ಪ್ರಚಲಿತ

ದೇಶದ ಅತ್ಯಂತ ಶ್ರೀಮಂತ ರಾಜಕಾರಿಣಿ ಮಾಯಾವತಿಯ ಸಿರಿ ಸಂಪತ್ತಿನ ಬಗ್ಗೆ ಕೇಳಿದರೆ ತಲೆ ತಿರುಗಿ ಬೀಳುವರು ದಲಿತರು!!

ಈ ದೇಶದಲ್ಲಿ ದಲಿತರ ಹೆಸರಿನಲ್ಲಿ ರಾಜಕಾರಣ ನಡೆಸಿದಷ್ಟು ಬೇರಾವ ಸಮುದಾಯದ ಬಗ್ಗೆಯೂ ನಡೆದಿರಲಿಕ್ಕಿಲ್ಲ. ದಲಿತರ ಹೆಸರಿನಲ್ಲಿ ಸದಾ ರಾಜಕಾರಣ ಮಾಡುತ್ತಾ ತಮ್ಮ ಬೇಳೆ ಬೇಯಿಸಿಕೊಂಡವರು ಮಲ್ಲಿಕಾರ್ಜುನ ಖರ್ಗೆ ಮತ್ತು ಮಾಯಾವತಿಯಂತಹ ದಲಿತ ರಾಜಕಾರಣಿಗಳೇ ಹೊರತು ಇನ್ನೊಬ್ಬರಲ್ಲ. ಮೀಸಲಾತಿಯ ಹೆಸರಿನಲ್ಲಿ ತಿಂದವರೆ ತಿಂದು ತೇಗಿ ಕೊಬ್ಬಿದ್ದೇ ಹೊರತು ನಿಜವಾಗಿಯೂ ಕಷ್ಟದಲ್ಲಿರುವ ದಲಿತರಿಗೆ ಈ ರಾಜಕಾರಣಿಗಳು ಅಥವಾ ಅಧಿಕಾರಿಗಳು ಸಹಾಯ ಮಾಡಿದ್ದು ಕಂಡೂ ಇಲ್ಲ, ಕೇಳಿಯೂ ಇಲ್ಲ. ದಲಿತರ ಹಕ್ಕನ್ನು ಕಸಿಯುತ್ತಿರುವುದು ಬೇರೆ ಸಮುದಾಯದವರಲ್ಲ, ಸ್ವತ ದಲಿತರೇ ಎನ್ನುವುದು ಇನ್ನೂ ಇವರಿಗೆ ಅರ್ಥವಾಗಿಲ್ಲ.

ಇವರದೇ ಸಮುದಾಯದ ರಾಜಕಾರಣಿಗಳ-ಅಧಿಕಾರಿಗಳ ಆದಾಯ, ಸಿರಿ -ಸಂಪತ್ತು ನೋಡಿದರೆ ತಲೆ ತಿರುಗಿ ಬೀಳುವರು ಇವರೆಲ್ಲ. ದೇಶದ ರಾಜಕಾರಣಿಗಳಲ್ಲೇ ಅತ್ಯಂತ ಶ್ರೀಮಂತ ರಾಜಕಾರಣಿ ಮಾಯಾವತಿ! ಇದನ್ನ ನಾವು ಹೇಳುವುದಲ್ಲ, ಬದಲಾಗಿ ಆಕೆ ರಾಜ್ಯಸಭೆಗೆ ನಾಮಾಂಕನ ಪತ್ರ ಸಲ್ಲಿಸುವಾಗ ತಾನೇ ತನ್ನ ಆಸ್ತಿಯ ವಿವರ ಹೇಳಿಕೊಂಡದ್ದು. 2004 ರಲ್ಲಿ ಯಾವ ಮಾಯಾವತಿಯ ಬಳಿ ಉಳಿದುಕೊಳ್ಳಲು ಒಂದು ಸೂರು ಇರಲಿಲ್ಲವೋ ಆಕೆ ಇವತ್ತು ಹಲವಾರು ಬಂಗಲೆಗಳ ಮಾಲಕಿ. ತನ್ನ ತಂದೆಯ ಊರಾದ ಬಾದಲಪುರದಲ್ಲಿ ಹಲವಾರು ಎಕರೆ ಜಮೀನಿನಲ್ಲಿ ಭವ್ಯವಾದ ಮಹಲೊಂದನ್ನು ಕಟ್ಟಿಸಿಕೊಂಡಿದ್ದಾರೆ ಈಕೆ. ಹಳ್ಳಿಗೆ ಹಳ್ಳಿಯನ್ನೇ ಅತ್ಯಾಧುನಿಕ ಸುಖ ಸೌಲತ್ತುಗಳಿಂದ ತುಂಬಿ ಬಿಟ್ಟಿದ್ದಾರೆ. ಈ ಮನೆಯಲ್ಲಿ ಆಕೆಯಾಗಲೀ, ಆಕೆಯ ಪರಿವಾರದವರಾಗಲೀ ವಾಸಿಸುತ್ತಿಲ್ಲ, ಸುಮ್ಮನೆ ಮಹಲು ಕಟ್ಟಿಟ್ಟದ್ದಷ್ಟೆ.

2007 ರಲ್ಲಿ ಈಕೆಯ ಬಳಿಯಿದ್ದದ್ದು 52 ಕೋಟಿ ರೂಪಾಯಿಗಳ ಆಸ್ತಿ. ಆದರೆ ಐದೇ ವರ್ಷಗಳಲ್ಲಿ ಅಂದರೆ 2012 ರಲ್ಲಿ ಈಕೆಯ ಒಟ್ಟು ಸಂಪತ್ತಿನ ಮೌಲ್ಯ 111ಕೋಟಿ!! ಇದು 2018, ಹಾಗಾದರೆ ಈಗ ಆಕೆಯ ಆಸ್ತಿಯ ಒಟ್ಟು ಮೌಲ್ಯ ಎಷ್ಟಿರಬಹುದು ನೀವೆ ಲೆಕ್ಕ ಹಾಕಿ. 2012 ವರೆಗೆ ಅವರ ಬ್ಯಾಂಕ್ ಅಕೌಂಟಿನಲ್ಲಿ 14 ಕೋಟಿ ರುಪಾಯಿಗಳಿದ್ದವು. 10 ಲಕ್ಷ 20 ಸಾವಿರದಷ್ಟು ನಗದು ಹಣ ಅವರ ಕೈಯಲ್ಲಿತ್ತು. ಒಂದು ಕೋಟಿ ಮೌಲ್ಯದ ಚಿನ್ನ ಮತ್ತು ವಜ್ರದ ಆಭರಣಗಳಿದ್ದವು.
ಇಷ್ಟಕ್ಕೇ ಸುಸ್ತಾದಿರಾ? ಇನ್ನೂ ಇದೆ ಕೇಳಿ. ದೆಹಲಿಯ ಪ್ರತಿಷ್ಟಿತ ಕನ್ನೌಟ್ ಪ್ಲೇಸ್ ನಲ್ಲಿ 20 ಕೋಟಿ ಬೆಲೆಬಾಳುವ ವ್ಯಾವಸಾಯಿಕ ಕಟ್ಟಡಗಳಿವೆ. ದೆಹಲಿಯಲ್ಲಿ 62 ಕೋಟಿ ಮತ್ತು ಲಖನೌನಲ್ಲಿ 16 ಕೋಟಿ ಮೌಲ್ಯಯದ ಬಂಗಲೆಗಳಿವೆ. ಈಗ ಆ ಬಂಗಲೆಗಳ ಮೌಲ್ಯ ಇನ್ನೂ ಹೆಚ್ಚಾಗಿರಬಹುದು.

ದೆಹಲಿಯಿಂದ ಲಖನೌವರೆಗೆ ಇರುವ ಅರಮನೆಯಂತಹ ಬಂಗಲೆಗಳ ಒಟ್ಟು ಮೌಲ್ಯ 96 ಕೋಟಿ. ಐದು ಎಕರೆ ಜಾಗದಲ್ಲಿ ನಿರ್ಮಿಸಿಲಾದ ಈಕೆಯ “ಅರಮನೆಯ” ಅಂದಾಜು ಖರ್ಚು 100 ಕೋಟಿ!! ಈ ಅರಮನೆಯಲ್ಲಿ ಸಿಸಿಟಿವಿ, ಮೀಟಿಂಗ್ ಹಾಲು, ಒಂದು ಡಝನ್ ಕೋಣೆಗಳು, ಹತ್ತು ಹಲವು ಲಾಕರ್, ಬುಲೆಟ್ ಪ್ರೂಫ್ ಕಿಟಿಕಿಗಳು ಇವೆ. ಈ ಅರಮನೆಯು ಇಪ್ಪತ್ತು ಫೀಟ್ ಎತ್ತರದ ಕಾಪೌಂಡಿನಿಂದ ಸುತ್ತುವರಿಯಲ್ಪಟ್ಟಿದೆ. ಯಾವುದೇ ರಾಜ-ಮಹಾರಾಜರ ಬಳಿಯೂ ಇಲ್ಲದಂತಹ ವಿಲಾಸೀ ಮನೆಗಳು ಸನ್ಮಾನ್ಯ “ದಲಿತ” ರಾಜಕಾರಣಿಯ ಬಳಿಯಿದೆಯೆಂದರೆ ನೀವೇ ಯೋಚಿಸಿ ಇವರು ದಲಿತರ ಹೆಸರಿನಲ್ಲಿ ಎಷ್ಟು ಮೇವಾ ತಿಂದಿರಬಹುದು? ಬಡ ದಲಿತನ ಮನೆಯಲ್ಲಿ ಒಂದು ಹೊತ್ತು ಕೂಳಿಗೂ ಗತಿಯಿರುವುದಿಲ್ಲ ಪಾಪ. ಆದರೆ ಈ ರಾಜಕಾರಣಿಗಳು ಅವರ ಹೆಸರಿನಲ್ಲಿ ಕೋಟಿ ಕೋಟಿ ದೋಚಿ ವಿಲಾಸೀ ಜೀವನ ಜೀವಿಸುತ್ತಿದ್ದಾರೆ.

ತನ್ನನ್ನು ಅಲಂಕರಿಸಲು “ನೋಟಿನ ಹಾರವನ್ನೇ” ಉಪಯೋಗಿಸುವ ಮಾಯಾವತಿಗೆ ಸ್ವಲ್ಪನಾದರು ದಲಿತರ ಬಗ್ಗೆ ಕಾಳಜಿ ಇದ್ದಿದ್ದರೆ ತನ್ನೆಲ್ಲಾ ಆಸ್ತಿಯನ್ನು ದಲಿತರ ಹೆಸರಿಗೆ ಬರೆಯುತ್ತಿದ್ದರು. ಈಕೆಯ ತಮ್ಮನ ಬಳಿ 3000 ಕೋಟಿ ರೂಪಾಯಿಯ ಆಸ್ತಿ ಇದೆಯೆನ್ನುವುದು ಈಗಾಗಲೇ ಬಯಲಾಗಿದೆ. ಇದೆಲ್ಲಾ ಹಣ ಯಾರದ್ದು? ಇದೆಲ್ಲವೂ ದಲಿತರದ್ದು. ಸರಕಾರದ ದುಡ್ಡನ್ನು ತನ್ನ ಮೂರ್ತಿ ತಯಾರಿಸಲು ಪೋಲು ಮಾಡುವಾಗ ಇವರಿಗೆ ದಲಿತರ ನೆನಪಾಗುವುದಿಲ್ಲ. ಇವರದೇ ಆಳ್ವಿಕೆ ಇರುವಾಗ ಇವರಿಗೆ ದಲಿತರ ಕಲ್ಯಾಣ ಮಾಡುವ ಮನಸಾಗುವುದಿಲ್ಲ. ತಮ್ಮವರ ಹಕ್ಕನ್ನು ತಾವೇ ಕಸಿದು ತಿನ್ನುವಾಗ ಇವರ ಆತ್ಮಸಾಕ್ಷಿ ಚುಚ್ಚುವುದಿಲ್ಲ. ಅಂಬೇಡ್ಕರ್ ಅವರ ಪ್ರಕಾರ ಒಬ್ಬ ದಲಿತ, ಮೀಸಲಾತಿಯ ಸೌಲಭ್ಯ ಪಡೆದು ಆರ್ಥಿಕವಾಗಿ ಸಬಲನಾದ ಮೇಲೆ ಆತ ಸ್ವ ಇಚ್ಚೆಯಿಂದ ಮೀಸಲಾತಿಯನ್ನು ತ್ಯಜಿಸಿ ಇನ್ನೊಬ್ಬರಿಗೆ ಅದರ ಉಪಯೋಗ ದೊರಕುವಂತೆ ನೋಡಿಕೊಳ್ಳಬೇಕು. ಆದರೆ ಇಲ್ಲಿ ಹಾಗಾಗುತ್ತಿಲ್ಲ. ಮೀಸಲಾತಿಯ ಉಪಯೋಗ ಪಡೆದವರೇ ಪಡೆಯುವುದು. ಕೆಳವರ್ಗದಲ್ಲಿರುವ ದಲಿತರಿಗೆ ಅದನ್ನು ವರ್ಗಾಯಿಸುವುದೇ ಇಲ್ಲ.

ಇದೇ ಈ ದಲಿತ ರಾಜಕಾರಣಿಗಳ ವಾಸ್ತವ. ಅವರಿಂದ ದಲಿತ ಉದ್ಧಾರ ಖಂಡಿತವಾಗಿಯೂ ಸಾಧ್ಯವಿಲ್ಲ. ದಲಿತ ಹೆಸರಿನಲ್ಲಿ ವೋಟ್ ಬ್ಯಾಂಕ್ ರಾಜಕಾರಣ ಮಾಡಿ ತಮ್ಮ ಜೇಬು ತುಂಬುವುದಷ್ಟೇ ಇವರ ಕೆಲಸ. ಯೋಚಿಸಿ 12 ವರ್ಷ ಒಂದು ರಾಜ್ಯದ ಮುಖ್ಯಮಂತ್ರಿಯಾಗಿ, 4 ವರ್ಷ ದೇಶದ ಪ್ರಧಾನಮಂತ್ರಿಯಾಗಿ ಕಾರ್ಯ ನಿರ್ವಹಿಸಿಯೂ ಮೋದಿಜಿಯವರ ಆಸ್ತಿ ಕೇವಲ ಈ ದೇಶದ ಜನರು. ಇಷ್ಟು ವರ್ಷ ಅಧಿಕಾರದಲ್ಲಿದ್ದರೂ ಆ ಫಕೀರನ ಬಳಿ ಕವಡೆ ಕಾಸೂ ಇಲ್ಲ. ಸಮಾಜದ ಎಲ್ಲಾ ವರ್ಗಗಳ ಹಿತಕ್ಕಾಗಿ ದುಡಿಯುವ ಮೋದೀಜೀ ಯವರು ಹಿತವೋ ನಿಮಗೆ ಇಲ್ಲ ಜಾತಿಯ ಹೆಸರಿನಲ್ಲಿ ರಾಜನೀತಿ ಮಾಡುತ್ತಾ ತಮಗೆ ಮಹಲು ಕಟ್ಟಿಸಿಕೊಳ್ಳುವ ಮಾಯಾವತಿಯಂತಹ ಮಳ್ಳಿ ರಾಜಕಾರಣಿಗಳು ಹಿತವೋ? ಜಾತಿ ಆಧಾರದಲ್ಲಿ ರಾಜನೀತಿ ಮಾಡುವ ಜನರ ಮಾತಿಗೆ ಮರುಳಾಗಬೇಡಿ, ಅಂತಹವರನ್ನು ಸಾರಾಸಗಟಾಗಿ ತಿರಸ್ಕರಿಸಿ ಅವರಿಗೆ ಬುದ್ದಿ ಕಲಿಸಿ. ಯಾವ ದಲಿತ ರಾಜಕಾರಣಿಯೂ ತನ್ನ ಆಸ್ತಿಯನ್ನು ಮಾರಿ ತನ್ನ ಸಮುದಾಯದ ಜನರ ಉದ್ದಾರ ಮಾಡಿಲ್ಲ, ಮುಂದೆ ಮಾಡುವುದೂ ಇಲ್ಲ. ದೇಶದ ದಲಿತ ರಾಜಕಾರಣಿಗಳೇ ಇನ್ನಾದರೂ ದಲಿತರ ಹಕ್ಕನ್ನು ಅವರಿಗೆ ವಾಪಾಸು ಕೊಡಿ. ನಿಮ್ಮೆಲ್ಲಾ ಆಸ್ತಿಯನ್ನು ದಲಿತರ ಹೆಸರಿಗೆ ಬರೆದು ಬಿಡಿ. ಆಗ ಒಪ್ಪೋಣ ನಿಮ್ಮ ದಲಿತ ಕಾಳಜಿ ನಿಜವೆಂದು.

source:http://www.thehindu.com/news/national/other-states/mayawati-among-indias-richest-politicians/article2990814.ece

-ಶಾರ್ವರಿ

Tags

Related Articles

Close