ಪ್ರಚಲಿತ

ಆಹಾರ ಸಂಕಷ್ಟ ಎದುರಿಸುತ್ತಿದ್ದ 18 ರಾಷ್ಟ್ರಗಳಿಗೆ ಭಾರತದಿಂದ ನೆರವು: IFAD ಮೆಚ್ಚುಗೆ

ಕೊರೋನಾ ನಂತರದಲ್ಲಿ ಭಾರತ ವಿಶ್ವದ ಹಲವು ರಾಷ್ಟ್ರಗಳ ಅಗತ್ಯ ಬೇಡಿಕೆಗಳಿಗೆ ಸ್ಪಂದಿಸಿ, ಅವುಗಳ ಕಷ್ಟಕ್ಕೆ ಹೆಗಲಾಗುವ ಮೂಲಕ ವಿಶ್ವಮಾನ್ಯವಾಗಿದೆ.

ಕೊರೋನಾದಿಂದ ಜಗತ್ತು ಕಂಗೆಟ್ಟು ಪರಿಸ್ಥಿತಿ ಬುಡಮೇಲಾದ ಸಮಯದಲ್ಲಿಯೂ ಭಾರತ ಮಾತ್ರ ಸ್ವಾವಲಂಬನೆಯ ಗುರಿ ಸಾಧಿಸಿದ್ದು ಮಹತ್ವದ ಸಾಧನೆಯೂ ಹೌದು. ಆರೋಗ್ಯ ಸವಾಲನ್ನು ಎದುರಿಸುವುದರ ಜೊತೆ ಜೊತೆಗೆ ಆಹಾರ, ಆರ್ಥಿಕ ಸವಾಲನ್ನು ಜಯಿಸಿ, ಸ್ವಾವಲಂಬಿ ಆತ್ಮನಿರ್ಭರ ಭಾರತವನ್ನು ನಿರ್ಮಾಣ ಮಾಡಿದ ಕೀರ್ತಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ್ದು ಎಂದರೆ ಅತಿಶಯವಾಗಲಾರದು.

ಅಂತಹ ದಿಟ್ಟ ಭಾರತ ವಿಶ್ವದ ಯಾವುದೇ ರಾಷ್ಟ್ರ ಸಂಕಷ್ಟದಲ್ಲಿರುವಾಗಲೂ ನೆರವು ನೀಡುತ್ತಲೇ ಬಂದಿದೆ. ಭಾರತದ ಆಡಳಿತ ಚುಕ್ಕಾಣಿ ಪ್ರಧಾನಿ ಮೋದಿ ಅವರು ಹಿಡಿದ ಬಳಿಕವಂತೂ ಭಾರತ ವಿಶ್ವಕ್ಕೆ ಬಹಳ ಅಚ್ಚುಮೆಚ್ಚಿನ ಮತ್ತು ಬಲಿಷ್ಠ ರಾಷ್ಟ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಆ ವರೆಗೆ ಅಮೆರಿಕದಂತಹ ರಾಷ್ಟ್ರಗಳೆದುರು ಕೈ ಕಟ್ಟಿ ನಿಲ್ಲಬೇಕಾಗಿದ್ದ ಭಾರತ, ಇಂದು ಪ್ರಧಾನಿ ಮೋದಿ ಅವರ ಅಭಿವೃದ್ಧಿ ಪರ ಆಡಳಿತ, ದೂರದೃಷ್ಟಿಯ ಕಾರಣದಿಂದ ಎದೆಯುಬ್ಬಿಸಿ ನಿಲ್ಲುವ ಸ್ಥಿತಿಗೆ ತಲುಪಿದೆ. ಇಂತಹ ಭಾರತ ಇದೀಗ ವಿಶ್ವದ ಸಂಕಷ್ಟಕ್ಕೆ ತುತ್ತಾಗಿದ್ದ ಹದಿನೆಂಟು ರಾಷ್ಟ್ರಗಳಿಗೆ ನೆರವಿನ ಹಸ್ತ ಚಾಚುವ ಮೂಲಕ ಮತ್ತೆ ಸುದ್ದಿಯಾಗಿದೆ. ವಸುದೇವ ಕುಟುಂಬಕಂ ಎಂಬ ಉಕ್ತಿಯಂತೆ ವಿಶ್ವವನ್ನೇ ತನ್ನ ಕುಟುಂಬ ಎಂಬಂತೆ ತಿಳಿದು ನೆರವಿನ ಹಸ್ತ ಚಾಚುತ್ತಿರುವ ಭಾರತ ಆ ಮೂಲಕ ಮಾದರಿಯಾಗಿದೆ.

ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ನಡೆದ ಘಟನೆ ಎಲ್ಲರಿಗೂ ತಿಳಿದಿದೆ. ಈ ಯುದ್ಧದ ದಿಲ್ ಪರಿಣಾಮವನ್ನು ಕೇವಲ ಆ ಎರಡು ರಾಷ್ಟ್ರಗಳಷ್ಟೇ ಅನುಭವಿಸಿದ್ದಲ್ಲ. ಬದಲಾಗಿ ಈ ಸಂಘರ್ಷ ದಿಂದ ಕಳೆದ ವರ್ಷ ಹದಿನೆಂಟು ರಾಷ್ಟ್ರಗಳು ಆಹಾರ ಅಭದ್ರತೆಗೆ ತುತ್ತಾಗಿ ಸಂಕಷ್ಟ ಅನುಭವಿಸುವ ಹಾಗಾಗಿತ್ತು. ಹೀಗೆ ತೀವ್ರ ಮಟ್ಟದಲ್ಲಿ ಆಹಾರ ಅಭಾವವನ್ನು ಎದುರಿಸಿದ ರಾಷ್ಟ್ರಗಳಿಗೆ ಧಾನ್ಯಗಳು ಮತ್ತು ೧.೮ ಮಿಲಿಯನ್ ಟನ್ ಗೋಧಿ ಮಾರಾಟ ಮಾಡುವ ಮೂಲಕ ಆ ರಾಷ್ಟ್ರಗಳ ಜನರಿಗೆ ಆಹಾರ ದೊರೆಯುವಂತೆ ಮಾಡಿದೆ.

ಹದಿನೆಂಟು ರಾಷ್ಟ್ರಗಳಿಗೆ ಆಹಾರ ಧಾನ್ಯ ಪೂರೈಕೆ ಮಾಡಿರುವ ಭಾರತದ ಮಹತ್ವದ ಕೆಲಸವನ್ನು, ಭಾರತದ ಕೃಷಿ ಅಭಿವೃದ್ಧಿಯನ್ನು ವಿಶ್ವಸಂಸ್ಥೆಯ ನಿಧಿ (ಐಎಫ್ಎಡಿ) ಶ್ಲಾಘಿಸಿದ್ದು, ಆ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದೆ. ಭಾರತದ ಜಿ ೨೦ ನಾಯಕತ್ವ ವಿಶ್ವ ಮಟ್ಟದ ಆಹಾರ ಸಮಸ್ಯೆಗಳನ್ನು ನಿವಾರಿಸುವ ಕ್ರಾಂತಿಕಾರಿ ಶಕ್ತಿ ಹೊಂದಿದೆ. ಭಾರತವು ಯುಎನ್ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದೆ ಎಂದು ಇಂಟರ್ನ್ಯಾಷನಲ್ ಫಂಡ್ ಫಾರ್ ಅಗ್ರಿಕಲ್ಚರ್ ಡೆವಲಪ್‌ಮೆಂಟ್‌ನ ಮುಖ್ಯಸ್ಥ ಅಲ್ವಾರೊ ಲಾರಿಯೋ ತಿಳಿಸಿದ್ದಾರೆ.

ಭಾರತದ ಕೃಷಿ ಜ್ಞಾನ ಇತರ ರಾಷ್ಟ್ರಗಳಿಗೆ ಕೃಷಿ ಮತ್ತು ದ್ರಾಮೀಣ ಅಭಿವೃದ್ಧಿಗೆ ಸಹಾಯ ಮಾಡುತ್ತದೆ. ರಷ್ಯಾ – ಉಕ್ರೇನ್ ಯುದ್ಧದಿಂದಾಗಿ ಹದಿನೆಂಟು ರಾಷ್ಟ್ರಗಳಲ್ಲಿ ಉಂಟಾದ ಆಹಾರ ಕ್ಷಾಮವನ್ನು ನೀಗಿಸಲು ಗೋಧಿ ರಪ್ತು ಮಾಡಿರುವ ಭಾರತದ ಕ್ರಮವನ್ನು ನಾವು ಶ್ಲಾಘಿಸುತ್ತೇವೆ ಎಂಬುದಾಗಿಯೂ ಲಾರಿಯೋ ತಿಳಿಸಿದ್ದಾರೆ. ಹಾಗೆಯೇ ಭಾರತವು ದಕ್ಷಿಣ ಸಹಕಾರದಲ್ಲಿ ಚಿಂತನಾಶೀಲ ನಾಯಕತ್ವವನ್ನು ಪ್ರದರ್ಶಿಸಿದೆ. ಸಿರಿ ಧಾನ್ಯಗಳ ಮೇಲಿನ ಭಾರತದ ಗಮನವನ್ನು ನಾವು ಪ್ರಶಂಸಿಸುತ್ತೇವೆ ಎಂಬುದಾಗಿಯೂ ಲಾರಿಯೋ ತಿಳಿಸಿದ್ದಾರೆ.

ಇಂಟರ್ನ್ಯಾಷನಲ್ ಫಂಡ್ ಫಾರ್ ಅಗ್ರಿಕಲ್ಚರ್ ಡೆವಲಪ್ಮೆಂಟ್ ಎಂಬುದು ಯುಎನ್‌ನ ವಿಶೇಷ ಸಂಸ್ಥೆಯಾಗಿದ್ದು, ಅದು ಬಡತನ ಹಸಿವು ಮತ್ತು ಆಹಾರ ಅಭದ್ರತೆಯನ್ನು ಎದುರಿಸಲು, ಬಡ ಮತ್ತು ದುರ್ಬಲ ದೇಶಗಳ ಉಪಕ್ರಮಗಳನ್ನು ಬೆಂಬಲಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತದೆ.

Tags

Related Articles

Close