ಪ್ರಚಲಿತ

ಈ ಯೋಧರು ಪ್ರಧಾನಿ ಮೋದಿ ಕುರಿತು ಏನಂದ್ರು ಗೊತ್ತಾ?

‘ಭಾರತಕ್ಕೆ ನಾವು ಸುರಕ್ಷಿತವಾಗಿ ಮರಳಿದ್ದೇವೆ. ಇದು ನಮಗೆ ತುಂಬಾ ಸಂತಸವನ್ನು ನೀಡಿದೆ. ಇದಕ್ಕೆ ಮುಖ್ಯ ಕಾರಣ ಪ್ರಧಾನಿ ನರೇಂದ್ರ ಮೋದಿ ಅವರು. ಅವರಿಗೆ ನಾವು ಧನ್ಯವಾದಗಳನ್ನು ತಿಳಿಸುತ್ತೇವೆ’ ಎಂದು ಕತಾರ್‌ನಿಂದ ಬಿಡುಗಡೆಯಾದ ಭಾರತೀಯ ನೌಕಾಪಡೆಯ ಯೋಧರು ಹೇಳಿದ್ದಾರೆ.

ಕಳೆದ ಒಂದು ವರ್ಷಗಳ ಹಿಂದೆ ಬೇಹುಗಾರಿಕೆಗೆ ಸಂಬಂಧಿಸಿದ ಅಪಾದನೆಯ ಕಾರಣ ಭಾರತದ ಎಂಟು ಮಂದಿ‌ ನೌಕಾಪಡೆಯ ಯೋಧರನ್ನು ಕತಾರ್ ವಶಕ್ಕೆ ಪಡೆದಿತ್ತು.‌ ಇವರನ್ನು ಕತಾರ್ ವಶದಿಂದ ಮುಕ್ಚಗೊಳಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಅವರು ಶ್ರಮ ವಹಿಸಿದ್ದರು. ಇವರ ಪ್ರಯತ್ನದ ಫಲ ಎಂಬಂತೆ ಭಾರತದ ನೌಕಾ ಪಡೆಯ ಮಾಜಿ ಯೋಧರು ಕತಾರ್ ವಶದಿಂದ ಮುಕ್ತರಾಗಿ, ಭಾರತಕ್ಕೆ ಮರಳಿದ್ದಾರೆ. ಈ ಸಂದರ್ಭದಲ್ಲಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

ಜೊತೆಗೆ ಬಿಡುಗಡೆಯಾದ ಎಂಟು ಯೋಧರ ಪೈಕಿ ಏಳು ಮಂದಿ ಯೋಧರು ದೆಹಲಿಯ ವಿಮಾನ ನಿಲ್ದಾದಲ್ಲಿ ಭಾರತ್ ಮಾತಾಕಿ ಜೈ ಎನ್ನುತ್ತಾ ಹೊರಬಂದಿದ್ದಾರೆ.

ನಮ್ಮನ್ನು ಸುರಕ್ಷಿತವಾಗಿ ಪ್ರಧಾನಿ ಮೋದಿ ಅವರ ಪ್ರಯತ್ನದ ಫಲವಾಗಿ ಹೊರ ಬಂದಿದ್ದೇವೆ. ಇದು ನಮಗೆ ಸಂತಸ ನೀಡಿದೆ. ಪ್ರಧಾನಿ ಮೋದಿ ಅವರ ವೈಯಕ್ತಿಕ ಪ್ರಯತ್ನದ ಕಾರಣಕ್ಕೆ ನಾವು ಯಾವುದೇ ಅಪಾಯವಿಲ್ಲದೆ ಬಿಡುಗಡೆ ಹೊಂದಿದ್ದೇವೆ. ಅವರಿಗೆ ಧನ್ಯವಾದಗಳನ್ನು ತಿಳಿಸಪವುದಾಗಿ ಮಾಜಿ ಯೋಧರು ಹೇಳಿದ್ದಾರೆ.

ಭಾರತ‌ ಸರ್ಕಾರದ ನಿರಂತರ ಪ್ರಯತ್ನವೇ ನಾವು ಬಿಡುಗಡೆ ಹೊಂದುವುದಕ್ಕೆ ಮುಖ್ಯ ಕಾರಣ. ಪ್ರಧೈನಿ ಮೋದಿ ಅವರ ಹೊರತಾಗಿ ಇದು ಸಾಧ್ಯವಾಗುತ್ತಿರಲಿಲ್ಲ. ಕಳೆದ ಸುಮಾರು ಹದಿನೆಂಟು ತಿಂಗಳುಗಳಿಂದ ನಾವು ಭಾರತಕ್ಕೆ ಮತ್ತು ಹಿಂದಿರುಗುವುದಕ್ಕೆ ಕಾತರಿಸುತ್ತಿದ್ದೆವು. ಈಗ ಮರಳಿ ಬಂದಿದ್ದೇವೆ‌ ಎಂದು ನುಡಿದಿದ್ದಾರೆ.

ಕತಾರ್ ಜೊತೆಗೆ ಪ್ರಧಾನಿ ಅವರು ಉತ್ತಮ ಒಡನಾಟ ಹೊಂದಿದ್ದು, ಆ ಕಾರಣವೇ ನಾವು ಭಾರತಕ್ಕೆ ಹಿಂದಿರುಗುವ ಹಾಗಾಗಿದೆ. ನಮ್ಮ ಅಂತರಾಳದಿಂದ ‌ನಾವವರಿಗೆ ಧನ್ಯವವಾದ ಹೇಳುತ್ತಿದ್ದೇವೆ. ಇದಕ್ಕಾಗಿ ಅವರು ಮಾಡಿರುವ ಪ್ರತಿಯೊಂದು ಪ್ರಯತ್ನಕ್ಕೂ ನಾವು ಋಣಿಗಳಾಗಿದ್ದೇವೆ ಎಂದು ಅವರು ಹೇಳಿದ್ದಾರೆ.

ಹಾಗೆಯೇ ನೌಕಾ ಸೇನೆಯ ಮಾಜಿ ಯೋಧರ ಬಿಡುಗಡೆಯಾಗಿರುವ ಬಗ್ಗೆ ಕೇಂದ್ರ ಸರ್ಕಾರ ಸಹ ಘೋಷಿಸಿದೆ.

Tags

Related Articles

Close