ಪ್ರಚಲಿತ

ಈ ಶಾಲೆಯಲ್ಲಿ ಹೆಣ್ಣು ಮಕ್ಕಳು ಹೂ ಮುಡಿಯುವಂತಿಲ್ಲ, ವಿಭೂತಿ ಹಚ್ಚುವಂತಿಲ್ಲ!! ಹಿಂದೂ ವಿರೋಧಿ ನೀತಿಯನ್ನು ಅನುಸರಿಸಿದ ಆ ಶಾಲೆ ಯಾವುದು ಗೊತ್ತಾ?!

ದೇಶಾದ್ಯಂತ ಸರ್ಕಾರಿ ಶಾಲೆಗಳಿಗೆ ಸೆಡ್ಡು ಹೊಡೆದಂತೆ ಖಾಸಗಿ ಶಾಲಾ ಕಾಲೇಜುಗಳು ತಲೆ ಎತ್ತಿ ನಿಂತಿರುವ ಜೊತೆಗೆ ಧರ್ಮಕ್ಕೆ ಸಂಬಂಧಿಸಿದಂತೆ ಖಾಸಗಿ ಶಾಲಾ ಕಾಲೇಜುಗಳು ರಾರಾಜಿಸುತ್ತಿದೆ!! ಆದರೆ ಸರ್ಕಾರಿ ಶಾಲೆಗಳಲ್ಲಿ ಸಿಗುವ ಶಿಕ್ಷಣಕ್ಕಿಂತ ಖಾಸಗಿ ಶಾಲಾ ಕಾಲೇಜುಗಳಲ್ಲೇ ಸಿಗುವ ಶಿಕ್ಷಣವೇ ಅತ್ಯುತ್ತಮ ಶಿಕ್ಷಣ ಎಂದು ಭಾವಿಸುವ ಅದೆಷ್ಟೋ ಪೋಷಕರಿಗೆ ಅನ್ಯಧರ್ಮದ ಶಾಲೆಯೊಂದು ಬಿಗ್ ಶಾಕ್ ನೀಡಿದೆ!!

ದೇಶಾದ್ಯಂತ ಇಸ್ಲಾಮಿಕ್ ಹಾಗೂ ಕ್ರಿಶ್ಚಿಯನ್ ಶಿಕ್ಷಣ ಸಂಸ್ಥೆಗಳು ತುಂಬಿ ತುಳುಕಾಡುತ್ತಿದ್ದು, ಅನ್ಯ ಧರ್ಮೀಯರನ್ನು ಶಾಲೆಗೆ ಸೇರಿಸಿಕೊಂಡು, ಉತ್ತಮ ಶಿಕ್ಷಣವನ್ನು ಕಲ್ಪಿಸುವ ಭರವಸೆಯನ್ನೊಡ್ಡಿ ಹಿಂದೂಗಳನ್ನು ಮರಳು ಮಾಡುವ ಈ ಸಂಸ್ಥೆಗಳು ಮಾಡುತ್ತಿರುವ ಅವಾಂತರಗಳು ಅನ್ಯಧರ್ಮಿಯರನ್ನು ಕೆರಳಿಸುವಂತೆ ಮಾಡಿದೆ!! ಹೌದು… ಇಸ್ಲಾಮಿಕ್ ಹಾಗೂ ಕ್ರಿಶ್ಚಿಯನ್ ಶಿಕ್ಷಣ ಸಂಸ್ಥೆಗಳು ಮಕ್ಕಳಿಗೆ ಶಿಕ್ಷಣ ನೀಡುತ್ತಿವೆಯೋ ಅಥವಾ ಧರ್ಮಬೋಧನೆ ಮಾಡುವ ಮೂಲಕ ಮತಾಂತರಕ್ಕೆ ಪ್ರಚೋದಿಸುತ್ತಿವೆಯೋ ಎಂಬ ಅನುಮಾನ ಇದೀಗ ಮೂಡ ತೊಡಗಿದೆ!!

ಹೌದು…. ಪಾಶ್ಚಾತ್ಯ ಕ್ರಮಗಳ, ವಿಧಿ-ವಿಧಾನಗಳ ಅನುಕರಣೆಯಲ್ಲಿ ನಾ ಮುಂದು ತಾ ಮುಂದು ಎಂದು ಶಿಕ್ಷಣ ಸಂಸ್ಥೆಗಳು ಪೈಪೆÇೀಟಿಗೆ ಬಿದ್ದಿವೆ. ಕೇವಲ ಆಂಗ್ಲ ಭಾಷೆಯ ಕಲಿಕೆಯಿಂದ ಮಕ್ಕಳು ಸುಶಿಕ್ಷಿತರಾಗುತ್ತಾರೆ ಎಂಬುದು ಬಹುತೇಕ ಪೆÇೀಷಕರ ಅನಿಸಿಕೆಯಾಗಿದೆ, ಇದನ್ನು ಮನಗಂಡ ಹಲವಾರು ಖಾಸಗಿ ಶಾಲೆಗಳು ಆಂಗ್ಲ ಭಾಷೆಯನ್ನು ಮಕ್ಕಳ ಮೇಲೆ ಹೇರುವುದರ ಮೂಲಕ ಜನಪ್ರಿಯವಾಗುತ್ತಿವೆ. ಆದರೆ ಲವ್ ಜಿಹಾದ್ ನಂತಹ ಕೃತ್ಯಗಳು, ಮತಾಂತರ ಪ್ರಕ್ರಿಯೆಗಳು ದಿನೇ ದಿನೇ ಹೆಚ್ಚಾಗುತ್ತಿದೆಯಲ್ಲದೇ ಅನ್ಯ ಧರ್ಮಿಯ ಶಾಲೆಗಳ ಹಾವಳಿಗಳು ಹೆಚ್ಚಾಗುತ್ತಲೇ ಇದೆ.

ಇಸ್ಲಾಮಿಕ್ ಹಾಗೂ ಕ್ರಿಶ್ಚಿಯನ್ ಶಿಕ್ಷಣ ಸಂಸ್ಥೆಗಳು ಅನ್ಯಧರ್ಮಿಯರಿಗೆ ಶಿಕ್ಷಣ ನೀಡುತ್ತಿವೆಯೋ ಅಥವಾ ಧರ್ಮಬೋಧನೆ ಮಾಡುವ ಮೂಲಕ ಮತಾಂತರಕ್ಕೆ ಪ್ರಚೋದಿಸುತ್ತಿವೆಯೋ ಎಂಬ ಅನುಮಾನ ಮೂಡುವುದು ಸಹಜ!! ಹೌದು… ತಮಿಳುನಾಡಿನ ಅರಾನಿ ಬಳಿಯ ದೇವಿಕಾಪುರಂನಲ್ಲಿ ಕ್ಲೂನಿ ಎಂಬ ಇಸ್ಲಾಮಿಕ್ ಆಡಳಿತ ಮಂಡಳಿ ನೇತೃತ್ವದ ಶಾಲೆಯಲ್ಲಿ ಹಿಂದೂ ಬಾಲಕಿಯರು ಹಣೆಗೆ ವಿಭೂತಿ ಹಚ್ಚಿಕೊಂಡು, ತಲೆಗೆ ಹೂ ಮುಡಿಯುವುದೇ ದೊಡ್ಡ ಅಪರಾಧ ಎನ್ನುವ ಪರಿಸ್ಥಿತಿ ಇದೀಗ ನಿರ್ಮಾಣಗೊಂಡಿದೆ!! ಹಾಗಾಗಿ ತಮ್ಮ ಧರ್ಮದ ಬಗ್ಗೆ ಆಚರಣೆ ಮಾಡುವುದನ್ನೇ ನಿಷೇಧಿಸಿರುವ ಅನ್ಯ ಶಿಕ್ಷಣ ಸಂಸ್ಥೆಗಳಿಗೆ ಅದೇನು ಹೇಳಬೇಕೋ ನಾ ಕಾಣೆ!!

ದೇವಿಕಾಪುರಂನಲ್ಲಿ ಕ್ಲೂನಿ ಎಂಬ ಇಸ್ಲಾಮಿಕ್ ಆಡಳಿತ ಮಂಡಳಿ ನೇತೃತ್ವದ ಶಾಲೆಯಲ್ಲಿ ಹಿಂದೂ ಬಾಲಕಿಯರು ಹಣೆಗೆ ವಿಭೂತಿ ಹಚ್ಚಿಕೊಂಡು, ತಲೆಗೆ ಹೂ ಮುಡಿದುಕೊಂಡು ಹೋಗಿದ್ದಕ್ಕೆ ಶಿಕ್ಷೆ ವಿಧಿಸಿರುವ ಸುದ್ದಿಯನ್ನು ಕೇಳಿ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ!! ಇಬ್ಬರು ಹುಡುಗಿಯರನ್ನು ಕರೆಸಿದ ಶಾಲೆಯ ಶಿಕ್ಷಕಿಯರು ಬಲವಂತವಾಗಿ ಹಣೆಯ ಮೇಲಿನ ವಿಭೂತಿ ಅಳಿಸಿ ಹಾಕಿದ್ದಾರೆ. ಅಷ್ಟೇ ಅಲ್ಲದೇ ತಲೆಯಲ್ಲಿ ಮುಡಿದ ಹೂ ಕಿತ್ತುಹಾಕುವ ಜತೆಗೆ ಕೂದಲು ಹಿಡಿದು ಎಳೆದಾಡಿದ್ದಾರಲ್ಲದೇ ಇನ್ನೊಮ್ಮೆ ಹೀಗೆ ಮಾಡಬಾರದು ಎಂದು ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ತಮಿಳುನಾಡಿನಲ್ಲಿ ಹಿಂದೂಗಳು ಪಂಗುಣಿ ಎಂಬ ಹಬ್ಬವನ್ನು ಆಚರಿಸುವ ಸಂಪ್ರದಾಯವಿದ್ದು, ಎಲ್ಲ ಮಹಿಳೆಯರು, ಬಾಲಕಿಯರು ತಿಂಗಳು ಪೂರ್ತಿ ವಿಭೂತಿ, ಹಚ್ಚಿಕೊಳ್ಳುವುದು, ಹೂ ಮುಡಿದುಕೊಳ್ಳುವುದು ನಿಯಮವಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಶಿಕ್ಷಣಕ್ಕೂ, ಸಂಪ್ರದಾಯಕ್ಕೂ ಅಜಗಜಾಂತರ ವ್ಯತ್ಯಾಸ ಇದ್ದರೂ ಕೂಡ ಶಿಕ್ಷಕಿಯರ ಈ ಪ್ರವೃತಿ ನಿಜಕ್ಕೂ ಕೂಡ ಬೇಸರ ತರಿಸಿದೆ!! ಈಗಾಗಲೇ ಕ್ರಿಶ್ಚಿಯನ್ ಶಿಕ್ಷಣ ಸಂಸ್ಥೆಗಳಲ್ಲಿ, ವಿದ್ಯಾರ್ಥಿನಿಯರು, ಬಳೆ, ಕುಂಕುಮ, ಬಿಂದಿ, ಮೆಹಂದಿ ಇಡುವುದನ್ನೇ ನಿಷೇಧಿಸಿರುವ ಜತೆಗೆ ಹೂ ಮೂಡಿಯುವುದು ಕೂಡ ಅಪರಾಧ ಎನ್ನುವಂತೆ ದಂಡ ವಿಧಿಸುವ ಅದೆಷ್ಟೋ ಅನ್ಯ ಧರ್ಮಿಯಾ ಸಂಸ್ಥೆಗಳು ಮಕ್ಕಳನ್ನು ತಮ್ಮಡೆಗೆ ಸೆಳೆಯುವ ತಂತ್ರಗಳನ್ನು ಮಾಡುತ್ತಿದ್ದಾರೆ ಎನ್ನುವ ಗುಮಾನಿಯೂ ಎಲ್ಲೆಡೆ ಕೇಳಿ ಬರುತ್ತಿದೆ!!

ಶಾಲೆ ಆಡಳಿತ ಮಂಡಳಿಯ ಕುರಿತು ಬಾಲಕಿಯ ಪೆÇೀಷಕಿಯೊಬ್ಬರು ಮಾತನಾಡಿದ್ದು, ಮೊದಲ ದಿನ ನನ್ನ ಮಗಳು ಶಾಲೆಗೆ ಹೋಗುವಾಗ ಹಣೆಗೆ ವಿಭೂತಿ ಹಚ್ಚಿಕೊಂಡು, ಹೂ ಮುಡಿದು ಹೋಗಿದ್ದಾಳೆ. ಶಾಲೆ ಆಡಳಿತ ಮಂಡಳಿ ನಾಳೆಯಿಂದ ಹೀಗೆ ಬರಬಾರದು ಎಂದು ಸೂಚಿಸಿದೆ. ಆದರೆ ಮರುದಿನವೂ ಹಾಗೆಯೇ ಹೋದ ಕಾರಣ ಕುಪಿತಗೊಂಡು ಮಗಳಿಗೆ ಶಿಕ್ಷೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

ಹೂ, ಬಳೆ, ಕುಂಕುಮ ಇದು ಹಿಂದೂ ಧರ್ಮದ ಪ್ರತೀಕವಾಗಿದ್ದು, ಪ್ರಬುದ್ಧ ಸಂಸ್ಕøತಿಯನ್ನು ತನ್ನ ಮಡಿಲಿನಲ್ಲಿ ಇಟ್ಟುಕೊಂಡರುವಂತಹ ಅತೀ ಶ್ರೇಷ್ಠ ಧರ್ಮಗಳಲ್ಲೊಂದು!!ಸಾಕಷ್ಟು ವಿದೇಶಿಯರೇ ಹಿಂದೂ ಧರ್ಮಕ್ಕೆ ಮನಸೋತು ಹಿಂದೂ ಧರ್ಮದ ಆಚಾರ ವಿಚಾರಗಳನ್ನು ಕಲಿಯುತ್ತಿರಬೇಕಾದರೆ, ಭಾರತದಲ್ಲಿರುವ ಭಾರತೀಯರೇ ಹಿಂದೂ ಧರ್ಮದ ಆಚಾರ ವಿಚಾರಗಳನ್ನು ತಳ್ಳಿ ಹಾಕುತ್ತಿರುವುದನ್ನು ನೋಡಿದರೆ ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳಿಗೆ ಶಿಕ್ಷಣವನ್ನು ಭೋದಿಸುವ ಬದಲು ಧರ್ಮ ಶಿಕ್ಷಣದ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆಯೇ ಎನ್ನುವ ಪ್ರಶ್ನೆ ಇದೀಗ ಮೂಡ ತೊಡಗಿದೆ!!

source: https://tulunadunews.com/tnn12051

– ಅಲೋಖಾ

Tags

Related Articles

Close