ಪ್ರಚಲಿತರಾಜ್ಯ

ಭ್ರಷ್ಟಾಚಾರಿಗಳ ಎದೆಯಲ್ಲಿ ನಗಾರಿ ಬಾರಿಸಲು ಸಜ್ಜಾಗಿರುವ ನರೇಂದ್ರ ಮೋದಿ!! ಕೊನೆಗೂ ಲೋಕಪಾಲರ ನೇಮಕಕ್ಕೆ ಮುಹೂರ್ತ ಫಿಕ್ಸ್!!

ನರೇಂದ್ರ ಮೋದಿಯವರು 500, ಒಂದು ಸಾವಿರ ರೂಪಾಯಿ ಹಣವನ್ನು ರಾತ್ರೋ ರಾತ್ರಿ ಬ್ಯಾನ್ ಮಾಡಿದ್ದೇ ತಡ. ಖದೀಮರು ತಮ್ಮಲ್ಲಿದ್ದ ಹಣವನ್ನೆಲ್ಲ ಬೇನಾಮಿ ಆಸ್ತಿ ಮಾಡೋ ಮೂಲಕ ಚಾಪೆ ಕೆಳಗೆ ನುಸುಳಿದ್ದರೆ ಮತ್ತೆ ಬೇನಾಮಿ ಆಸ್ತಿದಾರರಿಗೂ ಬಿಸಿ ಮುಟ್ಟಿಸಿದ್ದ ನರೇಂದ್ರ ಮೋದಿ ಸರ್ಕಾರ ಹಣವಂತರಿಗೆ ಬಿಗ್ ಶಾಕ್ ನೀಡಿದ್ದರು!! ಬಿಸಿ ತುಪ್ಪದಂತೆ ನುಂಗಲೂ ಆಗದೇ ಇತ್ತ ಉಗುಳಲೂ ಆಗದೇ ಬೇನಾಮಿ ಆಸ್ತಿದಾರರಿಗೆ, ಕಾಳಧನಿಕರಿಗೆ ಬಿಸಿಮುಟ್ಟಿಸಿದ್ದ ನರೇಂದ್ರ ಮೋದಿ ಇದೀಗ ಮತ್ತೊಂದು ಮಹತ್ತರವಾದ ಹೆಜ್ಜೆಯನ್ನಿಟ್ಟಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈಗಾಗಲೇ ಭ್ರಷ್ಟ ಅಧಿಕಾರಿಗಳ ಕುಣಿಕೆಯನ್ನು ಇನ್ನಷ್ಟು ಬಿಗಿಗೊಳಿಸುವ ಮೂಲಕ ಭ್ರಷ್ಟಾಚಾರ ಮುಕ್ತ ಭಾರತ ನಿರ್ಮಾಣದೆಡೆಗೆ ಹೊಸ ಹೆಜ್ಜೆ ಇಡುವ ಸಂಕಲ್ಪವನ್ನು ಮಾಡಿದ್ದ ವಿಚಾರ ತಿಳಿದೇ ಇದೆ. ಆದರೆ ಇದೀಗ ಗಾಂಧಿವಾದಿ ಅಣ್ಣಾಚಹಜಾರೆಯವರ ಕನಸನ್ನು ಶೀಘ್ರದಲ್ಲಿಯೇ ನನಸಾಗಿಸಲು ಹೊರಟಿದ್ದು, ಭ್ರಷ್ಟಚಾರಿಗಳ ಎದೆಯಲ್ಲಿ ನಗಾರಿ ಬಾರಿಸಲು ಸಜ್ಜಾಗಿದ್ದಾರೆ.

ಹೌದು….. ಭ್ರಷ್ಟಾಚಾರ ವಿರುದ್ಧದ ಚಳವಳಿಯ ನೇತಾರ ಅಣ್ಣಾ ಹಜಾರೆ ಅವರು ಜನ ಲೋಕಪಾಲ ಮಸೂದೆಯನ್ನು ಮಂಡಿಸುವಂತೆ ಆಗ್ರಹಿಸಿ ಕುಳಿತಿರುವ ಆಮರಣಾಂತ ಉಪವಾಸಕ್ಕೆ ದೇಶದಾದ್ಯಂತ ಭಾರೀ ಸಂಚಲನವನ್ನು ಉಂಟು ಮಾಡಿದ್ದಲ್ಲದೇ ಭ್ರಷ್ಟಾಚಾರದ ವಿರುದ್ಧ ಸಾಮಾನ್ಯ ಜನತೆ ಸಿಡಿದೇಳುವಂತೆ ಮಾಡಿದ್ದರು. ಆದರೆ ಇದೀಗ ಅಣ್ಣ ಹಜಾರೆ ನೇತೃತ್ವದಲ್ಲಿ ನವ ಚಳವಳಿ ಮೂಲಕ ಸಂಚಲನ ಮೂಡಿಸಿದ ಲೋಕಪಾಲ್ ಚಳವಳಿಯ ಆಶಯಕ್ಕೆ ಪೂರಕವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ದಿಟ್ಟ ನಿರ್ಧಾರ ಕೈಗೊಂಡು, ಭ್ರಷ್ಟರಿಗೆ ಬಲೆ ಹಾಕಲು ಮಣೆ ಹಾಕಿದ್ದಾರೆ!!

ಅಣ್ಣಾ ಹಜಾರೆ ಖ್ಯಾತಿಯ ಡಾ. ಕಿಷನ್ ಬಾಬುರಾವ್ ಹಜಾರೆ ಅವರು ಭಾರತದ ಮಹಾರಾಷ್ಟ್ರ ರಾಜ್ಯದ ಅಹ್ಮದ್‍ನಗರ ಜಿಲ್ಲೆಯ ರಾಲೇಗನ್ ಸಿದ್ಧಿ ಎಂಬ ಹಳ್ಳಿಯ ಅಭಿವೃದ್ಧಿಗಾಗಿ ನೀಡಿರುವ ಕಾಣಿಕೆಗಳಿಗಾಗಿ ಮತ್ತು ಅದನ್ನು ಒಂದು ಮಾದರಿ ಹಳ್ಳಿಯಾಗಿ ಗುರುತಿಸಲು ಮಾಡಿರುವ ಪ್ರಯತ್ನಕ್ಕಾಗಿ 1992ರಲ್ಲಿ ಭಾರತ ಸರ್ಕಾರದಿಂದ ಪದ್ಮ ಭೂಷಣ ಪ್ರಶಸ್ತಿ ಗಳಿಸಿರುವ ಒಬ್ಬ ಭಾರತೀಯ ಸಾಮಾಜಿಕ ಕಾರ್ಯಕರ್ತ. ಸಾರ್ವಜನಿಕ ಕಛೇರಿಗಳಲ್ಲಿನ ಭ್ರಷ್ಟಾಚಾರ ತಡೆಗಾಗಿ ಲೋಕಪಾಲ ಕಾಯ್ದೆಯನ್ನು ಜಾರಿಗೊಳಿಸುವ ಕುರಿತು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಆಮರಣಾಂತ ಉಪವಾಸ ಕೈಗೊಂಡಿದ್ದ ಇವರ ಕನಸು ಇದೀಗ ನನಸಾಗುವ ದಿನಗಳು ಹತ್ತಿರ ಬಂದಿದೆ.

ಐದು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಮಹತ್ವದ ಲೋಕಪಾಲ್ ನೇಮಕಕ್ಕೆ ನರೇಂದ್ರ ಮೋದಿ ಸರ್ಕಾರ ಮುಂದಾಗಿರುವ ಲಕ್ಷಣ ಗೋಚರಿಸಿದ್ದು, ಸುಪ್ರೀಂ ಕೋರ್ಟ್ ಗೆ ಕೇಂದ್ರ ಸರ್ಕಾರ ಲೋಕಪಾಲ ಕುರಿತು ವಿವರವಾದ ಮಾಹಿತಿ ನೀಡಿದೆ. ಕಾಮನ್ ಕಾಸ್ ಎನ್ನುವ ಎನ್ ಜಿಒ ಸಲ್ಲಿಸಿದ್ದ ಅರ್ಜಿಯ ಸಂಬಂಧ ಫೆಬ್ರವರಿ 23ರಂದು ವಿಚಾರಣೆ ನಡೆಸುತ್ತಿದ್ದ ಸುಪ್ರೀಂಕೋರ್ಟ್, ಕೇಂದ್ರ ಸರಕಾರಕ್ಕೆ ವಿಸ್ಕೃತ ವಿವರಣೆ ನೀಡುವಂತೆ ಸೂಚಿಸಿತ್ತು. ಈ ಸಂಬಂಧ ವಿವರಣೆ ನೀಡಿರುವ ಕೇಂದ್ರ, ಮಾರ್ಚ್ ಒಂದರಂದು ಲೋಕಪಾಲ್ ನೇಮಕ ಸಮಿತಿಯ ಸಭೆ ನಡೆಯಲಿದೆ ಎಂದು ಹೇಳಿದೆ.

ಇಷ್ಟೆಲ್ಲ ಜನಾಗ್ರಹಕ್ಕೆ ಕಾರಣವಾಗಿರುವ ಈ ಜನ ಲೋಕಪಾಲ್ ಕಾಯ್ದೆಯಲ್ಲಿ ಏನಿದೆ ಗೊತ್ತೇ??

* ಕೇಂದ್ರದಲ್ಲಿ ಲೋಕಪಾಲ ಮತ್ತು ಪ್ರತಿರಾಜ್ಯದಲ್ಲಿ ಲೋಕಾಯುಕ್ತ ನೇಮಕ.

* ಸುಪ್ರೀಂ ಕೋರ್ಟ್ ಮತ್ತು ಚುನಾವಣಾ ಆಯೋಗದಂತೆ ಲೋಕಪಾಲ ಸಂಸ್ಥೆ ಕೂಡ ಸ್ವತಂತ್ರವಾಗಿರುತ್ತದೆ.

* ಭ್ರಷ್ಟ ವ್ಯಕ್ತಿ ರಾಜಕಾರಣಿ, ಅಧಿಕಾರಿ, ನ್ಯಾಯಮೂರ್ತಿ ಯಾರೇ ಆಗಿರಲಿ, ಆರೋಪ ಸಾಬೀತಾದರೆ ಎರಡು ವರ್ಷದಲ್ಲಿ ಜೈಲು ಸೇರಬೇಕು.

* ಭ್ರಷ್ಟ ವ್ಯಕ್ತಿಯಿಂದ ಸರಕಾರಕ್ಕೆ ಆದ ನಷ್ಟವನ್ನು ಶಿಕ್ಷೆ ಆಗುವ ದಿನ ಮರುಪಾವತಿಸಬೇಕು.

* ಸರಿಯಾದ ಸಮಯದಲ್ಲಿ ಯಾವುದೇ ವ್ಯಕ್ತಿಗೆ ಸಂಬಂಧಿಸಿದ ಕೆಲಸ ನೆರವೇರದಿದ್ದರೆ ಕರ್ತವ್ಯಚ್ಯುತಿ ಮಾಡಿದ ಅಧಿಕಾರಿಗೆ ದಂಡ ವಿಧಿಸಿ, ಅದನ್ನು ಸಂಬಂಧಪಟ್ಟ ವ್ಯಕ್ತಿಗೆ ನೀಡಲಾಗುವುದು.

* ಪಂಚಾಯತ್ ನಲ್ಲಿ ಹಣ ದುರುಪಯೋಗವಾದರೆ, ರೇಶನ್ ಕಾರ್ಡ್ ನಲ್ಲಿ ಗೋಲ್ ಮಾಲ್ ನಡೆದರೆ, ಪೆÇಲೀಸ್ ಲಂಚ ಕೇಳಿದರು, ರಸ್ತೆ ಸರಿಯಾಗಿ ಹಾಕದಿದ್ದರೆ, ಪಾಸ್ ಪೆÇೀರ್ಟ್ ಸೂಕ್ತ ಸಮಯದಲ್ಲಿ ದೊರಯದಿದ್ದರೆ, ಲೈಸೆನ್ಸ್ ನೀಡುವ ಅಧಿಕಾರಿ ಕಿರಿಕ್ ಮಾಡಿದರೆ, ಸಬ್ ರಿಜಿಸ್ಟ್ರಾರ್ ಟೇಬಲ್ ಕೆಳಗೆ ಕೈ ಚಾಚಿದರೆ ಲೋಕಪಾಲನಿಗೆ ದೂರು ನೀಡಬಹುದು.

* ಲೋಕಪಾಲ ರಾಜಕಾರಣಿಗಳಿಂದ ನೇಮಕವಾಗದೆ, ಜನರಿಂದ, ಸಾಂವಿಧಾನಿಕ ಅಧಿಕಾರಿಯಿಂದ, ನ್ಯಾಯಮೂರ್ತಿಗಳಿಂದ ನೇಮಕವಾಗುವುದರಿಂದ ನೇಮಕವಾಗುವುದರಿಂದ ಭ್ರಷ್ಟಾಚಾರಕ್ಕೆ ಅವಕಾಶವೇ ಇಲ್ಲ.

* ಜನ ಲೋಕಪಾಲ ಮಸೂದೆ ಜಾರಿಗೆ ಬಂದರೆ ಮುಖ್ಯ ಜಾಗೃತ ಆಯುಕ್ತ, ವಿಚಕ್ಷುದಳ, ಸಿಬಿಐನ ಭ್ರಷ್ಟವಿರೋಧಿ ಶಾಖೆಗಳು ಲೋಕಪಾಲದಲ್ಲಿ ಸೇರಿಕೊಳ್ಳುತ್ತವೆ.

* ಭ್ರಷ್ಟಾಚಾರದ ವಿರುದ್ಧ ದನಿಯೆತ್ತುವ ವ್ಯಕ್ತಿಗೆ ಲೋಕಪಾಲರಿಂದ ಸಂಪೂರ್ಣ ಭದ್ರತೆ ದೊರೆಯುತ್ತದೆ.

ಕೇಂದ್ರ ಸರ್ಕಾರದ ಆಡಳಿತದಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಲೋಕಪಾಲ ಸಮಿತಿಯಲ್ಲಿ, ಸಿಜೆಐ ದೀಪಕ್ ಮಿಶ್ರಾ, ಪ್ರಧಾನಿ ಮೋದಿ ಮತ್ತು ಸಂಸತ್ತಿನ ಉಭಯ ಸದನಗಳ ಪ್ರತಿಪಕ್ಷದ ನಾಯಕರುಗಳು ಸದಸ್ಯರಾಗಿರುತ್ತಾರೆ. ವಿರೋಧ ಪಕ್ಷಗಳಲ್ಲಿ ನಾಯಕರ ಕೊರತೆಯಿದೆ ಎನ್ನುವ ಕಾರಣ ನೀಡಿ, ಲೋಕಪಾಲ ನೇಮಕ ಪ್ರಕ್ರಿಯೆ ವಿಳಂಬವಾಗಬಾರದೆಂದು ಕಳೆದ ಏಪ್ರಿಲ್ ತಿಂಗಳಲ್ಲೇ ಸರ್ವೋಚ್ಚ ನ್ಯಾಯಾಲಯ ಕೇಂದ್ರಕ್ಕೆ ಸೂಚಿಸಿತ್ತು.

ಅಷ್ಟೇ ಅಲ್ಲದೇ, ಕಾಂಗ್ರೆಸ್ ಅಥವಾ ಇತರ ವಿರೋಧ ಪಕ್ಷಗಳ ನಾಯಕರು ಇಲ್ಲದಿದ್ದರೂ ಲೋಕಪಾಲ್ ನೇಮಿಸಿ ಎಂದು ನ್ಯಾಯಾಲಯ ಹೇಳಿತ್ತು. ಆದರೆ ಅಣ್ಣಾಹಜಾರೆ ರಾಷ್ಟ್ರವ್ಯಾಪಿ ಚಳುವಳಿ ನಡೆಸಿದ ನಂತರ 2013ರಲ್ಲಿ ಲೋಕಪಾಲ ನೇಮಕಕ್ಕೆ ಪಾರ್ಲಿಮೆಂಟಿನಲ್ಲಿ ಅನುಮೋದನೆ ನೀಡಲಾಗಿತ್ತು. ಹಾಗಾಗಿ 2014ರಲ್ಲಿ ಮೋದಿ ಸರ್ಕಾರಕ್ಕೆ ಅಧಿಕಾರಕ್ಕೆ ಬಂದ ನಂತರ, ವಿರೋಧ ಪಕ್ಷದಲ್ಲಿ ನಾಯಕರೇ ಇಲ್ಲ ಎಂದು ಕೋರ್ಟಿಗೆ ಹೇಳಿತ್ತು.

ವಿರೋಧ ಪಕ್ಷದ ಸ್ಥಾನಮಾನವೂ ಸಿಗದಂತೆ ಲೋಕಸಭಾ ಚುನಾವಣೆಯಲ್ಲಿ ಸೋತಿದ್ದ ಕಾಂಗ್ರೆಸ್ ಈಗ ಪಾರ್ಲಿಮೆಂಟಿನಲ್ಲಿ ಅತಿಹೆಚ್ಚು ಸದಸ್ಯರನ್ನು ಹೊಂದಿರುವ ಪಕ್ಷ. ಹಾಗಾಗಿ, ಕಾಂಗ್ರೆಸ್ ಪಕ್ಷವನ್ನು ಅಧಿಕೃತ ವಿರೋಧ ಪಕ್ಷವೆಂದು ಪ್ರಕಟಿಸುವ ನಿರ್ಧಾರಕ್ಕೆ ಸಂಸತ್ತಿನಲ್ಲಿ ಇನ್ನೂ ಅನುಮೋದನೆ ಸಿಗಬೇಕಷ್ಟೇ ಎಂದು ತಿಳಿದು ಬಂದಿದೆ!!

ಇನ್ನು, ಭ್ರಷ್ಟಾಚಾರ ತಡೆ ಸಂಸ್ಥೆ ಲೋಕಪಾಲ ನೇಮಕ ಪ್ರಕ್ರಿಯೆಯನ್ನು ನಡೆಸುತ್ತಿದ್ದು, ಆಯ್ಕೆ ಸಮಿತಿಯ ಸಭೆ ಮಾರ್ಚ್ 1ರಂದು ನಡೆಯಲಿದೆ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‍ಗೆ ತಿಳಿಸಿದೆ. ಅಷ್ಟೇ ಅಲ್ಲದೇ, ಐದು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಮಹತ್ವದ ಲೋಕಪಾಲ್ ನೇಮಕಕ್ಕೆ ನರೇಂದ್ರ ಮೋದಿ ಸರ್ಕಾರ ಮುಂದಾಗಿರುವ ಲಕ್ಷಣ ಗೋಚರಿಸಿರುವುದೇ ಹೆಮ್ಮೆಯ ವಿಚಾರವಾಗಿದೆ.

– ಅಲೋಖಾ

 

Tags

Related Articles

Close