ಪ್ರಚಲಿತ

ಹಿಂದೂ ಮಹಾಸಾಗರದಲ್ಲಿ ಚೀನಾದ ಡ್ರಾಗನ್ ಅನ್ನು ಸದೆಬಡಿಯಲು ಭಾರತದ ಹುಲಿಯ ಚಾಣಾಕ್ಷ ನಡೆ!! ಇಂಡೋನೇಷಿಯಾದ ಆಯಕಟ್ಟಿನ ಜಾಗದಲ್ಲಿ ಭಾರತೀಯ ನೌಕಾದಳದ ಮೀಸಲು ಪಡೆ!!

ಅತ್ತ ಪಾಕಿಸ್ತಾನ-ಇತ್ತ ಚೀನಾ, ಎರಡು ಜಾನಿ ದುಶ್ಮನ್ ಗಳ ನಡುವೆ ಹಿಂದೂಸ್ತಾನ!! ಭಾರತವೀಗ ಒಬ್ಬ ಶತ್ರುವನ್ನಲ್ಲ ಇಬ್ಬಿಬ್ಬರು ಶತ್ರುಗಳನ್ನು ಮಣಿಸಬೇಕಾಗಿದೆ. ಮೋದಿ ಏಕಕಾಲಕ್ಕೆ ಚೀನಾ-ಪಾಕಿಸ್ತಾನಕ್ಕೆ ಮಣ್ಣು ಮುಕ್ಕಿಸಲು ಹವಣಿಸುತ್ತಿದ್ದಾರೆ. ಒಂದೆಡೆ ಪಾಕಿಸ್ತಾನದ ಬೆನ್ನು ಮುರಿಯುತ್ತಿದ್ದರೆ, ಇನ್ನೊಂದೆಡೆ ಚೀನಾದ ಸೊಕ್ಕು ಮುರಿಯುತ್ತಿದ್ದಾರೆ. ಕೆಕ್ಕಣ್ಣು ಬಿಡುವ ಚೀನಾವನ್ನು ಹೆದರಿಸಲು ಒಮಾನಿನಲ್ಲಿ ತಮ್ಮ ಸೇನಾ ನೆಲೆಗಳನ್ನು ಸ್ಥಾಪಿಸಿರುವ ಭಾರತವೀಗ ಇಂಡೋನೇಷಿಯಾದ ಆಯಕಟ್ಟಿನ ಜಾಗವನ್ನು ಸೇನಾ ಕಾರ್ಯಗಳಿಗೆ ಉಪಯೋಗಿಸಲು ಅನುಮತಿ ಪಡೆದುಕೊಂಡಿದೆ. ನೆನಪಿಡಿ ಓಮಾನ್ ಮತ್ತು ಇಂಡೋನೇಷಿಯಾ ಮುಸ್ಲಿಂ ಬಾಹುಳ್ಯದ ರಾಷ್ಟ್ರಗಳು ಆದರೂ ಅವು ತಮ್ಮ ಆಯಕಟ್ಟಿನ ಜಾಗಗಳಲ್ಲಿ ಭಾರತದ ಸೇನಾ ಕಾರ್ಯಗಳನ್ನು ನಡೆಸಲು ಅನುಕೂಲ ಮಾಡಿಕೊಡುತ್ತಿವೆ!!

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಆಗ್ನೇಯ ದಿಕ್ಕಿನಲ್ಲಿ 710 ಕಿ.ಮೀ ಮತ್ತು ಮಲಾಕ್ಕಾ ಜಲಸಂಧಿಯಿಂದ 500 ಕಿ.ಮೀ ದೂರದಲ್ಲಿರುವ ಸಬಾಂಗ್ ದ್ವೀಪವು ಹಿಂದೂ ಮಹಾಸಾಗರದ ಪೂರ್ವ ಭಾಗವನ್ನು ದಕ್ಷಿಣ ಚೀನಾ ಸಮುದ್ರಕ್ಕೆ ಸಂಪರ್ಕಿಸುವ ಪ್ರಮುಖ ಪ್ರದೇಶವಾಗಿದೆ. ಪ್ರಪಂಚದ ಕಡಲ ವ್ಯಾಪಾರದ ಶೇಕಡ 30 ಕ್ಕಿಂತಲೂ ಹೆಚ್ಚು ವಹಿವಾಟುಗಳು ಮಲಾಕ್ಕಾ ಜಲಸಂಧಿ ಮೂಲಕ ಹಾದುಹೋಗುತ್ತದೆ. ಈ ಸಮುದ್ರ ಮಾರ್ಗದ ಮೂಲಕ ಚೀನದ ಶಕ್ತಿ ಪೂರೈಕೆಯ 80% ರಷ್ಟು ವಹಿವಾಟುಗಳು ನಡೆಯುತ್ತಿರುವುದರಿಂದ ಈ ಜಲಸಂಧಿಯು ಚೀನಾಕ್ಕೆ ಬಹು ಮುಖ್ಯವಾಗಿದೆ. ಭಾರತವೂ ಕೂಡ ತನ್ನ 40% ವಹಿವಾಟುಗಳನ್ನು ಈ ಮಾರ್ಗದ ಮೂಲಕವೆ ಸಾಗಿಸುತ್ತದೆ. ಆದ್ದರಿಂದ, ಈ ಜಲಸಂಧಿ ಸುತ್ತಲಿನ ಪ್ರದೇಶಗಳಲ್ಲಿ ಭಾರತೀಯ ಉಪಸ್ಥಿತಿಯು ಭದ್ರತೆಯ ಮತ್ತು ಆರ್ಥಿಕ ವಹಿವಾಟಿನ ವಿಷಯದಲ್ಲಿ ಅತ್ಯಂತ ಪ್ರಾಮುಖ್ಯವಾಗಿದೆ. ಇಂಡೋನೇಷಿಯಾವು ತನ್ನ ಸಬಾಂಗ್ ದ್ವೀಪವನ್ನು ಭಾರತದ ಸೇನಾ ಪಡೆಗೆ ಉಪಯೋಗಿಸಲು ನೀಡಲಿದೆ.

ಮಲಾಕ್ಕಾ, ಸುಂಡಾ ಮತ್ತು ಲೋಂಬೋಕ್ ಜಲಸಂಧಿಗಳ ಹತ್ತಿರವಿರುವ ಬಂದರುಗಳಲ್ಲಿ ತನ್ನ ನೌಕಾಪಡೆಗಳನ್ನು ಸ್ಥಾಪಿಸುವುದರಿಂದ ಚೀನಾದ ನೌಕಾ ಚಟುವಟಿಕೆಗಳ ಮೇಲೆ ನಿಗಾ ಇಡಲು ಭಾರತಕ್ಕೆ ಸಾಧ್ಯವಾಗುತ್ತದೆ. ಮೋದಿಯವರ ಇಂಡೋನೇಷಿಯಾ ಭೇಟಿಗೂ ಮುನ್ನ ಅಲ್ಲಿನ ಸರಕಾರ ಮಲಾಕ್ಕಾ ಜಲಸಂಧಿಯ ಬಳಿ ಇರುವ ತನ್ನ ಬಂದರನ್ನು ಭಾರತ ತನ್ನ ಸೇನಾ ಕಾರ್ಯಗಳಿಗೆ ಉಪಯೋಗಿಸಬಹುದೆಂದು ಹೇಳಿದೆ. ಪಾಕಿಸ್ತಾನದಲ್ಲಿ ಗ್ವಾದಾರ್ ಕೋರಿಡಾರ್ ಯೋಜನೆಯ ಮೂಲಕ ಹಿಂದೂ ಮಹಾಸಗರದ ಮೇಲೆ ಪ್ರಾಬಲ್ಯ ಸ್ಥಾಪಿಸಿ ಭಾರತವನ್ನು ನಾಲ್ಕೂ ದಿಶೆಯಿಂದಲೂ ಸುತ್ತುವರಿಯುವ ಚೀನಾದ ಏಟಿಗೆ ತಕ್ಕುದಾದ ಇದಿರೇಟು ನೀಡಲು ಮೋದಿ ತಯಾರಾಗಿದ್ದಾರೆ. ಒಂದು ವೇಳೆ ಚೀನಾ ಏನಾದರೂ ಗಡಿಯಲ್ಲಿ ಕ್ಯಾತೆ ತೆಗೆದರೆ ಮಲಾಕ್ಕಾ ಜಲಸಂಧಿಯಲ್ಲಿ ಡ್ರಾಗನ್ನು ಅನ್ನು ಸದೆ ಬಡಿಯಲು ಭಾರತದ ಹುಲಿ ತಯಾರಾಗುತ್ತಿದೆ.

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ವಿಮಾನ ನಿಲ್ದಾಣಗಳನ್ನು ಭಾರತೀಯ ವಾಯುಪಡೆಗೆ ನಿಭಾಯಿಸಲು ನೀಡಿದ ಭಾರತ ನಿರ್ಧಾರದ ಕೆಲವೇ ದಿನಗಳ ಅಂತರದಲ್ಲಿ ಖುದ್ದು ಇಂಡೋನೇಷಿಯಾದಿಂದ ಈ ಪ್ರಸ್ತಾವನೆ ಬಂದಿದೆ ಎಂದರೆ ಮೋದಿ ಮೋಡಿ ಭಾರತದ ಸರಹದ್ದುಗಳನ್ನು ಮೀರಿದೆ ಎನ್ನುವುದು ಸಾಬೀತಾಗುತ್ತದೆ. ಇತ್ತಿಚಿನ ದಿನಗಳಲ್ಲಿ ಭಾರತವು ತನ್ನ ನೌಕಾದಳದ ಕಾರ್ಯತಂತ್ರದಲ್ಲಿ ಮಹತ್ತರ ಬದಲಾವಣೆ ಮಾಡಿದೆ. ‘ಮಿಷನ್ ಆಧಾರಿತ ನಿಯೋಜನೆ’ ಎಂಬ ಕಾರ್ಯತಂತ್ರದ ಅನ್ವಯ ಹಿಂದೂಮಹಾಸಾಗರದ ವಿವಿಧ “ಚೋಕ್ ಪಾಯಿಂಟ್”ಗಳಲ್ಲಿ ನೌಕಾಪಡೆಯು ಯುದ್ಧ-ಸನ್ನದ್ಧ ಹಡಗುಗಳು ಮತ್ತು ವಿಮಾನಗಳನ್ನು ಪ್ರಮುಖ ಸಮುದ್ರ-ಹಾದಿಗಳಲ್ಲಿ ನಿಯೋಜಿಸಲಾಗುತ್ತದೆ. ಇದು ಚೀನಾವನ್ನು ಮಣಿಸಲು “ಟೀಮ್ ಮೋದಿ” ಹೆಣೆದಿರುವ ರಣತಂತ್ರ ಎಂಬುದು ಸುಸ್ಪಷ್ಟ. ಇದೆ ವರ್ಷದ ಫೆಬ್ರವರಿಯಲ್ಲಿ ಮಿಲಿಟರಿ ಬಳಕೆಗಾಗಿ ಒಮಾನಿನ ಡುಕ್ಮ್ ಬಂದರಿಗೆ ಪ್ರವೇಶಿಸಲು ಭಾರತಕ್ಕೆ ಅವಕಾಶ ನೀಡಲಾಗಿದೆ. ಇದೂ ಕೂಡಾ ಆ ಪ್ರದೇಶದಲ್ಲಿನ ಚೀನಾದ ಪ್ರಭಾವ ಮತ್ತು ಚಟುವಟಿಕೆಗಳನ್ನು ಎದುರಿಸಲು ಭಾರತದ ಕಡಲತಂತ್ರದ ಕಾರ್ಯತಂತ್ರದ ಒಂದು ಭಾಗವಾಗಿದೆ. ಇದೆಲ್ಲವೂ ಸಾಧ್ಯವಾದದ್ದು ಮೋದಿಯವರಿಂದಾಗಿ.

ಮೋದಿ ವಿದೇಶ ಯಾತ್ರೆಗೆ ಏಕೆ ಹೋಗುತ್ತಾರೆನ್ನುವುದು ಈಗಲಾದರೂ ಗೊತ್ತಾಯಿತೆ ಮೋದಿ ವಿರೋಧಿಗಳೆ? ಮಾಡಲು ಕೆಲಸವಿಲ್ಲ ಸುಮ್ಮನೆ ತಿರುಗಾಡಿಕೊಂಡು ಬರುತ್ತೇನೆ ಎಂದು ಮೋದಿ ವಿದೇಶ ಯಾತ್ರೆಗಳಿಗೆ ಹೋಗುವುದಲ್ಲ. ಬದಲಾಗಿ ಭಾರತದ ಸುರಕ್ಷತೆಯನ್ನು ಭದ್ರವಾಗಿಸಲು, ನಾವು ನೀವು ನಮ್ಮ ನಮ್ಮ ಮನೆಗಳಲ್ಲಿ ನಿಶ್ಚಿಂತೆಯಿಂದ ನಿದ್ರಿಸಲು, ಹಗಲಿರುಳೆನ್ನದೆ ಮೋದಿ ಜಗತ್ತಿನ ಎಲ್ಲಾ ರಾಷ್ಟ್ರಗಳ ಜೊತೆ ಮೈತ್ರಿ ಸಾಧಿಸುತ್ತಿದ್ದಾರೆ. ಅವರ ಈ ನಿರ್ಣಯಗಳಿಂದಾಗಿಯೆ ಇವತ್ತು ಚೀನಾ ನೀರಲ್ಲಿ ಬಿದ್ದ ಬೆಕ್ಕಿನಂತೆ ಪೆಚ್ಚು ಮೋರೆ ಹಾಕಿ ಮುದುಡಿ ಕೂತಿರುವುದು. ಮೋದಿ ಏನೇ ಮಾಡಿದರೂ ಅದರಲ್ಲಿ ಮೊದಲಿಗೆ ದೇಶದ ಹಿತವೆ ಅಡಗಿರುತ್ತದೆ ಎನ್ನುವುದನ್ನು ಮರೆಯದಿರಿ.

-ಶಾರ್ವರಿ

Tags

Related Articles

Close