ಪ್ರಚಲಿತ

ಬಯಲಾಯ್ತು ಗೌರಿ ಹಂತಕನ ಬಂಧನದ ರಹಸ್ಯ!! ಓಟಿಗಾಗಿ ಕಾಂಗ್ರೆಸ್ ಮಾಡಿದ ಖತರ್ನಾಕ್ ಪ್ಲಾನ್ ಏನು ಗೊತ್ತಾ?

ಕೊನೆಗೂ ಸಿದ್ದರಾಮಯ್ಯ ಸರ್ಕಾರದ ಮಾಸ್ಟರ್ ಪ್ಲಾನ್ ರಿವೀಲ್ ಆಗಿದೆ!! ಅದೇನೇನೂ ನಾಟಕವಾಡುತ್ತಿದ್ದಾರೆ ಎಂದರೆ ಅಮಾಯಕರನ್ನು ಹರಕೆಯ ಕುರಿಯನ್ನಾಗಿಸಿ ರಾಜಕೀಯ ಬೇಳೆ ಬೇಯಿಸಿಕೊಂಡು ಈ ಬಾರಿ ಯಾವ ರೀತಿಯಾಗಿ ಕರ್ನಾಟಕದಲ್ಲಿ ರಾಜ್ಯಭಾರ ಮಾಡಲು ಹೊರಟಿದ್ದಾರೆ ಎಂದು ತಿಳಿದರೆ ಒಂದು ಕ್ಷಣ ದಂಗಾಗುವುದಂತೂ ಗ್ಯಾರೆಂಟಿ!! ದೇಶವನ್ನೇ ಬೆಚ್ಚಿ ಬೀಳಿಸಿದ್ದ ಪತ್ರಕರ್ತೆ ಗೌರಿ ಲಂಕೇಶ್ ಕೊಲೆ ಪ್ರಕರಣದ ಸಣ್ಣ ಸುಳಿವು ಪತ್ತೆಗೂ ವಿಫಲವಾಗಿರುವ ರಾಜ್ಯ ಸರ್ಕಾರ ಇದೀಗ ಪ್ರಕರಣದಲ್ಲಿ ಸಂಬಂಧವೇ ಇಲ್ಲದ ವ್ಯಕ್ತಿಗೆ ಹಂತಕನ ಪಟ್ಟ ಕಟ್ಟಿ ಈ ಬಾರಿಯ ಚುನಾವಣೆಯನ್ನು ಜಯಿಸಲು ಮಾಡಿರುವ ಮಾಸ್ಟರ್ ಪ್ಲಾನ್ ಬಯಲಾಗಿದೆ.

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಲೆ ತಡೆಯಲೇಬೇಕೆಂದು ಪಣ ತೊಟ್ಟಿರುವ ರಾಜ್ಯ ಸರ್ಕಾರಕ್ಕೆ ಹಿಂದು ಕಾರ್ಯಕರ್ತರ ಹತ್ಯೆ ಕಗ್ಗಂಟಾಗಿದೆ. ಇದಕ್ಕೆ ಪರ್ಯಾಯವಾಗಿ ಪತ್ರಕರ್ತೆ ಗೌರಿ ಹತ್ಯೆ ಪ್ರಕರಣವನ್ನು ಹಿಂದು ಪರ ಸಂಘಟನೆಗಳ ತಲೆಗೆ ಕಟ್ಟಿ ಬಿಜೆಪಿಗೆ ಮುಖಭಂಗ ಮಾಡಲು ಪ್ರಯತ್ನಿಸುತ್ತಿದೆ ಎಂಬ ಅನುಮಾನವೂ ಆರಂಭದಿಂದಲೂ ಕಾಡುತ್ತಿದೆ. ಅದಕ್ಕೆ ನವೀನ್ ಕುಮಾರ್ ಬಂಧನದ ವಿಚಾರ ಈ ಒಂದು ಅನುಮಾನಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ.

ಅಷ್ಟೇ ಅಲ್ಲದೇ, ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ನಂಟಿರುವ ಅನುಮಾನದ ಮೇಲೆ ವಶಕ್ಕೆ ಪಡೆದಿರುವ ಹಿಂದುಪರ ಸಂಘಟನೆ ಸದಸ್ಯ ನವೀನ್ ಕುಮಾರ್ ವಿರುದ್ಧ ಆರೋಪ ದೃಢಪಡಿಸುವ ಯಾವ ಸಾಕ್ಷ್ಯವೂ ಸಿಕ್ಕಿಲ್ಲ ಎಂಬುದನ್ನು ಎಸ್ ಐಟಿ ಅಧಿಕಾರಿಗಳೇ ಬಹಿರಂಗಪಡಿಸಿದ್ದಾರೆ. ಆ ಮೂಲಕ ಪ್ರಕರಣದಲ್ಲಿ ಸಂಬಂಧ ಇಲ್ಲದ ವ್ಯಕ್ತಿಯನ್ನು 20 ದಿನಗಳಿಂದ ಪೆÇಲೀಸ್ ಕಸ್ಟಡಿಯಲ್ಲೇ ಇರಿಸಿಕೊಂಡಿರುವುದು ಕೂಡ ಬಯಲಾದಂತಾಗಿದೆ.

ಅಷ್ಟಕ್ಕೂ…. ಗೌರಿ ಹತ್ಯೆಗೆ ಸಂಬಂಧಿಸಿದಂತೆ ನವೀನ್ ನನ್ನು ಪೆÇಲೀಸರು ಟಾರ್ಗೆಟ್ ಮಾಡಿದ್ದಾದರೂ ಏಕೆ ಮತ್ತು ಇಷ್ಟು ತರಾತುರಿಯಲ್ಲಿ ಪೆÇಲೀಸರು ಪ್ರಕರಣದ ತನಿಖೆ ಚುರುಕುಗೊಳಿಸಿದ್ದು ಏಕೆ ಎಂಬ ಪ್ರಶ್ನೆಗಳು ಕಾಡತೊಡಗಿವೆ. ಯಾಕೆಂದರೆ ಚುನಾವಣೆ ಸಂದರ್ಭದಲ್ಲಿ ಇಂತಹ ಅತಿಸೂಕ್ಮ ವಿಚಾರಗಳು ಜನ ಸಾಮಾನ್ಯರ ಮೇಲೆ ಅತಿಹೆಚ್ಚು ಪ್ರಭಾವ ಬೀರುತ್ತವೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾದ ಗೌರಿ ಹತ್ಯೆ ಪ್ರಕರಣ ಭೇದಿಸುವುದಕ್ಕಿಂತ, ಹತ್ಯೆ ಮಾಡಿದವರ ಹಿನ್ನೆಲೆ ಮುಖ್ಯವಾಗುತ್ತದೆ. ಬಲಪಂಥೀಯ ನಿಲುವನ್ನು ಹೊಂದಿರುವ, ಬಿಜೆಪಿ ಹಾಗೂ ಹಿಂದುಪರ ಸಂಘಟನೆ ನಾಯಕರೊಂದಿಗೆ ಸಂಪರ್ಕ ಹೊಂದಿರುವ ವ್ಯಕ್ತಿ ಆರೋಪಿಯಾಗುವುದು ಈ ಪ್ರಕರಣದಲ್ಲಿ ಅಗತ್ಯವಾಗಿತ್ತು ಎಂಬ ಅನುಮಾನಗಳು ಹುಟ್ಟುತ್ತವೆ. ಆರೋಪಿ ನವೀನ್ ಹಿಂದುಪರ ಹೋರಾಟಗಳಲ್ಲಿ ಭಾಗಿಯಾಗಿದ್ದಲ್ಲದೆ, ಬಿಜೆಪಿ, ಹಿಂದುಪರ ಸಂಘಟನೆಗಳ ನಾಯಕರೊಂದಿಗೆ ನಿಕಟ ಸಂಪರ್ಕದಲ್ಲಿದ್ದು, ಶಸ್ತ್ರಾಸ್ತ್ರ ಕಾಯ್ದೆಯಡಿ ಇವರನ್ನು ಬಂಧಿಸಿ ಗೌರಿ ಕೇಸಿಗೆ ತಳುಕು ಹಾಕಲು ನಡೆಯುತ್ತಿರುವ ಪ್ರಯತ್ನದ ಹಿಂದೆ ರಾಜಕೀಯ ಹುನ್ನಾರವಿದೆ ಎಂಬ ಆರೋಪಗಳು ಕೇಳಿಬಂದಿವೆ.

ಪ್ರಕರಣದಲ್ಲಿ ನವೀನ್ ನನ್ನು ತಳುಕು ಹಾಕಲು ಸ್ನೇಹಿತರನ್ನೇ ಗಾಳವಾಗಿ ಬಳಸಿದ ರಾಜ್ಯ ಸರ್ಕಾರ!!

ಮಂಡ್ಯ ಜಿಲ್ಲೆ ಮದ್ದೂರಿನ ಹಿಂದುಪರ ಸಂಘಟನೆಯ ನವೀನ್ ಕುಮಾರ್ ಎಂಬಾತನನ್ನು ಅಕ್ರಮವಾಗಿ ಸಜೀವ ಗುಂಡು ಗಳನ್ನು ಇಟ್ಟುಕೊಂಡಿದ್ದ ಆರೋಪದಡಿ ಇತ್ತೀಚೆಗಷ್ಟೇ ಪೆÇಲೀಸರು ಬಂಧಿಸಿದ್ದರು. ಇದೀಗ ಆತನ ಮೇಲೆ ಗೌರಿ ಹತ್ಯೆಯ ಆರೋಪ ಹೊರಿಸುವ ಸಿದ್ಧತೆ ನಡೆದಿದೆ. ನವೀನನನ್ನು ಖೆಡ್ಡಾಕ್ಕೆ ಕೆಡವಲು ಆತನ ಸ್ನೇಹಿತರನ್ನೇ ಸಾಕ್ಷಿದಾರರನ್ನಾಗಿ ಮಾಡಲು ಎಸ್ ಐಟಿ ಪೆÇಲೀಸರು ಸಂಚು ರೂಪಿಸಿರುವ ವಿಷಯವನ್ನು ಬಂಧಿತನಾಗಿ ಸದ್ಯ ಬಿಡುಗಡೆ ಆಗಿರುವ ನವೀನ್ ಕುಮಾರ್ ಆತ್ಮೀಯ ಗೆಳೆಯ ಗಿರೀಶ್ ಮಾಧ್ಯಮದೆದುರು ಬಾಯ್ಬಿಟ್ಟಿದ್ದಾರೆ.

 

ಅಕ್ರಮವಾಗಿ ಗುಂಡುಗಳನ್ನು ಇಟ್ಟುಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೆÇಲೀಸರು ಈತನನ್ನು ಬಂಧಿಸಿದ್ದು ನವೀನ್ ಕುಮಾರ್ ಅಲಿಯಾಸ್ ಹೊಟ್ಟೆ ಮಂಜ ಎಂಬುವವನನ್ನು ಮಾತ್ರ ಎಂಬುದು ಹೊರ ಜಗತ್ತಿಗೆ ಗೊತ್ತಿರುವ ಸಂಗತಿ. ಆದರೆ ಅಸಲಿಯಾಗಿ ಪೆÇಲೀಸರು ಒಟ್ಟು ನಾಲ್ಕು ಜನರನ್ನು ಬಂಧಿಸಿದ್ದಾರೆ!! ಹೌದು… ನವೀನ್ ಕುಮಾರ್ ನನ್ನು ಫೆ.14ರಂದು ಬಂಧಿಸಿದ ಬಳಿಕ 15ರಂದು ಶ್ರೀರಂಗಪಟ್ಟಣದ ಅನಿಲ್ ಕುಮಾರ್, ಮದ್ದೂರು ತಾಲೂಕಿನ ಹೆಮ್ಮನಹಳ್ಳಿ ಗ್ರಾಮದ ಗಿರೀಶ್, ಕೆಸ್ತೂರಿನ ಅಭಿಲಾಷ್ ಎಂಬವರನ್ನು ಬಂಧಿಸಿದ್ದರು. ನ್ಯಾಯಾಲಯ ಫೆ.26ರಂದು ಪೆÇಲೀಸರ ಕಸ್ಟಡಿಗೆ ಕೊಡಲು ನಿರಾಕರಿಸಿದ ಕಾರಣದಿಂದ ಮೂವರನ್ನು ಪೆÇಲೀಸರು ಬಿಟ್ಟು ಕಳುಹಿಸಿದ್ದಾರೆ.

“ಸ್ನೇಹಿತನನ್ನು ಪ್ರಕರಣದಲ್ಲಿ ಫಿಕ್ಸ್ ಮಾಡಲು ಯತ್ನ ನಡೆದಿರುವುದು ಒಂದೆಡೆಯಾದರೆ, ತನಗೆ ಜೀವಭಯ ಕಾಡುತ್ತಿದೆ. ರಾಜಕೀಯ ಒತ್ತಡಕ್ಕೆ ಮಣಿದು ಪೆÇಲೀಸರು ನಮ್ಮ ಮೇಲೆ ದೊಡ್ಡ ಕೇಸ್ ಬುಕ್ ಮಾಡಲು ನಿರ್ಧರಿಸಿದ್ದಾರೆ. ಕೆಲ ಮಾಧ್ಯಮಗಳು ಆಧಾರ ರಹಿತ ವಿಚಾರಗಳನ್ನು ಪ್ರಚಾರ ಮಾಡಿ ನವೀನ್ ಕುಮಾರ್ ಆರೋಪಿ ಎಂಬಂತೆ ಬಿಂಬಿಸುತ್ತಿವೆ” ಎಂದು ಗಿರೀಶ್ ಅಳಲು ತೋಡಿಕೊಂಡಿದ್ದಾರೆ. ನವೀನ್ ಕುಮಾರ್ ತಪ್ಪು ಮಾಡಿದ್ದರೆ ಎಂಥ ಶಿಕ್ಷೆಯನ್ನಾದರೂ ನೀಡಲಿ. ಆದರೆ, ರಾಜಕೀಯ ಲಾಭಕ್ಕೋಸ್ಕರ ಒಬ್ಬ ಹಿಂದುಪರ ಹೋರಾಟಗಾರನನ್ನು ಬಲಿಪಶು ಮಾಡಬೇಡಿ ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.

ಅಷ್ಟೇ ಅಲ್ಲದೇ, “ನವೀನ್ ನಿರಪರಾಧಿ. ಸಿದ್ದರಾಮಯ್ಯ ಸರ್ಕಾರ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಆತನನ್ನು ದೊಡ್ಡ ಪ್ರಕರಣದಲ್ಲಿ ಸಿಲುಕಿಸಲು ಸಂಚು ರೂಪಿಸಿದೆ. ಈಗ ಚುನಾವಣೆ ಸಮಯ. ಗೌರಿ ಹಂತಕರನ್ನು ಬಂಧಿಸಿಲ್ಲ ಎಂಬ ಆರೋಪ ಕಾಡುತ್ತಿದೆ. ಬಿಜೆಪಿಗೆ ಇದು ವರದಾನವಾಗಲಿದೆ ಎಂಬ ಕಾರಣಕ್ಕೆ ಹಿಂದು ಪರ ಸಂಘಟನೆಯೇ ಕೊಲೆ ಮಾಡಿದೆ ಎಂದು ಬಿಂಬಿಸಿದರೆ ಕಾಂಗ್ರೆಸ್ ಗೆ ಲಾಭವಾಗುತ್ತದೆ ಎಂಬ ಲೆಕ್ಕಾಚಾರದಲ್ಲಿ ಸರ್ಕಾರ ಈ ನಿರ್ಧಾರ ಮಾಡಿದೆ. ನನ್ನ ತಮ್ಮ ಸೇರಿದಂತೆ ಆತನ ಸ್ನೇಹಿತರಿಗೆ ಜೀವಭಯವಿದೆ. ಅವರ ಜೀವಕ್ಕೆ ಏನೇ ಆದರೂ ಅದಕ್ಕೆ ಸಿದ್ದರಾಮಯ್ಯ ಸರ್ಕಾರವೇ ಹೊಣೆ” ಎಂದು ನವೀನ್ ಸಹೋದರ ತಿಮ್ಮೇಗೌಡ ಹೇಳಿದ್ದಾರೆ.

ಅಷ್ಟಕ್ಕೂ ಗಿರೀಶ್ ಮಾಧ್ಯಮದೆದುರು ಬಿಚ್ಚಿಟ್ಟ ಅಸಲಿ ಸಂಗತಿಯಾದರೂ ಏನು ಗೊತ್ತೇ?

ಪ್ರಶ್ನೆ: ನವೀನ್ ಕುಮಾರ್ ನಿಮಗೆ ಹೇಗೆ ಗೊತ್ತು?

ಗಿರೀಶ್: ನಾವು ಹಲವು ವರ್ಷದಿಂದ ಸ್ನೇಹಿತರು. ಅವರ ಹಿಂದು ಪರ ಹೋರಾಟ ನನಗೆ ಇಷ್ಟವಾಗಿ ಅವರ ಜತೆ ಇರುತ್ತಿದ್ದೆ. ನನ್ನನ್ನು ತಮ್ಮ ಎಂದೇ ಅವರು ಭಾವಿಸಿದ್ದಾರೆ.

ಪ್ರಶ್ನೆ: ಪೆÇಲೀಸರು ಅವರನ್ನೇ ಯಾಕೆ ಬಂಧಿಸಿದರು?

ಗಿರೀಶ್: ನವೀನ್ ಹಿಂದು ಯುವ ಸೇನೆ ಸ್ಥಾಪಿಸಿ ಹೋರಾಟ ಮಾಡುತ್ತಿದ್ದರು. ಮದ್ದೂರಿನಲ್ಲಿ ಹಿಂದುಗಳನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುವುದು ಹೆಚ್ಚುತ್ತಿತ್ತು. ಹಾಗಾಗಿ 2 ತಿಂಗಳ ಹಿಂದೆ ಈ ಸಂಬಂಧ ಅವರು ಹೋರಾಟವನ್ನು ತೀವ್ರಗೊಳಿಸಿದ್ದರು. ಆಗ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಅವರೇ ಠಾಣೆಗೆ ಕರೆ ಮಾಡಿ ನವೀನ್ ಕುಮಾರ್ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಿದ್ದರು.

ಪ್ರಶ್ನೆ: ಅದೊಂದೇ ಕಾರಣಕ್ಕೆ ಇಷ್ಟು ದೊಡ್ಡ ಪ್ರಕರಣವೇ?

ಗಿರೀಶ್: ಅಷ್ಟೇ ಅಲ್ಲ, ಕೆ.ಎಂ.ದೊಡ್ಡಿಯಲ್ಲಿ ವಿವಾದಿತ ಜಾಗದಲ್ಲಿ ಮಸೀದಿಯೊಂದು ತಲೆ ಎತ್ತುತ್ತಿತ್ತು. ಅದರ ಮಾಹಿತಿ ಸಿಕ್ಕ ತಕ್ಷಣ ನವೀನ್ ಕುಮಾರ್ ಹೋರಾಟ ಆರಂಭಿಸಿದರು. ಆಗ ಸಂಘಟನೆಯೊಂದು ನಿನ್ನನ್ನು ಮುಗಿಸುತ್ತೇವೆಂದು ಬೆದರಿಕೆ ಒಡ್ಡಿತ್ತು. ಈ ಕಾರಣದಿಂದ ಪೆÇಲೀಸರು ಕೆಲ ದಿನ ಹೊರಗೆ ಇರುವಂತೆ ಹೇಳಿದ್ದರಿಂದ ಅವರು ಬೀರೂರಿನಲ್ಲಿ ಉಳಿದುಕೊಂಡಿದ್ದರು.

ಪ್ರಶ್ನೆ: ನಿಮ್ಮನ್ನು ಬಂಧಿಸಿ ಏನು ಮಾಡಿದರು?

ಗಿರೀಶ್: ಫೆ.15ರ ಮಧ್ಯಾಹ್ನ ಅಭಿ ಹಾಗೂ ನನ್ನನ್ನು ಬೆಂಗಳೂರಿಗೆ ಕರೆದೊಯ್ದರು. ನಾವು ಎಲ್ಲಿ ಹೋಗುತ್ತಿದ್ದೇವೆ ಎಂಬುದು ಗೊತ್ತಾಗದಿರಲಿ ಎಂದು ತಲೆಯನ್ನು ಬಗ್ಗಿಸಿ ಕೂರಿಸಿದ್ದರು. ತುಮಕೂರು ರಸ್ತೆಗೆ ತಿರುಗಿದ್ದು ಗೊತ್ತಾಯಿತು. ಅಲ್ಲಿಂದ ಸ್ವಲ್ಪ ದೂರ ಹೋಗುತ್ತಿದ್ದಂತೆ ನಮ್ಮ ಮುಖಕ್ಕೆ ಟವೆಲ್ ಕಟ್ಟಿ ರೆಸಾರ್ಟ್ ವೊಂದಕ್ಕೆ ಕರೆದೊಯ್ದರು. ನಮ್ಮ ಮುಂದೆ ನವೀನ್ ಕುಮಾರ್ ನನ್ನು ಇಬ್ಬರು ಎಳೆದುಕೊಂಡು ಹೋದರು. ಅಣ್ಣನಿಗೆ ಚೆನ್ನಾಗಿ ಹೊಡೆದಿದ್ದರು. ಅವರನ್ನು ನೋಡಿ ನನಗೆ ಅಳುಬಂತು. ಮತಾಂತರ ಹಾಗೂ ಮಸೀದಿ ತಡೆದ ವಿಚಾರಕ್ಕೆ ಬಂಧಿಸಿರಬೇಕು ಎಂದುಕೊಂಡೆ.

ಪ್ರಶ್ನೆ: ರೆಸಾರ್ಟ್‍ನಲ್ಲಿ ಏನು ಮಾಡಿದರು?

ಗಿರೀಶ್: ಫೆ.19ರಂದು ಜ್ಞಾನಭಾರತಿ ಠಾಣೆಯಲ್ಲಿ ನಮ್ಮ ಮೂವರ ವಿರುದ್ಧ ರೈಲ್ವೆ ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದರು ಎಂದು ಪೆಟ್ಟಿ ಕೇಸು ದಾಖಲಿಸಿದರು. ನಂತರ ನಮ್ಮನ್ನು ರೆಸಾರ್ಟ್‍ಗೆ ಕರೆದೊಯ್ದು ಚಿತ್ರಹಿಂಸೆ ಕೊಟ್ಟರು. ನಾನು ಆಗಷ್ಟೇ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದೆ. ಆದ್ದರಿಂದ ನನಗೆ ಮಾನಸಿಕವಾಗಿ ಹಿಂಸೆ ನೀಡಿದರು. ಬಹಿರಂಗವಾಗಿ ಹೇಳಲಾಗದ ಭಾಷೆಯಲ್ಲಿ ಬೈದರು.

ಪ್ರಶ್ನೆ: ಪೆÇಲೀಸರು ನಿಮ್ಮನ್ನು ಹೇಗೆ ನಡೆಸಿಕೊಂಡರು?

ಗಿರೀಶ್: ಅದನ್ನು ಮಾತಿನಲ್ಲಿ ಹೇಳಲಾಗದು. ಆದರೆ, ಈ ಪ್ರಕರಣದಿಂದ ಅವರಿಗೂ ಭಯವಿದೆ. ಕಾರಣ ಅವರು ರಾಜಕೀಯ ಒತ್ತಡದಿಂದ ನಮ್ಮನ್ನು ಬಲಿಪಶು ಮಾಡಲು ಹೊರಟಿದ್ದಾರೆ. ಮಹಾರಾಷ್ಟ್ರದಲ್ಲೂ ತನಿಖೆ ನಡೆಯುತ್ತಿದೆ, ಅಲ್ಲಿ ಸುಳ್ಳು ಎಂದು ಗೊತ್ತಾದರೆ ನಮ್ಮ ಮಾನ ಹರಾಜಾಗುತ್ತದೆ ಎಂದು ಅವರು ಮಾತನಾಡಿದ್ದನ್ನು ನಾನು ಕೇಳಿಸಿಕೊಂಡಿದ್ದೇನೆ ಎಂದು ಹೇಳಿಕೊಂಡಿದ್ದಾನೆ.

 

ಸುಳ್ಳು ಸಾಕ್ಷಿ ಹೇಳಿಸಿದರೇ ಪೆÇಲೀಸರು? ಅಷ್ಟಕ್ಕೂ ನ್ಯಾಯಾಧೀಶರು ಅನುಮಾನ ಪಟ್ಟಿರುವ ವಿಚಾರವಾದರೂ ಏನು ಗೊತ್ತೇ??

ಇಡೀ ಪ್ರಕರಣದಲ್ಲಿ ನವೀನ್ ವಿರುದ್ಧ ಸಾಕ್ಷ್ಯಾಧಾರಗಳನ್ನು ಹುಟ್ಟುಹಾಕುವ ಭರದಲ್ಲಿ ಆತನ ಅನುಯಾಯಿಗಳಿಂದ ಪೂರಕ ದಾಖಲೆಗಳನ್ನು ಸೃಷ್ಟಿಸುವ ಯತ್ನ ನಡೆದಿದೆ ಎನ್ನಲಾಗಿದೆ. ನವೀನ್ ಕುಮಾರ್ ಜತೆಗೆ ಆತನ ಸ್ನೇಹಿತರಾದ ಗಿರೀಶ್, ಅಭಿ ಹಾಗೂ ಅನಿಲ್ ರನ್ನು ಪೆÇಲೀಸರು ಬಂಧಿಸಿದ್ದು, ನವೀನ್ ನನ್ನು ಗೌರಿ ಹತ್ಯೆ ಆರೋಪಿಯನ್ನಾಗಿಸಿ, ನಮ್ಮನ್ನು ಸಾಕ್ಷಿದಾರರನ್ನಾಗಿ ಮಾಡಲು ಪೆÇಲೀಸರು ಸಿದ್ಧತೆ ನಡೆಸಿದ್ದಾರೆ” ಎಂಬುದನ್ನು ಗಿರೀಶ್ ಆರೋಪಿಸಿದ್ದಾರೆ. ಅವು;

* ಒಂದನೆಯದು, ನವೀನ್ ಕುಮಾರ್ ನಾಲ್ವರನ್ನು ಕರೆಸಿಕೊಂಡು ಗೌರಿ ಹತ್ಯೆಗೆ ತರಬೇತಿ ನೀಡಿದ್ದ.
* ಎರಡನೆಯದು, ಈ ಬುಲೆಟ್ ಗಳನ್ನು ಗೌರಿ ಹತ್ಯೆಗೆ ಬಳಸುವುದಕ್ಕೆ ಸಿದ್ಧಮಾಡಿಕೊಂಡಿದ್ದ.
* ಮೂರನೆಯದು, ಗೌರಿ ಹತ್ಯೆಯಾದ ಹಲವು ದಿನಗಳ ನಂತರ ನವೀನ್ ನಮ್ಮ ಮನೆಗೆ ಬಂದ. ನಾನು ಯಾಕೆ 2 ತಿಂಗಳಿಂದ ಮೊಬೈಲ್ ಸ್ವಿಚ್ ಆಫ್ ಎಂದು ಕೇಳಿದಾಗ ಗೌರಿ ಹತ್ಯೆ ವಿಚಾರವಾಗಿ ತಲೆ ಮರೆಸಿಕೊಂಡಿದ್ದೆ ಕಣೋ ಅಂತ ಹೇಳಿದ.
* ನಾಲ್ಕನೆಯದು, ಈಗ ನಾಲ್ಕು ಮಂದಿ ಬಂದು ಉಳಿದಿದ್ದಾರೆ ಅವರೆಲ್ಲರಿಗೂ ತರಬೇತಿ ನೀಡಿ ಕೊಳ್ಳೇಗಾಲಕ್ಕೆ ಕರೆದೊಯ್ದ!!

ಈ ರೀತಿಯಾಗಿಯೇ ಹೇಳಬೇಕೆಂದು ಪೆÇಲೀಸರು ಹೇಳಿದಾಗ ಅದನ್ನು ನಾನು ನಿರಾಕರಿಸಿದೆ. ಆಗ ಜ್ಞಾನಭಾರತಿ ಸಿಪಿಐ ಗಿರಿರಾಜ್, ಮರ್ಯಾದೆಯಿಂದ ನಾನು ಹೇಳಿದ್ದನ್ನು ಕೇಳಿದರೆ ಬದುಕುತ್ತೀಯಾ ಇಲ್ಲದಿದ್ದರೆ ನಿನ್ನನ್ನು ಕೇಸಿನಲ್ಲಿ ಫಿಟ್ ಮಾಡುತ್ತೇವೆ ಎಂದು ಹೆದರಿಸಿದ್ದಾರೆ ಎನ್ನುವುದನ್ನು ನವೀನ್ ಸ್ನೇಹಿತ ಪೊಲೀಸರ ಗುಂಡಾಗಿರಿಯ ಬಗ್ಗೆಯೂ ಹೇಳಿಕೊಂಡಿದ್ದಾರೆ.

 

ಅಷ್ಟೇ ಅಲ್ಲದೇ, 19ರಂದು ಬಿಡುಗಡೆ ಮಾಡುವುದಾಗಿ ಹೇಳಿ ರಾತ್ರಿ ಪೂರಾ ಬೆಂಗಳೂರಿನಲ್ಲಿ ಸುತ್ತಾಡಿಸಿದರು. 20ರಂದು ನಮ್ಮ ಮನೆಯವರನ್ನು ಕರೆಸಿ ನಮ್ಮನ್ನು ಷರತ್ತುಗಳ ಮೇಲೆ ಕಳಿಸಿದರು. 24ರಂದು ಮತ್ತೆ ಕರೆದು, 28ಕ್ಕೆ ಬರಲು ಹೇಳಿದರು. ಆದರೆ, 26ರ ಬೆಳಗ್ಗೆ 9 ಗಂಟೆಗೆ ಬರುವಂತೆ ಉಪ್ಪಾರಪೇಟೆ ಪಿಎಸ್ ಐ ಕೃಷ್ಣಕುಮಾರ ಮೊಬೈಲ್ ಗೆ ಕರೆ ಮಾಡಿದರು. ಅಲ್ಲಿಗೆ ಹೋದಾಗ ಜ್ಞಾನಭಾರತಿ ಠಾಣೆಯಿಂದ ಯುನಿವರ್ಸಿಟಿ ಗೇಟ್ ತನಕ 10 ನಿಮಿಷದಲ್ಲಿ ನಡೆದುಕೊಂಡು ಬರಲು ಹೇಳಿದರು. ರಸ್ತೆಯುದ್ದಕ್ಕೂ ನನ್ನ ಮೇಲೆ ಕಣ್ಣಿಟ್ಟಿದ್ದರು. ಅಲ್ಲಿಯೂ ನನ್ನಿಂದ ನ್ಯಾಯಾಧೀಶರ ಮುಂದೆ ಹೇಗೆ ಹೇಳಬೇಕೆಂದು ಮತ್ತೊಮ್ಮೆ ಹೇಳಿಸಿದರು.

ನಂತರ ನ್ಯಾಯಾಧೀಶರಿಗೆ ಮೂವರು ಪೆÇಲೀಸರು ಹೇಳಿಕೊಟ್ಟಿದ್ದಂತೆ ಹೇಳಿಕೆ ನೀಡಿದೆವು. ಆಗ ನ್ಯಾಯಾಧೀಶರು ಅನುಮಾನದಿಂದ ಎಲ್ಲರೂ ಒಂದೇ ರೀತಿಯ ಸ್ಕ್ರಿಪ್ಟ್ ಬರೆದುಕೊಟ್ಟಂತೆ ಹೇಳುತ್ತಿದ್ದೀರಿ, ಸತ್ಯ ಹೇಳಿ ಎಂದರು. ನಮಗೆ ಧೈರ್ಯ ಬರಲಿಲ್ಲ. ಆಗ ಪೆÇಲೀಸರು ನಮ್ಮನ್ನು ಕಸ್ಟಡಿಗೆ ಕೊಡಿ ಎಂದು ಕೇಳಿದರು. ಆದರೆ, ನ್ಯಾಯಾಧೀಶರು ನಿರಾಕರಿಸಿ, ನಮ್ಮನ್ನು ಬಿಡುಗಡೆ ಮಾಡಿದರು. ಬಳಿಕ ಪೆÇಲೀಸರು ನಮ್ಮನ್ನು ಈ ವಿಚಾರ ಎಲ್ಲಿಯೂ ಹೊರಗೆ ಬರಬಾರದು. ನೀವು ಪರಸ್ಪರ ಯಾವುದೇ ಚರ್ಚೆ ಮಾಡಬಾರದು. ನಿಮ್ಮೆಲ್ಲರ ಮೊಬೈಲ್ ಸ್ವಿಚ್ ಆಫ್ ಆಗಿರಬೇಕು ಎಂದು ಹೇಳಿದರು. ಅದರಲ್ಲೂ ನನಗೆ ನಿನ್ನನ್ನು ಬಿಡುತ್ತಿರುವುದು ನೆಮ್ಮದಿಯಾಗಿ ಇರುವುದಕ್ಕಲ್ಲ. ಇನ್ನಷ್ಟು ತಿಮಿಂಗಿಲಗಳನ್ನು ಹಿಡಿಯಲು ಬಿಟ್ಟಿದ್ದೇವೆ ಎಂದಿದ್ದಾರೆ. ಇದರಿಂದಾಗಿ ನಮಗೆ ಜೀವಭಯವಿದೆ” ಎಂದು ಗಿರೀಶ್ ಹೇಳಿದ್ದಾರೆ.

ಕಾನೂನಿನ ಪ್ರಕಾರವಾಗಿ ಬಂಧಿತ ವ್ಯಕ್ತಿಯ ಜತೆ ಸಂಬಂಧಪಟ್ಟ ವಕೀಲರು ಸಂಭಾಷಣೆ ನಡೆಸಲು ಅವಕಾಶಗಳಿವೆ. ಆದರೆ ರಾಜಕೀಯ ಒತ್ತಡದಿಂದ ಹಿಂದು ಸಂಘಟನೆ ಕಾರ್ಯಕರ್ತರನ್ನೇ ಗುರಿಯಾಗಿಸಿಕೊಂಡು ಗೌರಿ ಪ್ರಕರಣದಲ್ಲಿ ನವೀನ್ ನನ್ನು ಆರೋಪಿಯನ್ನಾಗಿ ಬಿಂಬಿಸಲು ಎಸ್ ಐಟಿ ತಂಡ ಹೊರಟಿದೆ ಎಂದು ವಕೀಲ ಅಮೃತೇಶ್ ವಾದ ಮಂಡಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸರ್ಕಾರಿ ಅಭಿಯೋಜಕರು, ತನಿಖಾ ಹಂತದಲ್ಲಿರುವ ಕೆಲ ಪ್ರಮುಖ ಪ್ರಕರಣದಲ್ಲಿ ಆರೋಪಿ ಜತೆ ಮಾತನಾಡಲು ಅವಕಾಶ ಕಲ್ಪಿಸಿದರೆ ತನಿಖೆ ನಡೆಸಲು ತೊಂದರೆ ಉಂಟಾಗುತ್ತದೆ ಎಂದು ಹೇಳಿದ್ದಾರೆ.

ರಾಜಕೀಯ ದುರುದ್ದೇಶದಿಂದ ಸಂಬಂಧವಿಲ್ಲದ ವ್ಯಕ್ತಿಯನ್ನು ಕೊಲೆ ಪ್ರಕರಣದಲ್ಲಿ ಸಿಲುಕಿಸುವ ಪ್ರಯತ್ನ ನಡೆದಿದೆ, ಈ ಬಗ್ಗೆ ತನಿಖೆ ನಡೆಸುವಂತೆ ಡಿಜಿಪಿ ನೀಲಮಣಿ ಅವರಿಗೆ ಹಿಂದು ವಿಧಿಜ್ಞಾ ಪರಿಷತ್ ಸದಸ್ಯರು ಮನವಿ ಮಾಡಿದ್ದಾರೆ. ಅಷ್ಟೇ ಅಲ್ಲದೇ ಪ್ರಕರಣದಲ್ಲಿ ಈತನನ್ನು ಸಿಲುಕಿಸಲು ಪ್ರಯತ್ನಿಸುತ್ತಿರುವ ಹಿನ್ನೆಲೆಯಲ್ಲಿ ನವೀನ್ ಜತೆ ಮಾತನಾಡಲು ಅವಕಾಶ ನೀಡಬೇಕು ಎಂದು ವಕೀಲರು ಎಸ್ ಐಟಿ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಆದರೆ, ಅದಕ್ಕೂ ಅವಕಾಶ ನೀಡಿರಲಿಲ್ಲ. ಇವೆಲ್ಲವೂ ತೀವ್ರ ಅನುಮಾನವನ್ನು ಸೃಷ್ಟಿಸಿದ್ದು, ಈ ಬಗ್ಗೆ ಪ್ರಶ್ನಿಸಿ ಹಿಂದು ವಿಧಿಜ್ಞ ಪರಿಷತ್ ಸಂಘಟನೆಯಿಂದ ವಕೀಲ ವೀರೇಂದ್ರ ಅರ್ಜಿ ಸಲ್ಲಿಸಿದ್ದರು.

ಆದರೆ ಈವರೆಗೆ ನಡೆದಿರುವ ಪ್ರಕರಣಗಳನ್ನು ಸೂಕ್ಷ್ಮವಾಗಿ ಗಮನಿಸುವುದಾದರೆ 2017ರ ಸೆಪ್ಟೆಂಬರ್ 5ರಂದು ನಡೆದ ಗೌರಿ ಲಂಕೇಶ್ ಹತ್ಯೆ, ಮಹಾರಾಷ್ಟ್ರದಲ್ಲಿ ನಡೆದ ನರೇಂದ್ರ ದಾಬೋಲ್ಕರ್ (2013ರ ಆಗಸ್ಟ್ 20), ಗೋವಿಂದ ಪನ್ಸಾರೆ (2015ರ ಫೆಬ್ರವರಿ 16) ಹಾಗೂ ರಾಜ್ಯದ ಎಂ.ಎಂ. ಕಲಬುರ್ಗಿ (2015ರ ಆಗಸ್ಟ್ 30) ಹತ್ಯೆ ಪ್ರಕರಣಗಳೆಲ್ಲ ಒಂದೇ ಮಾದರಿಯಲ್ಲಿ ನಡೆದಿರುವುದಾಗಿವೆ. ಅಷ್ಟೇ ಅಲ್ಲದೇ, ಇವರೆಲ್ಲರ ಹತ್ಯೆಯ ಸಂದರ್ಭದಲ್ಲಿ ಹೆಲ್ಮೆಟ್ ಧರಿಸಿಕೊಂಡು ಬಂದ ದುಷ್ಕರ್ಮಿಗಳು ಅತ್ಯಂತ ಸಮೀಪದಲ್ಲಿ ನಿಂತು ಹಣೆಗೆ ಗುಂಡಿಟ್ಟು ಕೊಂದಿದ್ದಾರೆ.

ವಿಪರ್ಯಾಸವೆಂದರೆ, ಹತ್ಯೆಯ ಪ್ರಕರಣದ ಬಗ್ಗೆ ಎರಡೂ ರಾಜ್ಯಗಳ ವಿಶೇಷ ತನಿಖಾ ತಂಡಗಳು ಹಲವು ಆಯಾಮಗಳಲ್ಲಿ ತನಿಖೆ ನಡೆಸಿದರೂ ಈವರೆಗೆ ಆರೋಪಿಗಳ ಸುಳಿವೂ ಲಭ್ಯವಾಗಿಲ್ಲ. ಆದರೆ ಗೌರಿ ಪ್ರಕರಣದಲ್ಲಿ ಪೆÇಲೀಸರು ರೇಖಾಚಿತ್ರ ಬಿಡುಗಡೆ ಮಾಡಿದಾಗ ಒಬ್ಬನ ಹಣೆಗೆ ಕುಂಕುಮ ಇಟ್ಟಿದ್ದು, ಸರ್ಕಾರ ಹಿಂದುಪರ ಸಂಘಟನೆಗಳ ಕಾರ್ಯಕರ್ತರನ್ನು ಗುರಿಯಾಗಿಸಿದೆ ಎಂಬ ಅನುಮಾನಕ್ಕೆ ಕಾರಣವಾಗಿತ್ತು. ಆದರೆ ಹೆಲ್ಮೆಟ್ ಧರಿಸಿದ್ದ ವ್ಯಕ್ತಿಯ ಹಣೆಗೆ ಕುಂಕುಮ ಇಟ್ಟಿದ್ದು ಹೇಗೆ ಕಂಡಿತು ಎನ್ನುವುದು ಮಾತ್ರ ಗೊತ್ತಾಗುತ್ತಿಲ್ಲ!!

ಒಟ್ಟಿನಲ್ಲಿ ಅಮಾಯಕರನ್ನು ಗೌರಿ ಕೇಸಿನಲ್ಲಿ ದಾಳವಾಗಿ ಬಳಸಿಕೊಂಡು, ಇತ್ತ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವ ರಾಜ್ಯ ಸರ್ಕಾರವು ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಆರೋಪಿಗಳನ್ನು ಹಿಡಿದ್ದೇವೆ ಎಂದು ಸಾಬೀತುಪಡಿಸಿ ಓಟುಗಿಟ್ಟಿಸಿಕೊಳ್ಳುವ ತಂತ್ರವನ್ನು ಹೂಡಿದ್ದಾರೆ. ಅಮಾಯಕ ಹಿಂದೂಗಳನ್ನು ಹಿಡಿದು ಸ್ವತಃ ಪೊಲೀಸರೇ ಹೇಳಿಕೆಗಳನ್ನು ಸೃಷ್ಟಿ ಮಾಡುತ್ತಿದ್ದಾರೆ ಎಂದರೆ ನಿಜವಾದ ಆರೋಪಿಗಳನ್ನು ಮರೆಮಾಚುತ್ತಿದ್ದಾರೆ ಎಂದಾಯಿತು!! ಅಂತೂ ಸಿದ್ದರಾಮಯ್ಯ ಸರ್ಕಾರದಲ್ಲಿ ಅಮಾಯಕರಿಗೆ ಜೈಲು ಭಾಗ್ಯ ಸಿಗುತ್ತಿದೆ ಎಂದರೆ ಇದಕ್ಕಿಂತಲೂ ದೊಡ್ಡ ಬೇಸರದ ಸಂಗತಿ ಮತ್ತೊಂದಿಲ್ಲ.

ಕೃಪೆ: ವಿಜಯವಾಣಿ ದಿನಪತ್ರಿಕೆ

– ಅಲೋಖಾ

Tags

Related Articles

Close