ಪ್ರಚಲಿತ

ಪ್ರಧಾನಿ ನರೇಂದ್ರ ಮೋದಿ ಆಡಳಿತಕ್ಕೆ ಸ್ವೀಡನ್ ಸಚಿವರಿಂದ ಭಾರೀ ಶ್ಲಾಘನೆ !! ವಿಶ್ವ ಗುರುವಾಗುತ್ತಾ ಭಾರತ!!

ನರೇಂದ್ರ ಮೋದಿ ಎಂದರೆ ಹಾಗೇನೇ!! “ಸಾಮಾಜಿಕ ವಿಜ್ಞಾನಿ” ಎನ್ನುವ ಹೆಸರುಗಳಿಸಿರುವ ನರೇಂದ್ರ ಮೋದಿ ಓರ್ವ ಜಗದೇಕವೀರನೂ ಹೌದು.. ಭಾರತ ದೇಶ ಇಂದು ವಿಶ್ವಗುರುವಾಗುವತ್ತ ದಾಪುಗಾಲು ಇಡಲು ಮುನ್ನುಗ್ಗುತ್ತಿದೆ ಅಂದರೆ ಅದರಲ್ಲಿ ಮೋದಿಯವರ ಪಾತ್ರ ಬಹುದೊಡ್ಡದಿದೆ ಎನ್ನುವುದು ಕೋಟಿ ಕೋಟಿ ಭಾರತೀಯರ ಅಭಿಪ್ರಾಯ ಎನ್ನುವ ವಿಚಾರವೂ ಗೊತ್ತೇ ಇದೆ!!

ಪ್ರಧಾನಿ ನರೇಂದ್ರ ಮೋದಿ ಹವಾ ದೇಶದಲ್ಲಿ ಮಾತ್ರವಲ್ಲದೇ ಇಡೀ ವಿಶ್ವದಲ್ಲಿಯೇ ಮುಂದುವರಿದಿದ್ದು, ಇದಕ್ಕೆ ಸಾಕ್ಷಿ ಎನ್ನುವಂತೆ, ಈಗಾಗಲೇ ವಿಶ್ವದ ಅತಿರಥರನ್ನೆಲ್ಲಾ ಹಿಂದಿಕ್ಕಿರುವ ನರೇಂದ್ರ ದಾಮೋದರ ದಾಸ್ ಮೋದಿಯವರ ಜನಪ್ರಿಯತೆ ನಾಗಾಲೋಟದಂತೆ ಹೆಚ್ಚಾಗುತ್ತಿದ್ದು, ನವಭಾರತದ ಉಜ್ಜಲ ಭವಿಷ್ಯದ ಕನಸನ್ನು ಹೊತ್ತಿರುವ ಹಿರಿಮೆ ಇವರದ್ದಾಗಿದೆ.

Related image

ನರೇಂದ್ರ ಮೋದಿಯವರ ರಾಜತಾಂತ್ರಿಕತೆಯ ಯಶಸ್ಸಿಗೆ ವಿಶ್ವವೇ ತಲೆ ಬಾಗಿದೆಯಲ್ಲದೇ ಭ್ರಷ್ಟಾಚಾರ ವಿರೋಧಿಯಾಗಿ ಪ್ರಧಾನಿ ನರೇಂದ್ರ ಮೋದಿ ತೆಗೆದುಕೊಂಡ ನೋಟ್ ಬ್ಯಾನ್, ಜಿ ಎಸ್ ಟಿ ಕ್ರಮವನ್ನು ಅಂತರಾಷ್ಟ್ರೀಯ ಸಂಸ್ಥೆಗಳಲ್ಲದೆ ಹಲವಾರು ಆರ್ಥಿಕ ತಜ್ಞರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲದೇ ಇದು ನರೇಂದ್ರ ಮೋದಿಯವರ “ಎದೆಗಾರಿಕೆಯ ನಿರ್ಧಾರ” ಎಂದು ಕೂಡಾ ಬಣ್ಣಿಸಿದ್ದರು!!! ಹಾಗಾಗಿ ನರೇಂದ್ರ ಮೋದಿಯವರ ರಾಜತಾಂತ್ರಿಕತೆಗೆ ಇಡೀ ವಿಶ್ವವೇ ಮೋದಿಯವರನ್ನು ಮೆಚ್ಚಿಕೊಳ್ಳುತ್ತೆ ಎಂದರೆ ಇಂತಹ ಪ್ರಧಾನಿಯನ್ನು ಪಡೆದುಕೊಂಡ ನಾವೇ ಧನ್ಯರು?. ಅಲ್ವೇ??

ಮೋದಿ ಆಡಳಿತಕ್ಕೆ ಸ್ವೀಡನ್ ಸಚಿವರ ಶ್ಲಾಘನೆ!!

ಪ್ರಧಾನಿ ನರೇಂದ್ರ ಮೋದಿ ಅವರ ದಿಟ್ಟ ಆಡಳಿತದಿಂದ ಭಾರತ ವಿಶ್ವಗುರುವಾಗುವತ್ತ ದಾಪುಗಾಲಿಡುತ್ತಿದ್ದು, ಅದಕ್ಕೆ ಪೂಕರವಾಗಿ ವಿಶ್ವದ ನಾನಾ ರಾಷ್ಟ್ರಗಳು ಭಾರತದ ನೋಟ ಬೀರಿದ್ದಾರೆ. ಈ ಅಂಶ ಇದೀಗ ಮತ್ತೊಮ್ಮೆ ಸಾಬೀತಾಗಿದ್ದು, ಭಾರತ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ವಿಶ್ವನಾಯಕನಾಗುತ್ತಿದೆ ಎಂದು ಸ್ವೆಡಿಷ್ ದೇಶದ ಕೌಶಲ ಮತ್ತು ಉದ್ಯಮ ಸಚಿವ ಮೈಕಲ್ ಡ್ಯಾಂಬರ್ಗ್ ಅಭಿಪಾಯ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರೀಯ ವಾಹಿನಿಯೊಂದಕ್ಕೆ ಸಂದರ್ಶನ ನೀಡಿರುವ ಅವರು, ತಂತ್ರಜ್ಞಾನ ಅಳವಡಿಕೆ ಒಂದು ದೇಶದ ಆರ್ಥಿಕ ಚಿತ್ರಣವನ್ನೆ ಬದಲಾಯಿಸುತ್ತೆ. ಅದನ್ನು ಭಾರತ ಇತ್ತೀಚಿನ ದಿನಗಳಲ್ಲಿ ತೀವ್ರಗೊಳಿಸಿದೆ. ಆದ್ದರಿಂದ ಸ್ವೀಡನ್ ಭಾರತದ ರೀತಿಯನ್ನು ಅಳವಡಿಸಿಕೊಳ್ಳಬೇಕಿದೆ. ಜನರಿಗೆ ದಕ್ಷ ಆಡಳಿತ ನೀಡಲು ಕ್ಯಾಶಲೆಸ್ ಸಮಾಜ ನಿರ್ಮಿಸುವುದು ಮುಖ್ಯ. ಅದನ್ನು ಭಾರತ ಸರ್ಕಾರ ಮಾಡಿ ತೋರಿಸುತ್ತಿದೆ. ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳುತ್ತಿದೆ ಎಂದು ಹೇಳಿದ್ದಾರೆ.

ಏಪ್ರಿಲ್ 17ರಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಸ್ವೀಡನ್ ಪ್ರಧಾನಿ ಸ್ಟಿಫನ್ ಲಾಫ್ನೆನ್ ಭಾರತ ಮತ್ತು ಸ್ವೀಡನ್ ಮಧ್ಯೆ ಜಂಟಿ ಯೋಜನೆಯೊಂದಕ್ಕೆ ಸಹಿ ಹಾಕಿದ್ದರು. ಈ ನಿರ್ಧಾರ ಸ್ವೀಡನ್ ಗೆ ಭಾರಿ ಅನುಕೂಲ ಕಲ್ಪಿಸಲಿದೆ. ಭಾರತ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಿಂದ ವಿಶ್ವದ ಗಮನ ಸೆಳೆದಿದ್ದು, ನೋಟ್ಯಂತರ, ಕ್ಯಾಶಲೆಸ್ ಸಮಾಜ ನಿರ್ಮಾಣ, ತೆರಿಗೆಯಲ್ಲಿ ಹೊಸ ಬದಲಾವಣೆಯ ನಿರ್ಧಾರಗಳು ದೇಶಕ್ಕೆ ಹೊಸ ರೂಪ ನೀಡಿವೆ. ಈ ನಿಟ್ಟಿನಲ್ಲಿ ಭಾರತ ವಿಶ್ವನಾಯಕನ ಪಟ್ಟ ಅಲಂಕರಿಸುತ್ತಿದೆ ಎಂದು ಹೇಳಿದ್ದಾರೆ.

ಅದಲ್ಲದೆ ಮೊನ್ನೆ ತಾನೇ ಪ್ರಧಾನಿ ನರೇಂದ್ರ ಮೋದಿಯವರು ಸ್ವೀಡನ್ ತೆರಳಿದ್ದು ಪ್ರಧಾನಿ ನರೇಂದ್ರ ಮೋದಿ ಮೇಕ್ ಇನ್ ಇಂಡಿಯಾ ಮಂತ್ರ ಜಪಿಸಿದ್ದರು!! ಸ್ವೀಡನ್ ಪ್ರಧಾನಿ ಸ್ಟೀಫನ್ ಲಾಫ್‍ವೆನ್ ಜತೆ ನಡೆದ ದ್ವಿಪಕ್ಷೀಯ ಮಾತುಕತೆ ವೇಳೆ ರಕ್ಷಣೆ, ಸೈಬರ್ ಸುರಕ್ಷತೆಗೆ ಟಾಸ್ಕ್ ಫೆÇೀರ್ಸ್ ರಚನೆ, ಪರಿಸರ ಸ್ನೇಹಿ (ಹಸಿರು) ತಂತ್ರಜ್ಞಾನ ಅಭಿವೃದ್ಧಿ ಮತ್ತು ಸ್ಮಾರ್ಟ್ ಸಿಟಿ ಯೋಜನೆ ಸಹಕಾರ ಒಪ್ಪಂದ ಏರ್ಪಟ್ಟಿತ್ತು. ಹೊಸ ಆವಿಷ್ಕಾರ ನಡೆಸಲು ಜಂಟಿ ಕ್ರಿಯಾ ಯೋಜನೆಗೂ ಉಭಯ ನಾಯಕರು ಸಮ್ಮತಿಸಿದ್ದರು!! ಮೇಕ್ ಇನ್ ಇಂಡಿಯಾ ಯೋಜನೆಯಡಿ ಹೂಡಿಕೆ ಮಾಡುವಂತೆ ಅಲ್ಲಿನ ಉದ್ಯಮಿಗಳಿಗೆ ಅವರು ಕರೆ ನೀಡಿದ್ದರು!! ಹೀಗೆ ಪ್ರಧಾನಿ ನರೇಂದ್ರ ಮೋದಿಯವರ ಮಾತು ಕೇವಲ ನಮ್ಮ ದೇಶದಲ್ಲಿ ಮಾತ್ರವಲ್ಲದೆ ಹೊರ ದೇಶಗಳಲ್ಲೂ ಅವರ ಮಾತಿಗೆ ಎಷ್ಟು ಬೆಲೆ ಇದೆ ಎಂಬುವುದನ್ನು ವಿರೋಧಿಗಳು ಒಮ್ಮೆ ಅರ್ಥ ಮಾಡಿಕೊಳ್ಳಬೇಕಿದೆ!! ಅದಲ್ಲದೆ ಅವರು ಯಾವ ದೇಶಕ್ಕೆ ಹೋದರೂ ಅವರನ್ನು ಗೌರವದಿಂದ ಕಾಣುತ್ತಾರೆ!!

ಪವಿತ್ರ

Tags

Related Articles

Close