ಪ್ರಚಲಿತ

ಸ್ಪೋಟಕ ಸುದ್ಧಿ: ಮಠದಿಂದ ಹೊರ ಬರುತ್ತೇನೆ ಎಂದ ಪೇಜಾವರ ಸ್ವಾಮೀಜಿ!! ಸಿದ್ದರಾಮಯ್ಯ ಮಾಡಿದರೇ ಅನ್ಯಾಯ?!

ಪೇಜಾವರ ಶ್ರೀ ವಿಶ್ವೇಶ್ವರ ತೀರ್ಥ ಸ್ವಾಮೀಜಿಗಳೆಂದರೆ ಹಿಂದೂ ಧರ್ಮಕ್ಕೆ ಶ್ರದ್ಧೆ. ಅವರು ಕೇವರ ಕಾವಿ ಧರಿಸಿದ ಸ್ವಾಮೀಜಿ ಅಲ್ಲ. ಹಿಂದೂ ಸಮಾಜದ ಏಕತೆಗಾಗಿ, ಸಮಾಜದ ಶ್ರೇಯಸ್ಸಿಗಾಗಿ ಹಗಲಿರುಳು ದುಡಿದ ಮಾಹಾ ಸನ್ಯಾಸಿ. ಆದರೆ ಇತ್ತೀಚಿನ ಕೆಲವು ಬೆಳವಣಿಗೆಗಳು ಶ್ರೀಗಳನ್ನು ಭಾರೀ ಬೇಸರವನ್ನೇ ಉಂಟು ಮಾಡಿದೆ. ತಾನು ಈ ಮಠದಲ್ಲಿ ಇರಲಾರೇ. ಹೊರ ಬರುತ್ತೇನೆ ಎಂದು ಬೇಸರದಿಂದಲೇ ನುಡಿದಿದ್ದಾರೆ.

ಇಷ್ಟಕ್ಕೂ ಇದಕ್ಕೆಲ್ಲಾ ಕಾರಣ ಮುಖ್ಯಮಂತ್ರಿ ಸಿದ್ದರಾಮಯ್ಯ. ಪೇಜಾವರ ಶ್ರೀಗಳಿಗೂ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೂ ಮೊದಲಿನಿಂದಲೂ ಆಗಿಬರೋಲ್ಲ. ಯಾವೊಬ್ಬ ರಾಜಕಾರಣಿಯೂ ಉಡುಪಿಗೆ ಬಂದರೆ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶಿರ್ವಾದ ಪಡೆಯದೆ ಇರಲಾರರು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ ಅಹಂಕಾರಿತನದಿಂದಲೇ ವರ್ತಿಸಿಕೊಂಡು ಬಂದವರು. ಅದೆಷ್ಟೇ ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉಡುಪಿಗೆ ಭೇಟಿ ನೀಡಿದರೂ ಮಠಕ್ಕೆ ಭೇಟಿ ನೀಡೋದೇ ಇಲ್ಲ. ಪೇಜಾವರ ಸ್ವಾಮೀಜಿಗಳನ್ನು ಕಂಡರೆ ಮುಖ್ಯಮಂತ್ರಿಗಳಿಗೆ ಆಗೋದೇ ಇಲ್ಲ.

ಮಠ ಮಂದಿರಗಳಿಗೆ ಕೈ ಹಾಕಿದ ಸಿದ್ದರಾಮಯ್ಯ..!

ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ಮಠಂದಿರಗಳಿಗೆ ವಿಚಾರಕ್ಕೆ ಮೂಗು ತೂರಿಸಿದ್ದಾರೆ. ಲಕ್ಷಾಂತರ ಜನರಿಗೆ ಅನ್ನ ನೀಡುವ ಮಂದಿರಗಳನ್ನು ಸರ್ಕಾರದ ಸ್ವಾಧೀನಕ್ಕೆ ತರುವ ಯೋಜನೆಯನ್ನು ಸಿದ್ದರಾಮಯ್ಯ ಮುಂದಿಟ್ಟಿದ್ದಾರೆ. ಧರ್ಮಸ್ಥಳ, ಉಡುಪಿಯ ಅಷ್ಟಮಠಗಳು ಸೇರೀದಂತೆ ಹಲವಾರು ದೇವಸ್ಥಾನಗಳ ಮೇಲೆ ಮುಖ್ಯಮಂತ್ರಿಗಳ ಕಣ್ಣು ಬಿದ್ದಿದೆ.ಹಿಂದೊಮ್ಮೆ ದೇವಸ್ಥಾನಗಳ ಮೇಲೆ ಕಣ್ಣಿಟ್ಟ ಸಿದ್ದರಾಮಯ್ಯರ ಸರ್ಕಾರದ ಮೇಲೆ ಭಾರೀ ಆಕ್ರೋಷವೇ ಭುಗಿಲೆದ್ದಿತ್ತು. ಈಗ ಮತ್ತೆ ಇಂತಹ ಕೃತ್ಯಕ್ಕೆ ಮುಖ್ಯಮಂತ್ರಿಗಳು ಕೈ ಹಾಕಿದ್ದಾರೆ.

ಮಠದಿಂದ ಹೊರ ಬರುತ್ತೇನೆ ಎಂದ ಸ್ವಾಮೀಜಿ…!

ಯಾವಾಗ ಸಿದ್ದರಾಮಯ್ಯ ಸರ್ಕಾರ ಇಂತಹ ಕೃತ್ಯಕ್ಕೆ ಕೈ ಹಾಕಿತೋ ಆವಾಗಲೇ ರಾಜ್ಯಾದ್ಯಂತ ಆಕ್ರೋಷಗಳು ಭುಗಿಲೆದ್ದಿದ್ದವು. ‘ಒಂದೊಮ್ಮೆ ಸರ್ಕಾರ ಉಡುಪಿಯ ಅಷ್ಟಮಠಗಳನ್ನು ತನ್ನ ಸುಪರ್ಧಿಗೆ ತೆಗೆದುಕೊಳ್ಳಲು ಯತ್ನಿಸಿದರೆ ನಾನು ಮಠದಿಂದ ಹೊರಬರುತ್ತೇನೆ. ಇಂತಹ ನಿರ್ಧಾರವನ್ನು ನಾನು ಒಪ್ಪೋದಿಲ್ಲ. ನಾನು ಸರ್ಕಾರದ ಅಡಿಯಲ್ಲಿ ನೌಕರನಾಗಿ ಕೆಲಸ ಮಾಡಲು ನಾನು ಸಿದ್ದನಿಲ್ಲ. ಇದು ಯಾರಿಗೂ ಒಳ್ಳೆಯದಲ್ಲ’ ಎಂದು ಬೇಸರವನ್ನು ವ್ಯಕ್ತಪಡಿಸಿದರು.

ತಟ್ಟಬಹುದೇ ಶ್ರೀಗಳ ಶಾಪ?

ಪೇಜಾವರ ವಿಶ್ವೇಶ್ವರ ತೀರ್ಥ ಸ್ವಾಮೀಜಿಗಳೆಂದರೆ ಹಿಂದೂ ಸಮಾಜದ ಪಾಲಿಗೆ ನಡೆದಾಡುವ ದೇವರು. 5 ಪರ್ಯಾಯವನ್ನು ಪೂರೈಸಿದರೂ ಇನ್ನೂ ಯುವ ತೇಜಸ್ಸಿನಿಂದ ಜೀವಿಸುವ ಈ ವಯೋವೃದ್ಧ ಸನ್ಯಾಸಿಯನ್ನು ಕಂಡರೆ ದೇವರನ್ನೇ ಕಂಡಂತಹ ಅನುಭವ ಕೆಲವರದ್ದು. ಪ್ರಧಾನಿಗಳೇ ಶ್ರೀಗಳನ್ನು ಕಂಡರೆ ಅಡ್ಡ ಬೀಳುತ್ತಾರೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ ಶ್ರೀಗಳ ವಿರುದ್ಧ ಕೆಂಡಕಾರುತ್ತಲೇ ಬರುತ್ತಿದ್ದರು. ಈಗಲೂ ಶ್ರೀಗಳ ವಿರು ಷಡ್ಯಂತ್ರಗಳನ್ನು ನಡೆಸುತ್ತಲೇ ಬರುತ್ತಿದ್ದಾರೆ. ಇದು ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗಳಿಗೆ ಶಾಪವಾಗಿ ಪರಿಣಮಿಸಬಹುದು ಎಂದೇ ಹೇಳಲಾಗುತ್ತಿದೆ.

ಕೆಂಡಾಮಂಡಲವಾದ ಧರ್ಮಾಧಿಕಾರಿಗಳು..!!!

ಅದಲ್ಲದೆ ಮಠ ಮಂದಿರಗಳನ್ನು ಸರ್ಕಾರದ ಸುಪರ್ಧಿಗೆ ತರುವ ಕಾಂಗ್ರೆಸ್ ಸರ್ಕಾರದ ಚಿಂತನೆಯ ವಿರುದ್ಧ ಧರ್ಮಸ್ಥಳದ ಧರ್ಮಾಧಿಕಾರಿಗಳು ಕೂಡಾ ಗರಂ ಆಗಿದ್ದಾರೆ. ಯಾವುದೇ ಕಾರಣಕ್ಕೂ ಇಂತಹ ಚಟುವಟಿಕೆಗಳನ್ನು ನಾವು ಸಹಿಸೋದಿಲ್ಲ ಎಂದು ಹೇಳಿದ್ದಾರೆ. ಸರ್ಕಾರ ದೇವಸ್ಥಾನಗಳನ್ನು ಸರ್ಕಾರದ ಸುಪರ್ಧಿಗೆ ನೀಡುವ ವಿಚಾರದ ಬಗ್ಗೆ ಹಾಸನದಲ್ಲಿ ಮಾತನಾಡಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು, “ಸರ್ಕಾರ ಮಠ ಮಂದಿರಗಳನ್ನು ಧಾರ್ಮಿಕ ದತ್ತಿ ಇಲಾಖೆಗೆ ಸೇರಿಸುವ ವಿಚಾರದ ಬಗ್ಗೆ ನನಗೆ ಖಚಿತ ಮಾಹಿತಿ ಇಲ್ಲ. ಆದರೆ ಇಂತಹಾ ಯೋಚನೆ ಹಾಗೂ ಯೋಜನೆಯನ್ನು ನಾನು ಖಂಡಿತಾ ಒಪೆÇ್ಪೀದಿಲ್ಲ” ಧರ್ಮಕ್ಕೆ ರಾಜಕಾರಣದ ಸೋಂಕು ತಟ್ಟಬಾರದು. ಮಠ ಮಂದಿರಗಳನ್ನು ಸರ್ಕಾರದ ಸುಪರ್ಧಿಗೆ ತರುವ ವಿಚಾರದಲ್ಲಿ ನನ್ನ ವಿರೋಧವಿದೆ. ಇದು ಯಾರಿಗೂ ಶ್ರೇಯಸ್ಕರವಲ್ಲ.ಎಲ್ಲವನ್ನೂ ರಾಷ್ಟ್ರೀಕರಣ ಮಾಡಲು ಸಾಧ್ಯವಿಲ್ಲ. ಧರ್ಮವೇ ಬೇರೆ ರಾಜಕೀಯವೇ ಬೇರೆ. ಇದು ಮುಖ್ಯಮಂತ್ರಿಗಳಿಗೆ ಒಳ್ಳೆಯದಲ್ಲಾ” ಎಂದು ಕಿಡಿ ಕಾರಿದ್ದಾರೆ.

ಧಾರ್ಮಿಕ ಕ್ಷೇತ್ರಗಳ ಮೇಲೆ ಕಣ್ಮಿಟ್ಟಿರುವ ಮುಖೂಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ನಡೆ ಈಗ ವ್ಯಾಪಕ ಟೀಕೆಗೆ ಗುರಿಯಾಗಿದ್ದು, ಈ ಬಗ್ಗೆ ಯಾವುದೇ ಚಿಂತನೆ ಇಲ್ಲ ಎಂದು ಹೇಳಿದ್ದರೂ ಜನತೆ ಸರ್ಕಾರದ ವಿರುದ್ಧ ಆಕ್ರೋಷಗೊಂಡಿದ್ದಾರೆ. ಇದು ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ನೇರ ಪರಿಣಾಮ ಬೀಳಬಹುದು ಎಂದೇ ಹೇಳಲಾಗುತ್ತಿದೆ…

-ಸುನಿಲ್ ಪಣಪಿಲ

Tags

Related Articles

Close