ಪ್ರಚಲಿತ

ಭಾರತೀಯ ಸೇನೆಗೆ ಅಪಮಾನವಾಗುವಂತಹ ಚಿತ್ರವನ್ನು ಮುಖಪುಟದಲ್ಲಿ ಪ್ರಕಟಿಸಿ ದುರಹಂಕಾರದ ಪರಮಾವಧಿ ಮೆರೆದ ಇಂಡಿಯಾ ಟುಡೆ ಪತ್ರಿಕೆ! ಪ್ರತಿಕ್ರಿಯೆ ಕೇಳಿದ ಸೇನೆ

ಮುಖ್ಯಧಾರೆಯ ಮಾಧ್ಯಮಗಳಿಗೆ ನಮ್ಮ ಭಾರತೀಯ ಸೇನೆಯನ್ನು ಕಂಡರೆ ಮೈಯೆಲ್ಲಾ ಉರಿ. ದಾವೂದ್ ಮತ್ತು ಮಿಶನರಿಗಳ ಹಣದಿಂದ ನಡೆಯುವ ಈ ಮಾಧ್ಯಮಗಳು ಉಗ್ರ ಪರ ನಿಲುವು ಹೊದಿರುವಂಥದ್ದು ಎಲ್ಲರಿಗೂ ಗೊತ್ತು. “ಟುಕಡೆ ಗ್ಯಾಂಗ್” ಇವರ ಕಣ್ಣಿನ ಕಣ್ಮಣಿ. ಎಲ್ಲಿವರೆಗೆ ಭಾರತೀಯ ಸೇನೆ ಬಲಾಢ್ಯವಾಗಿರುವುದೊ ಅಲ್ಲಿವರೆಗೆ ಇವರ ಟುಕಡೆ ಗ್ಯಾಂಗ್ ನ ಬಂಟರಿಗೆ ಭಾರತ ಬಿಡಿ, ಭಾರತದ ಭೂಪಟವನ್ನೂ ಟುಕಡೆ ಮಾಡಲು ಸಾಧ್ಯವಿಲ್ಲ. ಅದಕ್ಕೆ ಸೇನೆಯನ್ನು ಕಂಡರೆ ಇವರಿಗೆ ಸಿಟ್ಟು. ನಿತ್ಯ ಏನಾದರೊಂದು ಆರೋಪ ಮಾಡಿ ಸೇನೆಯನ್ನು ಮಾನಸಿಕವಾಗಿ ಕುಗ್ಗಿಸುವ ಪ್ರಯತ್ನದಲ್ಲಿ ಈ ಮಾರಿಕೊಂಡ ಮಾಧ್ಯಮಗಳು ನಿರತರಾಗಿರುತ್ತವೆ.

ಇದಕ್ಕೆ ಇನ್ನೊಂದು ಸೇರ್ಪಡೆ ಇಂಡಿಯಾ ಟುಡೆ ಎನ್ನುವ ಪತ್ರಿಕೆ. ತಮ್ಮ ಹೊಸ ಪತ್ರಿಕೆಯ ಮುಖಪುಟದಲ್ಲಿ, ‘ದಿ ಆರ್ಮಿ ಇಸ್ ಬ್ರೋಕ್’ ಎಂಬ ಶೀರ್ಷಿಕೆಯಡಿ ಸೇನಾ ಪದಕ ಮತ್ತು ರೆಜಿಮೆಂಟಿನ ಲಾಂಛನವನ್ನು ಹೊಂದಿರುವ ಆರ್ಮಿ ಜನರಲ್ ನ ವಿರೂಪಗೊಳಿಸಿದ ಛಾಯಾಚಿತ್ರವನ್ನು ಪ್ರಕಟಿಸಿದೆ. ಆರ್ಮಿ ಜನರಲ್ ತನ್ನ ಖಾಲಿ ಕಿಸೆಗಳನ್ನು ತೋರಿಸುತ್ತಿವ ಮತ್ತು ಅವರ ಸಮವಸ್ತ್ರ ಹರಿದಿರುವ ರೀತಿ ಈ ಚಿತ್ರವನ್ನು ಪ್ರಕಟಿಸಲಾಗಿದೆ. ಈ ಚಿತ್ರ ಹೆಚ್ಚು ಕಡಿಮೆ ಸೇನೆಯ ನಿವೃತ್ತ ಜನರಲ್ ದಲ್ಬಿರ್ ಸಿಂಗ್ ಸುಹಾಗ್ ಅವರನ್ನು ಹೋಲುತ್ತಿದೆ ಎಂದು ಹೇಳಲಾಗುತ್ತಿದೆ. ಭಾರತೀಯ ಸೇನೆಯನ್ನು ಈ ರೀತಿ ಅಪಮಾನಕರ ರೀತಿಯಲ್ಲಿ ತೋರಿಸುವ ಇಂಡಿಯಾ ಟುಡೆಯ ದಾರ್ಷ್ಟ್ಯಕ್ಕೆ ಏನನ್ನಬೇಕು? ಇಡಿಯ ವಿಶ್ವದಲ್ಲಿ ನಾಲ್ಕನೆ ಸ್ಥಾನದಲ್ಲಿರುವ ಭಾರತೀಯ ಸೇನೆ ಎಂದರೆ ಶತ್ರುಗಳ ಎದೆಯಲ್ಲಿ ಅವಲಕ್ಕಿ ಕುಟ್ಟಿದ ಮನೋಭಾವವಾಗುತ್ತದೆ.

ಪ್ರತಿ ಭಾರತೀಯನ ಹೆಮ್ಮೆ ಭಾರತೀಯ ಸೇನೆ. ಅಂಥ ಸೇನೆಯನ್ನು ‘ದಿ ಆರ್ಮಿ ಇಸ್ ಬ್ರೋಕ್’ ಎಂದು ಚಿತ್ರಿಸುವ ಇವರುಗಳಿಗೆ ಭಾರತೀಯರು ಕೊಡುವ ಉತ್ತರ ” ದ ಅರ್ಮಿ ಕ್ಯಾನ್ ನೆವರ್ ಬಿ ಬ್ರೋಕನ್, ಬಟ್ ಇಟ್ ವಿಲ್ ಬ್ರೇಕ್ ಎನಿಮೀಸ್ ಬೋನ್ಸ್!” ಇಂಡಿಯಾ ಟುಡೆ ಪತ್ರಿಕೆಯಲ್ಲಿ ಒಬ್ಬ ಸೇನಾ ಮುಖಸ್ಥನಂತಿರುವ ವ್ಯಕ್ತಿಯನ್ನು ಇಷ್ಟು ಕೀಳಾಗಿ ಚಿತ್ರೀಕರಿಸಿದ್ದಕ್ಕೆ ಭಾರತೀಯ ಸೇನೆಯು ಆಕ್ಷೇಪ ವ್ಯಕ್ತ ಪಡಿಸಿದೆ. ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ನಲ್ಲಿ ತನ್ನ ಮನದ ಬೇಸರವನ್ನು ವ್ಯಕ್ತ ಪಡಿಸಿಕೊಂಡ ಸೇನೆಯು ಇಂಡಿಯಾ ಟುಡೆ ಪ್ರಕಟಿಸಿದ ಈ ಚಿತ್ರವು ಸೇನೆಯ ಪರಿಣಿತರ ಮತ್ತು ಸೇವಾ ನಿರತರಾಗಿರುವ ಸೈನಿಕರ ಭಾವನೆಗಳಿಗೆ ತೀವ್ರಾವಾಗಿ ನೋವು ಉಂಟು ಮಾಡಿದೆ ಮತ್ತು ಇದನ್ನವರು ಇಂಡಿಯಾ ಟುಡೆನಲ್ಲಿ ಸಂಬಂಧಪಟ್ಟ ಜನರಿಗೆ ತಿಳಿಸಿದ್ದಾರೆ ಎಂದು ಹೇಳಿಕೊಂಡಿದೆ. ಪತ್ರಿಕೆಯಿಂದ ಈ ವಿಷಯದ ಬಗ್ಗೆ ಪ್ರತಿಕ್ರಿಯೆಯನ್ನು ಸೇನೆ ನಿರೀಕ್ಷಿಸುತ್ತಿದೆ ಎಂದೂ ಬರೆದುಕೊಂಡಿದೆ.

ಒಬ್ಬ ಭಾರತೀಯ ಸೈನಿಕನಿಗೆ ಅದರಲ್ಲೂ ಸೇನಾ ಮುಖ್ಯಸ್ಥನಿಗೆ ತನ್ನ ಸಮವಸ್ತ್ರವೆನ್ನುವುದು ಬರಿ ಖಾಕಿ ಬಣ್ಣದ ಬಟ್ಟೆಯಲ್ಲ. ಅದರಲ್ಲಿರುವ ಪದಕಗಳು ಅಲಂಕಾರದ ವಸ್ತುಗಳಲ್ಲ. ಅದು ಆತನ ದೇಶಭಕ್ತಿಯ ಸಂಕೇತ. ಅದು ಆತನ ಶೌರ್ಯದ ಸಂಕೇತ. ಸೇನಾ ಬಟ್ಟೆಯನ್ನು ಬಿಚ್ಚಿಟ್ಟರೆ ಅವರೂ ನಮ್ಮಂತೆಯೆ ಸಾಮಾನ್ಯರು, ಅದೆ ಸಮವಸ್ತ್ರ ತೊಟ್ಟು ನಮ್ಮ ಮುಂದೆ ಬಂದರೆ ನಾವು ಅವರಿಗೆ ಸೆಲ್ಯೂಟ್ ಹೊಡೆಯುವಿದಿಲ್ಲವೆ? ಒಬ್ಬ ಸೈನಿಕನಿಗೆ ಆತನ ಆತ್ಮ ಸಮ್ಮಾನದ ಸಂಕೇತ ಆತನ ಸಮವಸ್ತ್ರ. ಹಾಗಿರುವಾಗ ಸೇನಾ ಸಮವಸ್ತ್ರದಲ್ಲಿರುವ ಜನರಲ್ ನಂತೆ ಕಾಣುವ ವ್ಯಕ್ತಿಯ ಛಾಯಾಚಿತ್ರವನ್ನು ಹಾಗೆ ವಿರೂಪಗೊಳಿಸಿ ಪ್ರಕಟಿಸುವುದು ಸರಿಯೆ? ಎಂಜಲು ಕಾಸಿಗೆ ಹಲುಬುವ ಬಿಕನಾಸಿಗಳಿಗೇನು ಗೊತ್ತು ಸೇನೆಯ ಸಮವಸ್ತ್ರದ ಮಹತ್ವ? ಅದೇನಿದ್ದರೂ ದೇಶಕ್ಕಾಗಿ ಪ್ರಾಣ ಪಣಕ್ಕಿಡುವ ಸೈನಕರಿಗೆ ಮತ್ತು ಅವರ ಕ್ಷೇಮಕ್ಕಾಗಿ ಪ್ರಾರ್ಥಿಸುವ ದೇಶಭಕ್ತರಿಗಷ್ಟೆ ಗೊತ್ತು.

-ಶಾರ್ವರಿ

Tags

Related Articles

Close