ಪ್ರಚಲಿತ

ಹುಟ್ಟಿದ ಧರ್ಮ‌ದ ಮೇಲೆ ಶ್ರದ್ಧೆ ಇದ್ದಿದ್ದರೆ…

ಅವಳ ಹೆಸರು ಶ್ರದ್ಧಾ. ಇಪ್ಪತ್ತಾರು ವರ್ಷದ ಹುಡುಗಿ. ಅನ್ಯ ಧರ್ಮದ ಅಫ್ತಾಬ್ ಅಮೀನ್ ಪೂನಾವಾ, ಎಂಬವನ ಹಿಂದೆ ಹೋಗಿ, ಘನಘೋರ‌ವಾಗಿ ಸಾವು ಕಂಡ ಹುಡುಗಿ. ಪೋಷಕರ ಮಾತು ಕೇಳದೆ ‘ಲವ್ ಜಿಹಾದ್’ ಗೆ ತುತ್ತಾಗಿ ಪ್ರಾಣವನ್ನೇ ಕಳೆದುಕೊಂಡ ಶ್ರದ್ಧಾ ಕಥೆ, ಉಳಿದ ಹಿಂದೂ ಹೆಣ್ಣು ಮಕ್ಕಳಿಗೆ ಪಾಠ. ಪ್ರೀತಿಯ ಹೆಸರಿನಲ್ಲಿ ಕೆಲವು ಮುಸ್ಲಿಂ ಯುವಕರ ಬಲೆಗೆ ಬಿದ್ದು, ಪ್ರೀತಿಯ ಅಮಲಿನಲ್ಲಿ ಎನ್ನುವುದಕ್ಕಿಂತ ಅವರು ನೀಡುವ ಉಡುಗೊರೆ, ಆಮಿಷಗಳಿಗೆ ಬಲಿಯಾಗಿ ‘ಹಿಂದೂ ಧರ್ಮ’ ವನ್ನೇ ತೊರೆದು ನಡೆವ ಹುಡುಗಿಯರಿಗೆ ಈ ಘಟನೆ ಎಚ್ಚರಿಕೆ‌ಯಾಗಲಿ.

ಶ್ರದ್ಧಾ ಹೆತ್ತವರು ಮುಸ್ಲಿಂ ಯುವಕನೊಂದಿಗಿನ ಮಗಳ ಪ್ರೇಮ ತಿಳಿದ ಸಮಯದಿಂದ, ಈ ಸಂಬಂಧ‌ಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದವರು. ತಮ್ಮ ಮಗಳನ್ನು ಕಳೆದುಕೊಳ್ಳಲು ಸಿದ್ಧವಿರದ ಪೋಷಕರಿಗೆ, ಈ ದುರಂತಮಯ ಸಾವು ಅರಗಿಸಿಕೊಳ್ಳಲಾಗದ ನೋವಾಗಿ ಪರಿಣಮಿಸಿದೆ.

ಇಷ್ಟಪಟ್ಟು ಹೋದವನೇ, ಕೊಂದು ಕೊಚ್ಚಿ, ಸೂಟ್‌ಕೇಸ್‌ನೊಳಗಿಟ್ಟು, ಪ್ರಿಡ್ಜ್‌ನೊಳಗಿಟ್ಟು ಆ ಬಳಿಕ ಯಾರಿಗೂ ತಿಳಿಯದಂತೆ ದೆಹಲಿಯ ಕಾಡೊಂದರೊಳಗೆ ಎಲ್ಲೆಂದರಲ್ಲಿ ಎಸೆದವನ ಮನಸ್ಸಿನೊಳಗೆ ಶ್ರದ್ಧಾಳ ಬಗ್ಗೆ ಇದ್ದಿದ್ದು ಪ್ರೇಮವೋ, ಕಾಮವೋ ಎಂಬುದನ್ನು ದಯವಿಟ್ಟು ಅರಿತುಕೊಳ್ಳಿ ಹಿಂದೂ ಸಹೋದರಿಯರೇ‌. ಅವರ ಬಲೆಗೆ ಬಿದ್ದು, ಅವರ ಕಾರ್ಯಕ್ಕೆ ನಿಮ್ಮನ್ನು ಬಳಸಿ, ಇನ್ನೇನೂ ಉಳಿದಿಲ್ಲ ಎಂಬಂತಾದಾಗ ಇಂದು ಶ್ರದ್ಧಾಳಿಗಾದ ಗತಿ ಅಥವಾ ಅಂತಹದ್ದೇ ಇನ್ಯಾವುದೋ ರೀತಿಯ ಶಿಕ್ಷೆ ನಿಮಗೆ ಕಟ್ಟಿಟ್ಟ ಬುತ್ತಿ ಎನ್ನುವುದನ್ನು ಮರೆತು, ಅವರ ಹಿಂದೆ ನಡೆದಿರೋ, ನಿಮ್ಮ ಪಾಲಿಗೆ ನೀವೇ ಶ್ರದ್ಧಾಂಜಲಿ ಅರ್ಪಿಸಲು ಮುಹೂರ್ತ ಇರಿಸಿದಂತೆಯೇ ಸರಿ.

ಪೋಷಕರ ವಿರೋಧದ ನಡುವೆಯೂ ಶ್ರದ್ಧಾ ಮತ್ತು ಈ ಮತಾಂಧ ಮುಂಬಯಿ ಬಿಟ್ಟು ದೆಹಲಿಗೆ ಕಣ್ಮರೆಯಾಗಿದ್ದವರು. ನಿಮಗೆ ಗೊತ್ತಾ.‌ ಹೆತ್ತವರಿಗೆ ತಮ್ಮ ಮಗಳು ಇಂತಹ ಕಾಮುಕನ ಜೊತೆಗೆ ದೆಹಲಿಗೆ ಹೋದ ವಿಚಾರವೇ ಗೊತ್ತಿರಲಿಲ್ಲ. ಮನೆಯವರ ಜೊತೆಗೆ ದೂರವಾಣಿ ಮೂಲಕ ಸಂಪರ್ಕ ಇರಿಸಿಕೊಂಡ ಶ್ರದ್ಧಾ, ತಾನು ತನ್ನ ಪ್ರಿಯಕರನ ಜೊತೆಗೆ ದೆಹಲಿಗೆ ತೆರಳಿದ್ದು, ಲಿವಿಂಗ್ ಟುಗೆದರ್ ರಿಲೇಶನ್‌ಶಿಪ್‌ನಲ್ಲಿದ್ದ ವಿಚಾರವನ್ನು ಬಹಿರಂಗ ಮಾಡಿರಲಿಲ್ಲ. ಶ್ರದ್ಧಾಳ ಈ ನಡೆಯೇ ಅವಳಿಗೆ ಇಂದು ಅವಳು ನಂಬಿ ಹೋದವನಿಂದಲೇ ದುರಂತ ಸಾವು ಬಂದಿರುವುದಕ್ಕೆ ಕಾರಣ ಎಂದೆನ್ನಬಹುದು.

ನಿಮಗೆ ಗೊತ್ತಾ, ಮೂರು ವರ್ಷಗಳಿಂದ ಫ್ಲಾಟ್ ಒಂದರಲ್ಲಿ ಜೊತೆಗೇ ವಾಸಿಸುತ್ತಿದ್ದಾಗ ಅವಳನ್ನು ಕೊಲ್ಲಬೇಕೆಂದು ಅನಿಸಿಲ್ಲ ಆ ಪಾತಕಿಗೆ‌ ಆದರೆ ಯಾವಾಗ ಅವಳು ತನ್ನನ್ನು ಮದುವೆಯಾಗುವಂತೆ ಒತ್ತಾಯಿಸತೊಡಗುತ್ತಾಳೋ, ಆಗಲೇ ಆ ಕಾಮುಕ ಅವಳನ್ನು ಕೊಂದು, ಖಂಡ ತುಂಡವಾಗಿಸಿ, ಪ್ರಿಜ್‌ನೊಳಗಿರಿಸಿ, ದಿನಕ್ಕೆ ಎರಡು ತುಂಡುಗಳಂತೆ ಅವಳ ದೇಳದ ಭಾಗಗಳನ್ನು ದೆಹಲಿಯ ಕಾಡಿಗೆಸೆದು, 18 ದಿನಗಳಲ್ಲಿ ತನ್ನ ಕೆಲಸ ಮುಗಿಸಿದ್ದ. ಈ ವಿಷಯ ಯಾರಿಗೂ ತಿಳಿಯದು ಎನ್ನುವ ನಂಬಿಕೆಯಲ್ಲಿ ಬೇರೆಯವರೊಂದಿಗೆ ಅಲೇ ಫ್ಲಾಟ್‌ನಲ್ಲಿ ಸಲ್ಲಾಪವನ್ನೂ ನಡೆಸಿದ್ದ. ಎಂತಹ ಭಂಡು ದೈರ್ಯ ಇರಬಹುದು ಈ ನರ ರಾಕ್ಷಸನದ್ದು. ಒಮ್ಮೆ ಯೋಚಿಸಿ.

ಅಂದ ಹಾಗೆ ಇವರಿಬ್ಬರೂ ಪರಿಚಯವಾದದ್ದು ಯಾವುದೋ ಒಂದು ಆಪ್ ಮೂಲಕ. ಹಿರಿಯರೇ, ನಿಮ್ಮನೆ ಮಕ್ಕಳು ದಾರಿ ತಪ್ಪುತ್ತಾರೆ ಎಂದಲ್ಲ. ಆದರೂ ಅವರ ಮೇಲೆ ಒಂದು ಗಮನ ನಿಮ್ಮೊಳಗಿದ್ದಲ್ಲಿ, ನಾಳೆ ನಮ್ಮಲ್ಲಿ ಇನ್ಯಾರೋ ಒಬ್ಬರು ಮತ್ತೊಂದು ಶ್ರದ್ಧಾ ಆಗುವ, ಅವಳಂತೆ ದುರಂತ ಅಂತ್ಯ ಕಾಣುವ ಸಂದರ್ಭ ತಪ್ಪಬಹುದು.

ಇನ್ನು ಮಕ್ಕಳೇ, ಹೆತ್ತವರು, ಹಿರಿಯರು ಅನ್ಯ ಧರ್ಮದ‌ವರನ್ನು ವರಿಸಬೇಡಿ, ಪ್ರೀತಿಸಬೇಡಿ ಎನ್ನುವುದು ನಿಮ್ಮ ಮೇಲಿನ ದ್ವೇಷದಿಂದಲ್ಲ. ಬದಲಾಗಿ ನೀವು ಅವರ ಜೀವನ ,ನೀವು ಚೆನ್ನಾಗಿರಬೇಕು ಎನ್ನುವ ಆಶಯ ಅವರಿಗಿರುವುದರಿಂದ. ನಮ್ಮ ಮಕ್ಕಳ ಜೀವನ ಚೆನ್ನಾಗಿರಬೇಕು. ಅವರು ಪರದೆಯೊಳಗೆ ಬಂಧಿಗಳಾಗುವುದು ಬೇಡ. ದುರಂತ ಅಂತ್ಯ ಕಾಣುವುದು ಬೇಡ ಎನ್ನುವ ಆಶಯದಿಂದ.

ಪ್ರೀತಿ ತಪ್ಪಲ್ಲ. ನಮ್ಮ ಧರ್ಮ‌ದಲ್ಲೇ ಪ್ರೀತಿಸಿ. ಮೊದಲು ಧರ್ಮವನ್ನು, ಹೆತ್ತವರನ್ನು ಪ್ರೀತಿಸಿ. ಅನ್ಯ ಮತೀಯರನ್ನು ಹತ್ತಿರ ಬಿಟ್ಟುಕೊಳ್ಳುವ ಮುನ್ನ ಒಮ್ಮೆ ಯೋಚಿಸಿ. ಪ್ರೀತಿ ನಾಳೆ ಉರುಳಾಗಬಹುದು ಎನ್ನುವುದು ನೆನಪಿಸಿಕೊಳ್ಳಿ. ಕೊನೆಯದಾಗಿ ಹೀಗೆ ಲವ್ ಜಿಹಾದ್‌ಗೆ ತುತ್ತಾಗಿ ಜೀವವನ್ನೇ ಕಳಕೊಳ್ಳುವ ಮುನ್ನ, ಉತ್ತಮ ಬದುಕು ಕೊಟ್ಟ ಹೆತ್ತವರ ಭಾವನೆಗಳನ್ನು ಗೌರವೌಸಿ‌. ಆಗ ತನ್ನಿಂತಾನೇ ಹೆತ್ತವರ, ಧರ್ಮ‌ದ ಮೇಲಿನ ಪ್ರೀತಿಯ ಅರಿವಾಗಬಹುದು.

ಶ್ರದ್ಧಾಳ ಹಾಗೆ, ಹುಟ್ಟಿದ ಧರ್ಮ‌ದ ಮೇಲೆಯೇ ಶ್ರದ್ಧೆ ಇರದಾಗ, ಅನ್ಯ ಧರ್ಮ‌ದ ಮೇಲೆ ಒಲವು ಉಕ್ಕಿ ಹರಿದ ಹೆಚ್ಚಿನ ಸಂದರ್ಭಗಳಲ್ಲಿ ಇಂತಹ ದುರಂತವೇ ನಡೆಯುವುದು. ನೀವು ಬದಲಾಗದೇ ಹೋದಲ್ಲಿ ಈ ದುರಂತವನ್ನು ತಡೆಯುವುದು ಅಸಾಧ್ಯ. ಎಚ್ಚರಾಗಿ.

Tags

Related Articles

Close