ಪ್ರಚಲಿತ

ಹಿಂದೂ ಸಮಾಜಕ್ಕೆ ಗುಡ್ ನ್ಯೂಸ್ ನೀಡಿದ ಕುಮಾರ ಸ್ವಾಮಿ..! ಸಿದ್ದು ಮಾಡಿದ ತಪ್ಪನ್ನು ತಿದ್ದಿಕೊಂಡ ಕುಮಾರಣ್ಣ..!

ಅವರು ಕರಾವಳಿಯ ಹಿಂದೂ ಹೃದಯ ಸಾಮ್ರಾಟ್ ಎಂದೇ ಹೆಸರಾಗಿರುವ ವ್ಯಕ್ತಿ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಮುಖಂಡ. ವೈಧ್ಯರಾದರೂ ತನ್ನದೇ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಸಾವಿರಾರು ಮಕ್ಕಳಿಗೆ ಭಾರತೀಯ ಸಂಸ್ಕೃತಭರಿತ ಶಿಕ್ಷಣವನ್ನು ನೀಡುತ್ತಿರುವ ಶಿಕ್ಷಣ ಧುರೀಣ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ತನ್ನ ಪತ್ನಿಯೊಂದಿಗೆ 1 ವರ್ಷ ಜೈಲುವಾಸವನ್ನು ಅನುಭವಿಸಿದವರು. 

ಹೌದು, ಅವರು ಮತ್ಯಾರೂ ಅಲ್ಲ. ದಕ್ಷಿಣ ಕನ್ನಡ ಜಿಲ್ಲೆಯ, ಬಂಟ್ವಾಳ ತಾಲೂಕಿನ ಕಲ್ಲಡ್ಕ ಡಾ.ಪ್ರಭಾಕರ್ ಭಟ್. ಇವರ ಹೆಸರು ಕೇಳಿದರೆ ಒಮ್ಮೆ ಇಡಿಯ ಕರ್ನಾಟಕವೇ ಕೈ ಎತ್ತಿ ಮುಗಿಯುತ್ತೆ. ಮತಾಂಧರು ಮಖಾಡೆ ಮಲಗುತ್ತಾರೆ. ಇಂತಹ ಹಿಂದೂ ನಾಯಕನ ಮೇಲೆ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕೆಂಗಣ್ಣು ಬೀರಿತ್ತು. ಸುಮಾರು 4000ಕ್ಕಿಂತಲೂ ಅಧಿಕ ಮಂದಿ ವಿದ್ಯಾರ್ಥಿಗಳು ಸೇವಿಸುತ್ತಿದ್ದ ಅನ್ನಕ್ಕೆ ಈ ಸರ್ಕಾರ ಕನ್ನ ಹಾಕಿತ್ತು.

ಕೊಲ್ಲೂರು ಶ್ರೀ ಮೂಕಾಂಬಿಕಾ ಸನ್ನಿಧಾನದಿಂದ ಬರುತ್ತಿದ್ದ ಅನ್ನವನ್ನು ಅಂದಿನ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರ ಕುತಂತ್ರದ ಮೇರೆಗೆ ಸ್ಥಗಿತಗೊಳಿಸಲಾಗಿತ್ತು. ಆರಂಭದಿಂದಲೂ ಕಲ್ಲಡ್ಕ ಡಾ.ಪ್ರಭಾಕರ್ ಭಟ್ ಅವರ ವಿರುದ್ಧ ಕಿಡಿ ಕಾರುತ್ತಲೇ ಇದ್ದಂತಹ ರಮಾನಾಥ್ ರೈ ಅಂದು ಆ ಬಡಪಾಯಿ ಮಕ್ಕಳ ಅನ್ನವನ್ನು ಕಸಿಯುವ ಮೂಲಕ ಸೇಡು ತೀರಿಸಿಕೊಂಡಿದ್ದರು. 

ಅಂದಿನಿಂದ ಕಾಂಗ್ರೆಸ್ ಸರ್ಕಾರ ಹಾಗೂ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ರಮನಾಥ ರೈ ವಿರುದ್ದ ಆಕ್ರೋಶ ಭುಗಿಲೆದ್ದಿತ್ತು. ಕರ್ನಾಟಕ ರಾಜ್ಯದಾದ್ಯಂತ ಪ್ರತಿಭಟನೆಗಳು ನಡೆದಿದ್ದವು. ಕಲ್ಲಡ್ಕ ಶ್ರೀ ರಾಮ ವಿದ್ಯಾ ಕೇಂದ್ರದ ಮಕ್ಕಳು ಕಾಂಗ್ರೆಸ್ ಸರ್ಕಾರದ ಅನ್ಯಾಯವನ್ನು ಸವಾಲಾಗಿ ಸ್ವೀಕರಿಸಿದರು. ತಾವೇ ಗದ್ದೆಗಿಳಿದು ವ್ಯವಸಾಯ ಮಾಡಿ ಕ್ವಿಂಟಾಲ್ ಗಟ್ಟಲೆ ಅಕ್ಕಿಯನ್ನು ತಯಾರಿಸಿದ್ದರು. ಶಿಕ್ಷಣದೊಂದಿಗೆ ವ್ಯವಸಾಯವನ್ನೂ ಮಕ್ಕಳು ಕರಗತ ಮಾಡಿಕೊಂಡಿದ್ದರು.ಇದು ದೇಶದಲ್ಲೇ ಒಂದು ಹೊಸ ಇತಿಹಾಸಕ್ಕೆ ಕಾರಣವಾಗಿತ್ತು.

ಈ ಮಧ್ಯೆ “ಪೋಸ್ಟ್ ಕಾರ್ಡ್” ಸುದ್ಧಿ ಮಾಧ್ಯಮದ ಮುಖ್ಯಸ್ಥರಾದ ಶ್ರೀ ಮಹೇಶ್ ವಿಕ್ರಮ್ ಹೆಗ್ಡೆಯವರು ಮತ್ತೊಂದು ಐತಿಹಾಸಿಕ ತೀರ್ಮಾನವನ್ನು ತಳೆದಿದ್ದರು. ತಮ್ಮ “ಪೋಸ್ಟ್ ಕಾರ್ಡ್” ಸುದ್ಧಿ ಮಾಧ್ಯಮ ಹಾಗೂ ಟ್ವಿಟರ್, ಫೇಸ್ ಬುಕ್ ಮೂಲಕ “ಭಿಕ್ಷಾಂದೇಹಿ” ಎಂಬ ಆಂದೋಲನವನ್ನು ನಡೆಸಿ ಕಾಂಗ್ರೆಸ್ ಸರ್ಕಾರಕ್ಕೆ ಸವಾಲೊಡ್ಡಿದರು. ಈ ಆಂದೋನದಡಿಯಲ್ಲಿ ಬರೋಬ್ಬರಿ 52 ಲಕ್ಷ ಹಣ ಹಾಗೂ 13000 ಕೆಜಿ ಅಕ್ಕಿಯನ್ನು ಕ್ರೋಡೀಕರಿಸಿ ಕಾಂಗ್ರೆಸ್ ಸರ್ಕಾರದ ಸೇಡಿನ ರಾಜಕೀಯವನ್ನೇ ತಲೆಕೆಳಗಾಗುವಂತೆ ಮಾಡಿದ್ದರು. ಕೇವಲ ಸಾಮಾಜಿಕ ಜಾಲತಾಣದಲ್ಲಿ ಹೀಗೂ ಮಾಡಬಹುದೇ ಎಂದು ಮೂಗಿನ ಮೇಲೆ ಬೆರಳಿಡುವಂತೆ ಆಗಿತ್ತು “ಭಿಕ್ಷಾಂದೇಹಿ” ಎಂಬ ಈ ಆಂದೋಲನ.

ನಂತರ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಶ್ರೀ ರಾಮ ವಿದ್ಯಾಕೇಂದ್ರಕ್ಕೆ ಕಾಂಗ್ರೆಸ್ ಮಾಡಿದ ಅನ್ಯಾಯವೇ ಚುನಾವಣೆಯ ಅಸ್ತ್ರವಾಯಿತು. ಪರಿಣಾಮ ಕಾಂಗ್ರೆಸ್ ಸೋತು ಮಖಾಡೆ ಮಲಗಿತ್ತು. ನಂತರ ನಡೆದ ವಿದ್ಯಮಾನದಲ್ಲಿ ಕಾಂಗ್ರೆಸ್ ಹಾಗೂ ಜನತಾ ದಳ ಮೈತ್ರಿಯಾಗಿ ಕರ್ನಾಟಕದ ಗದ್ದುಗೆಯನ್ನು ಏರಿತ್ತು. ಇದೀಗ ಮುಖ್ಯಮಂತ್ರಿಯಾಗಿ ಜನತಾ ದಳದ ಕುಮಾರ ಸ್ವಾಮಿಯವರು ಅಧಿಕಾರವನ್ನು ಸ್ವೀಕರಿಸಿದ್ದಾರೆ.

ಹಿಂದೂಗಳ ಆರ್ಭಟದಿಂದ ಕಳೆದ ಕಾಂಗ್ರೆಸ್ ಸಕಾರ ಪತನವಾಗಿದ್ದನ್ನು ಕಂಡಿದ್ದ ಜನತಾ ದಳದ ಮುಖ್ಯಮಂತ್ರಿ ಕುಮಾರ ಸ್ವಾಮಿ ಇದೀಗ ಮತ್ತೆ ಕಲ್ಲಡ್ಕ ಶ್ರೀ ರಾಮ ವಿದ್ಯಾ ಕೇಂದ್ರ ಹಾಗೂ ಪುಣಚ ವಿದ್ಯಾ ಕೇಂದ್ರಕ್ಕೆ ಅನ್ನ ಪೂರೈಕೆ ಮಾಡಲು ಆದೇಶ ನೀಡಿದೆ. ಈ ಹಿಂದೆ ಸರ್ಕಾರದ ಅಡಿಯಲ್ಲಿ ಕೊಲ್ಲೂರು ದೇವಸ್ಥಾನದಿಂದ ಈ ಉಭಯ ಶಾಲೆಗಳಿಗೆ ಬರುತ್ತಿದ್ದ ಅನ್ನ ದಾಸೋಹ ಇದೀಗ ಮತ್ತೆ ಆರಂಭವಾಗಿದೆ. ಈ ಮೂಲಕ ಶಾಲಾ ವಿದ್ಯಾರ್ಥಿಗಳ ಅನ್ನಕ್ಕೆ ಕನ್ನ ಹಾಕಿದ್ದ ಕಾಂಗ್ರೆಸ್ ಸರ್ಕಾರದ ಪಾಪವನ್ನು ಮುಖ್ಯಮಂತ್ರಿ ಕುಮಾರ ಸ್ವಾಮಿ ತೊಳೆದಿದ್ದಾರೆ.

ಏನೇ ಇರಲಿ. ಈ ಬಾರಿಯ ಕಾಂಗ್ರೆಸ್ ಸೋಲು ಹಿಂದುತ್ವದ ಗೆಲುವನ್ನು ಬಣ್ಣಿಸಿತ್ತು. ಮಾತ್ರವಲ್ಲದೆ ಹಿಂದೂಗಳನ್ನು ಕೆರಳಿಸಿದ್ರೆ ಮತ್ತು ಹಿಂದೂ ಧರ್ಮವನ್ನು ಒಡೆಯಲೆತ್ನಿಸಿದರೆ ಯಾವ ಪರಿಣಾಮವನ್ನು ಎದುರಿಸಬೇಕಾಗುತ್ತೆ ಎಂಬ ದಿಟ್ಟ ಸಂದೇಶವನ್ನೂ ಹಿಂದೂಗಳು ರವಾನಿಸಿದ್ದಾರೆ.

-ಸುನಿಲ್ ಪಣಪಿಲ

Tags

Related Articles

Close