ಪ್ರಚಲಿತ

ಕರ್ನಾಟಕದಲ್ಲಿ ರಾಹುಲ್ ಗಾಂಧಿಗೆ ಕಾಂಗ್ರೆಸ್ ನೀಡುವ ಗಿಫ್ಟ್ ಎಷ್ಟು ಕೋಟಿಯದ್ದು ಗೊತ್ತಾ?!

ಪ್ರಧಾನಿ ನರೇಂದ್ರ ಮೋದಿ ಪರಿವರ್ತನಾ ಯಾತ್ರೆ ಸಮಾರಂಭದಲ್ಲಿ ಪಾಲ್ಗೊಂಡು ತೆರಳಿದ ಬೆನ್ನಲ್ಲೇ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಜನಾಶೀರ್ವಾದ ಯಾತ್ರೆಯಲ್ಲಿ ಭಾವವಹಿಸಲು ಕರ್ನಾಟಕಕ್ಕೆ ಆಗಮಿಸುತ್ತಿದ್ದು, ಈ ಮೂಲಕ ವಿಧಾನಸಭೆ ಚುನಾವಣಾ ಪ್ರಚಾರಕ್ಕೆ ಅಧಿಕೃತ ಚಾಲನೆ ನೀಡಲಿದ್ದಾರೆ.. ಕರ್ನಾಟಕ್ಕೆ ಆಗಮಿಸುತ್ತಲೇ ಟೀಕೆಗಳ ಸುರಿಮಳೆಯನ್ನು ಸುರಿಸುತ್ತಿರುವ ರಾಹುಲ್ ಗಾಂಧಿ.. ಈಗ ಮತ್ತೊಂದು ಟೀಕೆಗೆ ಒಳಗಾಗಿದ್ದಾರೆ… ಈ ಬಾರಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ನೀಡಲಿರುವ ಗಿಫ್ಟ್ ಎಷ್ಟರದ್ದು ಗೊತ್ತಾ?!

ಈ ಬಾರಿ ರಾಹುಲ್ ಗಾಂಧಿಗೆ ನೀಡಲಿರುವ ಗಿಫ್ಟ್ ಏನು ಗೊತ್ತಾ?

ಈಗಾಗಲೇ ಆಗಮಿಸಿರುವ ರಾಹುಲ್ ಗಾಂಧಿಗೆ ಬಳ್ಳಾರಿ ಕೂಡ್ಲಗಿ ಕ್ಷೇತ್ರದ ಪಕ್ಷೇತರ ಶಾಸಕ ನಾಗೇಂದ್ರ ನೀಡಲಿರುವ ಗಿಫ್ಟ್ ಏನು ಗೊತ್ತಾ? 15 ಕೆ.ಜಿ ಬೆಳ್ಳಿ, 1 ಕೆಜಿ ಬಂಗಾರ ಲೇಪಿತ ವಾಲ್ಮೀಕಿ ವಿಗ್ರಹ ವನ್ನು ನೀಡಲು ತಯಾರಾಗಿದ್ದಾರೆ…!!

ರಾಹುಲ್ ಗಾಂಧಿಗೆ ಕೊಡಲಿರುವ ಬಂಗಾರ ಲೇಪಿತ ವಾಲ್ಮೀಕಿ ವಿಗ್ರಹಕ್ಕೆ ಅರ್ಧ ಕೋಟಿ ರೂಪಾಯಿ ಖರ್ಚಾಗಿದೆ…!! ಇಷ್ಟು ವರ್ಷಗಳ ಕಾಲ ಆಳ್ವಿಕೆ ನಡೆಸಿ ಎಷ್ಟೋ ಹಗರಣಗಳನ್ನು ನಡೆಸಿ ಕೋಟಿ ಕೋಟಿ ಹಣವನ್ನು ಗುಳುಂ ಮಾಡಿದವರಿಗೆ ಇಷ್ಟೆಲ್ಲಾ ಭ್ರಷ್ಟಾಚಾರಗಳನ್ನು ಮಾಡಿದವರಿಗೆ ಇಂತಹ ಗಿಫ್ಟ್‍ಗಳನ್ನು ನೀಡುತ್ತಿದ್ದಾರಲ್ಲವೇ?

ಗಿಫ್ಟ್ ಕೊಡುವ ಹಣವನ್ನೇ ಬಡವರಿಗೆ ದಾನ ಮಾಡಿದರೆ ಅವರ ಜೀವನವನ್ನಾದರೂ ಚೆನ್ನಾಗಿ ಮಾಡಬಹುದಲ್ಲವೇ? ಒಬ್ಬ ಪಕ್ಷೇತರನಾದವವನು ರಾಹುಲ್ ಗಾಂಧಿಗೆ ಇಷ್ಟು ಮೊತ್ತದ ಗಿಫ್ಟ್ ಕೊಡಲು ತಯಾರಾಗಿದ್ದಾರೆ ಎಂದರೆ ಅಂದರ ಹಿಂದಿರುವ ಮರ್ಮವೇ ಬೇರೆ!! ಈ ರೀತಿಯಾಗಿ ರಾಹುಲ್ ಗಾಂಧಿಯನ್ನು ಒಲೈಸಿದರೆ ಮುಂದೆ ಟಿಕೆಟ್ ಸಿಗಬಹುದು ಎನ್ನುವ ದುರುದ್ಧೇಶ ಅಷ್ಟೇ… ಬಳ್ಳಾರಿ ಕೂಡ್ಲಗಿ ಕ್ಷೇತ್ರದ ಪಕ್ಷೇತರ ಶಾಸಕ ನಾಗೇಂದ್ರ ಕಾಂಗ್ರೆಸ್ ಜೊತೆಗೆ ಟೈಅಪ್ ಆಗಲು ಹೊರಟಂದಿದೆ ಎಂಬ ಸ್ಪಷ್ಟ ಮಾಹಿತಿ ಇಲ್ಲಿ ನಾವು ಗಮನಿಸಬಹುದು…


ಅದೇ ಮೊನ್ನೆ ತಾನೇ ನರೇಂದ್ರ ಮೋದಿಯವರು ಕೂಡಾ ಬೆಂಗಳೂರಿಗೆ ಆಗಮಸಿದ್ದರು..ಆ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸನ್ಮಾನ ಮಾಡುವ ಬಿಜೆಪಿ ಮುಖಂಡರು ನಾಡಪ್ರಭು ಕೆಂಪೇಗೌಡ ಪ್ರತಿಮೆಯ ಸ್ಮರಣಿಕೆ ನೀಡಿ ಗೌರವಿಸಿದ್ದರು…

ಬಿಜೆಪಿ ಬೆಂಗಳೂರು ಮಹಾನಗರ ಜಿಲ್ಲೆ ಅಧ್ಯಕ್ಷ ಪಿ.ಎನ್. ಸದಾಶಿವ ಅವರಿಗೆ ಇದರ ಉಸ್ತುವಾರಿ ವಹಿಸಲಾಗಿತ್ತು.. ದಶದಿಕ್ಕುಗಳಿಗೂ ಬೆಂಗಳೂರನ್ನು ವಿಸ್ತರಿಸಿ, ಇಡೀ ವಿಶ್ವವೇ ನಮ್ಮತ್ತ ತಿರುಗಿ ನೋಡಿರುವಂತೆ ಮಾಡಿದ ಕೀರ್ತಿ ನಾಡಪ್ರಭು ಕೆಂಪೇಗೌಡರಿಗೆ ಸಲ್ಲುತ್ತದೆ. ಕರ್ನಾಟಕದ ಇತಿಹಾಸದಲ್ಲಿ ಯಲಹಂಕ ಸಾಮ್ರಾಜ್ಯ ಅತ್ಯಂತ ವಿಸ್ತಾರ ಹಾಗೂ ಪ್ರಬಲವಾದುದಾಗಿದ್ದು ಅಪಾರ ಕೊಡುಗೆಗಳನ್ನು ನೀಡಿದ್ದಾರೆ ಕೂಡ. ಹಾಗಾಗಿ ಸಾಮಾಜಿಕ ಕಳಕಳಿ, ರೈತಪರ ಧೋರಣೆಯನ್ನು ಒಳಗೊಂಡು, ಗುಡಿಗೋಪುರ, ಕೆರೆಕಟ್ಟೆ ಸೇರಿದಂತೆ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಅಭಿವೃದ್ಧಿ ಕಾರ್ಯ ಮಾಡುವ ಮೂಲಕ ಮಾದರಿ ರಾಜಮನೆತನವಾಗಿ ಹೊರಹೊಮ್ಮಿದೆ.

ಅಂತಹ ಸಾಮ್ರಾಜ್ಯವನ್ನು ಆಳಿದ ಕೆಂಪೇಗೌಡರು ಕೇವಲ ಬೆಂಗಳೂರಿಗಲ್ಲದೆ ಇಡೀ ರಾಜ್ಯಕ್ಕೆ ಮಾದರಿಯಾಗಿದ್ದಾರೆ. ಹಂಪಿಯ ವೈಭವವನ್ನು ಕಂಡು ಬೆರಗಾಗಿದ್ದ ಕೆಂಪೇಗೌಡರು ದೂರದೃಷ್ಠಿಯಿಂದ ನಿರ್ಮಿಸಿದ ಬೆಂಗಳೂರು ನಗರ ಕರ್ನಾಟಕ ರಾಜ್ಯದ ರಾಜಧಾನಿಯಾಗಿರುವುದಲ್ಲದೆ ಭಾರತದ ಪ್ರಮುಖ ನಗರಗಳಲ್ಲಿ ಒಂದಾಗಿದೆ. ಹಾಗಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸನ್ಮಾನ ಮಾಡುವ ವೇಳೆ ಬಿಜೆಪಿ ಮುಖಂಡರು ನಾಡಪ್ರಭು ಕೆಂಪೇಗೌಡ ಪ್ರತಿಮೆಯ ಸ್ಮರಣಿಕೆ ನೀಡಿರುವುದು ಎಲ್ಲರಿಗೂ ಹೆಮ್ಮೆಯ ವಿಚಾರ!! ಅದರಲ್ಲೂ ಆ ಗಿಫ್ಟ್‍ಗೆ ಖರ್ಚಾದ ಹಣವೆಷ್ಟು ಗೊತ್ತಾ?! ಸುಮಾರು 5 ರಿಂದ 10 ಸಾವಿರ ರೂಪಾಯಿ ಅಷ್ಟೇ!!

ಆದರೆ ಈ ಬಾರಿ ರಾಹುಲ್ ಗಾಂಧಿಗೆ ನೀಡಲಿರುವ ಉಡುಗೊರೆ ಅರ್ಥ ಕೋಟಿ ಎಂದರೆ ಎಲ್ಲರೂ ಕೈ ಮೂಗಿನ ಮೇಲೆ ಹೋಗುತ್ತದೆ.. ಇದನ್ನೇ ಹಸಿವಿಗಾಗಿ ನರಳಾಡುತ್ತಿರುವ ಅದೆಷ್ಟೋ ಬಡ ಜನರಿದ್ದಾರೆ.. ಅದನ್ನೇ ಒಂದು ಹೊತ್ತಿನ ಊಟವಾದರೂ ನೀಡಿದರೆ ಅದರ ಪುಣ್ಯ ಅವರೊಗೆ ತಟ್ಟಬಹುದಿತ್ತು.. ಆದರೆ ಈ ರೀತಿಯಾಗಿ ಟಿಕೆಟ್ ಓಲೈಕೆಗಾಗಿ ಇಂತಹ ಗಿಫ್ಟ್ ಕೊಡುವುದು ನಿಜಕ್ಕೂ ವಿಪರ್ಯಾಸವೇ ಸರಿ!!

ಪವಿತ್ರ

Tags

Related Articles

Close