ಪ್ರಚಲಿತ

ಯೋಗಿ ಆದಿತ್ಯನಾಥರ ಪ್ರಭಾವದಿಂದ ಸಂಪೂರ್ಣವಾಗಿ ಬದಲಾಗುತ್ತಿರುವ ಉತ್ತರ ಪ್ರದೇಶ!! ಗೋರಖ್‍ಪುರದ ಮದರಾಸದಲ್ಲಿ ಸಂಸ್ಕೃತ ಪಾಠ!!

ನಿಜವಾಗಿಯೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಷ್ಟು ಕಠಿಣವಾಗಿರುವ ರಾಜಕೀಯ ಸಂತರೊಬ್ಬರು ನಿಮಗೆಲ್ಲೂ ಸಿಗಲಾರರು!! ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿ ಸ್ಥಾನ ಅಲಂಕರಿಸುತ್ತಲೇ ದೇಶದ ಬುದ್ದಿಜೀವಿಗಳು ಅರಚಾಡಲು ಶುರು ಮಾಡಿಕೊಂಡಿದ್ದಂತೂ ಅಕ್ಷರಶಃ ನಿಜ. ಹಿಂದೂ ಸಂತನಿಗೆ ರಾಜಕೀಯ ಪಟ್ಟ ನೀಡಿದರೆ ರಾಜ್ಯದ ಮುಸ್ಲಿಮರು ರಾಜ್ಯ ಬಿಟ್ಟು ಹೋಗಬೇಕಾಗುತ್ತದೆ ಎಂದು ಸುಳ್ಳು ಪ್ರಚಾರ ಮಾಡಿದ್ದವರಿಗೆ ಮೋದಿಯ ಒಂದೊಂದು ನಡೆಯೂ ಬುದ್ಧಿಜೀವಿಗಳು ಬಾಯಿ ಮುಚ್ಚಿ ಕೂರುವಂತೆ ಮಾಡಿತ್ತು!!

ಆದರೆ ಉತ್ತರ ಪ್ರದೇಶದಲ್ಲಿ ಹೊಸ ಕ್ರಾಂತಿಯನ್ನೇ ಸೃಷ್ಟಿಸಿರುವ ಯೋಗಿ ಆದಿತ್ಯನಾಥರು ತನ್ನ ಖಡಕ್ ಆದೇಶಗಳ ಮೂಲಕ ಭಯೋತ್ಪಾದನೆಯನ್ನು ಮಟ್ಟ ಹಾಕಲು ರಣತಂತ್ರ ಹೆಣೆಯುತ್ತಲೇ ಇತ್ತ ನಕಲಿ ಮದರಸಾಗಳಿಗೆ ಬೀಗ ಜಡಿಯುವ ಮೂಲಕ ಮತ್ತೆ ಮುಸ್ಲಿಂ ವಿರೋಧಿ ಎನ್ನುವ ಪಟ್ಟವನ್ನು ರಾಜಕೀಯ ವಿರೋಧಿಗಳು ನೀಡಿಯೇ ಬಿಟ್ಟರು!! ಈ ಮಹಾ ಸಂತನನ ನಿಂದನೆಗೆ ಕೆಲವರ ಬಾಯಿ ಮುಚ್ಚಿಸಲು ಈಗ ಮುಸ್ಲಿಮರೇ ಪಣತೊಟ್ಟಿರುವ ಹಾಗೆ ಕಾಣುತ್ತಿದೆ!! ಇದೀಗ ಗೋರಖ್ ಪುರದ ಮದರಾಸದಲ್ಲಿ ಮಹತ್ತರ ಬದಲಾವಣೆಯಾಗಿರುವುದನ್ನು ಕಂಡ ಜನರು ಮೂಗಿಗೆ ಬೆರಳಿಡುವ ಕಾಲ ಬಂದಿದೆ!!

Image result for yogi adityanath

 

ಗೋರಖ್‍ಪುರ ಮದರಾಸದಲ್ಲಿ ಸಂಸ್ಕøತ ಪಾಠ!!

ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದಾಗಿನಿಂದ ಹಲವು ಮಹತ್ತರ ಬದಲಾವಣೆಗಳಾಗುತ್ತಿವೆ. ಕೋಮುಗಲಭೆ, ಕೊಲೆ, ಸುಲಿಗೆಗಳಿಂದ ನಿತ್ಯ ಉತ್ತರ ಪ್ರದೇಶ ತತ್ತರಿಸಿ ಹೋಗಿತ್ತು. ಕೋಮು ಸೌಹಾರ್ದತೆಯಂತೂ ಹದಗಟ್ಟಿತ್ತು. ಆದರೆ ಇದೀಗ ಯೋಗಿ ಎಲ್ಲ ಸಮುದಾಯದವರಿಗೆ ನೀಡುತ್ತಿರುವ ಅಭಯದಿಂದ ಹೊಸ ಬದಲಾವಣೆಗಳಾಗುತ್ತಿದ್ದು, ಗೋರಖ್‍ಪುರದಲ್ಲಿ ಮುಸ್ಲಿಂ ಮಕ್ಕಳಿಗೆ ಧಾರ್ಮಿಕ ಪಾಠ ಬೋಧಿಸುವ ಮದರಸಾದಲ್ಲಿ ಸಂಸ್ಕೃತವನ್ನು ಬೋಧಿಸಲು ಆರಂಭಿಸಲಾಗಿದೆ.

ಸಂಸ್ಕøತವನ್ನು ಕೊಂಡಾಡಿದ ಮದರಸ ವಿದ್ಯಾರ್ಥಿಗಳು!!

ಘೋರಖಪುರದ ಮದರಸಾವೊಂದರಲ್ಲಿ ಮಕ್ಕಳಿಗೆ ಹಿಂದಿ, ಇಂಗ್ಲಿಷ್ ಮತ್ತು ಉರ್ದು ಭಾಷೆಯೊಂದಿಗೆ ಸಂಸ್ಕೃತಿವನ್ನು ಬೋಧಿಸಲಾಗುತ್ತಿದೆ. ಇಲ್ಲಿನ ದಾರುಲ್ ಉಲೂಮ್ ಹುಸೈನಿಯಾ ಮದರಸಾದಲ್ಲಿ ಈ ಕ್ರಾಂತಿಕಾರಿ ನಿರ್ಧಾರ ಕೈಗೊಂಡಿದ್ದು, ಹೊಸ ಕಲಿಕೆಯನ್ನು ಮಕ್ಕಳು ಖುಷಿಯಿಂದ ಆಹ್ವಾನಿಸಿದ್ದಾರೆ. `ಸಂಸ್ಕೃತ ಕಲಿಯುವುದು ನಮಗೆ ಬಹಳ ಸಂತಸ ಮೂಡಿಸಿದೆ. ನಾವು ಎಲ್ಲ ಭಾಷೆಗಳಂತೆಯೇ ಸಂಸ್ಕೃತವನ್ನೂ ಸಂಭ್ರಮದಿಂದ ಕಲಿಯುತ್ತೇವೆ’ ಎನ್ನುತ್ತಾರೆ ಇಲ್ಲಿನ ಮಕ್ಕಳು.

`ಇಂಗ್ಲಿಷ್, ಹಿಂದಿ, ವಿಜ್ಞಾನ, ಗಣಿತ, ಉರ್ದು ಮತ್ತು ಅರಾಬಿಕ್ ನಂತೆಯೇ ಸಂಸ್ಕೃತವನ್ನೂ ಕಲಿಸಲಾಗುತ್ತಿದೆ. ಐದನೇ ತರಗತಿಗಿಂತ ಮೇಲ್ಪಟ್ಟ ಮಕ್ಕಳಿಗೆ ಸಂಸ್ಕೃತ ಕಲಿಸುತ್ತಿರುವ ಬಗ್ಗೆ ಈ ಮಕ್ಕಳ ಪಾಲಕರಿಗೂ ಬಹಳ ಹೆಮ್ಮೆಯಿದೆ” ಎಂದು ಮದರಸಾದ ಪ್ರಿನ್ಸಿಪಲ್ ಹಫಿಜ್ ನಜಾರ್ ಅಲಂ ತಿಳಿಸಿದ್ದಾರೆ. ಸಂಸ್ಕೃತಿ ಬೋಧನೆಯಿಂದ ಕೋಮುಭಾವನೆ ತೊಡೆದು ಹಾಕಿ, ಸೌಹಾರ್ದದ ವಾತಾವರಣ ನಿರ್ಮಿಸಬಹುದು ಎಂಬುದು ಮದರಸಾದ ಶಿಕ್ಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥರು ಮುಖ್ಯಮಂತ್ರಿ ಆದಾಗಿನಿಂದ ಬದಲಾವಣೆಯ ಮಹಾಪೂರವೇ ನಡೆದಿದೆ ಅಂತಾನೇ ಹೇಳಬಹುದು!! ಯಾಕೆಂದರೆ ಮೊದಲು ಉತ್ತರ ಪ್ರದೇಶ ರೌಡಿಗಳ ನಾಡಾಗಿತ್ತು!! ಇದೀಗ ಉತ್ತರಪ್ರದೇಶದ ಬದಲಾವಣೆ ಹೇಳತೀರದು!! ಇದಕ್ಕೆಲ್ಲಾ ಮಹಾ ಸಂತ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರೇ ಕಾರಣ!!

ಪವಿತ್ರ

Tags

Related Articles

Close