ಪ್ರಚಲಿತ

ಈ ಮೂವರೊಳಗೆ ಯಾರು ಹಿತವರು? ಬಯಲಾಯಿತು ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಕರ್ನಾಟಕದ ನಾಯಕರ ಪಟ್ಟಿ!!

ಹೌದು…. ಕರ್ನಾಟಕದ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ರಾಜಕೀಯ ನಾಯಕರುಗಳು ತಮ್ಮ ತಮ್ಮ ಛಾಪನ್ನು ಹೆಚ್ಚಿಸುಕೊಳ್ಳುವ ಭರದಲ್ಲಿ ಅತ್ಯಂತ ಪ್ರತಿಷ್ಠಿತ ಚುನಾವಣೆಯಲ್ಲಿ ಗೆದ್ದೇ ತೀರಬೇಕೆಂದು ಹಠ ಹೊತ್ತು, ರಾಜ್ಯದ ಮೂಲೆ ಮೂಲೆಯಲ್ಲಿಯೂ ಎಲ್ಲಾ ಪಕ್ಷದವರು ಚುನಾವಣಾ ಪ್ರಚಾರದಲ್ಲಿ ತೊಡಗಿರುವ ವಿಚಾರ ತಿಳಿದೆ ಇದೆ!! ಆದರೆ ರಾಜ್ಯದ ಯಾವ ರಾಜಕೀಯ ನಾಯಕ, ಅತೀ ಹೆಚ್ಚು ಅಭಿಮಾನಿ ಬಳಗವನ್ನು ಹೊಂದುವ ಮೂಲಕ ರಾಜ್ಯದಲ್ಲಿ ಮೇಲಗೈ ಸಾಧಿಸಿದ್ದಾರೆ ಎನ್ನುವ ವಿಚಾರ ನಿಮಗೆ ಗೊತ್ತೇ??

ಈಗಾಗಲೇ ರಾಜ್ಯ ರಾಜಕೀಯ ರಂಗದಲ್ಲಿ ಎಲ್ಲಾ ರಾಜಕೀಯ ಪಕ್ಷಗಳೂ ತಮ್ಮ ತಮ್ಮ ಪಕ್ಷಗಳನ್ನು ಚುನಾವಣೆಗೆ ಸಜ್ಜುಗೊಳಿಸುತ್ತಿದೆ. ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಬೃಹತ್ ಪರಿವರ್ತನಾ ಯಾತ್ರೆಗೆ ಪ್ರತಿ ವಿಧಾನ ಸಭಾ ಕ್ಷೇತ್ರಗಳಿಗೂ ತನ್ನ ಪರಿವರ್ತನಾ ರಥದಲ್ಲಿ ತೆರಳಿ ಅಬ್ಬರಿಸುತ್ತಿದ್ದರೆ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರ ಸ್ವಾಮಿಯವರು ವಿಕಾಸ ಯಾತ್ರೆ ಎಂದು ಹಸಿರು ಬಿಳಿ ಬಣ್ಣದ ಬಸ್ ಏರಿ ಯಾತ್ರೆಯನ್ನು ಆರಂಭಿಸಿದ್ದಾರೆ. ಇತ್ತ ಕಾಂಗ್ರೆಸ್ ತಾನೂ ಏನೂ ಕಡಿಮೆ ಇಲ್ಲವೆಂದು “ಮನೆ ಮನೆಗೆ ಕಾಂಗ್ರೆಸ್” ಎಂಬ ಕಾರ್ಯಕ್ರಮ ಹಮ್ಮಿಕೊಂಡು ಪ್ರಚಾರವನ್ನು ಶುರುವಿಟ್ಟುಕೊಂಡಿರುವುದರ ಜೊತೆಜೊತೆಗೆ ಬಲಿಷ್ಠ ಮಾಧ್ಯಮವಾಗಿರುವ ಸಾಮಾಜಿಕ ಜಾಲತಾಣಗಳಲ್ಲಿಯೂ ವ್ಯಾಪಕ ಪ್ರಚಾರವನ್ನು ಕೈಗೊಳ್ಳಲಾಗುತ್ತಿದೆ.

ಹಾಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ರಾಜಕೀಯ ನಾಯಕರುಗಳು ತಮ್ಮ ಹವಾ ಹೆಚ್ಚಿಸಿಕೊಳ್ಳುತ್ತಿದ್ದು, ದಿನೇ ದಿನೇ ಅಭಿಮಾನಿಗಳ ಸಂಖ್ಯೆಯನ್ನು ಹೆಚ್ಚಿಕೊಳ್ಳುತ್ತಿರುವ ವಿಚಾರವೂ ತಿಳಿದೇ ಇದೆ!! ಆದರೆ ಕರ್ನಾಟಕದಲ್ಲಿ ಈ ಮೂವರ ರಾಜಕೀಯ ಜಿದ್ದಾಜಿದ್ದಿನ ನಡುವೆ ಸಾಮಾಜಿಕ ಜಾಲತಾಣದಲ್ಲಿ ಅತೀ ಹೆಚ್ಚು ಅಭಿಮಾನಿಗಳನ್ನು ಯಾರು ಹೊಂದಿದ್ದಾರೆ ಎಂದು ತಿಳಿಯುವ ಗೋಜಿಗೆ ನಾವು ಯಾವತ್ತೂ ಹೋಗಿಯೇ ಇಲ್ಲ!! ಯಾಕೆಂದರೆ ಈಗಾಗಲೇ ಪ್ರಚಾರದ ಬಿರುಸನ್ನು ಹೆಚ್ಚುತ್ತಿರುವ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಸಾಮಾಜಿಕ ಜಾಲತಾಣಗಳಲ್ಲಿ ಅದೆಷ್ಟು ಫೇಮಸ್ ಆಗಿದ್ದಾರೆ ಎಂದು ತಿಳಿದರೆ ಒಂದು ಕ್ಷಣ ದಂಗಾಗುತ್ತೀರಿ.

ಭಾಗ್ಯಗಳ ಮೇಲೆ ಭಾಗ್ಯಗಳನ್ನು ಕರುಣಿಸುತ್ತಿರುವ ಸಿದ್ದರಾಮಯ್ಯ ಸರ್ಕಾರವು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿ ಈಗಾಗಲೇ ಫೇಮಸ್ ಆಗಿದ್ದರು!! ಅಷ್ಟೇ ಅಲ್ಲದೇ, ತಮ್ಮ ವಿಧಾನ ಸಭಾ ಚುನಾವಣೆಯಲ್ಲಿ ಪ್ರಚಾರದ ಬಿರುಸನ್ನು ಹೆಚ್ಚಿಸುವ ಸಲುವಾಗಿ ನಕಲಿ ಖಾತೆಗಳನ್ನು ಸೃಷ್ಟಿಸಿ ಯುವ ಜನರನ್ನು ತನ್ತತ್ತ ಸೆಳೆದುಕೊಳ್ಳುವ ತಂತ್ರವನ್ನು ಹೂಡಿರುವ ವಿಚಾರದ ಬಗ್ಗೆ ತಿಳಿದೇ ಇದೆ!! ಹಾಗಾಗಿ ಸಾಮಾಜಿಕ ಜಾಲತಾಣಗಳ ಪಟ್ಟಿಯಲ್ಲಿ ಅತೀ ಹೆಚ್ಚು ಅಭಿಮಾನಿಗಳ ಬಳಗವನ್ನು ಹೊಂದಿರುವ ಪಟ್ಟಿಗೆ ಸಿದ್ದರಾಮಯ್ಯನವರು ಅಗ್ರ ಸ್ಥಾನಕ್ಕೆ ಏರಿರಬಹುದೇ??

ಎಲ್ಲರಿಗೂ ತಿಳಿದಿರುವಂತೆ, ಕರ್ನಾಟಕದಲ್ಲಿಯೂ ಲಕ್ಷಾಂತರ ಜನರು ಫೇಸ್‍ಬುಕ್, ಟ್ವಿಟ್ಟರ್, ವಾಟ್ಸಾಪ್ ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಸಮಯವನ್ನು ಕಳೆಯುತ್ತಿರುವ ಜತೆಗೆ ತಮ್ಮ ತಮ್ಮ ನೆಚ್ಚಿನ ರಾಜಕೀಯ ನಾಯಕರನ್ನು ಫಾಲೋ ಮಾಡುತ್ತಿದ್ದಾರೆ ಎನ್ನುವ ವಿಚಾರ ತಿಳಿದೇ ಇದೆ. ಹಾಗಾಗಿ ಇತ್ತಕಡೆ ಎಲ್ಲಾ ಪಕ್ಷದವರು ಸಾಮಾಜಿಕ ಜಾಲತಾಣಗಳ ಬಳಕೆದಾರರ ಮೇಲೆ ಕಣ್ಣಿಟ್ಟಿದ್ದಂತೂ ಅಕ್ಷರಶಃ ನಿಜ.

ಹಾಗಾದರೆ ಫೇಸ್ ಬುಕ್, ಟ್ವಿಟ್ಟರ್ ಖಾತೆಯಲ್ಲಿ ಹೆಚ್ಚು ಅಭಿಮಾನಿ ಬಳಗವನ್ನು ಹೊಂದಿರುವ ಆ ನಾಯಕನಾರು ಗೊತ್ತೇ??

ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಅಧಿಕೃತ ಫೇಸ್ ಬುಕ್ ಖಾತೆಯಲ್ಲಿ ಕೇವಲ 39 ಸಾವಿರ ಜನರಿದ್ದರೆ ಸರ್ಕಾರವೇ ನೋಡಿಕೊಳ್ಳುವ ಮುಖ್ಯಮಂತ್ರಿಗಳ ಮತ್ತೊಂದು ಪೇಜ್ ನಲ್ಲಿ 10 ಲಕ್ಷ ಜನ ಅಭಿಮಾನಿಗಳಿದ್ದಾರೆ. ಇನ್ನು, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿಯವರ ಫೇಸ್ ಬುಕ್ ಖಾತೆಯನ್ನು 2.20 ಲಕ್ಷ ಜನ ಫಾಲೋ ಮಾಡುತ್ತಿದ್ದಾರೆ. ಹಾಗಾದರೆ ಬಿ.ಎಸ್.ಯಡಿಯೂರಪ್ಪರವರ ಫೇಸ್ ಬುಕ್ ಖಾತೆಯಲ್ಲಿರುವ ಅಭಿಮಾನಿಗಳ ಸಂಖ್ಯೆಯಾದರು ಎಷ್ಟು ಗೊತ್ತೇ??

Image result for siddaramaiah

 

ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿಯವರ ಅಭಿಮಾನಿಗಳನ್ನು ಮೀರಿಸುವಷ್ಟು ಅಭಿಮಾನಿಗಳನ್ನು ಬಿ.ಎಸ್.ಯಡಿಯೂರಪ್ಪನವರು ಫೇಸ್ ಬುಕ್ ನಲ್ಲಿ ಹೊಂದಿದ್ದಾರೆ. ಹೌದು…. ಯಡಿಯೂರಪ್ಪನವರ ಅಧಿಕೃತ ಫೇಸ್ ಬುಕ್ ಪೇಜ್ ನಲ್ಲಿ ಬರೋಬ್ಬರಿ 14 ಲಕ್ಷ ಜನ ಫಾಲೋವರ್ಸ್ ಇದ್ದು ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದುವ ಮೂಲಕ ಅತ್ಯುತ್ತಮ ನಾಯಕನಾಗಿ ಹೊರ ಹೊಮ್ಮಿದ್ದಾರೆ!!

ಇನ್ನು ಟ್ವಿಟ್ಟರ್ ನಲ್ಲಿಯೂ ನಮ್ಮ ನಾಯಕರುಗಳು ಭರ್ಜರಿಯಾಗಿಯೇ ಅಭಿಮಾನಿ ಬಳಗವನ್ನು ಹೊಂದಿದ್ದು, ಇಲ್ಲಿಯೂ ಬಿಜೆಪಿಯ ಬಿ.ಎಸ್.ಯಡಿಯೂರಪ್ಪನವರೇ ಕರ್ನಾಟಕದ ನಂ.1 ನಾಯಕನಾಗಿ ಹೊರಹೊಮ್ಮಿದ್ದಾರೆ. ಯಡಿಯೂರಪ್ಪನವರ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ 2.30 ಲಕ್ಷ ಜನರಿದ್ದರೆ, ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಖಾತೆಯಲ್ಲಿ 1.22 ಲಕ್ಷ ಜನ ಅಭಿಮಾನಿಗಳಿದ್ದಾರೆ. ಇನ್ನು ಮುಖ್ಯಮಂತ್ರಿಗಳ ಕಚೇರಿಯ ಟ್ವಿಟ್ಟರ್ ಖಾತೆಯಲ್ಲಿ 5.08 ಲಕ್ಷ ಜನರಿದ್ದಾರೆ. ಇನ್ನು, ಕುಮಾರಸ್ವಾಮಿ ಟ್ವಿಟ್ಟರ್ ಜಗತ್ತಿಗೆ ಹೊಸಬರಾಗಿದ್ದು, ಕೇವಲ 9 ಸಾವಿರ ಜನರು ಕುಮಾರಸ್ವಾಮಿ ಯವರನ್ನು ಟ್ವಿಟರ್ ಮೂಲಕ ಫಾಲೋ ಮಾಡುತ್ತಿದ್ದಾರೆ.

Related image

ರಾಜ್ಯದಲ್ಲಿ ಈ ಬಾರಿ ಭಾರತೀಯ ಜನತಾ ಪಕ್ಷ ಅಧಿಕಾರ ಹಿಡಿಯುವ ಸಾಧ್ಯತೆ ಇದೆ ಎಂದು ಹೇಳಿ ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನವನ್ನು ಕಾಪ್ಸ್ ಸಂಸ್ಥೆ ಸೃಷ್ಟಿ ಮಾಡಿತ್ತು!! ಆ ಪ್ರಕಾರ, ಕರ್ನಾಟಕದಲ್ಲಿ ಈ ಕೂಡಲೇ ಚುನಾವಣೆ ಎದುರಾದರೆ ಭಾರತೀಯ ಜನತಾ ಪಕ್ಷ ಭರ್ಜರಿಯಾಗಿ ಜಯಭೇರಿ ಭಾರಿಸಲಿದೆ ಎಂದು ಕಾಪ್ಸ್ ಸಂಸ್ಥೆ ಸಮೀಕ್ಷೆಯೊಂದರಲ್ಲಿ ಬಹಿರಂಗ ಪಡಿಸಿದೆ.

ಕಾಪ್ಸ್ ನಡೆಸಿದ ಈ ಸಮೀಕ್ಷೆಯಲ್ಲಿ ಸದ್ಯದಲ್ಲೇ ಚುನಾವಣೆ ನಡೆದರೆ ಭಾರತೀಯ ಜನತಾ ಪಕ್ಷ ಒಟ್ಟು 113 ಕ್ಷೇತ್ರದಲ್ಲಿ ಕೇಸರಿ ಪಡೆ ಜಯಭೇರಿ ಭಾರಿಸಲಿದೆ ಎಂದು ಸಮೀಕ್ಷೆ ನುಡಿದಿದೆ. ಅಷ್ಟೇ ಅಲ್ಲದೇ, ಒಟ್ಟು 85 ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಲಿದ್ದು ರಾಜ್ಯದಲ್ಲಿ ಅಧಿಕಾರವನ್ನು ಕಳೆದುಕೊಳ್ಳಲಿದೆ. ಇನ್ನು ಮತ್ತೊಮ್ಮೆ ಶತಾಯ ಗತಾಯ ಅಧಿಕಾರ ಹಿಡಿಯುವ ಯತ್ನದಲ್ಲಿರುವ ಜನತಾ ದಳ ಕೇವಲ 25 ಕ್ಷೇತ್ರದಲ್ಲಿ ತೃಪ್ತಿ ಪಡೆಯಲಿದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ. ಹಾಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹೊಂದಿರುವ ಅಭಿಮಾನಿಗಳ ಆಧಾರದ ಮೇಲೆ ಹೇಳುವುದಾದರೆ ಬಿ.ಎಸ್.ಯಡಿಯೂರಪ್ಪನವರು ನಂ.1 ಸ್ಥಾನದಲ್ಲಿದ್ದರೆ, ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಎರಡನೇ ಸ್ಥಾನದಲ್ಲಿದ್ದಾರೆ. ಇನ್ನು ಎಚ್.ಡಿ.ಕುಮಾರಸ್ವಾಮಿಯವರು ಮೂರನೇ ಸ್ಥಾನದಲ್ಲಿದ್ದಾರೆ.

Image result for kumaraswami

ಅಷ್ಟೇ ಅಲ್ಲದೇ, ಇದೀಗ ಕಾಂಗ್ರೆಸ್ಸಿನ ಕರ್ನಾಟಕ ವಿಭಾಗದ ಅಧಿಕೃತ ಫೇಸ್‍ಬುಕ್ ಪೇಜ್ ನಲ್ಲಿ 2.54 ಲಕ್ಷ ಅಭಿಮಾನಿಗಳಿದ್ದರೆ, ಕರ್ನಾಟಕದ ಭಾರತೀಯ ಜನತಾ ಪಕ್ಷದ ಅಧಿಕೃತ ಫೇಸ್‍ಬುಕ್ ಖಾತೆಯಲ್ಲಿ 4.14 ಲಕ್ಷ ಜನರಿದ್ದಾರೆ. ಇನ್ನು ಕಾಂಗ್ರೆಸ್ ನ ಟ್ವಿಟ್ಟರ್ ಖಾತೆಯಲ್ಲಿ 31 ಸಾವಿರ ಫಾಲೋವರ್ಸ್ ಗಳಿದ್ದಾರೆ. ಬಿಜೆಪಿ ಇದರಲ್ಲಿಯೂ ಮುಂದಿದ್ದು, ಬಿಜೆಪಿಯ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ 1.46 ಲಕ್ಷ ಜನರಿದ್ದಾರೆ. ಇನ್ನು ಜೆಡಿಎಸ್ ನ ಅಧಿಕೃತ ಖಾತೆಗಳಲ್ಲಿ ಕೆಲವೇ ಸಾವಿರ ಜನರಿದ್ದಾರಷ್ಟೆ!!

ಒಟ್ಟಾರೆಯಾಗಿ ಈ ಬಾರಿ ಮತದಾರರು ಕಮಲದ ಕೈ ಹಿಡಿಯಲಿದ್ದು ಕಾಂಗ್ರೆಸ್ ಸರ್ಕಾರಕ್ಕೆ ಪಾಠ ಕಲಿಸಲಿರುವುದು ಮಾತ್ರ ಅಕ್ಷರಶಃ ನಿಜ!! ಯಾಕೆಂದರೆ ಈಗಾಗಲೇ ಕಾಂಗ್ರೆಸ್ ಸರ್ಕಾರದ ಹಲವಾರು ವಿಫಲ ಯೋಜನೆಗಳು, ಅಹಿಂದಾದ ಹೆಸರಲ್ಲಿ ಮಾಡಿದ ಅನ್ಯಾಯ, ಜಾತಿ ಜಾತಿಗಳ ಮಧ್ಯೆ, ಧರ್ಮ ಧರ್ಮಗಳ ಮಧ್ಯೆ ಕಾಂಗ್ರೆಸ್ ಸೃಷ್ಟಿಸಿದ್ದ ತಿಕ್ಕಾಟಗಳೇ ಕಾಂಗ್ರೆಸ್‍ನ ಸೋಲಿಗೆ ಕಾರಣವಾದರೂ ಆಗಬಹುದು!! ಅಂತೂ ಇದೀಗ ಬಿ.ಎಸ್.ಯಡಿಯೂರಪ್ಪ ನವರು ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದುವ ಮೂಲಕ ನಂ 1 ಸ್ಥಾನದಲ್ಲಿರುವುದೇ ಹೆಮ್ಮೆಯ ವಿಚಾರವಾಗಿದೆ!!!

– ಅಲೋಖಾ

Tags

Related Articles

Close