ಪ್ರಚಲಿತ

ಪಾಪಿಗಳ ಲೋಕದಲ್ಲಿ ಪವನ ಪುತ್ರ ಹೇಗೆ ಅವತಾರ ತಾಳಿದ್ದಾನೆ ಗೊತ್ತೇ?! ಪಾಕ್‍ನಲ್ಲಿರುವ ಒಂದು ದೇವಾಲಯದ ರೋಚಕ ಜರ್ನಿ!!

ಹನುಮಂತ ಹಿಂದೂ ಧರ್ಮಗ್ರಂಥಗಳಲ್ಲೊಂದಾದ ರಾಮಾಯಣದಲ್ಲಿನ ಪ್ರಮುಖ ಪಾತ್ರಗಳಲ್ಲೊಬ್ಬ ಹಾಗೂ ಹಿಂದುಗಳು ಪ್ರಮುಖ ದೇವತೆಗಳಲ್ಲಿ ಒಬ್ಬ. ವಾಯುಪುತ್ರ, ಕಪಿವೀರನೆಂದು ಕರೆಯಲ್ಪಡುವ ಹನುಮಂತ ಕೇಸರಿ ಎಂಬ ವಾನರ ಮತ್ತು ಅಂಜನಾದೇವಿಯ ಮಗ ಮತ್ತು ರಾಮನ ಪರಮಭಕ್ತ!! ಶಕ್ತಿಯ ದೇವತೆಯೆಂದು ಹನುಮಂತನನ್ನು ಪೂಜಿಸಲಾಗುತ್ತದೆ.!!

ಹನುಮಂತ ಕಿಷ್ಕಿಂಧೆಯಲ್ಲಿ ಸುಗ್ರೀವನ ಜೊತೆಯಲ್ಲಿರುತ್ತಾನೆ. ಸೀತೆಯನ್ನು ಹುಡುಕಿಕೊಂಡು ರಾಮ ಕಿಷ್ಕಿಂಧೆಗೆ ಬಂದಾಗ ಹನುಮಂತನಿಗೆ ರಾಮನೊಡನೆ ಭೇಟಿಯಾಗುತ್ತದೆ. ತನ್ನ ಸ್ವಾಮಿಯಾದ ರಾಮನಿಗೆ ಸಹಾಯ ಮಾಡಲು ಮುಂದಾಗುತ್ತಾನೆ. ನೂರು ಯೋಜನೆ ವಿಸ್ತಾರದ ಮಹಾ ಸಮುದ್ರವನ್ನು ಹಾರಿ ಸೀತೆಯು ಲಂಕೆಯಲ್ಲಿರುವ ವಿಷಯವನ್ನು ರಾಮನಿಗೆ ತಿಳಿಸುತ್ತಾನೆ. ಮುಂದೆ ರಾವಣನ ಜೊತೆ ಯುದ್ಧ ಮಾಡಿ, ಸೀತೆಯನ್ನು ಲಂಕೆಯಿಂದ ಕರೆದುಕೊಂಡು ಬರಲು ರಾಮನಿಗೆ ಹನುಮಂತ ಹಲವು ವಿಧದಲ್ಲಿ ನೆರವಾಗುತ್ತಾನೆ… ಹನುಮಂತನ ಲೀಲೆಯನ್ನು ಹೇಳ ಹೊರಟರೆ ದಿನವಿಡೀ ಸಾಕಾಗದು!!

ತೇತ್ರಾಯುಗದಲ್ಲಿ ರಾಮನ ಅವತಾರ ಮುಗಿಯುವ ಸಂದರ್ಭದಲ್ಲಿ ಕೇಸರಿತನಯ ರಾಮಬಂಟನಾದ ಹನುಮಂತನಿಗೆ ವಿಶೇಷ ವರವೊಂದನ್ನು ಕರುಣಿಸುತ್ತಾನಂತೆ. ಅದೇನೆಂದರೆ ರಾಮಯಾಣ ಮಹಾಗ್ರಂಥದ ಕಥೆ ಜನರ ಬಾಯಿಯಲ್ಲಿ ಎಷ್ಟು ಸಮಯ ಭೂಮಿಯಲ್ಲಿ ಉಳಿದುಕೊಳ್ಳುತ್ತೋ ಅಷ್ಟು ಸಮಯ ಹನುಮಂತನಿಗೆ ಜಿರಂಜೀವಿಯ ವರವನ್ನು ಕರುಣಿಸಿದ ಎಂದು ಪುರಾಣದ ಕಥೆಗಳು ಹೇಳುತ್ತೆ.

ಪುರಾಣವನ್ನು ಕೆದುಕುತ್ತಾ ಹೋದರೆ ದ್ವಾಪರಯುಗದಲ್ಲಿ ನಡೆದ ಮಹಾಭಾರತದ ಕಥೆಯಲ್ಲಿ ಹನುಮಂತನ ಪಾತ್ರವನ್ನು ಕೂಡ ನಾವು ಕೇಳಿದ್ದೇವೆ ಅಲ್ವೇ?. ಅತಂತಹ ಹನುಮಂತನ ಆರಾಧನೆ ಕೇವಲ ನಮ್ಮ ಭಾರತೀಯರು ಮಾತ್ರವಲ್ಲದೆ ಪಾಕಿಸ್ತಾನದಲ್ಲೂ ಪೂಜಿಸುತ್ತಾರೆ ಎಂದರೆ ನಂಬಲು ಸಾಧ್ಯವೇ?

Image result for hanuman in pakistan panchamukhi

ದೇಗುಲ ದರ್ಶನ ಕರ್ನಾಟಕ ತಂಡವೂ ಅನೇಕ ಐತಿಹಾಸಿಕ, ಪವಾಡ ದೇಗುಲಗಳ ಮಾಹಿತಿಯನ್ನು ಕಲೆಹಾಕುತ್ತಿದೆ… ಅಂತಹ ದೇಗುಲಗಳಲ್ಲಿ ಈ ಶಕ್ತಿಶಾಲಿ ಪಂಚಮುಖಿ ಉದ್ಬವ ಹನುಮಂತನ ದೇಗುಲವೂ ಒಂದು. ಪ್ರತಿಯೊಬ್ಬ ಭಾರತೀಯನೂ ಸಹ ಈ ದೇವಾಲಯದ ಬಗ್ಗೆ ತಿಳಿಯಲೇಬೇಕು!! ಸುಮಾರು ಸಾವಿರದ ಐನೂರು ವರ್ಷಗಳ ಹಳೆಯ ದೇಗುಲವಿದು! !ಮಾನವ ನಿರ್ಮಿತ ವಿಗ್ರಹವೂ ಇದಲ್ಲ!! ಇದೊಂದು ಉದ್ಬವ ಮೂರ್ತಿಗಿದ್ದು, ಜನರ ಸಂಕಷ್ಟಗಳನ್ನು ಪರಿಹರಿಸುತ್ತಾ ನೆಲೆನಿಂತಿರುವ ಹನುಮನ ಬಗ್ಗೆ ತಿಳಿಯಲೇ ಬೇಕಾಗಿದೆ..!!

ಪಾಕ್‍ನಲ್ಲಿ 1500 ವರ್ಷಗಳ ಹನುಮಂತನ ಮಂದಿರ!!

1500 ವರ್ಷ ಹಳೆಯ ಪಂಚಮುಖಿ ಹನುಮಂತನ ಮಂದಿರ ಕರಾಚಿಯಲ್ಲಿನ ಸೈನಿಕರ ಬಜಾರ್‍ನಲ್ಲಿದೆ, ಇದು ಪಾಕಿಸ್ತಾನದ ಅತ್ಯಂತ ಹಳೆಯ ಹಿಂದು ದೇವಾಲಯಗಳಲ್ಲಿ ಒಂದಾಗಿದ್ದು, ಈ ದೇವಾಲಯವು ಹಿಂದೂಗಳಿಗೆ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿರುವ ಮೂರ್ತಿಯಾಗಿದೆ, ಏಕೆಂದರೆ ಇದು ಪ್ರಪಂಚದ ಏಕೈಕ ನೈಸರ್ಗಿಕವಾಗಿ ರಚಿತಗೊಂಡ ದೇವಾಲಯವಾಗಿದೆ… ಇದು ಮಾನವ ನಿರ್ಮಿತ ಕೆತ್ತನೆಗಳಿಂದ ನಿರ್ಮಿತಗೊಂಡಿಲ್ಲ!!

ಹಲವು ಶತಮಾನಗಳ ಹಿಂದೆ ನೀಲಿ ಮತ್ತು ಬಿಳಿ 8 ಅಡಿ ಪ್ರತಿಮೆಯ ದೇವಸ್ಥಾನವು ಈಗಿರುವ ಸ್ಥಳದಲ್ಲಿ ಪತ್ತೆಯಾಯಿತ್ತು. ಇದು ಹನುಮನಲ್ಲಿರುವ ಎಲ್ಲಾ ಐದು ಅಂಶಗಳನ್ನು ಹೊಂದಿದೆ: ನರಸಿಂಹ, ಆದಿವಾರಾ, ಹಯಾಗ್ರೀವಾ, ಹನುಮ ಮತ್ತು ಗರುಡ. ನೈಸರ್ಗಿಕವಾಗಿ ರೂಪುಗೊಂಡ ವಿಗ್ರಹಗಳು ಅಸಾಧಾರಣವಾದ ಶಕ್ತಿಯನ್ನು ಹೊಂದಿರುತ್ತವೆ ಮತ್ತು ಆರಾಧಕರನ್ನು ಆಶೀರ್ವದಿಸಿ ಅವರ ಕೋರಿಕೆಗಳನ್ನು ಈಡೇರಿಸುವ ಶಕ್ತಿಯನ್ನು ಹೊಂದಿರುತ್ತದೆ ಎಂದು ನಂಬಲಾಗಿದೆ.

ದೇವಾಲಯದೊಳಗೆ ಪ್ರವೇಶಿಸಿದಾಗ, ದೇವಾಲಯದ ಆವರಣದ ಮಧ್ಯ ಭಾಗದಲ್ಲಿ ಕಲ್ಲಿನಿಂದ ಹೊಡೆದು ರಚಿತವಾದ ಹಳದಿ ರೂಪದ ಛಾಯೆ ಇದೆ. ಈ ದೇವಾಲಯದ ನವೀಕರಣದ ಕಾರ್ಯವು 2012 ರಲ್ಲಿ ಪ್ರಾರಂಭವಾಯಿತು ಮತ್ತು ದೇವಾಲಯದ ಒಳ ನೋಟವನ್ನು ಕಾಪಾಡಿಕೊಳ್ಳಲು ಅದರ ಮೂಲ ಹಳದಿ ಕಲ್ಲನ್ನು ಕಮಾನಿನ ಗೋಡೆಗಳ ಪುನರ್ನಿರ್ಮಾಣ ಮಾಡಲು ಬಳಸಲಾಗುತ್ತಿದೆ. ಮುಂಭಾಗದಲ್ಲಿರುವ ಹಳದಿ ಕಲ್ಲಿನ ಕಂಬಗಳ ಮೇಲೆ ಕಪ್ಪು ಮತ್ತು ಬಿಳಿ ಕೆತ್ತನೆ ಇದೆ!! ಕೆಳಭಾಗ ಅಮೃತ ಶಿಲೆಯಿಂದ ಮೂಡಿದೆ.!!

Image result for hanuman in pakistan

ಇದು ಪ್ರದಕ್ಷಿಣಾಕಾರದ ಸುತ್ತಳತೆಗೆ (ಪಾರಿಕ್ರಮಾ / ಪ್ರದಕ್ಷಿಣ) ವ್ಯಾಪಕವಾದ ಮಾರ್ಗವನ್ನು ಹೊಂದಿದೆ. ಮಂದಿರದ ಸುತ್ತ 108 ಸುತ್ತುಗಳನ್ನು ಸುತ್ತುವುದರಿಂದ ಎಲ್ಲಾ ನೋವು, ದುಷ್ಟ ಮತ್ತು ಕೆಟ್ಟ ಶಕ್ತಿಗಳನ್ನು ಶುದ್ಧಗೊಳಿಸುತ್ತದೆ ಎಂದು ನಂಬಲಾಗಿದೆ.!! ಈ ದೇವಾಲಯವು ಎಲ್ಲಾ ಜಾತಿ ಮತ್ತು ಸಮುದಾಯವನ್ನು ಕಾಪಾಡುವ ನೆಲೆಯಾಗಿದೆ. ಭಾರತದಲ್ಲಿ ಬಾಬರಿ ಮಸೀದಿ ಧ್ವಂಸವಾದಾಗ ಪಾಕಿಸ್ತಾನದವರು ಹಿಂದೂ ದೇವಾಲಯಗಳ ಮೇಲೆ ದಾಳಿ ಮಾಡಿದಾಗ ಅದರ ದಾಳಿಗೆ ಈ ಮಂದಿರವು ತುತ್ತಾಯಿತು. ಮಹಾರಾಷ್ಟ್ರ, ಸಿಂಧಿಸ್, ಬಲೋಚಿಸ್ತಾನ ಮುಂತಾದ ಅನೇಕ ಸಮುದಾಯಗಳು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ.!!

Image result for hanuman in pakistan

ಈ ದೇವಾಲಯದ ಉಳಿವಿಗಾಗಿ ಈ ಸಮುದಾಯದವರು ಯೋಧರಂತೆ ಅದನ್ನು ಕಾಪಾಡುತ್ತಾ ಬಂದಿದ್ದಾರೆ.. ಹಾಗಾದರೆ ಹಿಂದೂ ಸಂಸ್ಕøತಿ ಎಷ್ಟರ ಮಟ್ಟಿಗೆ ಬೆಳೆದಿದೆ ಎಂಬುವುದು ಎಲ್ಲರಿಗೂ ಅರ್ಥವಾಗಿರಬಹುದು….. ಹಿಂದೂಗಳನ್ನು ಶತ್ರುಗಳಂತೆ ನೋಡುತ್ತಿದ್ದ ಪಾಕಿಸ್ತಾನದಲ್ಲೇ ಇಂತಹ ಅದ್ಭುತ ನಡೆದಿದೆ ಅಂದರೆ ಒಮ್ಮೆ ಎಲ್ಲರೂ ಮೂಗಿನ ಮೇಲೆ ಬೆರಳಿಡುತ್ತಾರೆ!! ನಿಧಾನವಾಗಿ ಪಾಕಿಸ್ತಾನಿಯರೂ ಕೂಡಾ ಹಿಂದೂ ಸಂಸ್ಕøತಿಯ ಕಡೆ ವಾಲುತ್ತಿದ್ದಾರೆ ಅನಿಸುತ್ತಿದೆಯಲ್ಲವೇ?!

ಪವಿತ್ರ

Tags

Related Articles

Close