ಪ್ರಚಲಿತ

ಪ್ರಧಾನಿ ಮೋದಿಗೆ ಕೈ ಕೊಟ್ಟ ಆಂಧ್ರದ ಮುಖ್ಯಮಂತ್ರಿ ಚಂದ್ರ ಬಾಬು ನಾಯ್ಡು!! ಪ್ರತಿತಂತ್ರ ರೂಪಿಸಲಿರುವ ಮೋದಿ-ಶಾ ಜೋಡಿ! ಕೈ ಕೊಟ್ಟು ಸಿಕ್ಕಿ ಬಿದ್ದ ನಾಯ್ಡು!!

“ಬ್ರೇಕಿಂಗ್ ನ್ಯೂಸ್! ನಾಯ್ಡುವಿನ ಟಿಡಿಪಿ ಎನ್ ಡಿ ಎ ಯನ್ನು ಕೈ ಬಿಟ್ಟಿದೆ!” “ನಾಯ್ಡು ನಂಬಿದ್ದ ಪ್ರಧಾನಿ ಮೋದಿಗೆ ಬಿಗ್ ಶಾಕ್!!” “ಆಂಧ್ರದಲ್ಲಿನ್ನು ಮತ್ತೆ ನಾಯ್ಡು ಸರಕಾರ!” ಉಫ್!! ಮಾಧ್ಯಮಗಳೆಲ್ಲ ಮೋದಿ ಇನ್ನು ನಾಯ್ಡು ಇಲ್ಲದೇ ಮುಗಿದೇ ಹೋದರು ಎನ್ನುವಷ್ಟರ ಮಟ್ಟಿಗೆ ಮಾಧ್ಯಮಗಳು ಸುದ್ದಿ ಬಿತ್ತರಿಸಿದವು! ಎಲ್ಲಿಯ ಮಟ್ಟಕ್ಕೆಂದರೆ, ಇನ್ನು ಯಾವತ್ತೂ ಆಂಧ್ರದಲ್ಲಿ ಬಿಜೆಪಿ ಸರಕಾರ ಬರುವುದೇ ಇಲ್ಲ ಎನ್ನುವಷ್ಟರ ಮಟ್ಟಿಗೆ!!

ಆಂಧ್ರದಲ್ಲಿ, ವಿಶೇಷ ವರ್ಗ ಸ್ಥಿತಿಗಾಗಿ ಪ್ರತಿಭಟನೆ ನಡೆಸಿ, ಎನ್ ಡಿ ಎ ಸರಕಾರದ ಇಬ್ಬರು ಸಚಿವರು ನರೇಂದ್ರ ಮೋದಿ ಸರಕಾರದಿಂದ ಹೊರ ಬಂದಿದ್ದನ್ನು ಗಮನಿಸಿದ ನಾಯ್ಡು ಪಕ್ಷವಾದ ತೆಲುಗು ದೇಸಂ ಪಕ್ಷ ನಿರ್ಧರಿಸಿ, ಎನ್ ಡಿ ಎ ಯ ಜೊತೆ ಮೈತ್ರಿಗೆ ಒಪ್ಪಿದ್ದ ಟಿಡಿಪಿ ಈಗ ಹೊರಬಿದ್ದಿದೆ! ಕೇವಲ, ಎನ್ ಡಿ ಎ ಯ ಜೊತೆ ಮೈತ್ರಿಯಗಾಲು ಒಪ್ಪದೇ ಇದ್ದಿದ್ದರೆ, ಅಥವಾ ತನ್ನ ಪಾಡಿಗೆ ತಾನು ನರೇಂದ್ರ ಮೋದಿಯ ಸರಕಾರದ ಜೊತೆ ಕೈ ಜೋಡಿಸದೇ ಇದ್ದಿದ್ದರೆ ಏನೂ ಆಗುತ್ತಿರಲಿಲ್ಲ ಬಿಡಿ! ಆದರೆ, ನರೇಂದ್ರ ಮೋದಿ ಸರಕಾರದ ವಿರುದ್ಧ ಹೊರಟು ನಿಂತಿರುವ ಟಿಡಿಪಿ ಅನುಸರಿಸಿದ್ದು, ‘ನೋ – ಕಾನ್ಫಿಡೆನ್ಸ್’ ನಡೆಯನ್ನು!! ತಗೊಳಿ ಸ್ವಾಮಿ!! ಆಗಿದ್ದಿಷ್ಟೇ!! ಅಷ್ಟೇ!! ಕಾಂಗ್ರೆಸ್ ಪಕ್ಷ ಮತ್ತು ಮೋದಿಯನ್ನು ತೀರಾ ಎನ್ನುವಷ್ಟು ವಿರೋಧಿಸುವವರೆಲ್ಲ ಈಗ ಮತ್ತೆ
ಟಿಡಿಪಿ ಗೆ ವಾಪಾಸು ಜೈ ಕಾರ ಹಾಕುತ್ತಿದ್ದಾರೆ! ಸಹಜವೇ ಬಿಡಿ! ಯಾವತ್ತೂ, ಜನ ಗೆಲ್ಲುವ ಕುದುರೆಗೇ ಬಾಜಿ ಕಟ್ಟಲು ನೋಡುತ್ತಾರೆ! ಇಲ್ಲೂ ಅದೇ ಆಗಿರುವುದಷ್ಟೇ! ಆದರೆ, ಮೋದಿ ಮತ್ತು ಷಾ ಜೋಡಿ ಮಾತ್ರ ಇನ್ಯಾವುದೋ ರಾಜಕೀಯ ತಂತ್ರವನ್ನು ಹೆಣೆಯುತ್ತ ಕೂತಿದೆ! ಈ ಸಲ, ಆಂಧ್ರದಲ್ಲಿ ಕೇಸರೀ ಧ್ವಜವನ್ನು ಹಾರಿಸಿಯೇ ಸಿದ್ಧ ಎಂದು ಹಠ ತೊಟ್ಟಿರುವ ಮೋದಿ ಮಾತ್ರ, ತಂತ್ರಕ್ಕೆ ಪ್ರತಿ ತಂತ್ರ ಹೆಣೆಯುತ್ತಿದ್ದಾರೆ!

ವಿರೋಧ ಪಕ್ಷದ ಕೊಳಕು ತಂತ್ರವೊಂದು ಬಯಲು!

ವಾಸ್ತವವಾಗಿ, ಚಂದ್ರ ಬಾಬು ನಾಯ್ಡುವೇನಾದರೂ ಎನ್ ಡಿ ಎ ಯನ್ನು ತೊರೆಯದೇ ಇದ್ದಿದ್ದರೆ, ಬಹುಷಃ ರಾಜಕಾರಣದಲ್ಲಿ ಒಂದು ತೆರನಾದ ವಿಶೇಷ ಗೌರವಾದರಗಳು ಸಿಗುತ್ತಿತ್ತೇನೋ! ಆದರೆ, ಎಲ್ಲಿ ಆಂಧ್ರ ರಾಜಕೀಯದಲ್ಲಿ ತನ್ನ ಹಿಡಿತ ತಪ್ಪಿಬಿಟ್ಟರೆ, ಎಲ್ಲಿ ತಾನು ಮುಖ್ಯಮಂತ್ರಿಯಾಗದೇ ಹೋದರೆ ಎನ್ನುವ ಎಡಬಿಡಂಗಿ ಯೋಚನೆ ಬಂದಿದ್ದೇ ಬಂದಿದ್ದು, ಎನ್ ಡಿ ಎ ಬಿಟ್ಟು ಹೊರ ಹೋಗಿದ್ದಾರೆ! ಆದರೆ, ಹೊರಗಡೆ ಮಾಧ್ಯಮದಲ್ಲಿ ಮತ್ತು ಬೆಂಬಲಿಗರು ಅಭಿಪ್ರಾಯ ಪಟ್ಟಿರುವುದು ಮಾತ್ರ ನಾಯ್ಡುರವರು ತಮ್ಮ ಜನಗಳಿಗೆ ಮೋದಿ ಸರಕಾರ ದ್ರೋಹ ಬಗೆದಿದೆ ಎನ್ನುವ ಕಾರಣಕ್ಕೆ ಎನ್ ಡಿ ಎ ತೊರೆದಿದ್ದಾರೆ ಎಂದು ನಾಯ್ಡುರವರಿಗೆ ಪ್ರಾಮಾಣಿಕ, ಸತ್ಯ ಸಂಧರೆಂದು ಹೊಗಳಿ ಅಟ್ಟಕ್ಕೇರಿಸಿದ್ದಾರೆ!

ಆದರೆ, ಇಷ್ಟು ಎಷ್ಟು ಸತ್ಯ?! ಮೋದಿ ಸರಕಾರ, ಆಂಧ್ರ ಪ್ರದೇಶದ ಜನರ ಸೇವೆ ಮಾಡಿದಷ್ಟು ಈ ಪ್ರಾದೇಶಿಕ ಪಕ್ಷಗಳು ಮಾಡಿವೆಯಾ?! ಹೋಗಲಿ! ಮೋದಿ ಸರಕಾರವಂತೂ, ತನ್ನ ಯೋಜನೆಗಳಿಂದ, ಹೊಸ ಹೊಸ ಕಾರ್ಯಸೂಚಿಗಳಿಂದ, ಆಂಧ್ರದ ದಿಕ್ಕನ್ನೇ ಬದಲಾಯಿಸಿತ್ತಲ್ಲವಾ?! ಆದ್ದರಿಂದ, ಊಸರವಳ್ಳಿ ಎಂದೇ ಪ್ರಸಿದ್ದಿ ಹೊಂದಿರುವ ಆಂಧ್ರದ ಮುಖ್ಯಮಂತ್ರಿಯಾದ ನಾಯ್ಡು ಈಗ ಮೋದಿ ಸರಕಾರವನ್ನು ಬಯ್ದು, ಅಥವಾ ಆರೋಪಿಸುವುದರಿಂದ ಯಾವುದೇ ರೀತಿಯ ಪ್ರಯೋಜನವೂ ಇಲ್ಲ ಬಿಡಿ!

ಅಮಿತ್ ಷಾ ಮತ್ತು ಮೋದಿ ಜೋಡಿಯ ಮಾಸ್ಟರ್ ಪ್ಲಾನ್ ಈಗ ಆಂಧ್ರ ಪ್ರದೇಶದ ಮುಖ್ಯಮಂತ್ರಿಗೆ ರಾತ್ರಿಯ ನಿದ್ದೆಯನ್ನೇ ಹಾಳುಗಡೆವಿದೆ!!

ಇದು ಬೇಕಿತ್ತಾ?! ಎನ್ ಡಿ ಎ ತಾನಾಗಿಯೇ ಕೇಳಿತ್ತು!! ನಮ್ಮ ಜೊತೆ ಮೈತ್ರಿ ಮಾಡಿಕೊಳ್ಳಿ ಎಂದು! ಒಪ್ಪಿದ್ದ ನಾಯ್ಡು ಇನ್ನೊಂದೇನೋ ಯೋಚನೆಗೆ ಬಿದಗದು ಮತ್ತೆ ಮೈತ್ರಿ ಮುರಿದುಕೊಂಡರು! ಅವತ್ತೇ, ಮೋದಿ – ಷಾ ನಿರ್ಧರಿಸಿದ್ದರು!! ಇದಕ್ಕೊಂದು ಪ್ರತಿ ತಂತ್ರ ಬೇಕೇ ಬೇಕು ಎಂದು! ಹೇಳಬೇಕೆಂದರೆ, ದಕ್ಷಿಣ ಭಾರತದಲ್ಲಿ, ಕರ್ನಾಟಕವನ್ನು ಬಿಟ್ಟರೆ, ಬೇರೆ ರಾಜ್ಯಗಳಾದ ತಮಿಳು ನಾಡು, ಆಂಧ್ರ ಪ್ರದೇಶ ಮತ್ತು ಕೇರಳದಲ್ಲಿ ಇವತ್ತಿಗೂ ತನ್ನ ಅಧಿಪತ್ಯ ಸ್ಥಾಪಿಸಲಾಗಲಿಲ್ಲ ಬಿಜೆಪಿಗೆ! ಆದರೆ, ಈ ಬಾರಿ ಬದಲಾಗಿದೆ ಜನರ ಮನಃಸ್ಥಿತಿ! ಅಮಿತ್ ಷಾ ನ ಅಮರಾವತಿ ಕನಸು ಮತ್ತು, ಉಳಿದ ೨೧ ರಾಜ್ಯಗಳಲ್ಲಿ ಈಗಾಗಲೇ ಸರಕಾರ ನಿರ್ಮಿಸಿರುವ ಬಿಜೆಪಿಯ ವೈಭವದ ಜೊತೆಗೆ, ಬೆಂಬಲಿಗರೂ ಹೆಚ್ಚಾಗಿದ್ದಾರೆ! ಮೋದಿಯ ಅಚ್ಛೇ ದಿನ್ ನ ಯೋಜನೆಗಳೆಲ್ಲ, ಈಗಾಗಲೇ ಜನಮಾನಸವನ್ನು ತಲುಪಿದೆ!! ಅದೇ ರೀತಿ, ಆಂಧ್ರದಲ್ಲಿ ಮತ್ತು ಕೇರಳದಲ್ಲಿ ಈಗಾಗಲೇ ಬಿಜೆಪಿಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಲಿದೆ!

ಇಂತಹ ನಡೆಗಳಿಂದ ಕಂಗಾಲಾದ ತೆಲುಗು ದೇಸಂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮತ್ತು, ಆಂಧ್ರದ ಮುಖ್ಯ ಮಂತ್ರಿಯೂ ಆಗಿರುವ ನಾಯ್ಡುರವರು, ಬಿಜೆಒಇ ನಾಯಕರ ಜೊತೆಗಿನ ಒಪ್ಪಂದಗಳನ್ನೂ ಮುರಿದರು! ಅದಲ್ಲದೇ, ಎಲ್ಲಿ ಆಂಧ್ರದಲ್ಲಿ ಬಿಜೆಪಿ ಬೆಳೆಯುತ್ತದೋ ಎನ್ನುವ ಕಾರಣಕ್ಕೆ ತಾನು ಮೈತ್ರಿ ಮುರಿದುಕೊಂಡರೆ, ಬಿಜೆಪಿ ಆಂಧ್ರದಲ್ಲಿ ಅಸ್ತಿತ್ವಕ್ಕೆ ಬರುವುದಿಲ್ಲ ಎಂಬ ಭ್ರಮೆಗೂ ಬಿದ್ದಿರುವ ನಾಯ್ಡುರವರಿಗೆ ಬಹುಷಃ ಈಗೀಗ ಅರಿವಾಗುತ್ತಿದೆ!! ಅಮಿತ್ ಷಾ ಯಾರು ಎಂದು!! ಅಮಿತ್ ಷಾ ಏನೇನು ಮಾಡಬಲ್ಲರೆಂದು!!

ಬಿಜೆಪಿ ಆಂಧ್ರದಲ್ಲಿ ತನ್ನ ಅಭ್ಯರ್ಥಿಗಳನ್ನು, ಮತ್ತು ನಾಯಕರನ್ನು ಪ್ರತಿದಿನದ ಕೆಲಸವೆಂಬಂತೆ ಬದಲಾಯಿಸುತ್ತಲೇ ಬಂದಿದೆ! ಹಾಗೆಯೇ, ಬೂತ್ ಮಟ್ಟದಲ್ಲಿ, ತಮ್ಮ ಬೆಂಬಲಿಗರನ್ನೂ ಹೆಚ್ಚಿಸಿಕೊಳ್ಳುತ್ತಿರುವ ಬಿಜೆಪಿ, ನಾಯ್ಡು ಸರಕಾರಕ್ಕೆ ಸಿಕಾಪಟೆ ತಲೆಬಿಸಿ ಮಾಡುವುದಲ್ಲದೇ ನಾಯ್ಡುರವರಿಗೆ ಈಗ ಎಲ್ಲಿ ಏನು ನಡೆಯುತ್ತಿದೆ ಎಂಬುದೇ ಅರ್ಥವಾಗದೇ ಇರುವ ಹಾಗಾಗಿದೆ! ಸಮಸ್ಯೆಗೆ ಸಿಲುಕಿರುವ ನಾಯ್ಡು ಮಾತ್ರ ತೀರಾ ಹೀನಾಯ ವೆಂಬಂತಹ ನಿರ್ಧಾರಗಳನ್ನೂ ತೆಹಗೆದುಕೊಳ್ಳುತ್ತಿರುವುದಲ್ಲದೇ, ಅವರದೇ ಪಕ್ಷ ನಡೆಸಿದ ಸಮೀಕ್ಷೆಯಲ್ಲಿ ಸ್ವತಃ ಸೋಲಿನ
ಫಲಿತಾಂಶವೊಂದು ನಿಚ್ಚಳವಾಗಿ ಗೋಚರಿಸಿದೆ!!

ನಾಯ್ಡು, ಎನ್ ಡಿ ಎ ಯಲ್ಲಿದ್ದಾಗ, ಬಿಜೆಪಿಯನ್ನು ಸೋಲಿಸಲು ಯಾವ ತಂತ್ರಗಳನ್ನೂ ಕಂಡುಕೊಳ್ಳದೇ ಹೋದ ನಾಯ್ಡು ಕೊನೆ ಕೊನೆಗೆ ಏನನ್ನೂ ಮಾಡಲು ಕಾಣದೇ, ಬಿಜೆಪಿಗೆ ಪದೇ ಪದೇ ಸಮಸ್ಯೆಗಳನ್ನು ತಂದಿಟ್ಟರು! ವಿವಾದಗಳನ್ನೆಬ್ಬಿಸಿದರು! ಆಂಧ್ರಕ್ಕೆ ವಿಶೇಷ ವಾದ ಸ್ಥಾನ ಮಾನ ಕೊಡಿ ಎಂದು ದುಂಬಾಲು ಬಿದ್ದರು!! ಇದನ್ನೆಲ್ಲ ನೋಡಿದಾಗ, ಏನೆನ್ನಿಬಹುದು?! ಕೇವಲ ಅಧಿಕಾರಕ್ಕೋಸ್ಕರ ಇಷ್ಟೆಲ್ಲ ನಾಟಕವಾಡಿದ ನಾಯ್ಡುಗೆ ಬೇಕಿದ್ದದ್ದು ಅಧಿಕಾರ ಹೊರತು ಜನಗಳ ಹಿತಾಸಕ್ತಿಯಂತೂ ಅಲ್ಲ!! ಅದು ನಿಚ್ಚಳ! ಇಲ್ಲದಿದ್ದರೆ, ಎನ್ ಡಿ ಎ ಜೊತೆಗಿನ ಮೈತ್ರಿ ಮುರಿದುಕೊಳ್ಳುವ ಅವಶ್ಯಕತೆ ಏನಿತ್ತು ?!

ಇದು ಖಂಡಿತ!! ಮುಂಬರುವ ಚುನಾವಣೆಗಳಲ್ಲಿ, ಮತದಾರರ ಮೇಲೆ ಹಿಡಿತ ಸಾಧಿಸುವ ಬಿಜೆಪಿ, ಈ ಟಿಡಿಪಿ ಮತ್ತು ನಾಯ್ಡುರವರಿಗೆ ರಾಜಕೀಯ ವಲಯದಲ್ಲಿ ಭಾರೀ ನಷ್ಟ ಮಾಡಲಿದೆ!! ರಾಜಕೀಯ ಅಸ್ತಿತ್ವವನ್ನೇ ಉಳಿಸಿಕೊಳ್ಳಲು ಹೆಣಗಾಡುವಷ್ಟು ಪರಿಸ್ಥಿತಿಗೆ ಬಹುಷಃ ನಾಯ್ಡು ಮತ್ತವರ ಪಕ್ಷ ತಲುಪಲಿದೆ! ಅಕಸ್ಮಾತ್, ಬಿಜೆಪಿ ಬಹುತೇಕ ಕ್ಷೇತ್ರಗಳಲ್ಲಿ ಗೆಲುವು ಸಾಧಿಸದೇ ಇದ್ಧರೂ ಸಹ, ವೈ ಎಸ್ ಆರ್ ನ ಕಾಂಗ್ರೆಸ್ ಮಾತ್ರ ಬಿಜೆಪಿಗೆ ಬೆಂಬಲಿಸುವುದು ಖಚಿತವಾಗಿರುವಾಗ, ಸರಕಾರ ರಚನೆ ಮಾಡುವುದೂ ಸಹ ಟಿಡಿಪಿ ಗೆ ಕಷ್ಟವೇ!! ಅದಕ್ಕೇ, ಇದನ್ನೆಲ್ಲ ನೋಡಿದ ನಾಯ್ಡು ಈಗ ಮತದಾರರನ್ನು ಬೇರೆಡೆಗೆ ಸೆಳೆಯಲು ಇಲ್ಲ ಸಲ್ಲದ ಪ್ರಯತ್ನ ಮಾಡುತ್ತಿದ್ದಾರೆ ಅಷ್ಟೆ!!

“TDP’s decision to quit was inevitable after its mischievous propaganda against centre. People of Andhra Pradesh have now realised that the TDP is resorting to lies to cover up its inept and inert governance. Far from being a threat, TDP’s exit is a timely opportunity for the BJP to grow in Andhra Pradesh”, said BJP spokesperson GVL Narasimha Rao.

“ಬಿಜೆಪಿ ಒಕ್ಕೂಟ ಧರ್ಮದ ವಿರುದ್ಧ ನಡೆದಿದೆ” ಎನ್ನುವುದು ಟಿಡಿಪಿಯ ಆರೋಪ! ಅದಕ್ಕೇ, ಬಿಜೆಪಿಯ ವಕ್ತಾರರಾಗಿರುವ ಜಿ.ವಿ‌.ಎಲ್‌.ನರಸಿಂಹ ರಾವ್
ಸರಿಯಾಗಿ ಟಾಂಗ್ ಕೊಟ್ಟಿದ್ದಾರೆ! “ತನ್ನ ಅಸಮರ್ಥ ಸರಕಾರವನ್ನು ಮುಚ್ಚಲು, ಬಡಬಗ್ಗರಿಗೆ ಸುಳ್ಳನ್ನು ಹಂಚುತ್ತಿರುವ ನಾಯ್ಡು ಸರಕಾರಕ್ಕೆ ಈಗ ಸತ್ಯವನ್ನು ಅಶ್ರಯಿಸಲೂ ಸಹ ಆಗದಷ್ಟು ಹೀನಾಯ ಪರಿಸ್ಥಿತಿಗೆ ತಲುಪಿದೆ” ಎಂದಿದ್ದಾರೆ!

ತಾನು ಪ್ರಧಾನಿಯಾಗ ಬೇಕೆಂಬ ಕನಸೂ ಸಹ ಈ ಪಿತೂರಿ ನಡೆಸಲು ಕಾರಣವಾಯಿತೇ?!

TDP dumped NDA to pursue ambition of Chandrababu Naidu to PM’s post. 3rd front is now over excited with by-poll results. Will Naidu win over other aspirants who are desperately trying to be the third front nominee for PM to be?

 

ಟಿಡಿಪಿ ಚಂದ್ರ ಬಾಬುವಿನ ಪ್ರಧಾನಿಯಾಗುವ ಕನಸನ್ನು ನೆರವೇರಿಸಲು ಎನ್ ಡಿ ಎ ಜೊತೆ ಮೈತ್ರಿ ಮುರಿದುಕೊಂಡಿತು! ಆದರೆ, ಮೂರನೇ ಹಂತ
ಈಗ ಉಪಚುನಾವಣೆಗಳ ಫಲಿತಾಂಶದ ಮೇಲೆ ಆಧಾರಿತವಾಗುತ್ತದೆ! ನಾಯ್ಡು ಇತರೆ ಪ್ರಚಾರಾಂದೋಲನಗಳಲ್ಲಿ ಗೆಲುವು ಸಾಧಿಸುತ್ತಾರಾ?! ತನ್ಮೂಲಕ, ಪ್ರಧಾನ ಮಂತ್ರಿ ಸ್ಪರ್ಧೆಗೆ ಮೂರನೇ ಭಾಗದ ನಾಮಿನಿಯಾಗಲು ಬಯಸುತ್ತಿದ್ದಾರಾ?!

ನಿಜಕ್ಕೂ ಯೋಚಿಸಬೇಕಿದೆ ನಾಯ್ಡು!!

– ಪೃಥು ಅಗ್ನಿಹೋತ್ರಿ

Tags

Related Articles

Close