ಪ್ರಚಲಿತ

ಪ್ರಚಾರ ಪ್ರಿಯ ಸಾಹಿತಿಗಳ ನಡುವೆ ಮೋದಿಯನ್ನು ಮತ್ತೆ ಗದ್ದುಗೆಗೇರಿಸಬೇಕೆಂದ ನಿಸ್ವಾರ್ಥ ಸಾಹಿತಿಯ ಬಗ್ಗೆ ನಿಮಗೆಷ್ಟು ಗೊತ್ತು? ಧರ್ಮನಿಷ್ಟೆಯಲ್ಲಿ ನೋ ರಾಜಿ…

ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ಷಮತೆಯ ಬಗ್ಗೆ ಎಷ್ಟು ಹೇಳಿದರೂ ಸಾಲದು. ಯಾಕೆಂದರೆ ನರೇಂದ್ರ ಮೋದಿ ಒಬ್ಬ ಮಹಾನ್ ಕನಸುಗಾರ. ಕನಸನ್ನು ನನಸಾಗಿ ಪರಿವರ್ತಿಸುವ ಸಾಮರ್ಥ್ಯವುಳ್ಳ ಧೀಮಂತ!!  ಇಡೀ ಭಾರತವನ್ನಲ್ಲದೆ ಇಡೀ ಜಗತ್ತನ್ನೆ ಬದಲಾಯಿಸಿದ ಮಹಾನ್ ವೀರ!! ಅವರೋರ್ವ ವಿಶ್ವನಾಯಕ, ವಿಶ್ವವನ್ನೇ ಭಾರತದತ್ತ ಮುಖ ಮಾಡಿ ನೋಡುವಂತೆ ಮಾಡಿದ ಅಭಿನವ ಸ್ವಾಮಿ ವಿವೇಕಾನಂದ ನಮ್ಮ ಪ್ರಧಾನಿ ನರೇಂದ್ರ ಮೋದಿ!! ಮೋದೀಜೀ ಯಾವಾಗ ಅಧಿಕಾರ ಸ್ವೀಕರಿಸಿಕೊಂಡರೋ ಅಂದಿನಿಂದ ಇಡೀ ವಿಶ್ವವೇ ಮೋದೀಜೀಯನ್ನು ಗೌರವದಿಂದ ಕಾಣುತ್ತಿದೆ!! ಇದೀಗ ಖ್ಯಾತ ಸಾಹಿತಿಯೊಬ್ಬರು ಮೋದೀಜೀಯ ಕಾರ್ಯವೈಖರಿಯ ಬಗ್ಗೆ ಹಾಡಿಹೊಗಳಿದ್ದು ಮೋದಿ ಒಂದು ಬಾರಿ ಅಲ್ಲ ಮೂರು ಬಾರಿ ಗೆದ್ದು ಭಾರತವನ್ನು ಎತ್ತರಕ್ಕೆ ಕೊಂಡೊಯ್ಯಬೇಕು ಎಂದು ಹಾರೈಸಿದ್ದಾರೆ!!

Image result for modi

ಹೌದು ಮೋದೀಜೀಯ ಕಾರ್ಯವೈಖರಿಯನ್ನು ಕಂಡ ಖ್ಯಾತ ಸಾಹಿತಿ ಡಾ|| ಎಸ್. ಎಲ್. ಭೈರಪ್ಪನವರು ಮೋದೀಜೀಯನ್ನು ಹಾಡಿ ಹೊಗಳಿದ್ದಾರೆ!! ಎಸ್‍ಎಲ್ ಭೈರಪ್ಪನವರು ಆಧುನಿಕ ಕನ್ನಡ ಸಾಹಿತ್ಯದ ಕಾದಂಬರಿಕಾರರು ಮತ್ತು ಲೇಖಕರು. ಕನ್ನಡ ಭಾಷೆಯಲ್ಲಿ ಪುಸ್ತಕಗಳನ್ನು ಬರೆದಿರುವ ಇವರ ಕೃತಿಗಳು ಇಂಗ್ಲೀಷ್ ಹಾಗೂ ಭಾರತೀಯ ಭಾಷೆಗಳಿಗೆ ಅನುವಾದಗೊಂಡು ಭಾರತದ ಸಾಹಿತ್ಯವಲಯದಲ್ಲಿ ಹೆಸರಾಗಿದ್ದಾರೆ. ಇವರ ಕಾದಂಬರಿಗಳು ಹಲವಾರು ಮರುಮುದ್ರಣಗಳನ್ನು ಕಂಡು ಕನ್ನಡದ ಜನಪ್ರಿಯ ಬರಹಗಾರರಾಗಿದ್ದಾರೆ. ಭಗವಾನ್ ನಂತಹ ಕೆಲವು ಸಾಹಿತಿಗಳು ಕೇವಲ ಹೆಸರಿಗಾಗಿ ಬಾಯಿಗೆ ಬಂದ ರೀತಿಯಲ್ಲಿ ಲೇಖನಗಳನ್ನು ಬರೆದು ಹಿಂದೂ ದೇವರುಗಳಿಗೆ ನಿಂದನೆ ಮಾಡಿ ಮಾಧ್ಯಮದಲ್ಲಿ ತಮ್ಮ ಹೆಸರು ಹೈಲೆಟ್ ಆಗಬೇಕು ಎನ್ನುವ ಉದ್ಧೇಶದಿಂದ ಬಾಯಿಗೆ ಬಂದ ತರಹ ಮಾತನಾಡುತ್ತಾರೆ!!

ಆದರೆ ಎಸ್‍ಎಲ್ ಭೈರಪ್ಪನವರು ಹಾಗಲ್ಲ!! ತಾವು ಹೆಸರಿಗಾಗಿ ಏನೂ ಮಾಡಿದವರೇ ಅಲ್ಲ!!  ಡಾ|| ಎಸ್.ಎಲ್. ಭೈರಪ್ಪ ಕರ್ನಾಟಕದಲ್ಲಿ ಮಾತ್ರವಲ್ಲದೆ ಭಾರತಾದ್ಯಂತ ಸಾಹಿತ್ಯಾಸಕ್ತರಿಗೆ ಚಿರಪರಿಚಿತ ಹೆಸರು. ಕನ್ನಡ ಕಾದಂಬರಿ ಸಾಹಿತ್ಯವನ್ನು ರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುತ್ತಿರುವ ಕೀರ್ತಿ ಇವರಿಗೆ ಸಲ್ಲುತ್ತದೆ. ಕನ್ನಡ ಸಾರಸ್ವತ ಲೋಕಕ್ಕೆ ಮೊದಲ ಸರಸ್ವತಿ ಸಮ್ಮಾನ್ ಪ್ರಶಸ್ತಿಯ ಗೌರವವನ್ನು ತಂದುಕೊಟ್ಟ ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪನವರ ಕಾದಂಬರಿಗಳು ಭಾರತದ ಬಹುತೇಕ ಭಾಷೆಗಳಿಗೆ ಅನುವಾದಗೊಂಡಿವೆ. ಜ್ಞಾತಕಲಾವಿದರಾದ ಭೈರಪ್ಪನವರ ಕಾದಂಬರಿಗಳ ಕಥಾವಸ್ತು ಮಾನವ ಸಹಜಸಂವೇದನಗಳ ಸುತ್ತ ಹೊಸೆದುಕೊಂಡಿರುತ್ತವೆ. ತಮ್ಮ ತತ್ತ್ವಶಾಸ್ತ್ರ ಮತ್ತು ಸಂಸ್ಕೃತಿಯ ಆಳವಾದ ಅಧ್ಯಯನದೊಂದಿಗೆ, ಬಾಲ್ಯದ ಗ್ರಾಮೀಣಜೀವನ ಮತ್ತು ಮಹಾನಗರದ ಬದುಕನ್ನು ಅವರು ಹತ್ತಿರದಿಂದ ಕಂಡವರು. ಅಧ್ಯಯನ ಮತ್ತು ಜೀವನಾನುಭವ ಮಿಳಿತಗೊಂಡು ಸೃಷ್ಟಿಯಾಗುವ ಅವರ ಕಾದಂಬರಿಯ ಪಾತ್ರಗಳು ತಮ್ಮ ಬೇರುಗಳನ್ನು ಭಾರತೀಯ ನೆಲದಲ್ಲಿ ಕಂಡುಕೊಳ್ಳುತ್ತವೆ. ಮೋದೀಜೀಯಂತಹ ಜಗದೀಗವೀರನನ್ನು ಹೊಗಳುವಂತಹದ್ದು ಇಂತಹ ಕೆಲಸ ಮಾಡಿದವರ  ಬಾಯಲ್ಲಿ ಮಾತ್ರ ಇಂತಹ ಮಹಾನ್ ವ್ಯಕ್ತಿಗಳ ಬಗ್ಗೆ ಮಾತನಾಡಲು ಸಾಧ್ಯ!! ಮೋದೀಜೀಯನ್ನು ತೆಗಳುವ ಕೆಲವರಿಗೆ ಇದು ಪಾಠವಾಗಬೇಕು!!

ಮೋದೀಜೀಯನ್ನು ಹಾಡಿ ಹೊಗಳಿದ ಡಾ!! ಎಸ್.ಎಲ್. ಭೈರಪ್ಪ!!

ಕಳೆದ ನಾಲ್ಕು ವರ್ಷದಲ್ಲಿ ಭಾರತವನ್ನು ಪ್ರಧಾನಿ ನರೇಂದ್ರ ಮೋದಿ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಮುಂದಿನ ಭವಿಷ್ಯದ ಭಾರತವನ್ನು ಕಟ್ಟಲು ಶ್ರಮಿಸುತ್ತಿದ್ದಾರೆ ಎಂದು ಸಾಹಿತಿ ಎಸ್.ಎಲ್. ಭೈರಪ್ಪ ಹೇಳಿದ್ದಾರೆ. ಸಂಸದ ಪ್ರತಾಪ್ ಸಿಂಹ ಭೇಟಿ ವೇಳೆ ಮಾತನಾಡಿ, ಮೋದಿ ಒಂದು ಬಾರಿಯಲ್ಲ, ಮೂರು ಬಾರಿ ಗೆದ್ದರೆ ಮಾತ್ರ ಭಾರತಕ್ಕೆ ಉಳಿಗಾಲ. ಎರಡು ಮೂರು ಬಣಗಳು ಸೇರಿಕೊಂಡು ಮೋದಿ ಸೋಲಿಸಲು ಪಣ ತೊಟ್ಟಿವೆ. ಮೋದಿಯನ್ನು ಸೋಲಿಸಿದರೆ ಅದು ನಮ್ಮ ಮೂರ್ಖತನದ ಪರಮಾವಧಿ. ನಮ್ಮ ಶತೃ ರಾಷ್ಟ್ರಗಳಾಗಿರುವ ನೆರೆಯ ಚೀನಾ ಮತ್ತು ಪಾಕಿಸ್ತಾನ ಸುತ್ತಲಿನ ರಾಷ್ಟ್ರಗಳ ಪ್ರೀತಿ ವಿಶ್ವಾಸಗಳಿಸುವಲ್ಲೂ ಮೋದಿ ಯಶಸ್ವಿಯಾಗಿದ್ದಾರೆ ಎಂದರು.

ಮೋದಿ ಕೆಲಸವನ್ನು ಪ್ರೀತಿಸಿ

ಹಿಂದೆ ಇದ್ದ ಯುಪಿಎ ಸರ್ಕಾರದಲ್ಲಿ ಏನು ಸಾಧನೆ ಮಾಡಿತ್ತು? ಯಾವುದೇ ಒಂದು ಕೆಲಸ ಮಾಡಬೇಕಾದರೂ ಮೇಡಂ ಅಂತ ಅವರ ಹಿಂದೆ ಹೋಗುತ್ತಿದ್ದರು. ನಿಮಗೆ ಇಂತಹವರು ಬೇಕಾ? ದೇಶದ ಅಭಿವೃದ್ಧಿ ಮಾಡುವವರು ಬೇಕಾ? ಮೋದಿಯನ್ನು ದ್ವೇಷ ಮಾಡುವ ಬದಲು ಅವರ ಕೆಲಸವನ್ನು ಪ್ರೀತಿಸಿ ಎಂದು ಹೇಳಿದ್ದಾರೆ.

ಕೇಂದ್ರದ ಸಾಧನೆಗಳ ಪುಸ್ತಕ ಬಿಡುಗಡೆ

ಕೇಂದ್ರ ಸರ್ಕಾರದ ಸಾಧನೆಗಳ ಸಮರ್ಥನೆಗಾಗಿ ಸಂಪರ್ಕ ಅಭಿಯಾನ ಹಮ್ಮಿಕೊಳ್ಳಲಾಗಿದೆ. ನಾಲ್ಕು ವರ್ಷದ ಸಾಧನೆ ಕುರಿತು ಕಿರು ಹೊತ್ತಿಗೆ ನೀಡುತ್ತಿದ್ದೇವೆ. ಈ ಮೊದಲು ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಅವರಿಗೆ ನೀಡಲಾಗಿತ್ತು. ಇಂದು ನಾಡಿನ ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ, ಪತ್ರಿಕೋದ್ಯಮಿ ಕೆ.ಬಿ. ಗಣಪತಿ, ಮತ್ತೋರ್ವ ಹಿರಿಯ ಸಾಹಿತಿ ಸಿ.ಪಿ. ಕೃಷ್ಣಮೂರ್ತಿ ಹಾಗೂ ಇನ್ನಿತರ ಪ್ರಮುಖರಿಗೆ ಈ ಪುಸ್ತಕ ನೀಡಲಾಗುತ್ತಿದೆ. ಈ ಮೂಲಕ ಕೇಂದ್ರ ಸರ್ಕಾರದ ಸಾಧನೆ ಹಾಗೂ ನಾನು ಮೈಸೂರಿಗೆ ತಂದಿರುವ ಯೋಜನೆಗಳ ಬಗ್ಗೆ ವಿವರಿಸುತ್ತಿದ್ದೇನೆ ಎಂದು ಸಂಸದ ಪ್ರತಾಪ್ ಸಿಂಹ ಸಾಹಿತಿ ಎಸ್.ಎಲ್. ಭೈರಪ್ಪ ಅವರ ಭೇಟಿ ಬಳಿಕ ಹೇಳಿದರು.

ಸಂಪರ್ಕ್ ಫಾರ್ ಸಮರ್ಥನ್ ಕಾರ್ಯಕ್ರಮದಡಿಯಲ್ಲಿ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಇಂದು ಖ್ಯಾತ ಸಾಹಿತಿ ಸಿಪಿ ಕೃಷ್ಣಕುಮಾರ್, ಮೈಸೂರು ಮಿತ್ರ ಹಾಗೂ ಸ್ಟಾರ್ ಆಫ್ ಮೈಸೂರು ಪತ್ರಿಕೆಯ ಪ್ರಧಾನ ಸಂಪಾದಕರಾದ  ಕೆ.ಬಿ ಗಣಪತಿ, ಖ್ಯಾತ ಉದ್ಯಮಿಗಳಾದ ಗೋಪಿನಾಥ್ ಶೆಣೈ ಅವರನ್ನು ಭೇಟಿಯಾಗಿ ಕೇಂದ್ರ ಸರ್ಕಾರದ ನಾಲ್ಕು ವರ್ಷಗಳ ಸಾಧನೆಯ ಕಿರು ಹೊತ್ತಿಗೆ ನೀಡಿದ್ದಾರೆ.

Image result for modi

ಮೋದೀಜೀಯನ್ನು ಯಾವ ಪ್ರಸಿದ್ಧ ವ್ಯಕ್ತಿಗಳೂ ಅವರ ಹೆಸರನ್ನು ಕೇಳಿದರೆ ಸಾಕು ಬಾಯಿ ತುಂಬಾ ಹೊಗಳಿ ಅವರನ್ನು ಹಾರೈಸುತ್ತಾರೆ!! ಮೊನ್ನೇ ತಾನೇ ಕಾಂಗ್ರೆಸ್ಸಿಗರನ್ನೂ ಅಚ್ಚರಿಪಡಿಸುವಂತಹ ಮಾತನ್ನು ಶಾಸ್ತ್ರೀಜೀಯವರ ಮಗನೇ ಹೇಳಿದ್ದಾರೆ!! ಭಾರತದ ಮಾಜಿ ಪ್ರಧಾನ ಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರೀ, ಮೋದಿಯವರವರನ್ನು ಕಂಡರೆ ನನ್ನ ತಂದೆಯನ್ನು ಕಂಡಂತಾಗುತ್ತದೆ ಎಂದು ಹೇಳಿದ್ದಾರೆ!! ಕಾಂಗ್ರೆಸ್ ಹಾಗೂ ಬಲಪಂಧೀಯ ಆರ್‍ಎಸ್‍ಎಸ್ ಜನಸಂಘ ಇವೆರಡು ಬಣಗಳಿಂದ ಪ್ರಶಂಸೆ ಗಿಟ್ಟಿಸಿಕೊಂಡ ಕಾಂಗ್ರೆಸ್‍ನ ಕೆಲವೇ ಕೆಲವು ನಾಯಕರಲ್ಲಿ ಶಾಸ್ತ್ರೀಯವರು ಕೂಡಾ ಪ್ರಮುಖರು!! 1965ರಲ್ಲಿ ಜನಸಂಘದ ಸಂಸ್ಥಾಪಕ ಪಿಟಿ ದೀನ್ ದಯಾಳ್ ಉಪಾಧ್ಯಾಯರು ಶಾಸ್ತ್ರೀಜಿಯವರ ನಾಯಕತ್ವದ ಜವಾಬ್ದಾರಿಯನ್ನು ಕಂಡು ಅವರನ್ನು ಜನ್ ನಾಯಕ ಎಂದು ಬಣ್ಣಿಸಿದ್ದರು!! ಅದೇ ರೀತಿಯಲ್ಲಿ  ಶಾಸ್ತ್ರೀಯವರು ಮಗ ಸುನೀಲ ಶಾಸ್ತ್ರೀಯವರು ಪ್ರಧಾನ ಮಂತ್ರಿ ನರೇಂದ್ರ ಮೋದಿಯನ್ನು ಹೊಗಳಿದ್ದರು!! ಆಗ್ರಾದಲ್ಲಿ ಸುನೀಲರನ್ನು ಭೇಟಿಯಾಗಿ ಅಭಿನಂದಿಸಲು ಬಂದಿದ್ದ ಕಾಂಗ್ರೆಸ್ ನಾಯಕರುಗಳಿಗೆ  ಈ ಹೇಳಿಕೆಯಿಂದ ದಿಗ್ಭ್ರಮೆ ಉಂಟಾಗಿತ್ತು!!

ಇದೇ ಅಲ್ಲವೇ ನಾವೂ ಬಯಸುವುದು!! ಮೋದೀಜೀ ಇಡೀ ದೇಶವನ್ನೇ ಬದಲಿಸಿದ ಮಹಾಪುರುಷ!! ಇಡೀ ದೇಶವಲ್ಲದೆ ವಿದೇಶದಲ್ಲೂ ಇವರದ್ದೇ ಮಾತು!! ಮೋದೀ ಒಬ್ಬ ಜಗದೀಗ ವೀರನೂ ಹೌದು.. ಇನ್ನೂ ಮೋದೀಜೀಯವರ ಶ್ರೇಯಸ್ಸು ಎತ್ತರಕ್ಕೆ ಹೋಗಲಿ ಎಂದು ಎಲ್ಲರ ಹಾರೈಕೆ!!

  • ಪವಿತ್ರ
Tags

Related Articles

Close