ಪ್ರಚಲಿತ

ಕಾಂಗ್ರೆಸ್ ನಲ್ಲಿ ಶುರುವಾಯ್ತು ಟಿಕೆಟ್‌ ಕಿತ್ತಾಟ!! ದಿಗ್ಗಜರನ್ನೇ ಬೆಚ್ಚಿಬೀಳಿಸಿದ ಸಿದ್ದರಾಮಯ್ಯ!!

ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯ ರಾಜಕಾರಣದಲ್ಲಿ ಅದ್ಯಾವ ರೀತಿಯ ಬದಲಾವಣೆ ಗೋಚರಿಸುತ್ತಿದೆ ಎಂದರೆ , ಇಡೀ ದೇಶವೇ ಕರ್ನಾಟಕದತ್ತ ಬಹಳ ಕುತೂಹಲದಿಂದ ನೋಡುತ್ತಿದೆ. ಇಡೀ ದೇಶದ ಜನರ ಕುತೂಹಲಕ್ಕೆ ಕಾರಣವಾದ ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಾಂಕ ನಿಗಧಿಯಾಗುತ್ತಿದ್ದಂತೆ ಆಡಳಿತರೂಢಿ ಕಾಂಗ್ರೆಸ್ ನಲ್ಲಿ ಭಾರೀ ಬದಲಾವಣೆಗಳಾಗುತ್ತಿವೆ. ಪಕ್ಷದ ಒಳಗೊಳಗೇ ಕತ್ತಿಮಸೆಯುತ್ತಿದ್ದ ಮುಖಂಡರೆಲ್ಲಾ ಇದೀಗ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ವಿರುದ್ಧ ಸಿಡಿದೆದ್ದಿದ್ದು , ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ತೀವ್ರ ಹಿನ್ನಡೆಯಾಗುವ ಸಾಧ್ಯತೆ ಇದೆ.!

ಚುನಾವಣೆ ಸಮೀಪಿಸುತ್ತಿದ್ದಂತೆ ಟಿಕೆಟ್ ಹಂಚಿಕೆ ವಿಚಾರದಲ್ಲಿ ಎಲ್ಲಾ ರಾಜಕೀಯ ಪಕ್ಷಗಳಲ್ಲೂ ಭಿನ್ನಾಭಿಪ್ರಾಯಗಳು ಮೂಡುವುದು ಸಹಜ. ಆದರೆ ಪಕ್ಷದ ಹಿರಿಯರ ಮಾತಿನಂತೆ ನಡೆದುಕೊಂಡ ಕಾರಣ ಎಲ್ಲವೂ ಸರಿಯಾದ ರೀತಿಯಲ್ಲಿ ಮುಂದುವರಿಯುತ್ತಾ ಹೋಗುತ್ತದೆ. ಆದರೆ ಇದೀಗ ಕಾಂಗ್ರೆಸ್ ನಲ್ಲಿ ಎದ್ದಿರುವ ಭಿನ್ನಾಭಿಪ್ರಾಯ ಪಕ್ಷದ ಸೋಲಿಗೆ ಕಾರಣವಾಗುವುದು ಖಚಿತ.!

ಆಪ್ತ ಸಚಿವನ ವಿರುದ್ಧ ಸಿದ್ದರಾಮಯ್ಯ ಗರಂ..!

ಅಧಿಕಾರ ಹಿಡಿದು ಐದು ವರ್ಷಗಳು ಮುಗಿಯುತ್ತಾ ಬಂದರು ಈವರೆಗೆ ರಾಜ್ಯದ ಹಿತಾಸಕ್ತಿಯ ಬಗ್ಗೆ ಚೂರು ಮುತುವರ್ಜಿ ವಹಿಸದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇದೀಗ ಚುನಾವಣೆ ಸಮೀಪಿಸುತ್ತಿದ್ದಂತೆ ಭಾರೀ ಗೊಂದಲಕ್ಕೀಡಾಗಿದ್ದಾರೆ. ಮತ್ತೊಮ್ಮೆ ಅಧಿಕಾರ ಹಿಡಿಯಲು ಹರಸಹಾಸ ಪಡುತ್ತಿರುವ ಸಿದ್ದರಾಮಯ್ಯನವರು ತಮ್ಮ ಸಚಿವರ ಮೇಲೆ ಇದೀಗ ಏಕಾಏಕಿ ಕಿಡಿಕಾರಲು ಆರಂಭಿಸಿದ್ದಾರೆ. ಸಿಎಂ ಸಿದ್ದರಾಮಯ್ಯನವರ ಆಪ್ತನೂ, ರಾಜ್ಯ ಸರಕಾರದ ಸಮಾಜ ಕಲ್ಯಾಣ ಇಲಾಖೆಯ ಸಚವರಾದ ಆಂಜನೇಯರನ್ನು ಇಂದು ಸಿದ್ದರಾಮಯ್ಯನವರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಸಚಿವ ಸ್ಥಾನ ನೀಡಿದ್ದರೂ ಕೂಡ ಪಕ್ಷ ಸಂಘಟನೆಯ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. ತಮ್ಮದೇ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡಲಾಗದಿದ್ದರೆ, ರಾಜ್ಯ ಸಂಪುಟದಲ್ಲಿ ಯಾವ ರೀತಿ ಕರ್ತವ್ಯ ನಿರ್ವಹಿಸುತ್ತೀರಿ ಎಂದು ಕಿಡಿಕಾರಿದರು.

ಜಿಲ್ಲೆಯ ನಾಯಕರಲ್ಲೂ ಒಗ್ಗಟ್ಟು ಕಾಣಿಸುತ್ತಿಲ್ಲ, ರಾಜ್ಯ ಸರಕಾರದಲ್ಲಿ ಜವಾಬ್ದಾರಿ ಇದ್ದರೂ ಈ ರೀತಿ ಬೇಜವಾಬ್ದಾರಿಯಿಂದ ನಡೆದುಕೊಳ್ಳುವವರು ನಮ್ಮ ಪಕ್ಷಕ್ಕೆ ಅವಶ್ಯಕತೆ ಇಲ್ಲ ಎಂದು ಹೇಳಿಕೊಂಡಿದ್ದಾರೆ. ಈ ಹಿಂದೆ ಸಚಿವ ಆಂಜನೇಯನ ಮೇಲೆ ಗಂಭೀರ ಆರೋಪ ಕೇಳಿಬಂದಾಗ , ಸ್ವತಃ ಕಾಂಗ್ರೆಸ್ ನಾಯಕರೇ ಸಚಿವರ ಮೇಲೆ ಅಸಮಧಾನಗೊಂಡಿದ್ದರು. ಆದರೆ ಸಿಎಂ ಸಿದ್ದರಾಮಯ್ಯನವರು ಮಾತ್ರ ಸಚಿವ ಆಂಜನೇಯನ ಪರವಾಗಿಯೇ ಬ್ಯಾಟಿಂಗ್ ಮಾಡಿದ್ದು, ಆರೋಪಗಳನ್ನೆಲ್ಲಾ ಮುಚ್ಚಿ ಹಾಕಿದ್ದರು.!

ಈಶ್ವರ್ ಖಂಡ್ರೆ ಮೇಲೂ ಸಿಎಂ ಕಿಡಿ..!

ಬೀದರ್ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ್ ಖಂಡ್ರೆ ಇಂದು ಸಿದ್ದರಾಮಯ್ಯ ನಿರ್ಧಾರದ ಬಗ್ಗೆ ವಿರುದ್ಧವಾಗಿ ಮಾತನಾಡಿದ ಪ್ರಸಂಗವೂ ನಡೆಯಿತು. ಲಿಂಗಾಯತ ಮತ್ತು ವೀರಶೈವ ಧರ್ಮ ವಿಭಜನೆಯಿಂದ ರಾಜಕೀಯ ಲಾಭ ಗಳಿಸುವ ತಂತ್ರ ಹೂಡಿದ್ದ ಸಿದ್ದರಾಮಯ್ಯನವರಿಗೆ ಇದೀಗ ಭಯ ಹುಟ್ಟಿಕೊಂಡಿದೆ. ಯಾಕೆಂದರೆ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಇಂದು ಕಾಂಗ್ರೆಸ್ ಕಚೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ.ಜಿ ಪರಮೇಶ್ವರ್ ಸಮ್ಮುಖದಲ್ಲಿ ಚುನಾವಣಾ ಟಿಕೆಟ್‌ ಹಂಚಿಕೆಯ ವಿಚಾರವಾಗಿ ಚರ್ಚೆ ನಡೆಯುತ್ತಿದ್ದ ವೇಳೆ ಮಾತನಾಡಿದ ಸಚಿವರು , ‘ಲಿಂಗಾಯತ ಮತ್ತು ವೀರಶೈವ ಧರ್ಮ ವಿಭಜನೆಯಿಂದ ಪಕ್ಷಕ್ಕೆ ಲಾಭಕ್ಕಿಂತ ಹೆಚ್ಚು ನಷ್ಟವೇ ಆಗಲಿದೆ. ಕಳೆದ ಬಾರಿ ಆರರಲ್ಲಿ ನಾಲ್ಕು ಕ್ಷೇತ್ರಗಳನ್ನು ಗೆದ್ದಿದ್ದೇವೆ. ಆದರೆ ಈ ಬಾರಿ ಸೋಲಿನ ಆತಂಕ ಹೆಚ್ಚಾಗಿದೆ’ ಎಂದರು.

ಸಚಿವರ ಈ ಮಾತು ಕೇಳಿ ಕೋಪಗೊಂಡ ಸಿದ್ದರಾಮಯ್ಯ, ‘ಸರಕಾರ ಅಷ್ಟೆಲ್ಲಾ ಜನಪ್ರಿಯ ಯೋಜನೆಗಳನ್ನು ನೀಡಿದೆ. ಲಿಂಗಾಯತ ಮತ್ತು ವೀರಶೈವರ ಬೇಡಿಕೆ ಈಡೇರಿಸಿ ಅಲ್ಪಸಂಖ್ಯಾತ ಮಾನ್ಯತೆ ನೀಡಿದ್ದೇವೆ. ಹೀಗಿದ್ದರೂ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವುದಿಲ್ಲ ಎಂದರೆ ಏನು ಅರ್ಥ?’ ಎಂದು ಕಿಡಿಕಾರಿದ್ದಾರೆ. ಇದಕ್ಕೆ ವಿವರಣೆ ನೀಡಿದ ಖಂಡ್ರೆ, ‘ ಲಿಂಗಾಯತ ಮತ್ತು ವೀರಶೈವರು ಯಾರು ಎಂಬೂದೇ ಇನ್ನೂ ಸ್ಪಷ್ಟತೆ ಇಲ್ಲ. ಲಿಂಗಾಯತರ ಪ್ರತ್ಯೇಕ ಸ್ಥಾನಕ್ಕಾಗಿ ಹೋರಾಟ ನಡೆಸಿದೆಂ ಬಿ ಪಾಟೀಲ್ ಕ್ಷೇತ್ರದಲ್ಲೇ ರಾಜ್ಯ ಸರಕಾರದ ವಿರುದ್ಧ ಸಾಕಷ್ಟು ಗೊಂದಲಗಳಿವೆ. ಸ್ವತಃ ಪಾಟೀಲ್ ರವರೇ ಈ ಬಾರಿ ಗೆಲ್ಲುವುದು ಅನುಮಾನ’ ಎಂದ ಸಚಿವ, ಈ ಬಾರಿ ಕಾಂಗ್ರೆಸ್ ಗೆ ಸೋಲಿನ ಆತಂಕ ಹೆಚ್ಚಿದೆ ಎಂದು ಹೇಳಿದರು. ಇದನ್ನೆಲ್ಲಾ ಕೇಳಿಕೊಂಡ ಸಿದ್ದರಾಮಯ್ಯನವರು ಸಚಿವ ಈಶ್ವರ್ ಖಂಡ್ರೆ ಮೇಲೆ ಗರಂ ಆಗಿದ್ದು, ಕಿಡಿಕಾರಿದ್ದಾರೆ.!

ಸಿದ್ದರಾಮಯ್ಯನವರ ಎಲ್ಲಾ ನಿರ್ಧಾರಗಳಿಗೂ ರಾಜ್ಯದ ಜನತೆ ಅಸಮಧಾನಗೊಂಡಿದ್ದು , ಇದರ ಪರಿಣಾಮ ಚುನಾವಣೆಯ ಮೇಲೆ ಯಾವ ರೀತಿಯಲ್ಲಿ ಬೀರುತ್ತದೆ ಎಂಬುದು ಹೇಳಲಾಗುತ್ತಿಲ್ಲ ಎಂದ ಖಂಡ್ರೆ, ಅಶೋಕ್ ಖೇಣಿ ಕಾಂಗ್ರೆಸ್ ಸೇರ್ಪಡೆಗೊಂಡ ಕೂಡಲೇ ಟಿಕೆಟ್ ನೀಡಲು ಮುಂದಾಗಿದ್ದು , ಬೀದರ್ ದಕ್ಷಿಣದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ಧರಂಸಿಂಗ್ ಅವರ ಅಳಿಯ ಚಂದ್ರಸಿಂಗ್ ಈಗಾಗಲೇ ತಯಾರಿ ನಡೆಸಿದ್ದಾರೆ. ಆದರೆ ಇದೀಗ ಸರಕಾರ ಖೇಣಿಗೆ ಟಿಕೆಟ್ ನೀಡಲು ಮುಂದಾಗಿದ್ದು ಪಕ್ಷಕ್ಕೆ ಹಿನ್ನಡೆಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಅಭಿಪ್ರಾಯ ಪಟ್ಟರು.

ಕಾಂಗ್ರೆಸ್ ನಲ್ಲಿ ಟಿಕೆಟ್ ವಿಚಾರವಾಗಿ ಭಾರೀ ಪೈಪೋಟಿ ನಡೆಸುತ್ತಿದ್ದು,ಪಕ್ಷದ ನಾಯಕರಲ್ಲೇ ಒಳಜಗಳ ಆರಂಭವಾಗಿದೆ. ಸಿದ್ದರಾಮಯ್ಯನವರ ವಿರುದ್ಧ ಕಾಂಗ್ರೆಸ್ ನಾಯಕರು ಅಸಮಧಾನಗೊಂಡು ಈಗಾಗಲೇ ಪಕ್ಷ ತೊರೆದು ಬೇರೆ ಪಕ್ಷಗಳಿಗೆ ಸೇರ್ಪಡೆಗೊಳ್ಳುತ್ತಿದ್ದು , ಇವೆಲ್ಲದರ ಪರಿಣಾಮ ಚುನಾವಣೆಯ ಮೇಲೆ ಬೀರುವುದು ಖಂಡಿತ..!

–ಅರ್ಜುನ್

 

Tags

Related Articles

Close