ಪ್ರಚಲಿತ

ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಬಂದರೆ ಯಾರಿಗೆ ಲಾಭ, ಯಾರಿಗೆ ನಷ್ಟ.? ಇಂತಹ ಲೆಕ್ಕಾಚಾರದ ಚರ್ಚೆ ನಡೆಯುತ್ತಿದೆ ನೋಡಿ..!

ಕಳೆದ 5 ವರ್ಷದಿಂದ ನಿರಂತರವಾಗಿ ನಡೆಯುತ್ತಿದ್ದ ಈ ಚುನಾವಣೆಯ ಗುಂಗು ಇದೀಗ ಮುಕ್ತಾಯವಾಗಿದೆ. ಕೊನೆಗೂ ರಾಜಕೀಯ ಚದುರಂಗದಾಟದಿಂದ ಕೊಂಚ ಮುಕ್ತಿ ದೊರಕಿದೆ. ನಿದ್ದೆ ಬಿಟ್ಟಿದ್ದ ರಾಜಕೀಯ ನಾಯಕರು ಹಾಗೂ ಕಾರ್ಯಕರ್ತರು ಇದೀಗ ತಮ್ಮ ಕುಟುಂಬದೊಂದಿಗೆ ಕಾಲ ಕಳೆದು ನಿದ್ದೆಯ ಮೊರೆ ಹೋಗಿದ್ದಾರೆ. ಆದರೆ ಇದೀಗ ಗೆಲುವು ಯಾರದ್ದು ಎಂಬ ಲೆಕ್ಕಾಚಾರದಲ್ಲಿ ರಾಜಕೀಯ ಮುಖಂಡರು ತೊಡಗಿದ್ದಾರೆ.

ಚುನಾವಣೆಯೇನೋ ಮುಗಿಯಿತು, ಆದರೆ ಫಲಿತಾಂಶ ಯಾರ ಪಾಲಿಗೆ ದಕ್ಕಬಹುದು ಎಂಬ ಲೆಕ್ಕಾಚಾರ ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಕೆರಳಿಸಿದೆ. ಬೆಟ್ಟಿಂಗ್ ಅಂತೂ ಕೇಳೋದೇ ಬೇಡ. ಈ ಮಧ್ಯೆ ಯಾವ ಪಕ್ಷ ಬಂದರೆ ಯಾರಿಗೆ ಒಳಿತು ಎಂಬ ಚರ್ಚೆಯೂ ನಡೆಯುತ್ತಿದೆ.

ಚುನಾವಣೆ ಮುಗಿಯುತ್ತಿದ್ದಂತೆ ರಾಜಕೀಯ ಪಕ್ಷಗಳು ಸಮೀಕ್ಷೆಗಳ ಮೊರೆ ಹೋಗಿವೆ. ಬಹತೇಕ ಎಲ್ಲಾ ಸುದ್ಧಿ ಸಂಸ್ಥೆಗಳು ನಡೆಸಿದ ಮತದಾನೋತ್ತರ ಸಮೀಕ್ಷೆಯಲ್ಲೂ ಭಾರತೀಯ ಜನತಾ ಪಕ್ಷ ಬಹುಮತವನ್ನು ಪಡೆದು ಸರ್ಕಾರವನ್ನು ರಚಿಸಲಿದೆ ಎಂದು ಹೇಳಿದೆ. 102 ರಿಂದ 120 ಸ್ಥಾನದವರೆಗೆ ಭಾರತೀಯ ಜನತಾ ಪಕ್ಷ ಸ್ಥಾನಗಳನ್ನು ಗಳಿಸುತ್ತದೆ ಎಂದ ಬಹುತೇಕ ಎಲ್ಲಾ ಸಂಸ್ಥೆಗಳು ಸಮೀಕ್ಷೆಯನ್ನು ನುಡಿದಿದೆ. ಒಂದೊಮ್ಮೆ ಅಂತಂತ್ರ ಸ್ಥಿತಿ ಉದ್ಭವವಾದರೆ ಯಾವ ರಾಜಕೀಯ ಪಕ್ಷ ಯಾವ ತಂತ್ರಗಾರಿಕೆ ಹೆಣೆಯುತ್ತೆ ಎಂಬ ಕುತೂಹಲವೂ ಮನೆ ಮಾಡಿದೆ.

ಕಾಂಗ್ರೆಸ್ ಬಂದರೆ ಯಾರಿಗೆ ಲಾಭ..?

ಇನ್ನು ಯಾವ ಪಕ್ಷ ಬಂದರೆ ಯಾರಿಗೆ ಲಾಭ ಹಾಗೂ ಯಾರಿಗೆ ನಷ್ಟ ಎಂಬ ಚರ್ಚೆಯೂ  ವ್ಯಾಪಕವಾಗಿ ನಡೆಯುತ್ತಿದೆ. ಕಳೆದ 5 ವರ್ಷಗಳ ಕಾಲ ರಾಜ್ಯವನ್ನಾಳಿದ ಕಾಂಗ್ರೆಸ್ ಎರಾಜ್ಯವನ್ನು ಯಾವ ರೀತಿಯಾಗಿ ಆಡಳಿತ ನಡೆಸಿದೆ ಎಂಬುವುದು ರಾಜ್ಯದ ಜನತೆಯ ಕಣ್ಣುಂದೆಯೇ ಇದೆ. ಆದರೂ ಮುಂದಿನ ಬಾರಿ ಕಾಂಗ್ರೆಸ್ ಸರ್ಕಾರ ಬಂದರೆ ಯಾವ ರೀತಿಯಾಗಿ ಆಡಳಿತ ನಡೆಸಬಹುದು ಎಂಬ ಲೆಕ್ಕಾಚಾರವನ್ನು ಜನತೆ ಚರ್ಚೆ ಮಾಡುತ್ತಿದ್ದಾರೆ.

ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಬಂದರೆ ಯಾರಿಗೆ ಸಂಕಷ್ಟ ಎಂಬ ಚರ್ಚೆಯೂ ವ್ಯಾಪಕವಾಗಿ ನಡೆಯುತ್ತಿದೆ. ಮುಂದೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರಮುಖವಾಗಿ ಸಂಕಷ್ಟಕ್ಕೆ ಗುರಿಯಾಗೋದು ಹಿಂದು ಸಂಘಟನೆಯ ಕಾರ್ಯಕರ್ತರು ಅನ್ನೋದಕ್ಕೆ ಯಾವ ಅನುಮಾನವೂ ಇಲ್ಲ. ಯಾಕೆಂದರೆ ಕಳೆದ 5 ವರ್ಷದಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರ ಮೇಲೆ ಸಾಧ್ಯವಾದಷ್ಟು ದಾಳಿಗಳನ್ನು ನಡೆಸಿದ್ದ ಕಾಂಗ್ರೆಸ್ ಪಕ್ಷ ಈ ಬಾರಿಯೂ ಬಂದರೆ ಮತ್ತೆ ಹಿಂದೂ ಸಂಘಟನೆಗಳ ಮೇಲೆ ದಾಳಿಯನ್ನು ನಡೆಸುತ್ತೆ.

ಇನ್ನು ಸಾಮಾನ್ಯ ನಾಗರಿಕರಿಗೆ, ಗೋ ಸಕಾಣೆಯ ಮೂಲಕ ಹಾಲು ಉತ್ಪಾದಿಸುವವರಿಗೆ, ಪೊಲೀಸರಿಗೆ ಹಾಗೂ ಲೀಗಲ್ ಕೆಲಸ ಮಾಡುವವರಿಗೆ ಕಾಂಗ್ರೆಸ್ ಪಕ್ಷ ಮುಳುವಾಗಲಿದೆ. ಮಾತ್ರವಲ್ಲದೆ ಹಿಂದೂ ದೇವಾಲಯಗಳು ಹಾಗೂ ಹಿಂದೂ ಸಂಘಟನೆಯಲ್ಲಿ ಕೆಲಸ ಮಾಡುತ್ತಿರುವ ನಾಯಕರ ಶಿಕ್ಷಣ ಸಂಸ್ಥೆಗಳು ಸಹಿತ ಇನ್ನಿತರ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ಮೂಗುತೂರಿಸುವುದರಿಂದ ಮತ್ತೆ ಕಾಂಗ್ರೆಸ್ ಸರ್ಕಾರ ಬಂದರೆ ಈ ರೀತಿಯ ಪರಿಣಾಮಗಳು ಎದುರಾಗಲಿದೆ.

ಈಗಾಗಲೇ ರಾಜ್ಯದಲ್ಲಿ 24 ಹಿಂದೂ ಕಾರ್ಯಕರ್ತರ ಹತ್ಯೆಗಳು ನಡೆದಿದ್ದು, ಆ ಎಲ್ಲಾ ಹತ್ಯೆಯ ತನಿಖೆಗಳು ನೆಲಕಚ್ಚಿವೆ. ಬೆಂಗಳೂರಿನ ರುದ್ರೇಶ್ ಹತ್ಯೆಯ ತನಿಖೆಯು ಕೇಂದ್ರ ಸರ್ಕಾರದ ಎಎನ್‍ಐ ತನಿಖೆ ನಡೆಸುತ್ತಿರುವುದರಿಂದ ಅದರ ಸತ್ಯಾಸತ್ಯತೆ ಹೊರಬಿದ್ದಿದೆ. ಆದರೆ ಉಳಿದೆಲ್ಲಾ ಹತ್ಯೆಯ ತನಿಖೆಗಳು ನೆಲಕಚ್ಚಿದ್ದು ಮಾತ್ರವಲ್ಲದೆ ಕೆಲ ಆರೋಪಿಗಳನ್ನು ರಕ್ಷಣೆಯನ್ನೂ ಸರ್ಕಾರ ಮಾಡುತ್ತಿದೆ ಎಂಬ ಆರೋಪವೂ ಇದೆ.

ಯಾರಿಗೆ ಲಾಭ..?

ಇನ್ನು ಮತ್ತೆ ಕಾಂಗ್ರೆಸ್ ಸರ್ಕಾರ ಬಂದರೆ ಯಾರಿಗೆಲ್ಲಾ ಲಾಭ ಎಂಬ ಲೆಕ್ಕಾಚಾರವೂ ನಡೆಯುತ್ತಿದೆ. ಅದರಲ್ಲಿ ಮೊದಲಾಗಿ ಕಂಡು ಬರುವುದು ಮುಸ್ಲಿಂ ಮೂಲಭೂತ ಸಂಘಟನೆಗಳಾದ ಪಿಎಫ್‍ಐ, ಕೆಎಫ್‍ಡಿ ಹಾಗೂ ಎಸ್‍ಡಿಪಿಐ ಸಂಘಟನೆಗಳು. ಈ ಸಂಘಟನೆಗಳು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅತ್ಯಧಿಕ ಹಿಂದೂ ಕಾರ್ಯಕರ್ತರ ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಈ ಸಂಘಟನೆಗಳ ಮೇಲೆ ಮುಂದಿನ ಮುಂದಿನ ಹೊಸ ಸರ್ಕಾರ ಬಂದರೆ ಕಣ್ಣಿಡಲಿದೆ. ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬಂದರೆ ಈ ಸಂಘಟನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಅರ್ಥಾತ್ ಆ ಸಂಘಟನೆಗಳನ್ನೇ ನಿಷೇಧ ಮಾಡುವ ಎಲ್ಲಾ ಸಾಧ್ಯತೆಗಳೂ ಇದೆ. ಈ ಕಾರಣಕ್ಕಾಗಿಯೇ ಈ ಸಂಘಟನೆಗಳಿಗೆ ಮತ್ತೆ ಕಾಂಗ್ರೆಸ್ ಸರ್ಕಾರ ಬಂದರೆ ಅನುಕೂಲವಾಗಲಿದೆ ಎಂದು ಹೇಳಲಾಗುತ್ತಿದೆ.

ಇನ್ನು ಅಕ್ರಮ ಮರಳು ಸಾಗಾಟಗಾರರಿಗೆ, ದನಕಳ್ಳರಿಗೆ ಹಾಗೂ ಅಕ್ರಮ ದಂಧೆಕೋರರಿಗೆ ಕಾಂಗ್ರೆಸ್ ಸರ್ಕಾರ ಬಂದರೆ ಅನುಕೂಲವಾಗಲಿದೆ ಎಂದು ಹೇಳಲಾಗುತ್ತಿದೆ. ಒಟ್ಟಾರೆ ರಾಜ್ಯದ ಜನತೆಯ ದೃಷ್ಟಿಯಲ್ಲಿ ಕಾಂಗ್ರೆಸ್ ಸರ್ಕಾರವನ್ನು ಈ ಧೃಷ್ಟಿಕೋನದಲ್ಲೇ ನೋಡುತ್ತಿದ್ದು, ಇದರ ವಿರೋಧಿ ವರ್ಗಗಳು ಕಾಂಗ್ರೆಸ್ ಪಕ್ಷವನ್ನು ಸೋಲಿಸಬೇಕೆಂದೂ ಹಾಗೂ ಇದನ್ನು ಪ್ರೋತ್ಸಾಹಿಸುವ ವರ್ಗಗಳು ಗೆಲ್ಲಿಸಬೇಕೆಂದೂ ಪಣತೊಟ್ಟಿವೆ. ಗೆಲುವು ಯಾರ ಪಾಲಿಗೆ ಎಂದು ನಾಳೆಯವರೆಗೂ ಕಾದು ನೋಡಬೇಕಾಗಿದೆ.

-ಸುನಿಲ್ ಪಣಪಿಲ

Tags

Related Articles

Close