ಪ್ರಚಲಿತ

ಮುಸ್ಲಿಂ ಶಾಸಕನ ವಿರುದ್ಧ ರೊಚ್ಚಿಗೆದ್ದ ಜನತೆ.! ವೋಟಿಗಾಗಿ ಹಿಂದೂ ದೇವರ ಹಾಡನ್ನು ಈ ಶಾಸಕ ನಕಲಿ ಮಾಡಿದ್ದು ಹೇಗೆ ಗೊತ್ತಾ.?!

ಕಾಂಗ್ರೆಸ್ ಹಿಂದೂಗಳನ್ನು ಹಿಂದಿನಿಂದಲೂ ಕಡೆಗಣಿಸುತ್ತಲೇ ಬಂದಿರುವ ಪಕ್ಷ. ಕೇವಲ ಅಲ್ಪಸಂಖ್ಯಾತರ ಮತಕ್ಕಾಗಿ ಹಿಂದೂಗಳ ಮತ್ತು ಹಿಂದೂ ಧರ್ಮದ ಆಚಾರ ವಿಚಾರಗಳನ್ನು ಮತ್ತು ಸಂಪ್ರದಾಯವನ್ನು ಕಡೆಗಣಿಸುತ್ತಾ ಬಂದಿರುವ ಕಾಂಗ್ರೆಸ್ ಹಿಂದೂ ವಿರೋಧಿ ನೀತಿಯಲ್ಲೇ ಆಡಳಿತ ನಡೆಸಿಕೊಂಡು ಬಂದಿದೆ. ಹಿಂದೂಗಳ ಭದ್ರಕೋಟೆ ಕರಾವಳಿಯಲ್ಲಿ ಅಧಿಕಾರ ವಹಿಸಿಕೊಂಡ ಕಾಂಗ್ರೆಸ್, ಸದಾ ಒಂದಿಲ್ಲೊಂದು ವಿವಾದವನ್ನು ಹುಟ್ಟುಹಾಕುತ್ತಲೇ ಇದೆ.

ಮಂಗಳೂರಿನ ಉತ್ತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕರಾದ ಮೊಯಿದ್ದೀನ್ ಬಾವಾ , ಇತ್ತೀಚೆಗೆ ತನ್ನ ಕ್ಷೇತ್ರದಲ್ಲಿ ಮತ ಓಲೈಕೆಗಾಗಿ ಮನೆ ಮನೆಗೆ ಸೀರೆ ಹಂಚಿ ಸಿಕ್ಕಿಬಿದ್ದಿದ್ದರು. ಮಾಧ್ಯಮಗಳಲ್ಲಿ ಈ ಬಗ್ಗೆ ವರದಿಯಾಗುತ್ತಿದ್ದಂತೆ ಸಮಾಜಾಯಿಸಿಕೊಂಡ ಶಾಸಕ ಈ ವಿಚಾರದಿಂದ ತಪ್ಪಿಸಿಕೊಂಡಿದ್ದರು.

 

ಅಯ್ಯಪ್ಪ ಸ್ವಾಮಿ ದೇವರಿಗೆ ಶಾಸಕನಿಂದ ಅವಮಾನ..!

ರಾಜಕೀಯ ನಾಟಕ ಆರಂಭಿಸಿದ ಶಾಸಕ ಮೊಯಿದ್ದೀನ್ ಬಾವಾ ಇತ್ತೀಚೆಗೆ ಹಿಂದೂ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಕೇಸರಿ ಶಾಲು ಹಾಕಿಕೊಂಡು ಕಾಣಿಸಿಕೊಂಡಿದ್ದರು. ಚುನಾವಣಾ ಹೊಸ್ತಿಲಲ್ಲಿ ಶಾಸಕರ ಈ ನಡೆ ಬಹಳ ಚರ್ಚೆಗೆ ಕಾರಣವಾಗಿತ್ತು. ಮಂಗಳೂರಿನ ಸುರತ್ಕಲ್ ಪ್ರದೇಶದಲ್ಲಿ ಅತೀ ಹೆಚ್ಚು ಹಿಂದೂಗಳು ಇರುವುದರಿಂದ , ಚುನಾವಣೆ ಸಮೀಪಿಸುತ್ತಿದ್ದಂತೆ ಹಿಂದೂಗಳ ಓಲೈಕೆಗೆ ಪ್ರಯತ್ನಿಸುತ್ತಿರುವ ಮೊಯಿದ್ದೀನ್ ಬಾವಾ, ಇದೀಗ ಪ್ರಚಾರದ ಭರದಲ್ಲಿ ಹಿಂದೂ ದೇವರಿಗೆ ಅವಮಾನ ಎಸಗಿದ್ದಾರೆ.

ತನ್ನ ಪ್ರಚಾರಕ್ಕಾಗಿ ಒಂದು ಹಾಡು ರಚನೆ ಮಾಡಿದ್ದು , ಈ ಹಾಡು ಹಿಂದೂಗಳ ಆರಾಧ್ಯ ದೈವ ಶಬರಿಮಲೆ ಅಯ್ಯಪ್ಪ ಸ್ವಾಮಿಯ ಭಕ್ತಿಗೀತೆಯ ದಾಟಿಯಲ್ಲಿ ರಚಿಸಿದ್ದಾರೆ. ತನ್ನ ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯವನ್ನು ಪ್ರಚಾರ ಮಾಡುವ ದೃಷ್ಟಿಯಿಂದ ಈ ಹಾಡು ನಿರ್ಮಾಣ ಮಾಡಿದ್ದು, ಈ ಹಾಡು ಶಬರಿ ಮಲೆ ಅಯ್ಯಪ್ಪ ಸ್ವಾಮಿಯ ಕುರಿತ ಹಾಡೊಂದನ್ನು ನಕಲಿ ಮಾಡಿ , ಶಾಸಕ ಮೊಯಿದ್ದೀನ್ ಬಾವಾ ಕುರಿತ ಪದಗಳನ್ನು ಸೇರಿಸಿ ಹಾಡು ನಿರ್ಮಾಣ ಮಾಡಿದ್ದು , “ಕಲ್ಲು ಮುಳ್ಳು ಪಾದಕ್ಕೆ ಹೂ” ಎಂದು ಇದ್ದ ಭಕ್ತಿಗೀತೆಯನ್ನು “ಕಲ್ಲು ಮುಳ್ಳು ತೋಜುನೆ ಇಜ್ಜಿ” ಎಂದು ತುಳು ಭಾಷೆಯಲ್ಲಿ ಹಾಡು ರಚಿಸಿದ್ದಾರೆ.

ಹಿಂದೂಪರ ಸಂಘಟನೆಗಳಿಂದ ಆಕ್ರೋಶ..!

ಮೊಯಿದ್ದೀನ್ ಬಾವಾ ತನ್ನ ರಾಜಕೀಯ ಪ್ರಚಾರಕ್ಕಾಗಿ ಹಿಂದೂ ದೇವರುಗಳ ಭಕ್ತಿಗೀತೆಯನ್ನು ಅವಮಾನ ಮಾಡಲಾಗುತ್ತಿದೆ ಎಂದು ಆರೋಪಿಸಿದ ಬಜರಂಗದಳ ಮುಖಂಡ ಶರಣ್ ಪಂಪ್ ವೆಲ್ “ಶಾಸಕರು ತನ್ನ ಕ್ಷೇತ್ರದಲ್ಲಿ ಹಿಂದೂ ಸಮಾಜವನ್ನು ಓಲೈಕೆ ಮಾಡಲು ಹೊರಟಿದ್ದಾರೆ. ಆದರೆ ಶಾಸಕರ ಯಾವುದೇ ಓಲೈಕೆಗೂ ಹಿಂದೂ ಸಮಾಜ ಮನಿಯುವುದಿಲ್ಲ. ಹಿಂದೂ ದೇವರುಗಳಿಗೆ ಅವಮಾನ ಮಾಡುವುದು ಹಿಂದೂ ವಿರೋಧಿಗಳ ಕೃತ್ಯ, ಆದರೆ ಶಾಸಕರೇ ಈ ರೀತಿ ನಡೆದುಕೊಂಡಿದ್ದು ಶಾಸಕರಿಗೆ ಹಿಂದೂ ಧರ್ಮದ ಬಗ್ಗೆ ಇರುವ ತಾತ್ಸಾರ ಮನೋಭಾವ ಎದ್ದು ಕಾಣುತ್ತಿದೆ’ ಎಂದು ಕಿಡಿಕಾರಿದ್ದಾರೆ.

ಈ ಹಿಂದೆ ತನ್ನ ಕ್ಷೇತ್ರದಲ್ಲಿ ಕೊಲೆಯಾದ ಹಿಂದೂಪರ ಸಂಘಟನೆಗಳ ಕಾರ್ಯಕರ್ತ ದೀಪಕ್ ರಾವ್ ಕೊಲೆ ಆರೋಪಿಗಳು ಕೂಡಾ ಶಾಸಕ ಮೊಯಿದ್ದೀನ್ ಬಾವಾ ರವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. ನಂತರದಲ್ಲಿ ಅದನ್ನೆಲ್ಲಾ ಮರೆ ಮಾಚಲು , ಹಿಂದೂಗಳ ಓಲೈಕೆಯಲ್ಲೇ ತೊಡಗಿರುವ ಶಾಸಕ ಬಾವಾ ಹಿಂದೂ ಧಾರ್ಮಿಕ ಕಾರ್ಯಕ್ರಮಗಳಿಗೆ ಭೇಟಿ ನೀಡಿ ತಾನು ಹಿಂದೂ ಧರ್ಮದ ಪರವಾಗಿದ್ದೇನೆ ಎಂದು ತೋರ್ಪಡಿಕೆಗಾಗಿ ನಡೆದುಕೊಂಡಿದ್ದರು.

ಸವಾಲೊಡ್ಡಿದ ಬಿಜೆಪಿ ನಾಯಕ..!

ಕಾಂಗ್ರೆಸ್ ಶಾಸಕರಾದ ಮೊಯಿದ್ದೀನ್ ಬಾವಾ ಹಿಂದೂಗಳ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಾರೆ ಎಂದು ಆರೋಪಿಸಿದ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷರಾದ ಡಾ‌. ಭರತ್ ವೈ ಶೆಟ್ಟಿ ಶಾಸಕರಿಗೆ ಬಹಿರಂಗ ಸವಾಲೊಡ್ಡಿದ್ದಾರೆ. ‘ಮೊಯಿದ್ದೀನ್ ಬಾವಾ ತಾಕತ್ತಿದ್ದರೆ ಮಸೀದಿಯಲ್ಲಿ ಕೂಗುವ ಬಾಂಗ್ ನ ದಾಟಿಯಲ್ಲೇ ತನ್ನ ಪ್ರಚಾರದ ಹಾಡು ರಚನೆ ಮಾಡಲಿ, ಒಂದು ಕ್ಷೇತ್ರದ ಶಾಸಕರಾಗಿ ಕೋಮು ಸಾಮರಸ್ಯ ಕದಡುವಂತೆ ಮಾಡುತ್ತಿರುವ ಮೊಯಿದ್ದೀನ್ ಬಾವಾ ಪದೇ ಪದೇ ಒಂದಿಲ್ಲೊಂದು ರೀತಿಯಲ್ಲಿ ಹಿಂದೂ ಧರ್ಮಕ್ಕೆ ಅವಮಾನ ಮಾಡುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಶಾಸಕರಿಗೆ ಛೀಮಾರಿ..!

ಶಾಸಕರ ಈ ಪ್ರಚಾರದ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಹಿಂದೂ ಯುವಕರು ಶಾಸಕರಿಗೆ ಬಹಿರಂಗವಾಗಿ ಛೀಮಾರಿ ಹಾಕಿದ್ದಾರೆ. ಫೇಸ್‌ಬುಕ್‌ ವಾಟ್ಸಾಪ್ ಗಳಲ್ಲಿ ಶಾಸಕರಿಗೆ ಕೆಟ್ಟ ಪದಬಳಕೆ ಮಾಡಿಯೇ ಛೀಮಾರಿ ಹಾಕಲಾಗುತ್ತಿದೆ. ಹಿಂದೂ ಧರ್ಮದ ಆಚಾರ ವಿಚಾರಗಳನ್ನು ಗೌರವಿಸದವರು ಹಿಂದೂ ವಿರೋಧಿಗಳು , ಆದರೆ ಶಾಸಕರಾಗಿ ಈ ರೀತಿ ನಡೆದುಕೊಂಡಿರುವುದು ಹಿಂದೂ ಸಮಾಜಕ್ಕೆ ಮಾಡಿದ ದ್ರೋಹವಾಗಿದೆ.

 ಶಾಸಕ ಮೊಯಿದ್ದೀನ್ ಬಾವಾ , ತನ್ನ ಕ್ಷೇತ್ರದಲ್ಲಿ ಅತೀ ಹೆಚ್ಚು ಹಿಂದೂಗಳು ಇರುವುದರಿಂದ ಚುನಾವಣೆ ಸಮೀಪಿಸುತ್ತಿದ್ದಂತೆ ಹಿಂದೂಗಳ ಮನವೊಲಿಸಲು ಪ್ರಾರಂಭಿಸಿದ್ದಾರೆ‌. ತನ್ನದೇ ಕ್ಷೇತ್ರದಲ್ಲಿ ಹಿಂದೂ ಕಾರ್ಯಕರ್ತನ ಹತ್ಯೆ ನಡೆದಾಗಲೂ ಉಡಾಫೆ ತೋರಿದ್ದ ಶಾಸಕ ಇದೀಗ ತನ್ನ ಚುನಾವಣಾ ಪ್ರಚಾರಕ್ಕಾಗಿ ಹಿಂದೂ ದೇವರುಗಳ ಹಾಡನ್ನು ಬಳಸಿಕೊಂಡು ಹಿಂದೂಗಳ ಭಾವನೆಗೆ ಧಕ್ಕೆ ಉಂಟುಮಾಡಿದ್ದಾರೆ.!

–ಅರ್ಜುನ್

 

Tags

Related Articles

Close