ಪ್ರಚಲಿತ

ಜಿಲ್ಲಾಧಿಕಾರಿಯನ್ನೇ ಮೀರಿಸಿದ ಬಿಜೆಪಿ ನೂತನ ಶಾಸಕ.! ಉಪವಾಸದಲ್ಲೂ ಕರ್ತವ್ಯ ಪ್ರಜ್ಞೆ ಮೆರೆದ ಯುವನಾಯಕ..!

ಭಾರತೀಯ ಜನತಾ ಪಕ್ಷ ಎಂದರೆ ಪ್ರತಿಯೊಂದು ವಿಚಾರದಲ್ಲೂ ಇತರರಿಗೆ ಮಾದರಿಯಾಗುವುದೇ ವಿಶೇಷ. ಯಾಕೆಂದರೆ ಶಿಸ್ತಿನ ಸಿಪಾಯಿಗಳೇ ತುಂಬಿಕೊಂಡಿರುವ ಬಿಜೆಪಿಯಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ವಿಶೇಷವಾದ ಕೆಲಸಗಳನ್ನು ಮಾಡಿ , ನಾಲ್ಕು ಜನ ಒಳ್ಳೆಯ ಮಾತುಗಳನ್ನಾಡುವ ರೀತಿ ಮಾದರಿಯಾಗುತ್ತಾರೆ. ಅದರಂತೆಯೇ ಜನರ ಕಷ್ಟಗಳಿಗೆ ಸ್ಪಂದಿಸಲು ಕೈಯಲ್ಲಿ ಅಧಿಕಾರ ಮಾತ್ರ ಸಾಲದು, ಸಹಾಯದ ಮನೋಭಾವವೂ ಬೇಕು. ಈ ವಿಚಾರಕ್ಕೆ ಬಿಜೆಪಿ ಇತರರಿಗಿಂತ ಒಂದು ಹೆಜ್ಜೆ ಮುಂದು. ಯಾಕೆಂದರೆ ತಳಮಟ್ಟದ ಕಾರ್ಯಕರ್ತನಾಗಿರುವಾಗಲೇ ಎಲ್ಲಾ ಕಷ್ಟಗಳನ್ನು ಅನುಭವಿಸಿಕೊಂಡು ಹಂತ ಹಂತವಾಗಿ ಮೇಲೆ ಬರುವ ಕಾರ್ಯಕರ್ತರೇ ಮುಂದಿನ ನಾಯಕನಾಗುವುದು ಕೇವಲ ಬಿಜೆಪಿಯಿಂದ ಮಾತ್ರ.ಅದರಂತೆಯೇ ಇದೀಗ ಹೊಸ ಹುಮ್ಮಸ್ಸಿನಿಂದ ಅಧಿಕಾರ ವಹಿಸಿಕೊಂಡಿರು ಬಿಜೆಪಿ ಶಾಸಕರೊಬ್ಬರು ಇತರರು ತನ್ನನ್ನು ನೋಡಿ ಕಲಿಯುವಂತೆ ಮಾಡಿದ್ದಾರೆ.!

ಕರಾವಳಿಯಲ್ಲಿ ತನ್ನ ಹೋರಾಟದ ಮೂಲಕವೇ ಗುರುತಿಸಿಕೊಂಡಿದ್ದ ಬಿಜೆಪಿ ಶಾಸಕ ಹರೀಶ್ ಪೂಂಜಾ ಅವರು , ಪಕ್ಷದಲ್ಲಿ ಜವಾಬ್ದಾರಿ ಸಿಗುವುದಕ್ಕು ಮೊದಲೇ ಅನ್ಯಾಯದ ವಿರುದ್ಧ ಧ್ವನಿ ಎತ್ತಿದವರು. ಯಾವುದೇ ಬೆದರಿಕೆಗೂ ಬಗ್ಗದೆ ಸದಾ ಕಾನೂನು ಬಾಹಿರ ಚಟುವಟಿಕೆಗಳ ವಿರುದ್ಧ ಹೋರಾಡಿ, ಎಂಡೋ ಸಲ್ಫಾನ್ ಪೀಡಿತರ ಬಗ್ಗೆ ವಿಶೇಷ ಕಾಳಜಿ ವಹಿಸಿ ವಿಧಾನಸಭೆಯಲ್ಲಿ ಪ್ರತಿಧ್ವನಿಸುವಂತೆ ಮಾಡಿದ್ದರು ಹರೀಶ್ ಪೂಂಜಾ. ಈಗಾಗಲೇ ಬಿಜೆಪಿಯಿಂದ ಸ್ಪರ್ಧಿಸಿ ಭಾರೀ ಅಂತರದಿಂದ ಗೆದ್ದಿರುವ ಹರೀಶ್ ಪೂಂಜಾ ಅವರು ಇದೀಗ ಮತ್ತೊಮ್ಮೆ ರಾಜ್ಯಾದ್ಯಂತ ಜನ ಮೆಚ್ಚುವ ರೀತಿಯಲ್ಲಿ ನಡೆದುಕೊಂಡಿದ್ದಾರೆ..!

ರಸ್ತೆ ಮಧ್ಯೆ ಸಿಲುಕಿಕೊಂಡವರ ನೆರವಿಗೆ ಧಾವಿಸಿದ ಪೂಂಜಾ..!

ರಾಜ್ಯಾದ್ಯಂತ ಭಾರೀ ಮಳೆ ಉಂಟಾಗಿದ್ದು, ಅನೇಕ ಕಡೆಗಳಲ್ಲಿ ಪ್ರವಾಹ ಉಂಟಾಗಿ ಅಪಾರ ಪ್ರಮಾಣದ ನಷ್ಟ ಅನುಭವಿಸಿದೆ. ಅದೇ ರೀತಿ ಇಂದು ಹಾಸನ ಮತ್ತು ದಕ್ಷಿಣ ಕನ್ನಡ ನಡುವಿನ ಚಾರ್ಮಾಡಿ ಘಾಟಿಯಲ್ಲಿ ಅನೇಕ ಕಡೆಗಳಲ್ಲಿ ಗುಡ್ಡಗಳ ಮಣ್ಣು ಕುಸಿದಿದ್ದು, ರಸ್ತೆಗಳೆಲ್ಲಾ ಬಂದ್ ಆಗಿದ್ದವು. ಒಟ್ಟು ಒಂಬತ್ತು ಕಡೆಗಳಲ್ಲಿ ಮಣ್ಣು ಕುಸಿದಿದ್ದರಿಂದ ಭಾರೀ ವಾಹನಗಳು ರಸ್ತೆ ಮಧ್ಯೆಯೇ ಸಿಲುಕಿಕೊಂಡಿದ್ದವು. ಸರಕಾರಿ ಬಸ್ಸುಗಳು ಕೂಡ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುವುದರಿಂದ ಪ್ರಯಾಣಿಕರು ಕೂಡ ಪರದಾಡುವಂತಾಗಿತ್ತು. ಮಕ್ಕಳು , ವೃದ್ಧರೆನ್ನದೆ ಎಲ್ಲರೂ ತಿನ್ನಲು ಆಹಾರವಿಲ್ಲದೆ, ಕುಡಿಯಲು ನೀರಿಲ್ಲದೆ ಒದ್ದಾಡುವಂತಾಗಿತ್ತು ಸ್ಥಿತಿ.

ಆದರೆ ಪರಿಸ್ಥಿತಿ ಅರಿತ ಬಿಜೆಪಿ ಶಾಸಕ ಹರೀಶ್ ಪೂಂಜಾ ಅವರು ಕೂಡಲೇ ಸ್ಥಳಕ್ಕಾಗಮಿಸಿ ಯಾವುದೇ ತೊಂದರೆಯಾಗದಂತೆ ಸ್ವತಃ ತಾವೇ ನಿಂತು ನೋಡಿಕೊಂಡಿದ್ದಾರೆ. ಸ್ಥಳೀಯರ ಸಹಾಯದಿಂದ ಪ್ರಯಾಣಿಕರೆಲ್ಲರಿಗೂ ನೀರು ಮತ್ತು ಆಹಾರದ ವ್ಯವಸ್ಥೆ ಮಾಡಿ ದೂರದ ಊರುಗಳಿಂದ ಬಂದ ಪ್ರಯಾಣಿಕರಿಗೂ ಸಹಾಯ ಹಸ್ತ ಚಾಚಿದರು. ಹರೀಶ್ ಪೂಂಜಾ ಅವರು ಮಾಡಿದ ಈ ಕಾರ್ಯಕ್ಕೆ ಕರಾವಳಿಯಲ್ಲಿ ಮಾತ್ರವಲ್ಲದೆ ರಾಜ್ಯಾದ್ಯಂತ ಪ್ರಶಂಸೆ ವ್ಯಕ್ತವಾಗಿದೆ. ಯಾಕೆಂದರೆ ಹರೀಶ್ ಪೂಂಜಾ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದವರು, ಆದರೂ ಮೊದಲ ಕೆಲಸದಲ್ಲೇ ಇತರರಿಗೆ ಮಾದರಿಯಾಗುವಂತೆ ನಡೆದುಕೊಂಡಿದ್ದಾರೆ.!

ಉಪವಾಸವನ್ನೂ ಲೆಕ್ಕಿಸದೆ ಬೀದಿಗಿಳಿದ ಶಾಸಕ..!

ಹರೀಶ್ ಪೂಂಜಾ ಅವರು ಪ್ರತೀ ಮಂಗಳವಾರ ಉಪವಾಸ ಮಾಡಿಕೊಂಡು ಬಂದಿದ್ದಾರೆ. ಉಪವಾಸ ಎಂದರೆ ಕೇವಲ ನೀರು ಆಹಾರ ಬಿಡುವುದು ಮಾತ್ರವಲ್ಲದೆ ಕಾಲಿಗೆ ಚಪ್ಪಲಿ ಕೂಡ ಧರಿಸುವುದಿಲ್ಲ ಈ ಶಾಸಕರು. ಆದರೆ ಇಂದು ಅಪಾಯದಲ್ಲಿ ಸಿಲುಕಿಕೊಂಡ ಜನರ ನೆರವಿಗೆ ಬರಿಗಾಲಲ್ಲೇ ಧಾವಿಸಿದ ಪೂಂಜಾ, ಧಾರಾಕಾರವಾಗಿ ಸುರಿಯುತ್ತಿದ್ದ ಮಳೆಯನ್ನೂ ಲೆಕ್ಕಿಸದೆ ಜನರ ಕಷ್ಟಗಳಿಗೆ ಸ್ಪಂದಿಸಿದರು. ಬೆಳ್ತಂಗಡಿ ಕ್ಷೇತ್ರದಲ್ಲಿ ಹರೀಶ್ ಪೂಂಜಾ ಮನೆಮಾತಾಗಿರುವುದು ಇದೇ ಕಾರಣಕ್ಕೆ. ಕಷ್ಟದಲ್ಲಿರುವ ಜನರಿಗೆ ತನ್ನ ಕೈಮೀರಿ ಸಹಾಯ ಮಾಡುವ ಮನೋಭಾವ ಹೊಂದಿರುವ ಹರೀಶ್ ಪೂಂಜಾ ಇಂದು ಕೂಡ ತಮ್ಮ ಜನಪರ ಕಾರ್ಯಗಳನ್ನು ಮುಂದುವರಿಸಿದ್ದಾರೆ. ಶಾಸಕ ಹರೀಶ್ ಪೂಂಜಾ ಅವರಿಗೆ ಸಾಥ್ ನೀಡಿದ ಸ್ಥಳೀಯರು ಮತ್ತು ಬಿಜೆಪಿ ಕಾರ್ಯಕರ್ತರು ವಾಹನಗಳಲ್ಲಿ ಪರದಾಡುತ್ತಿದ್ದ ಪ್ರಯಾಣಿಕರಿಗೆ ಸಹಾಯ ಮಾಡುವ ಮೂಲಕ ಯಾರಿಗೂ ತೊಂದರೆಯಾಗದಂತೆ ನೋಡಿಕೊಂಡರು.!

 

ಎಸ್ಪಿ ಅಣ್ಣಾಮಲೈ‌ರಿಂದಲೂ ಪ್ರಯಾಣಿಕರಿಗೆ ನೆರವು..!

ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈ ಅವರೂ ಕೂಡ ಕೂಡಲೇ ಸ್ಥಳಕ್ಕಾಗಮಿಸಿದ್ದು, ಯಾರಿಗೂ ತೊಂದರೆಯಾಗದಂತೆ ನೋಡಿಕೊಂಡಿದ್ದಾರೆ. ಶಾಸಕ ಹರೀಶ್ ಪೂಂಜಾ ಮತ್ತು ಅಣ್ಣಾಮಲೈ ಅವರು ಈಗಾಗಲೇ ರಾಜ್ಯದ ಜನರ ಮನೆಮಾತಾಗಿದ್ದು, ಇದೀಗ ಮತ್ತೊಮ್ಮೆ ಒಟ್ಟಾಗಿ ನೆರವಿಗೆ ಧಾವಿಸಿದ್ದಾರೆ. ಅಣ್ಣಾಮಲೈ ಅವರು ಈ ಹಿಂದೆಯೂ ಇಂತಹ ಅನೇಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು , ಹೆಸರು ಗಳಿಸಿದವರು. ಆದ್ದರಿಂದ ಇದೀಗ ಮತ್ತೊಮ್ಮೆ ಕರುನಾಡ ಸಿಂಗಂ ಎಸ್ಪಿ ಅಣ್ಣಾಮಲೈ ಜನರಮೆಚ್ಚುಗೆಗೆ ಪಾತ್ರರಾಗಿದ್ದಾರೆ.!

ಈ ಮಧ್ಯೆ ಜಿಲ್ಲಾಧಿಕರಿಗಳ ಸುಳಿವು ಕೂಡ ಸಿಗಲಿಲ್ಲ, ಇಷ್ಟೊಂದು ಪ್ರಮಾಣದಲ್ಲಿ ಪ್ರಯಾಣಿಕರು ಈ ರೀತಿ ರಸ್ತೆಯಲ್ಲಿ ಪರದಾಡುತ್ತಿದ್ದರೂ ಕೂಡ ಸರಕಾರದ ವತಿಯಿಂದ ಯಾವುದೇ ನೆರವಿನ ಕಾರ್ಯ ನಡೆಯಲಿಲ್ಲ. ಈ ಬಗ್ಗೆ ಸ್ಥಳೀಯವಾಗಿ ಭಾರೀ ಆಕ್ರೋಶ ವ್ಯಕ್ತವಾಗಿದೆ.!

ಶಾಸಕ ಹರೀಶ್ ಪೂಂಜಾ ಕಿರಿಯ ವಯಸ್ಸಿನಲ್ಲೇ ಅಧಿಕಾರ ವಹಿಸಿಕೊಂಡಿದ್ದಾರೆ. ಈ ಹಿಂದೆ ಬಿಜೆಪಿ ಯುವಾಮೋರ್ಚಾ ಜಿಲ್ಲಾಧ್ಯಕ್ಷರಾಗಿದ್ದಾಗಲೂ ಅನೇಕ ಕಾರ್ಯಗಳಲ್ಲಿ ಸುದ್ದಿಯಾಗಿದ್ದರು. ಇದೀಗ ಅಧಿಕಾರವನ್ನೆಲ್ಲಾ ಬದಿಗಿಟ್ಟು ಯಾವುದೇ ಮುಲಾಜಿಲ್ಲದೆ ಸ್ಥಳಕ್ಕಾಗಮಿಸಿ ಜನರ ಸಮಸ್ಯೆಗಳಿಗೆ ನೆರವಾಗಿದ್ದಾರೆ. ಇಂತಹ ಶಾಸಕರು ಇನ್ನು ಮುಂದೆಯೂ ಇತರರಿಗೆ ಮಾದರಿಯಾಗುವುದರಲ್ಲಿ ಸಂಶಯವಿಲ್ಲ.!!

  • ಪಿ ಆರ್ ಶೆಟ್ಟಿ
Tags

Related Articles

Close