ಪ್ರಚಲಿತ

ಸಿಎಂಗೆ ಹೈಕೋರ್ಟ್ ಶಾಕ್! ಬಿ.ಎಸ್.ವೈ.ಗೆ ಭರ್ಜರಿ ಜಯ!!

ಎಲುಬಿಲ್ಲದ ನಾಲಗೆ ಹೇಗೆ ಬೇಕಾದರೂ ತಿರುಗುತ್ತೆ ಎಂಬುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಸ್ಪಷ್ಟ ಉದಾಹರಣೆಯಾಗಿದ್ದಾರೆ. ಸಿಕ್ಕ ಸಿಕ್ಕ ವೇದಿಕೆಯಲ್ಲಿ ಗಣ್ಯ ವ್ಯಕ್ತಿಗಳ ಬಗ್ಗೆ ವಾಚಾಮಗೋಚರವಾಗಿ ನಿಂದಿಸುವ ಚಾಳಿಯನ್ನು ನಡೆಸಿಕೊಂಡೇ ಬರುತ್ತಿದ್ದಾರೆ. ಅಂತೆಯೇ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಮೇಲೂ ತನ್ನ ವಾಕ್ಪ್ರಹಾರ ನಡೆಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಈಗ ಅದು ಉರುಳಾಗಿದೆ.

ಯಡಿಯೂರಪ್ಪ ವಿರುದ್ಧ ನಾಲಿಗೆ ಹರಿಬಿಟ್ಟಿದ್ದ ಸಿಎಂ..!

ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ಬಗ್ಗೆ ಸಿಎಂ ಸಿದ್ದರಾಮಯ್ಯ ಹೋದಲ್ಲೆಲ್ಲ ಅವಾಚ್ಯ ಪದಗಳಿಂದ ನಿಂದಿಸುತ್ತಲೇ ಬರುತ್ತಿದ್ದಾರೆ. ಏಕವಚನದಿಂದಲೇ ಮಾತನಾಡುವ ಲಜ್ಜೆಗೆಟ್ಟ ಮುಖ್ಯಮಂತ್ರಿಗಳು ತನ್ನ ಪದವಿಯ ಗೌರವವನ್ನೇ ಮರೆತು ಬಿಟ್ಟಿದ್ದರು. ಯಡಿಯೂರಪ್ಪ ಓರ್ವ ಭ್ರಷ್ಟ, ಅವರು ಜೈಲಿಗೆ ಹೋಗಿ ಬಂದವರು ಎಂದು ತೆಗಳುತ್ತಲೇ ಇರುತ್ತಿದ್ದರು. ಮಾಜಿ ಮುಖ್ಯಮಂತ್ರಿಗಳು ಎಂಬ ಕಿಂಚಿತ್ತೂ ಗೌರವ ನೀಡದೆ ಏಕವಚನದಲ್ಲೇ ಮಾತನಾಡಿ ತಮ್ಮ ಮುಖ್ಯಮಂತ್ರಿಯ ಪದವಿಯ ಗೌರವವನ್ನೇ ಕಳೆದುಕೊಂಡು ಬಂದ ಸಿದ್ದರಾಮಯ್ಯನವರು ಪದೇ ಪದೇ ಯಡಿಯೂರಪ್ಪ ನವರ ವಿಚಾರ ಎತ್ತಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು.

ದೋಷಮುಕ್ತನಾಗಿ ಹೊರಬಂದ ಬಿ ಎಸ್ ವೈ..!

ಆಡಳಿತ ಅವಧಿಯಲ್ಲಿ ಭ್ರಷ್ಟಾಚಾರ ಮಾಡಿದ್ದಾರೆ ಎಂಬ ಆರೋಪ ಹೊತ್ತು ಜೈಲು ಪಾಲಾಗಿದ್ದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನವರು ಎಲ್ಲಾ ಆರೋಪಗಳಿಂದಲೂ ಮುಕ್ತರಾಗಿ ಹೊರ ಬಂದಿದ್ದರು. ಸ್ವತಃ ನ್ಯಾಯಲಯವೇ ಯಡಿಯೂರಪ್ಪ ನವರಿಗೆ ಖುಲಾಸೆ ನೀಡಿದ್ದರೂ ,ಸಿದ್ದರಾಮಯ್ಯ ಮಾತ್ರ ಪದೇ ಪದೇ ಯಡಿಯೂರಪ್ಪ ಜೈಲಿಗೆ ಹೋಗಿ ಬಂದವರು , ಭ್ರಷ್ಟಾಚಾರ ಮಾಡಿ ಸಿಕ್ಕಿಬಿದ್ದವರು ಎಂದು ಹಂಗಿಸುತ್ತಲೇ ಇದ್ದಾರೆ. ರಾಜ್ಯದ ಮುಖ್ಯಮಂತ್ರಿ ಎಂಬೂದನ್ನೂ ಮರೆತು ಬಾಯಿಗೆ ಬಂದಂತೆ ಮಾತನಾಡುವ ಸಿದ್ದರಾಮಯ್ಯನವರಿಗೆ ಇದೀಗ ಕೋರ್ಟ್ ಬಿಗ್ ಶಾಕ್ ನೀಡಿದೆ.

ಕೇವಲ ರಾಜಕೀಯ ಲಾಭಕ್ಕಾಗಿ ಯಡಿಯೂರಪ್ಪ ನವರ ವಿಚಾರ ತೆಗೆದುಕೊಂಡು ಹೋದಲ್ಲೆಲ್ಲಾ ಮಾತನಾಡುವ ಸಿದ್ದರಾಮಯ್ಯನವರು , ಅನೇಕ ಬಾರಿ ವಿರೋಧ ಪಕ್ಷಗಳಿಂದ ಉಗಿಸಿಕೊಂಡಿದ್ದರು‌. ಇದೀಗ ಮಿತಿ ಮೀರುತ್ತಿರುವ ಸಿದ್ದರಾಮಯ್ಯನವರ ಮಾತಿಗೆ ಸ್ವತಃ ಕೋರ್ಟ್ ಬೀಗ ಜಡಿದಿದೆ.!

ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದ ಯಡಿಯೂರಪ್ಪ..!

ತಮ್ಮ ಮೇಲೆ ಇದ್ದ ಎಲ್ಲಾ ಆರೋಪಗಳಿಗೂ ನ್ಯಾಯಾಲಯವೇ ಮುಕ್ತಿ ನೀಡಿದರೂ ಪದೇ ಪದೇ ತಮ್ಮ ಭಾಷಣಗಳಲ್ಲಿ ಯಡಿಯೂರಪ್ಪ ನವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುವುದರಿಂದ ತಮ್ಮ ಘನತೆ ಗೌರವಕ್ಕೆ ಧಕ್ಕೆ ಉಂಟಾಗುತ್ತಿದೆ ಎಂದು ಯಡಿಯೂರಪ್ಪ ನವರು ಸಿದ್ದರಾಮಯ್ಯನವರ ವಿರುದ್ಧ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು‌. ಇದರ ವಿಚಾರಣೆ ನಡೆಸುತ್ತಿರುವ ವೇಳೆಯಲ್ಲೇ ಸಿದ್ದರಾಮಯ್ಯನವರು ಸರಕಾರಿ ಕಾರ್ಯಕ್ರಮ ಒಂದರಲ್ಲಿ ತಮ್ಮ ರಾಜಕೀಯ ಭಾಷಣ ಮಾಡಿದ್ದು ಮಾತ್ರವಲ್ಲದೆ ಯಡಿಯೂರಪ್ಪ ನವರ ವಿರುದ್ದವೂ ಮಾತನಾಡಿದ್ದರು. ಇದರಿಂದ ಕೋರ್ಟ್ ಇದೀಗ ನೇರವಾಗಿ ಸಿದ್ದರಾಮಯ್ಯನವರಿಗೆ ನೋಟೀಸ್ ಜಾರಿಗೊಳಿಸಿದೆ.

ಸಿಎಂ ಜೊತೆ ಇನ್ನಿಬ್ಬರು ಕಾಂಗ್ರೆಸಿಗರಿಗೆ ನೋಟೀಸ್..!

ಹೋದಲ್ಲೆಲ್ಲಾ ನಾಲಗೆ ಹರಿಬಿಡುತ್ತಿದ್ದ ಸಿದ್ದರಾಮಯ್ಯನವರು ಯಡಿಯೂರಪ್ಪ ನವರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದರು. ಇದರಿಂದ ಕೋಪಗೊಂಡ ಬಿ ಎಸ್ ವೈ ಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಇದೀಗ ಇದಕ್ಜೆಲ್ಲಾ ತೆರೆ ಎಳೆದ ಕೋರ್ಟ್ ಸಿದ್ದರಾಮಯ್ಯನವರ ಜೊತೆಗೆ ಕಾಂಗ್ರೆಸ್ ನ ಪ್ರಭಾವಿ ನಾಯಕರಾದ ದಿನೇಶ್ ಗುಂಡೂರಾವ್ ಮತ್ತು ಉಗ್ರಪ್ಪ ರಿಗೂ ನೋಟೀಸ್ ಜಾರಿಗೊಳಿಸಿದೆ.

ತಮ್ಮ ಅಧಿಕಾರದ ಪ್ರಭಾವದಿಂದ ಏನು ಬೇಕಾದರೂ ಮಾಡಬಹುದು ಎಂಬ ದುರಾಲೋಚನೆ ಹೊಂದಿದ್ದ ಸಿಎಂ ಸಿದ್ದರಾಮಯ್ಯನವರು ತಮಗಿಷ್ಟ ಬಂದಂತೆ ನಿರ್ಧಾರ ತೆಗೆದುಕೊಳ್ಳುವುದು ಮಾತ್ರವಲ್ಲದೆ ವಿರೋಧ ಪಕ್ಷದ ನಾಯಕರ ವಿರುದ್ಧ ಬೇಕಾಬಿಟ್ಟಿ ಆರೋಪ ಮಾಡುತ್ತಿದ್ದರು. ಈ ಇದಕ್ಕೆಲ್ಲ ತೆರೆ ಕಂಡಿದ್ದು , ರಾಜ್ಯದ ಜನತೆಯ ಮುಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಪಾಳಮೋಕ್ಷ ಅನುಭವಿಸಿದಂತಾಗಿದೆ.!

–ಸುನಿಲ್ ಪಣಪಿಲ

Tags

Related Articles

Close