ಪ್ರಚಲಿತ

ಭಾರತದ ಮೊತ್ತ ಮೊದಲ 14-ಲೇನ್ ದೆಹಲಿ-ಮೀರತ್ ಎಕ್ಸ್ ಪ್ರೆಸ್ ವೇಯನ್ನು ಕೇವಲ 18 ತಿಂಗಳ ಕಾಲಾವಧಿಯಲ್ಲಿ ನಿರ್ಮಿಸಿ ದಾಖಲೆ ಬರೆದಿದೆ ಮೋದಿ ಸರಕಾರ!! ಇದಲ್ಲವೆ ಅಛ್ಚೆ ದಿನ್?

ಅಛ್ಚೆ ದಿನ್ ಬಂತಾ? ಅಛ್ಚೆ ದಿನ್ ಯಾವಾಗ ಬರುತ್ತೆ? ಎಂದು ಹುಚ್ಚು ನಾಯಿ ಕಡಿದಂಗೆ ಅಲ್ಲಿ ಇಲ್ಲಿ ಕೇಳಿಕೊಂಡು ತಿರುಗಾಡುವವರೆಲ್ಲ ಒಂದು ಬಾರಿ ಭಾರತದಲ್ಲಾಗುತ್ತಿರುವ ಬುಲೆಟ್ ವೇಗದ ವಿಕಾಸವನ್ನು ನೋಡಿ. ಕಳೆದ ಎಪ್ಪತ್ತು ವರ್ಷಗಳಲ್ಲಿ ಯಾವುದೇ ಸರಕಾರ, ಶರವೇಗದಲ್ಲಿ ಅಭಿವೃದ್ದಿ ನಡೆಸಿದ ಒಂದೇ ಒಂದು ಉದಾಹರಣೆ ಕೊಡಿ. 48 ವರ್ಷಗಳ ನಾಮಧಾರಿ ಗಾಂಧಿಗಳ ಆಡಳಿತದ ಕಾಲದಲ್ಲಿ ನಡೆಸಲಾದ ಅಭಿವೃದ್ದಿ ಕಾರ್ಯಗಳ ಲೆಕ್ಕ ನೀಡಿ. ಒಕ್ಕಿ ತೆಗೆದರೂ ಒಂದೆ ಒಂದು ಅಭಿವೃದ್ದಿ ಕಾರ್ಯದ ಮಾಹಿತಿ ಸಿಗಲಿಕ್ಕಿಲ್ಲ, ಆದರೆ ಹಗರಣಗಳ ಸರಮಾಲೆಯಂತೂ ಮೊಗೆದಷ್ಟೂ ಬರುವುದು!! ಇಂತಹ “ಸ್ಕ್ಯಾಮ್ ಗ್ರೆಸ್” ಸರಕಾರವನ್ನೂ ಸಮರ್ಥಿಸುವ ಪಿಡ್ಡಿಗಳು ನಮ್ಮ ಮಧ್ಯೆ ಇದ್ದಾರೆ ಎಂದರೆ ಬೌದ್ಧಿಕ ದಿವಾಳಿತನವೂ ಎಂಥದ್ದಿರಬೇಕು?

ಹಿಂದೆಲ್ಲ ಯೋಜನೆಗಳು ಕೇವಲ ಘೋಷಣೆ ಮಾತ್ರ ಆಗುತ್ತಿತ್ತು. ಒಂದು ಯೋಜನೆ ಕಾರ್ಯರೂಪಕ್ಕೆ ಬರಬೇಕಾದರೆ ಹತ್ತು ಹಲವು ವರ್ಷಗಳೇ ಬೇಕಾಗುತ್ತಿದ್ದವು. ಮತ್ತೆ ಕೆಲವು ಯೋಜನೆಗಳಂತೂ ದಶಕಗಳಿಂದ ಕಡತಗಳಲ್ಲೆ ಧೂಳು ತಿನ್ನುತ್ತಾ ಬಿದ್ದಿರುತ್ತಿದ್ದವು. ಏನು ಕೇಳಿದರೂ ಚಲ್ತಾ ಹೈ ಎನ್ನುವ ರೆಡಿಮೇಡ್ ಉತ್ತರ ದೊರೆಯುತ್ತಿತ್ತು. ಈಗ ಹಿಂದಿನ “ಚಲ್ತಾ ಹೈ” ಮನಸ್ಥಿತಿಯಿಲ್ಲ. ಮೋದಿ ತಾನೂ ಸುಮ್ಮನೆ ಕೂರುವುದಿಲ್ಲ, ಅಧಿಕಾರಿಗಳನ್ನೂ ಕೂರಲು ಬಿಡುವುದಿಲ್ಲ. ಯೋಜನೆ ಘೋಷಣೆಯಾಗಿ ನಿಗದಿತ ಸಮಯದೊಳಗೆ ಪೂರ್ಣಗೊಳ್ಳದಿದ್ದರೆ ಅಧಿಕಾರಿಗಳು ಗಂಟು ಮೂಟೆ ಕಟ್ಟುವ ಪರಿಸ್ಥಿತಿ ಇವತ್ತು ನಿರ್ಮಾಣವಾಗಿದೆ. ಹಾಗಾಗಿ ಸರಕಾರದ ಎಲ್ಲಾ ವಿಭಾಗಗಳ ಅಧಿಕಾರಿಗಳು ಎದ್ದು ಬಿದ್ದು ಕೆಲಸ ಮಾಡುತ್ತಾರೆ. ಅದರ ಫಲವೆ ಅವಧಿಗೂ ಮುನ್ನ ಯೋಜನೆಗಳು ಪೂರ್ಣಗೊಳ್ಳುತ್ತಿರುವುದು.

ಹಳ್ಳಿಗಳ ಸಂಪೂರ್ಣ ವಿದ್ಯುದೀಕರಣಕ್ಕೆ ಸಾವಿರ ದಿನಗಳ ಗಡುವಿಗೆ ಹದಿನೆರಡು ದಿನ ಇರುವಾಗಲೆ ಗುರಿ ತಲುಪಿದ ಮೋದಿ ಸರಕಾರ ಈಗ ದೆಹಲಿ-ಮೀರತ್ ಎಕ್ಸ್ ಪ್ರೆಸ್ ವೇ ನಿರ್ಮಾಣದ ಮೊದಲನೆ ಫೇಸ್ ಅನ್ನು ಕೇವಲ 18 ತಿಂಗಳುಗಳ ಒಳಗೆ ಪೂರ್ಣಗೊಳಿಸಿ ದಾಖಲೆ ನಿರ್ಮಿಸಿದೆ!! ದೇಶದ ಮೊತ್ತ ಮೊದಲ 14 ಲೇನ್ ನ ಹೆದ್ದಾರಿ ಕಾರ್ಯ ಪೂರ್ಣಗೊಳಿಸಲು 30 ತಿಂಗಳ ಗಡು ನಿಗದಿ ಪಡಿಸಲಾಗಿತ್ತು. ಆದರೆ ಹೆದ್ದಾರಿಯ ಮೊದಲನೆ ಫೇಸ್ ಕೇವಲ 18 ತಿಂಗಳುಗಳ ಒಳಗೆ ಪೂರ್ಣಗೊಂಡು ಮೋದಿ ಅದನ್ನು ಉದ್ಘಾಟಿಸಿ ದೇಶಕ್ಕೆ ಸಮರ್ಪಿಸಿಯೂ ಬಿಟ್ಟಿದ್ದಾರೆ!! ಹೆದ್ದಾರಿ ಹದಿನೆರಡು ತಿಂಗಳಿಗೂ ಮೊದಲು ಪೂರ್ಣಗೊಳ್ಳಲು, ಶರವೇಗದಲ್ಲಿ ಕೆಲಸ ನಿರ್ವಹಿಸಲು, ರಾತ್ರಿ ಹಗಲು ಶ್ರಮಿಸಿದ ಎಲ್ಲಾ ಅಧಿಕಾರಿಗಳು ಮತ್ತು ಬೆವರು ಸುರಿಸಿ ದುಡಿದ ಕಾರ್ಮಿಕರಿಗೊಂದು ಸಲಾಂ. 82 ಕಿಲೋಮೀಟರ್ ಉದ್ದ, 9 ಕಿಲೋಮೀಟರ್ ಅಗಲದ ಈ ಹೆದ್ದಾರಿ ಸಂಪೂರ್ಣಗೊಂಡರೆ ದೆಹಲಿಯಿಂದ ಮೀರತ್ ಗೆ ಕೇವಲ 45 ನಿಮಿಷಗಳಲ್ಲಿ ತಲುಪಬಹುದು!!

ಇಡಿಯ ಹೆದ್ದಾರಿಯನ್ನು ಸ್ಮಾರ್ಟ್ ಮತ್ತು ಪರಿಸರ ಸ್ನೇಹಿಯಾಗಿ ಇರುವಂತೆ ನಿರ್ಮಿಸಲಾಗಿದೆ. ಸಂಪೂರ್ಣ ಹಸಿರು ಹೆದ್ದಾರಿ ಪರಿಸರ ಮಾಲಿನ್ಯವನ್ನು ತಡೆಗಟ್ಟಲು ಸಹಾಯಕವಾಗಿರುವಂತೆ ನಿರ್ಮಿಸಲಾಗಿದೆ. ಈ ಹೆದ್ದಾರಿ ರಾಷ್ಟ್ರ ರಾಜಧಾನಿಯ NCR ಪರಿಸರದ ವಾಹನ ದಟ್ಟಣೆಯನ್ನು ಕಡಿಮೆಗೊಳಿಸಿ ಇಂಧನದಿಂದಾಗುವ ಪರಿಸರ ಮಾಲಿನ್ಯವನ್ನು ಕಡಿಮೆ ಮಾಡುತ್ತದೆ. ಹೆದ್ದಾರಿಯ ಮೊದಲ ಪ್ಯಾಕೇಜ್ 842 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಒಟ್ಟು 4975.17 ಕೋಟಿ ರೂಪಾಯಿ ವೆಚ್ಚದಲ್ಲಿ ಸಂಪೂರ್ಣ ಯೋಜನೆ ಪೂರ್ಣಗೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ.

ಇದೇ ವೇಗದಲ್ಲಿ ಕೆಲಸ ನಡೆದರೆ ಆದಷ್ಟು ಬೇಗನೆ ಸಂಪೂರ್ಣ ಹೆದ್ದಾರಿಯನ್ನು ದೇಶಕ್ಕೆ ಸಮರ್ಪಿಸಲಾಗುವುದು ಎಂದು ಮೋದಿ ಆಶಾ ಭಾವನೆ ವ್ಯಕ್ತ ಪಡಿಸಿದ್ದಾರೆ. 82 ಕಿಲೋಮೀಟರ್ ನಲ್ಲಿ, 27.74 ಕಿಲೋಮೀಟರ್ 14-ಲೇನ್ ಮತ್ತು ಉಳಿದವು 6-ಲೇನ್ ಎಕ್ಸ್ ಪ್ರೆಸ್ ವೇ ಆಗಿರುತ್ತದೆ. ಸಂಪೂರ್ಣವಾಗಿ ಸೌರ ವಿದ್ಯುತ್ ಮೂಲಕ ಈ ಹೆದ್ದಾರಿಗಳನ್ನು ಬೆಳಗಲಾಗುವುದು. ದೆಹಲಿ ಮತ್ತು ದಾಸ್ನಾ ನಡುವೆ ಸುಮಾರು 28 ಕಿಲೋಮೀಟರ್ ಉದ್ದದ ಬೈಸಿಕಲ್ ಟ್ರ್ಯಾಕ್ ಗಳನ್ನು ಹೊಂದಿರುವ ಏಕೈಕ ಹೆದಾರಿ ಎನ್ನುವ ಹೆಗ್ಗಳಿಕೆಯೂ ದೆಹಲಿ-ಮೀರತ್ ಎಕ್ಸ್ ಪ್ರೆಸ್ ವೇ ಗೆ ಲಭ್ಯವಾಗಿದೆ. 11 ಫ್ಲೈಓವರ್ಗಳು, 3 ರೈಲ್ವೆ-ಓವರ್ ಬ್ರಿಡ್ಜ್ ಗಳು, 5 ಪ್ರಮುಖ ಮತ್ತು 24 ಮೈನರ್ ಸೇತುವೆಗಳು, 36 ವಾಹನ ಮತ್ತು 14 ಪಾದಚಾರಿ ಅಂಡರ್ಪಾಸ್ ಗಳನ್ನು ಈ ಹೈವೆ ಹೊಂದಲಿದೆ!! ಇದೆ ರೀತಿ ಈಸ್ಟರ್ನ್ ಫೆರಿಫೆರಲ್ ಎಕ್ಸ್ ಪ್ರೆಸ್ ವೇಯ ಕಾರ್ಯವೂ ಭರದಿಂದ ಸಾಗುತ್ತಿದೆ. ಈಗಲಾದರೂ ಪಿಡ್ಡಿಗಳಿಗೆ ಅಛ್ಚೆ ದಿನ್ ಕಂಡಿತಾ?

ಪೆಟ್ರೋಲ್ ಬೆಲೆ ಹೆಚ್ಚಾಯ್ತು, ನೋಟ್ ಬ್ಯಾನ್ ಹಣ ಎಲ್ಲಿ ಹೋಯ್ತು? ಎಂದು ಬಾಯಿ ಬಡಿದುಕೊಳ್ಳುವವರಿಗೆ ಇದೆ ಪೆಟ್ರೋಲಿನ ಅಬಕಾರಿ ಸುಂಕವನ್ನು ದೇಶದ ಮೂಲಭೂತ ಸೌಕರ್ಯಗಳ ಅಭಿವೃದ್ದಿಗೆ ಉಪಯೋಗಿಸಲಾಗುತ್ತದೆ ಎನ್ನುವ ವಿಚಾರ ಗೊತ್ತಿಲ್ಲವೆ? ನಮ್ಮ ದೇಶ ಸಿಂಗಾಪುರ, ಜಪಾನ್, ಅಮೇರಿಕಾ ಇಂಗ್ಲೆಂಡ್ ರೀತಿ ಅಭಿವೃದ್ದಿ ಹೊಂದಬೇಕೆಂದು ಬಯಸುವ ನಾವು, ಮೋದಿ ದೇಶದ ಹಿತಕ್ಕಾಗಿ ಕಠೋರ ನಿರ್ಧಾರ ತೆಗೆದುಕೊಂಡರೆ ಅದಕ್ಕೂ ಅವರನ್ನೇ ಜರೆಯುತ್ತೇವೆ! ದೇಶದಲ್ಲಿ ನಡೆಯುವ ಅಭಿವೃದ್ದಿ ಕಾರ್ಯಗಳು ಒಂದೆಡೆಯಾದರೆ ಮತ್ತೊಂದೆಡೆ ಯೂಪಿಎ ತಿಂದು ಮುಕ್ಕಿದ ವಿದೇಶೀ ಸಾಲಗಳ ಭಾರ. ಇವೆರಡನ್ನೂ ಸರಿದೂಗಿಸುತ್ತಾ ಎರಡಲಿಗಿನ ಕತ್ತಿಯ ಮೇಲಿನ ನಡಿಗೆ ನಡೆಯುತ್ತಿದ್ದಾರೆ ಮೋದಿ. ತನಗಾಗಿ ಕವಡೆ ಕಾಸೂ ಕೂಡಿಡದ ಫಕೀರ, ಜನರ ಒಂದು ರುಪಾಯಿಯನ್ನೂ ವ್ಯರ್ಥವಾಗಲು ಬಿಡುವುದಿಲ್ಲ ನಂಬಿಕೆ ಇಡಿ.

ಹೃದಯಾಂತರಾಳದಿಂದ ಕೂಗಿ ಒಮ್ಮೆ…2019 ನಮೋ ಮತ್ತೊಮ್ಮೆ……

-ಶಾರ್ವರಿ

Tags

Related Articles

Close