಯಾರಿ ನಡೆಸಲಾಯಿತು! ಇಡೀ ಯೋಜನೆಯನ್ನು ಕೈಗೆತ್ತಿಕೊಂಡವರು ಅಜಿತ್ ದೋವಲ್! ಭಾರತದ ಜೇಮ್ಸ್ ಬಾಂಡ್! ದಾವೂದ್, ಪಾಕಿಸ್ಥಾನಿ ಕ್ರಿಕೆಟಿಗನಾದ ಜಾವೇದ್ ಮಿಯಾಂಡಾಡ್ ನ ಮಗನ ಜೊತೆ ನಡೆಯಲಿರುವ ತನ್ನ ಮಗಳ ಮದುವೆಯಲ್ಲಿ ಭಾಗವಹಿಸುತ್ತಿದ್ದಾನೆ ಮತ್ತು, ಸಮಾರಂಭ ದುಬೈ ನ ಗ್ರಾಂಡ್ ಹಯಾತ್ ಹೋಟೆಲಿನಲ್ಲಿ ನಡೆಯಲಿದೆ ಎಂದು ಮಾಹಿತಿ ಕೊಟ್ಟಿದ್ದು ಅಜಿತ್ ದೋವಲ್!

http://postcard.news/ajit-doval-arrested-mumbai-police-2005/

ಅಜಿತ್ ದೋವಲ್ ರ ಕಾರ್ಯವೈಖರಿಯೇ ಅದ್ಭುತ! ಅವರಿಗೆ ಗೊತ್ತಿತ್ತು! ಭಾರತದ ಅಧಿಕಾರಿ ವಲಯದಲ್ಲಿ ದಾವೂದ್ ನನ್ನು ಕೊಲ್ಲಲು ಬಹಳಷ್ಟು ಅಡೆತಡೆಗಳಿದೆಯೆಂದು ಗೊತ್ತಿತ್ತು! ಅದಕ್ಕೆ, ಭಾರತೀಯ ಕಮಾಂಡೋಗಳನ್ನು ಆಪರೇಷನ್ನಿಗಿಳಿಸದೇ, ದಾವೂದ್ ನ ಕಟ್ಟರ್ ಶತ್ರುವಾದ ಚೋಟಾ ರಾಜನ್ ನನ್ನು ನಿಯೋಜಿಸಿದ ಅಜಿತ್ ದೋವಲ್, ರಾಜನ್ ನ ಎರಡು ಜನ ಹುಡುಗರಾದ ವಿಕಿ ಮಲ್ಹೋತ್ರಾ ಮತ್ತು ಫರೀದ್ ತನಾಶಾ ನನ್ನು ದಾವೂದ್ ನನ್ನು ಮುಗಿಸಲು ಸುಪಾರಿ ಕೊಟ್ಟಿದ್ದರು! ವಿಷಯ ಎಲ್ಲಿಯೂ ಸೋರಿಕೆಯಾಗಿರಲಿಲ್ಲವಾದರೂ, ಕೊನೇ ಕ್ಷಣದಲ್ಲಿ ಇದ್ದಕ್ಕಿದ್ದಂತೆ ಮುಂಬೈ ಪೋಲಿಸರು ವಿಕಿ ಮಲ್ಹೋತ್ರನನ್ನು ದೆಹಲಿಯಲ್ಲಿ ಬಂಧಿಸಿದರು! ಜೊತೆಗಿದ್ದ ಅಜಿತ್ ದೋವಲ್ ನನ್ನೂ ಬಂಧಿಸಿದ ಕಾರಣಕ್ಕಾಗಿ, ವರ್ಷದಿಂದ ನಡೆಸಿದ್ದ ತಯಾರಿ ನೀರಿನಲ್ಲಿ ಹೋಮ ಮಾಡಿದ ಹಾಗಾಗಿತ್ತು! ಕೊನೆಗೆ, highest level ನಲ್ಲಿ ಆಪರೇಷನ್ ನ ವಿಚಾರ ಸೋರಿಕೆಯಾಗಿ, ವಿಕಿ ಮಲ್ಹೋತ್ರಾ ಮತ್ತು, ಅಜಿತ್ ರನ್ನು ಬಂಧಿಸಬೇಕೆಂಬ ಫರ್ಮಾನು ಬಿದ್ದಿತ್ತು!

ಅಷ್ಟಕ್ಕೇ ಮುಗಿಯಲಿಲ್ಲ! 2013 ರಲ್ಲಿ ಭಾರತೀಯ ಗೂಢಾಚಾರಿ ಇಲಾಖೆ ಮತ್ತೊಂದು ಪ್ರಯತ್ನಕ್ಕೆ ಕೈ ಹಾಕಿತ್ತು! ದಾವೂದ್ ಪಾಕಿಸ್ಥಾನದಲ್ಲಿದ್ದಾನೆಂಬ ಮಾಹಿತಿಯ ಮೇರೆಗೆ, Indian intelligence ಮತ್ತು RAW ಸಂಸ್ಥೆ, 9 ಕಮಾಂಡೋಗಳನ್ನು ನಿಯೋಜನೆಗೊಳಿಸಿತ್ತು! 2013 ನ ತಂಡಕ್ಕಿಟ್ಟ ಹೆಸರು, ಸೂಪರ್ ಬಾಯ್ಸ್!

 

ವರದಿಗಳ ಪ್ರಕಾರ, RAW ಇಸ್ರೇಲ್ ನ ಗೂಢಾಚಾರ ಸಂಸ್ಥೆಯಾದ MOSSAD ನ ನೆರವು ಪಡೆದು, ದಾವೂದ್ ನ ಮರಣವನ್ನು 13 ಸೆಪ್ಟೆಂಬರ್ 2013 ಕ್ಕೆ ಮುಹೂರ್ತವನ್ನಿಟ್ಟಿತ್ತು! ಮಾಹಿತಿಯ ಪ್ರಕಾರ, ಪ್ರತಿದಿನ ದಾವೂದ್, ತನ್ನ ಮನೆಯಿರುವ ಕ್ಲಿಫ್ಟನ್ ರೋಡ್ ನಿಂದ ಡಿಫೆನ್ಸ್ ಹೌಂಸಿಂಗ್ ಸೊಸೈಟಿಗೆ ಭೇಟಿ ನೀಡುತ್ತಾನೆಂಬುದನ್ನು ಅವಕಾಶವನ್ನಾಗಿಸಿಕೊಂಡು, ದಾರಿ ಮಧ್ಯೆ ಇದ್ದ ದರ್ಗಾವನ್ನು ಬಳಸಿ ದಾವೂದ್ ನ ಹತ್ಯೆಗೆ ಸಂಚು ರೂಪಿಸಲಾಗಿತ್ತು!

ಕಾರ್ಯಸೂಚಿಯಂತೆ, ದರ್ಗಾದ ಪ್ರದೇಶವನ್ನು ಒಂಭತ್ತು ಕಮಾಂಡೋಗಳು ಸುತ್ತುವರೆದಿದ್ದರು! ದಾವೂದ್ ನ ಕಾರಿನ ಪೂರ್ಣ ಪರಿಚಯವಿದ್ದ ಕಮಾಂಡೋಗಳು ಪೂರ್ಣ ತಯಾರಿಯಲ್ಲಿದ್ದರು! ಇನ್ನೇನು, ಕಾರು ಬರುತ್ತದೆನ್ನುವಾಗ, ಒಂದು ದೂರವಾಣಿ ಕರೆ ಕಮಾಂಡೋಗಳಿಗೆ ಬಂದಿತು! ಅಷ್ಟೇ! ಆಪರೇಷನ್ ಅಬಾರ್ಟೆಡ್ ಎಂದ ಕಮಾಂಡೋಗಳು ಐದು ನಿಮಿಷದಲ್ಲಿ ಕಣ್ಮರೆಯಾಗಿದ್ದರು! ಇವತ್ತಿಗೂ ಸಹ, ಯಾರದ್ದು ಕರೆಯಾಗಿತ್ತೆಂಬುದನ್ನು ಬಹಿರಂಗಪಡಿಸದೇ ಇದ್ದರೂ ಸಹ, ಅವತ್ತಿನ ಸರಕಾರದ ಉನ್ನತ ಹುದ್ದೆಯಲ್ಲಿದ್ದವರಿಂದ ಕರೆ ಬಂದಿತ್ತೆಂಬುದು ಬಹುತೇಕ ಅರಿವಾಗಿತ್ತು! ಸೂಪರ್ ಬಾಯ್ಸ್ ಖಾಲಿ ಕೈಯ್ಯಲ್ಲಿ ಹಿಂತಿರುಗಿದ್ದರು!

ವಿಷಯ ಇಷ್ಡೇ! ಭಾರತದ ಆಡಳಿತ ವ್ಯವಸ್ಥೆಯಲ್ಲಿರುಗ ಕೆಲ ಪ್ರಭಾವಿಗಳಿಗೆ ದಾವೂದ್ ಸಾಯುವುದು ಇಷ್ಟವಿಲ್ಲ! ಆತ ಬಂಧಿಯೂ ಆಗಬಾರದು! ಸಾಯಲೂ ಬಾರದು! ವ್ಯಾಟಿಕನ್ ನ ಯೋಜನೆ ಮಣ್ಣುಗೂಡಬಾರದು! ಜೊತೆಗೆ, ಭಯೋತ್ಪಾದನೆಯೂ ನಿಲ್ಲಬಾರದು! ಅದಕ್ಕೇ, ಇವತ್ತಿಗೂ ದಾವೂದ್ ನನ್ನು ಮುಟ್ಟಲೂ ಆಗದಂತಹ ಸ್ಥಿತಿಯಾಗಿರುವುದು! ಯಾಕೆಂದರೆ, ಭಾರತದಲ್ಲಿನ ಕೆಲ ಪ್ರಭಾವಿಗಳೇ ಆತನ ಅಂಗರಕ್ಷಕರಾಗಿರುವ ಕಾರಣಕ್ಕೇ ಇನ್ನೂ ಅಸಾಧ್ಯವಾಗಿರುವುದು!

– ತಪಸ್ವಿ

Tags

Related Articles

Close