ಪ್ರಚಲಿತ

ಗಡಿ ಭಾಗಗಳಲ್ಲಿ ಅಕ್ರಮಿಗಳ ಒಳನುಸುಳುವಿಕೆ ತಡೆಯಲು ಪ್ರಧಾನಿ ಮೋದಿ ಸರ್ಕಾರ ಸಿದ್ಧ: ಅಮಿತ್ ಶಾ

ಭಾರತ ಮತ್ತು ಮಯನ್ಮಾರ್ ಬೋಧಿಸುವ ಗಡಿ ಪ್ರದೇಶಗಳಲ್ಲಿ ರಕ್ಷಣಾ ಸೌಲಭ್ಯವನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಯೋಚಿಸಿದೆ.

ಈ ಸಂಬಂಧ ಕೇಂದ್ರ ಸಚಿವ ಅಮಿತ್ ಶಾ ಅವರು ಮಾತನಾಡಿದ್ದು, ಭಾರತ ಮತ್ತು ಮಯನ್ಮಾರ್ ನಡುವಿನ ಗಡಿ ಭಾಗಗಳಲ್ಲಿ ಹೆಚ್ಚಿನ ಕಣ್ಗಾವಲು ಇರಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಈ ಕಾರಣಕ್ಕಾಗಿ 1643 ಕಿಲೋ ಮೀಟರ್ ಉದ್ದದ ಈ ಗಡಿ ಭಾಗಕ್ಕೆ ಸಂಪೂರ್ಣವಾಗಿ ಬೇಲಿ ಅಳವಡಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಈ ಸಂಬಂಧ ಮಣಿಪುರದ ಮೋರೆಯಲ್ಲಿ ಈಗಾಗಲೇ ಹತ್ತು ಕಿಮೀ ವ್ಯಾಪ್ತಿಯಲ್ಲಿ ಬೇಲಿ ಹಾಕಲಾಗಿದೆ. ಸಂಪೂರ್ಣ ಗಡಿಯುದ್ದಕ್ಕೂ ಬೇಲಿ ಅಳವಡಿಸಿ ದೇಶದ ರಕ್ಷಣೆಗೆ ಹೆಚ್ಚು ಒತ್ತು ನೀಡುವುದಾಗಿ ಅವರು ಘೋಷಿಸಿದ್ದಾರೆ. ಕೇವಲ ಬೇಲಿ ಅಳವಡಿಕೆ ಮಾತ್ರವಲ್ಲ. ಅದರ ಜೊತೆಗೆ ಉತ್ತಮ ಕಣ್ಗಾವಲಿಗೆ ಅನುಕೂಲವಾಗುವ ಹಾಗೆ ಗಸ್ತು ಟ್ರಾಕ್ ಅನ್ನು ಸಹ ಸುಗಮಗೊಳಿಸುವುದಾಗಿ ಅವರು ಮಾಹಿತಿ ನೀಡಿದ್ದಾರೆ.

ಈಗಾಗಲೇ ಎಚ್ ಎಸ್‌ ಎಸ್ (ಹೈಬ್ರಿಡ್ ಕಣ್ಗಾವಲು ವ್ಯವಸ್ಥೆ) ಮೂಲಕ ಫೆನ್ಸಿಂಗ್‌ನ ಎರಡು ಪ್ರಾಯೋಗಿಕ ಯೋಜನೆಗಳು ಕಾರ್ಯರೂಪ ಪಡೆಯುತ್ತವೆ. ಇದರ ಅಡಿಯಲ್ಲಿ ಮಣಿಪುರ ‌ಮತ್ತು ಅರುಣಾಚಲ ಪ್ರದೇಶಗಳಲ್ಲಿ ಒಂದು ಕಿಲೋ ಮೀಟರ್ ವಿಸ್ತಾರವಾದ ಬೇಲಿ ಅಳವಡಿಕೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

ಹೆಚ್ಚುವರಿಯಾಗಿ ಸುಮಾರು ಇಪ್ಪತ್ತು ಕಿಲೋಮೀಟರ್‌ಗಳಷ್ಟು ಬೇಲಿ ಅಳವಡಿಕೆ ಕಾರ್ಯಕ್ಕ ಮಣಿಪುರದಲ್ಲಿ ಈಗಾಗಲೇ ಅನುಮೋದನೆ ನೀಡಲಾಗಿದೆ. ಈ ಕೆಲಸಗಳು ಶೀಘ್ರದಲ್ಲೇ ಶುರುವಾಗಲಿವೆ. ಯಾವುದೇ ಅಕ್ರಮಿಗಳಿಗೆ ಭಾರತದೊಳಕ್ಕೆ ನುಸುಳುವುದಕ್ಕೆ ಸಾಧ್ಯವಾಗದ ರೀತಿಯಲ್ಲಿ, ಹೆಚ್ಚಿನ ಭದ್ರತೆಯ ಬೇಲಿಗಳನ್ನು ನಿರ್ಮಾಣ ಮಾಡಲು ಪ್ರಧಾನಿ ಮೋದಿ ಸರ್ಕಾರ ಸದಾ ಸಿದ್ಧ ಎಂದು ಅವರು ಹೇಳಿದ್ದಾರೆ.

Tags

Related Articles

Close