ಪ್ರಚಲಿತ

ಕಾಶ್ಮೀರ ಹಿಂದೂ ಭೂಭಾಗ !! ಪಾಕಿಸ್ತಾನಕ್ಕೆ ಕಾಶ್ಮೀರದ ಮೇಲೆ ದಾವೆ ಹೂಡಲು ಯಾವುದೇ ಅಧಿಕಾರವಿಲ್ಲ ಎಂದ ಇಮಾಮ್ ತವ್ಹೀದಿ!!

ವಿದೇಶಗಳಲ್ಲಿ ತನ್ನ ಉದಾರವಾದಿ ಇಸ್ಲಾಂನ ಪ್ರತಿಪಾದನೆಗಾಗಿ ಹೊಗಳಿಕೆ ಮತ್ತು ತೆಗಳಿಕೆ ಎರಡನ್ನೂ ಕೇಳುವ ಇಮಾಮ್ ತವ್ಹೀದಿಯವರು ಇರಾನಿನ ಕುಮ್ ಎಂಬ ಆಧ್ಯಾತ್ಮಿಕ ಪರಿವಾರದಲ್ಲಿ ಹುಟ್ಟಿದವರು. ಶಿಯಾ ಸಮುದಾಯಕ್ಕೆ ಸೇರಿದ ತವ್ಹೀದಿ ಅವರು ಪ್ರಸ್ತುತ ಆಷ್ಟ್ರೇಲಿಯಾದಲ್ಲಿ ನೆಲೆಸಿರುತ್ತಾರೆ. ಇವರೊಬ್ಬ ಪ್ರಚಂಡ ವಾಗ್ಮಿ, ಶಿಕ್ಷಕ, ಇಸ್ಲಾಂ ನ ವಿದ್ವಾಂಸ ಮತ್ತು ವಿಚಾರಕ. ಇಸ್ಲಾಂನಲ್ಲಿರುವ ಕುಂದು ಕೊರತೆಗಳ ಬಗ್ಗೆ ನಿರ್ಭೀತಿಯಿಂದ ಮಾತನಾಡುವ ಇವರು ಸಾಮಾಜಿಕ ಜಾಲತಾಣದಲ್ಲಿ ಬಹು ಚರ್ಚಿತ ಹೆಸರು. ಸ್ವಂತ ವೆಬ್ ಸೈಟ್ ಹೊಂದಿರುವ ಇವರಿಗೆ ವಿದೇಶಗಳಲ್ಲಿ ಮಾತ್ರವಲ್ಲ ಭಾರತದಲ್ಲೂ ಹಲವಾರು ಅನುಯಾಯಿಗಳಿದ್ದಾರೆ. ಓಪ್.ಇಂಡಿಯಾ ಎಂಬ ಖಾಸಗೀ ವೆಬ್ ಸೈಟ್ ಒಂದು ಇವರ ಸಂದರ್ಶನ ಪಡೆದು ಭಾರತದ ಬಗ್ಗೆ ಮತ್ತು ಕಾಶ್ಮೀರದ ಬಗ್ಗೆ ಅಭಿಮತ ಕೇಳಿದಾಗ ಅವರು ತಮ್ಮ ಅನಿಸಿಕೆಗಳನ್ನು ಮನಬಿಚ್ಚಿ ಹಂಚಿಕೊಂಡಿದ್ದಾರೆ.

ಭಾರತದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸುತ್ತಾ ತನಗೆ ಭಾರತವೆಂದರೆ ತುಂಬಾ ಇಷ್ಟ. ಭಾರತದ ಅಧಿಕಾರಿಗಳು, ಕಾರ್ಯಕರ್ತರು, ಪ್ರೋಫ಼ೆಸರರು ಮತ್ತು ಅನ್ಯ ವೃತ್ತಿ ನಿರತರೊಡನೆ ಮಧುರ ಬಾಂಧವ್ಯವಿದೆ ಎನ್ನುತ್ತಾರೆ. ಅವರ ಪ್ರಕಾರ ಭಾರತ ಅವರ ಘನಿಷ್ಟ ಮಿತ್ರ ರಾಷ್ಟ್ರ. ಕಾಶ್ಮೀರದ ಬಗ್ಗೆ ಅವರಲ್ಲಿ ಅಭಿಪ್ರಾಯ ಕೇಳಿದಾದ ” ಕಾಶ್ಮೀರ ಹಿಂದೂ ಭೂಭಾಗ, ಪಾಕಿಸ್ತಾನಕ್ಕೆ ಕಾಶ್ಮೀರದ ಮೇಲೆ ದಾವೆ ಹೂಡಲು ಯಾವುದೇ ಅಧಿಕಾರವಿಲ್ಲ. ಪಾಕಿಸ್ತಾನ “ನಿರ್ಮಾಣ”ವಾಗುವ ಮೊದಲಿನಿಂದಲೇ ಕಾಶ್ಮೀರ ಭಾರತದ ಅಂಗವಾಗಿತ್ತು” ಎನ್ನುತ್ತಾರೆ.

ಪಾಕಿಸ್ತಾನದ ಬಗ್ಗೆ ಅವರ ಅಭಿಪ್ರಾಯ ಕೇಳಿದಾಗ ” ನನ್ನ ಸಮ್ಮಾನಿತ ಅಭಿಪ್ರಾಯದ ಪ್ರಕಾರ, ಪಾಕಿಸ್ತಾನ ದ್ವೇಷ ಮತ್ತು ರಕ್ತಪಾತದ ಆಧಾರದ ಮೇಲೆ ರಚಿಸಲಾದ ಒಂದು ಅನೈತಿಕ ದೇಶ. ಅದರ ಸಂವಿಧಾನ ಎಲ್ಲ ನಾಗರಿಕರ ಅಧಿಕಾರದ ಸುರಕ್ಷತೆಯ ಬಗ್ಗೆ ದಾವೆ ಮಾಡುತ್ತದೆ, ಆದರೆ ಸರಕಾರ ದೇಶದ ಅಲ್ಪಸಂಖ್ಯಾತರ ಅಧಿಕಾರಗಳನ್ನು ರಕ್ಷಿಸುವಲ್ಲಿ ವಿಫಲವಾಗಿದೆ. ಕಳೆದ ಹಲವಾರು ವರ್ಷಗಳಿಂದ ಈ ದೇಶ “ಆತಂಕವಾದಿಗಳ ಸ್ವರ್ಗ” ವಾಗಿ ಉಗ್ರರಿಗೆ ಶರಣಾಗತಿ ನೀಡುತ್ತಿದೆ. ಆತಂಕವಾದವನ್ನು ಉನ್ಮೂಲನೆ ಮಾಡಲು ಪಾಶ್ಚಾತ್ಯ ದೇಶಗಳಿಂದ ಅರಬ್ ಗಟ್ಟಲೆ ಡಾಲರ್ ಗಳನ್ನು ಪಡೆದುಕೊಂಡ ಮೇಲೂ ಅತಿವಾದಿ ವಿಚಾರಧಾರೆಗಳ ವಿರುದ್ದ ಕೆಲಸ ಮಾಡಲು ಯಾವುದೇ ಪ್ರಯಾಸವನ್ನು ಈ ದೇಶ ಮಾಡಿಲ್ಲ.”

ಪ್ರಸ್ತುತ, ಭಾರತದ ಪ್ರಧಾನಮಂತ್ರಿ ಮೋದಿಜಿಯವರ ಬಗ್ಗೆ ಅವರ ಅಭಿಪ್ರಾಯ ಕೇಳಿದಾಗ ” ನಾನು ಪಾಕಿಸ್ತಾನದಿಂದ ವಿತ್ತ ಪೋಷಿತ ಇಸ್ಲಾಮಿಕ್ ಮಿಲಿಟಂಟ್ ಗಳ ನುಸುಳು ಕೋರುವಿಕೆಯಿಂದ ಭಾರತವನ್ನು ಸುರಕ್ಷಿತವಾಗಿಡಲು ಮೋದಿಜಿಯವರ ನೀತಿಗಳನ್ನು ಸಮರ್ಥಿಸುತ್ತೇನೆ.” ಎನ್ನುತ್ತಾರೆ. 2014 ರಲ್ಲಿ ಒಬ್ಬ ಪರ್ಯಟಕನಾಗಿ ಭಾರತಕ್ಕೆ ಭೇಟಿ ನೀಡಿರುವ ತವ್ಹೀದಿ ಅವರು ಮುಂಬರುವ ದಿನಗಳಲ್ಲಿ ಒಬ್ಬ ಪ್ರವಕ್ತಾ ಮತ್ತು ವಿಚಾರಕರಾಗಿ ಭೇಟಿ ನೀಡಲು ಬಯಸುತ್ತೇನೆನ್ನುತ್ತಾರೆ.

ಕೇವಲ ಉಗ್ರರನ್ನಷ್ಟೇ ಅಲ್ಲ, ಎಡಪಂಥೀಯರ ನಕಲೀ ಜಾತ್ಯಾತೀತವಾದವನ್ನು ಝಾಡಿಸುತ್ತಾರೆ ತವ್ಹೀದಿ. ಅವರ ಪ್ರಕಾರ ಎಡಪಂಥಿಯರು ಕಟ್ಟರ್ ವಕ್ರತೆ ಉಳ್ಳವರು. ಯಾವಾಗ ಒಬ್ಬ ಶಾಂತಿ ಪೂರ್ಣ ಮುಸಲ್ಮಾನ ಭ್ರಷ್ಟಾಚಾರದ ವಿರುದ್ದ ಮಾತನಾಡುತ್ತಾನಾ, ಮತ್ತು ಬದಲಾವಣೆಯನ್ನು ಬಯಸುತ್ತಾನಾ ಆಗ ಈ “ಲಿಬರಲ್” ಎಡಪಂಥೀಯರು ಅಂತಹವರಿಗೆ “ನಕಲಿ” ಎಂದು ಪಟ್ಟ ಕಟ್ಟಿ ವರ್ಗೀಕರಿಸುತ್ತಾರೆ. ಅವರ ಪ್ರಕಾರ ಕಟ್ಟರಪಂಥೀ ವಿಚಾರಧಾರೆಯುಳ್ಳವರೇ ನಿಜವಾದ ಮುಸಲ್ಮಾನರು, ಮತ್ತು ಅವರಿಗೆ ಚರಮಪಂಥದ ಪ್ರತಿಪಾದಕರಾಗಿರುವ ಹಕ್ಕಿದೆ! ಈ ಎಡಪಂಥೀಯರು ಇಂತಹ ಅತಿವಾದಿಗಳಿಗೆ ನ್ಯಾಯದ ಬಗ್ಗೆ ಹೇಳುವುದರ ಬದಲು ಅವರನ್ನು ಅರ್ಥಮಾಡಿಕೊಳ್ಳಬೇಕೆಂದು ಬಯಸುತ್ತಾರೆ ಎನ್ನುತ್ತಾರೆ ತವ್ಹೀದಿ.

ಭಾರತದ ಭವಿಷ್ಯದ ಬಗ್ಗೆ ಪ್ರಶ್ನೆ ಹಾಕಿದಾಗ ತವ್ಹೀದಿ ಅವರು ಹೇಳುತ್ತಾರೆ ” ಭಾರತದ ಭವಿಷ್ಯ ಉಜ್ವಲವಾಗಿದೆ, ಏಕೆಂದರೆ ಇಲ್ಲಿ ಒಂದು “ದೇಶ ಭಕ್ತ ಬಹುಮತ” ವಿದೆ. ಇವರು ತಮ್ಮ ಸಮಾಜ ಮತ್ತು ಸುರಕ್ಷೆಯನ್ನು ದುರ್ಬಲಗೊಳಿಸುವ ಜನರ ಬಗ್ಗೆ ತುಂಬಾ ಚೆನ್ನಾಗಿ ತಿಳಿದು ಕೊಂಡಿದ್ದಾರೆ. ಭಾರತದ ಬಳಿ ಒಂದು “ಮಹಾನ್ ನೇತೃತ್ವ”ವಿದೆ, ಈ ನೇತೃತ್ವ ಯಾವುದೇ ಕಾರಣಕ್ಕೂ “ಹಣದ” ಬದಲಿಗೆ “ದೇಶವನ್ನು” ಮಾರುವ ಕಾರ್ಯವನ್ನು ಮಾಡುವುದಿಲ್ಲ.” ಎನ್ನುತ್ತಾರೆ. ಒಬ್ಬ ಇಸ್ಲಾಂನ ಇಮಾಮ್ ಗೆ ಅರಿವಾದ ವಿಚಾರ ನಮ್ಮವರಿಗೆ ಇನ್ನೂ ಅರ್ಥವಾಗಿಲ್ಲ ಎಂದರೆ ಗುಲಾಗಿರಿಯ ಮನಸ್ಥಿತಿ ನಮ್ಮನ್ನು ಎಷ್ಟು ಆವರಿಸಿಕೊಂಡಿರ ಬೇಕು ಎಂದು ಯೋಚಿಸಿ. ಉಗ್ರವಾದ ಮತ್ತು ಎಡಪಂಥ ಯಾವತ್ತೂ ದೇಶವನ್ನು ಮುನ್ನಡೆಸುವುದು ಸಾಧ್ಯವೇ ಇಲ್ಲ. ರಾಷ್ಟ್ರವಾದದಿಂದಷ್ಟೇ ಭಾರತದ ಅಭಿವೃದ್ದಿ ಸಾಧ್ಯ. ಬಹುಕಾಲದ ಬಳಿಕ ಭಾರತಕ್ಕೆ ರಾಷ್ಟ್ರವಾದೀ ಸರಕಾರ ದೊರಕಿದೆ. ಇದನ್ನು ಉಳಿಸುವುದು, ಮುಂದಿನ ಅವಧಿಗೆ ಮತ್ತೊಮ್ಮೆ ಚುನಾಯಿಸುವುದು ರಾಷ್ಟ್ರವಾದಿಗಳೆಲ್ಲರ ಜವಾಬ್ದಾರಿ.

 

source: http://www.opindia.com/2018/03/exclusive-interview-with-imam-tawhidi/
sharvari

Tags

Related Articles

Close