ಪ್ರಚಲಿತ

ಭಾರತೀಯ ಪ್ರಭಾವಿಗಳ ಪಟ್ಟಿ ನೋಡಿ BJP, RSS ವಿರೋಧಿಗಳು ಗಡಗಡ

ದೇಶ, ದೇಶ ಭಕ್ತರು, ಆರ್ ಎಸ್‌ ಎಸ್‌, ಬಿಜೆಪಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಂಡರಾಗದ ದ್ವೇಷಿಗಳಿಗೆ ಹೊಟ್ಟೆ ಉರಿಯುವ ಮತ್ತೊಂದು ವಿಷಯ ಬಹಿರಂಗವಾಗಿದೆ.

ದಿ ಇಂಡಿಯನ್ ಎಕ್ಸ್‌ಪ್ರೆಸ್ ಟಾಪ್‌ ಟೆನ್ ಪ್ರಭಾವಿ ಭಾರತೀಯರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ಪಟ್ಟಿ ನೋಡಿದರೆ ಪ್ರಧಾನಿ ಮೋದಿ, ಬಿಜೆಪಿ ಮತ್ತು ಆರ್‌ಎಸ್‌ಎಸ್ ಅನ್ನು ಕಂಡರೆ ಕೆಂಡ ತುಳಿದಂತೆ ಆಡುವ ನಾಲಾಯಕ್ಕುಗಳ ಎದೆಯಲ್ಲಿ ಮತ್ತಷ್ಟು ನಂಜು ಹೆಚ್ಚಾಗುವ ಹಾಗೆ ಎಲ್ಲಾ ಸಾಧ್ಯತೆಗಳನ್ನು ಅಲ್ಲಗಳೆಯುವ ಹಾಗಿಲ್ಲ.

ಆ ಪಟ್ಟಿಯ ಪ್ರಕಾರ ಅತ್ಯಂತ ಪ್ರಭಾವಿ ಭಾರತೀಯ ಎಂಬ ವಿಷಯಕ್ಕೆ ಸಂಬಂಧಿಸಿದ ಹಾಗೆ ಮೊದಲ ಸ್ಥಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇದ್ದರೆ, ಆನಂತರದ ಸ್ಥಾನದಲ್ಲಿ ಬಿಜೆಪಿಯ ಮೋಟಾ ಬಾಯ್, ಬಿಜೆಪಿಯ ಚಾಣಕ್ಯ ಎಂದೇ ಕರೆಸಿಕೊಳ್ಳುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇದ್ದಾರೆ. ಆ ಬಳಿಕ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಜೀ ಅವರು ಭಾರತದ ಅತ್ಯಂತ ಪ್ರಭಾವಿ ವ್ಯಕ್ತಿಗಳಲ್ಲಿ ಒಬ್ಬರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಈ ಪಟ್ಟಿಯ ಮತ್ತೊಂದು ವಿಶೇಷ ಮತ್ತು ವೈರಿಗಳ ಎದೆಯಲ್ಲಿ ಅಸಮಾಧಾನ ಹುಟ್ಟಿಸಿರುವ ಮತ್ತು ದೇಶಪ್ರೇಮಿಗಳ ಎದೆಯಲ್ಲಿ ಸಂತಸ ಹುಟ್ಟಿಸಿರುವ ವಿಷಯವೆಂದರೆ, ಇದರಲ್ಲಿ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಪ್ರಮುಖರೇ ಸ್ಥಾನ ಪಡೆದಿದ್ದಾರೆ ಎನ್ನುವುದು.

ಆ ನಂತರದ ಭಾರತೀಯ ಪ್ರಭಾವಿ ವ್ಯಕ್ತಿಗಳಾಗಿ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ. ವೈ. ಚಂದ್ರಚೂಡ್ ಅವರು ಸ್ಥಾನ ಪಡೆದಿದ್ದಾರೆ. ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈ ಶಂಕರ್, ಉತ್ತರ ಪ್ರದೇಶದ ಮುಖ್ಯಮಂತ್ರಿ, ಬಿಜೆಪಿಯ ಫ್ರೈರ್ ಬ್ರ್ಯಾಂಡ್ ಯೋಗಿ ಆದಿತ್ಯ ನಾಥ್, ಕೇಂದ್ರ ಸಚಿವ ರಾಜನಾಥ್ ಸಿಂಗ್, ಕೇಂದ್ರ ಸಚಿವ ನಿರ್ಮಲಾ ಸೀತಾರಾಮನ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಉದ್ಯಮಿ ಗೌತಮ್ ಅದಾನಿ ಮೊದಲಾದವರು ಮೊದಲ ಹತ್ತು ಪ್ರಭಾವಿಳಾಗಿ ಗುರುತಿಸಿಕೊಂಡಿದ್ದಾರೆ.

ಇವರುಗಳ ಬಳಿಕ ಉದ್ಯಮಿ ಮುಖೇಶ್ ಅಂಬಾನಿ, ಕೇಂದ್ರ ಸಚಿವ ಪೀಯುಷ್ ಗೋಯಲ್, ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, ಅಸ್ಸಾಂ ಸಿ ಎಂ ಹಿಮಂತ್ ಬಿಸ್ವಾ ಶರ್ಮಾ ಅಜಿತ್ ದೋವಲ್ ಸೇರಿದಂತೆ ಇನ್ನೂ ಹಲವರಿದ್ದಾರೆ.

Tags

Related Articles

Close