ಪ್ರಚಲಿತ

ಜ್ಞಾನವಾಪಿ ಪ್ರಕರಣ: ಅಲಹಾಬಾದ್ ಹೈ ಕೋರ್ಟ್‌ನಲ್ಲೂ ಹಿಂದೂಗಳಿಗೆ ಜಯ

ಉತ್ತರ ಪ್ರದೇಶದ ವಾರಣಾಸಿಯ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಹಿಂದೂಗಳಿಗೆ ಪೂಜೆಗೆ ಅವಕಾಶ ನೀಡಿದ್ದ ವಾರಣಾಸಿ ಕೋರ್ಟ್ ತೀರ್ಪನ್ನು ಪ್ರಶ್ನೆ ಮಾಡಿ ಸಲ್ಲಿಸಲಾಗಿದ್ದ ಅಂಜುಮನ್ ಇಂತೆ ಜಾಮಿಯಾ ಮಸೀದಿ ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್ ಹೈ ಕೋರ್ಟ್ ತಿರಸ್ಕರಿಸಿದೆ.

ಆ ಮೂಲಕ ಜ್ಞಾನವಾಪಿ ಪ್ರಕರಣಕ್ಕೆ‌ ಸಂಬಂಧಿಸಿದ ಹಾಗೆ ಹಿಂದೂಗಳಿಗೆ ಮತ್ತೆ ಜಯ ದೊರೆತಿದೆ. 

ಜ್ಞಾನವಾಪಿ ‌ಮಸೀದಿ ಕಟ್ಟದಲ್ಲಿರುವ ವ್ಯಾಸ್ ಕಾ ತೆಹ್ಕಾನಾ ಪ್ರದೇಶದಲ್ಲಿ ಹಿಂದೂ ದೇವರುಗಳಿಗೆ ಪೂಜೆ ಸಲ್ಲಿಸಲು ಹಿಂದೂಗಳಿಗೆ ಅವಕಾಶ ನೀಡಿ ವಾರಣಾಸಿ ಕೋರ್ಟ್ ಆದೇಶಿಸಿತ್ತು. ಆದರೆ ಈ ಆದೇಶವನ್ನು ವಿರೋಧಿಸಿ ಮುಸಲ್ಮಾನರು ಹೈಕೋರ್ಟ್ ಕದ ತಟ್ಟಿದ್ದರು. ಆದರೆ ಅವರು ಸಲ್ಲಿಕೆ ಮಾಡಿದ್ದ ಮೇಲ್ಮನವಿಯನ್ನು ಹೈ‌ ಕೋರ್ಟ್ ವಜಾ ಮಾಡಿರುವುದಾಗಿದೆ.

ಈ ಸಂಬಂಧ ಎರಡೂ ಬದಿಯ ಸುಧೀರ್ಘ ವಾದವನ್ನು ಆಲಿಸಿದ ಕೋರ್ಟ್‌ನ ನ್ಯಾಯಾಧೀಶ ರೋಹಿತ್ ರಂಜನ್ ಅಗರ್ವಾಲ್, ಇಂದು ಹಿಂದೂಗಳ ಪರ ತೀರ್ಪನ್ನಿತ್ತಿದ್ದಾರೆ. ಮಸೀದಿಯ ನೆಲಮಾಳಿಗೆ ನಾಲ್ಕು ಸೆಲ್ಲಾರ್‌ಗಳನ್ನು ಒಳಗೊಂಡಿದೆ.‌ ಇದರಲ್ಲಿ ಒಂದು ಈಗಲೂ ಸಹ ಈ ಹಿಂದೆ ಅಲ್ಲಿ‌ ವಾಸ ಮಾಡುತ್ತಿದ್ದ ವ್ಯಾಸ ಕುಟುಂಬದ ಸುಪರ್ಧಿಯಲ್ಲಿದೆ. 

ಅದಕ್ಕೂ ಮೊದಲು ಆಲ್ ಇಂಡಿಯಾ ಮಜ್ಲಿಸ್ ಎ ಇತ್ತೇಹಾದುಲ್ ಮುಸ್ಲಿಮೀನ್‌ನ ಅಧ್ಯಕ್ಷ ಅಸಾವುದ್ದೀನ್ ಓವೈಸಿ, ಜ್ಞಾನವಾಪಿ ಸಂಕೀರ್ಣದ ವ್ಯಾಸ್ ಕಾ ತೆಖಾನಾ‌ದಲ್ಲಿ ಹಿಂದೂಗಳಿಗೆ ಪೂಜೆಗೆ ಅವಕಾಶ ನೀಡಿದ್ದ ಹಿನ್ನೆಲೆಯಲ್ಲಿ ವಾರಣಾಸಿ ಕೋರ್ಟ್ ಆದೇಶವನ್ನು ಆರಾಧನಾ ಸ್ಥಳಗಳ‌ ಕಾಯ್ದೆ ಉಲ್ಲಂಘನೆ ಎಂದು ಹೇಳಿದ್ದರು. ಆದರೆ ಅರ್ಜಿದಾರರ ಈ ನ್ಯಾಯವನ್ನು ತಿರಸ್ಕರಿಸಿದ ಹೈ ಕೋರ್ಟ್ ಹಿಂದೂಗಳ ಪರ ತೀರ್ಪು ನೀಡಿದೆ.

Tags

Related Articles

Close