ಪ್ರಚಲಿತ

ಡಿಜಿಟಲ್ ಇಂಡಿಯಾದಿಂದ ಕ್ರಾಂತಿಕಾರಿ ಬದಲಾವಣೆ: ಪ್ರಧಾನಿ ಮೋದಿ

ಭಾರತದ ವೈವಿದ್ಯಮಯ ಪರಂಪರೆಗಳಿಗೆ ಕಾಶಿ ಕೇಂದ್ರಬಿಂದುವಾಗಿದೆ. ವಿಜ್ಞಾನ, ಸಂಸ್ಕೃತಿ, ಆಧ್ಯಾತ್ಮಿಕ ವಿಚಾರಗಳಿಗೆ ಸಂಬಂಧಿಸಿದಂತೆ ಕಾಶಿ ಶತಮಾನಗಳಿಗೂ ಹೆಚ್ಚು ಇತಿಹಾಸ ಹೊಂದಿದೆ ಎಂದು ಪ್ರಧಾನಿ ಮೋದಿ ಅವರು ಬನಾರಸ್‌ನಲ್ಲಿ ನಡೆದ ಜಿ ೨೦ ಅಭಿವೃದ್ಧಿ ಸಚಿವರ ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕಾಶಿಯಲ್ಲಿ ನಡೆಯುತ್ತಿರುವ ಜಿ೨೦ ಶೃಂಗಸಭೆಯಲ್ಲಿ ಭಾಗವಹಿಸಲು ನನಗೆ ಸಂತಸವಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ಹಾಗೆಯೇ, ಈ ಸಂದರ್ಭದಲ್ಲಿ ಡಿಜಿಟಲೀಕರಣಕ್ಕೆ ಸಂಬಂಧಿಸಿದಂತೆಯೂ ಮಾತನಾಡಿದ ಅವರು, ಡಿಜಿಟಲ್ ವ್ಯವಸ್ಥೆಯಿಂದ ಭಾರತದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತಂದಿರುವುದಾಗಿ ತಿಳಿಸಿದ್ದಾರೆ.

ಕೊರೋನಾ ಸಮಯದಲ್ಲಿ ವಿಶ್ವವೇ ತೀವ್ರತರದ ತೊಂದರೆಗೆ ಒಳಗಾಗಿ ಅಡಚಣೆಗೆ ತುತ್ತಾಗಿದ್ದವು. ಅಂತಹ ಸಮಯದಲ್ಲಿ ನಮ್ಮ ಆಲೋಚನೆ, ನಿರ್ಧಾರಗಳು ನ್ಯಾಯೋಚಿತ, ಸಮಗ್ರ ಮತ್ತು ಸ್ಥಿರವಾಗಿರಬೇಕು. ಅನೇಕ ದೇಶಗಳು ಆರ್ಥಿಕ ಬಿಕ್ಕಟ್ಟಿಗೆ ತುತ್ತಾಗಿದ್ದು, ಸಾಲದ ಸಮಸ್ಯೆಗಳನ್ನು ಎದುರಿಸುತ್ತಿವೆ. ಇದನ್ನು ಪರಿಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಮೋದಿ ಹೇಳಿದ್ದಾರೆ.

ಇನ್ನು ಭಾರತಕ್ಕೆ ಸಂಬಂಧಿಸಿದ ಹಾಗೆ ಹೇಳುವುದಾದರೆ, ನೂರಕ್ಕೂ ಅಧಿಕ ಜಿಲ್ಲೆಗಳಲ್ಲಿ ಜನರ ಜೀವನಮಟ್ಟವನ್ನು ಸುಧಾರಣೆ ಮಾಡಲು ಹಲವಾರು ಉಪಕ್ರಮಗಳನ್ನು ಕೈಗೊಂಡಿದ್ದೇವೆ. ಈ ಸಂದರ್ಭದಲ್ಲಿ ಪಡೆದ ಅನುಭವಗಳು ಅಭಿವೃದ್ಧಿಯ ಪಥದಲ್ಲಿ ಸಾಗಲು ನಮಗೆ ವೇಗವನ್ನು ತಂದುಕೊಟ್ಟಿವೆ. ಈ ಅಭಿವೃದ್ಧಿ ಮಾದರಿಗಳನ್ನು ಅಧ್ಯಯನ ಮಾಡುವ ದೃಷ್ಟಿಯಲ್ಲಿ ಜಿ ೨೦ ಅಭಿವೃದ್ಧಿ ಮಂತ್ರಿಗಳಿಗೆ ತಿಳಿಸುವುದಾಗಿಯೂ ಮೋದಿ ನುಡಿದಿದ್ದಾರೆ.

Tags

Related Articles

Close